ವಿಷಯಕ್ಕೆ ಹೋಗು

ಫ಼ೆಡರಲ್ ಬ್ಯೂರೊ ಆಫ಼್ ಇನ್ವೆಸ್ಟಿಗೇಶನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಫ಼್‍ಬಿಐ ನ ಮುದ್ರೆ

ಫ಼ೆಡರಲ್ ಬ್ಯೂರೊ ಆಫ಼್ ಇನ್ವೆಸ್ಟಿಗೇಶನ್ (ಎಫ಼್‍ಬಿಐ) ಅಮೇರಿಕಾ ಸಂಯುಕ್ತ ಸಂಸ್ಥಾನದ ದೇಶೀಯ ಗುಪ್ತಚರ ಮತ್ತು ಭದ್ರತಾ ಸೇವಾಸಂಸ್ಥೆ, ಮತ್ತು ಏಕಕಾಲದಲ್ಲಿ ಆ ರಾಷ್ಟ್ರದ ಪ್ರಧಾನ ಸಂಘೀಯ ಕಾನೂನು ಜಾರಿ ಸಂಸ್ಥೆಯಾಗಿ ಸೇವೆಸಲ್ಲಿಸುತ್ತದೆ. ಅಮೇರಿಕಾದ ನ್ಯಾಯ ಇಲಾಖೆಯ ಕಾನೂನುವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಫ಼್‍ಬಿಐ ಏಕಕಾಲದಲ್ಲಿ, ಅಮೇರಿಕಾದ ಗುಪ್ತಚರ ಸಮುದಾಯದ ಸದಸ್ಯವಾಗಿದೆ ಮತ್ತು ಮುಖ್ಯ ಅಟಾರ್ನಿ ಹಾಗೂ ರಾಷ್ಟ್ರೀಯ ಗುಪ್ತಮಾಹಿತಿಯ ನಿರ್ದೇಶಕ ಇಬ್ಬರಿಗೂ ವರದಿ ಒಪ್ಪಿಸುತ್ತದೆ.[] ಅಮೇರಿಕಾದ ಪ್ರಧಾನ ಭಯೋತ್ಪಾದನಾ ವಿರೋಧಿ, ಗುಪ್ತಚರ ವಿರೋಧಿ, ಮತ್ತು ಕ್ರಿಮಿನಲ್ ತನಿಖಾ ಸಂಸ್ಥೆಯಾದ ಎಫ಼್‍ಬಿಐ, ಸಂಘೀಯ ಅಪರಾಧಗಳ ೨೦೦ಕ್ಕೂ ಹೆಚ್ಚು ವರ್ಗಗಳ ಉಲ್ಲಂಘನೆಗಳ ಮೇಲೆ ನ್ಯಾಯವ್ಯಾಪ್ತಿ ಹೊಂದಿದೆ.

ಎಫ಼್‍ಬಿಐ ನ ಅನೇಕ ಕಾರ್ಯಗಳು ಅನನ್ಯವಾಗಿವೆಯಾದರೂ, ರಾಷ್ಟ್ರೀಯ ಭದ್ರತೆಯ ಬೆಂಬಲದಲ್ಲಿ ಅದರ ಚಟುವಟಿಕೆಗಳು ಬ್ರಿಟನ್‍ನ ಎಮ್ಐಫ಼ೈವ್ ಮತ್ತು ರಷ್ಯಾದ ಎಫ಼್ಎಸ್‍ಬಿ ಗೆ ಹೋಲಿಸಬಹುದಾಗಿದೆ. ಕಾನೂನು ಜಾರಿ ಅಧಿಕಾರವಿರದ ಮತ್ತು ಸಾಗರೋತ್ತರ ಗುಪ್ತಮಾಹಿತಿ ಸಂಗ್ರಹಣೆ ಮೇಲೆ ಕೇಂದ್ರೀಕರಿಸುವ ಸೆಂಟ್ರಲ್ ಇಂಟೆಲಿಜನ್ಸ್ ಏಜನ್ಸಿ (ಸಿಐಎ) ಗೆ ಭಿನ್ನವಾಗಿ, ಎಫ಼್‍ಬಿಐ ಮುಖ್ಯವಾಗಿ ಒಂದು ದೇಶೀಯ ಸಂಸ್ಥೆಯಾಗಿದೆ, ಮತ್ತು ಅಮೇರಿಕಾದಾದ್ಯಂತ ಮುಖ್ಯ ನಗರಗಳಲ್ಲಿ ೫೬ ಕ್ಷೇತ್ರ ಕಚೇರಿಗಳನ್ನು, ಮತ್ತು ರಾಷ್ಟ್ರಾದ್ಯಂತ ಸಣ್ಣ ನಗರಗಳು ಹಾಗೂ ಪ್ರದೇಶಗಳಲ್ಲಿನ ೪೦೦ಕ್ಕೂ ಹೆಚ್ಚು ನಿವಾಸಿ ಸಂಸ್ಥೆಗಳನ್ನು ನಡೆಸುತ್ತದೆ. ಒಂದು ಎಫ಼್‍ಬಿಐ ಕ್ಷೇತ್ರ ಕಚೇರಿಯಲ್ಲಿ, ಒಬ್ಬ ಉನ್ನತ ಮಟ್ಟದ ಅಧಿಕಾರಿಯು ಏಕಕಾಲದಲ್ಲಿ ರಾಷ್ಟ್ರೀಯ ಗುಪ್ತಮಾಹಿತಿ ನಿರ್ದೇಶಕನ ಪ್ರತಿನಿಧಿಯಾಗಿ ಸೇವೆಸಲ್ಲಿಸುತ್ತಾನೆ.

