ಫಾತಿಮಾ ಬೀವಿ
ಎಂ. ಫಾತಿಮಾ ಬೀವಿ | |
---|---|
ತಮಿಳುನಾಡಿನ ರಾಜ್ಯಪಾಲರು
| |
ಅಧಿಕಾರ ಅವಧಿ ೨೫ ಜನವರಿ ೧೯೯೭ – ೩ ಜುಲೈ ೨೦೦೧ | |
ಪೂರ್ವಾಧಿಕಾರಿ | ಕೃಷನ್ ಕಾಂತ್ |
ಉತ್ತರಾಧಿಕಾರಿ | ಡಾ.ಸಿ.ರಂಗರಾಜನ್ |
ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ
| |
ಅಧಿಕಾರ ಅವಧಿ ೧೯೯೭ – ೨೦೦೧ | |
ಭಾರತದ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರು
| |
ಅಧಿಕಾರ ಅವಧಿ ೬ ಅಕ್ಟೋಬರ್ ೧೯೮೯ – ೨೯ ಏಪ್ರಿಲ್ ೧೯೯೨ | |
ವೈಯಕ್ತಿಕ ಮಾಹಿತಿ | |
ಜನನ | ಪಥನಂತಿಟ್ಟಾ, ತಿರುವಾಂಕೂರು, ಬ್ರಿಟಿಷ್ ಭಾರತ (ಈಗ ಕೇರಳ, ಭಾರತ) | ೩೦ ಏಪ್ರಿಲ್ ೧೯೨೭
ಎಂ. ಫಾತಿಮಾ ಬೀವಿ (ಜನನ ೩೦ ಏಪ್ರಿಲ್ ೧೯೨೭) ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು. ೧೯೮೯ ರಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಅವರು, ಭಾರತದ ಸುಪ್ರೀಂ ಕೋರ್ಟ್‌ನ ಭಾಗವಾದ ಮೊದಲ ಮಹಿಳಾ ನ್ಯಾಯಾಧೀಶರಾದರು.[೧][೨] ಮತ್ತು ದೇಶದ ಯಾವುದೇ ಉನ್ನತ ನ್ಯಾಯಾಂಗಗಳಿಗೆ ನೇಮಕವಾದ ಮೊದಲ ಮುಸ್ಲಿಂ ಮಹಿಳೆ. ನ್ಯಾಯಾಲಯದಿಂದ ನಿವೃತ್ತಿಯಾದ ನಂತರ, ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಮತ್ತು ನಂತರ