ಅದರ ದೇಶೀಯ ಗಮನದ ಹೊರತಾಗಿಯೂ, ಎಫ಼್‍ಬಿಐ ಗಮನಾರ್ಹ ಅಂತರರಾಷ್ಟ್ರೀಯ ಹೆಜ್ಜೆಗುರುತನ್ನು ಕೂಡ ಪಾಲಿಸಿಕೊಂಡು ಬರುತ್ತದೆ, ಮತ್ತು ಜಗತ್ತಿನಾದ್ಯಂತ ಅಮೇರಿಕಾದ ರಾಯಭಾರಿ ಕಚೇರಿಗಳು ಮತ್ತು ದೂತಾವಾಸಗಳಲ್ಲಿ ೬೦ ಕಾನೂನು ರಾಯಭಾರ ಕಚೇರಿಗಳು ಮತ್ತು ೧೫ ಉಪ ಕಚೇರಿಗಳನ್ನು ನಡೆಸುತ್ತದೆ. ಈ ಸಾಗರೋತ್ತರ ಕಚೇರಿಗಳು ಮುಖ್ಯವಾಗಿ ವಿದೇಶಿ ಭದ್ರತಾ ಸೇವೆಗಳೊಂದಿಗೆ ಸಹಕಾರದ ಉದ್ದೇಶಕ್ಕಾಗಿ ಅಸ್ತಿತ್ವದಲ್ಲಿವೆ ಮತ್ತು ಸಾಮಾನ್ಯವಾಗಿ ಆತಿಥೇಯ ದೇಶಗಳಲ್ಲಿ ಏಕಪಕ್ಷೀಯ ಕಾರ್ಯಾಚರಣೆಗಳನ್ನು ನಡೆಸುವುದಿಲ್ಲ. ಸಿಐಎ ಸೀಮಿತ ದೇಶೀಯ ಕಾರ್ಯವನ್ನು ಹೊಂದಿರುವಂತೆ, ಎಫ಼್‍ಬಿಐ ಸಾಗರೋತ್ತರ ರಹಸ್ಯ ಚಟುವಟಿಕೆಗಳನ್ನು ಕೈಗೊಳ್ಳಬಹುದು ಮತ್ತು ಕೆಲವೊಮ್ಮೆ ಕೈಗೊಳ್ಳುತ್ತದೆ; ಸಾಮಾನ್ಯವಾಗಿ ಈ ಚಟುವಟಿಕೆಗಳಿಗಾಗಿ ಸರ್ಕಾರಿ ಸಂಸ್ಥೆಗಳಾದ್ಯಂತ ಸಮನ್ವಯ ಬೇಕಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Our Strength Lies in Who We Are". intelligence.gov. Archived from the original on August 10, 2014. Retrieved August 4, 2014. {{cite web}}: Unknown parameter |deadurl= ignored (help)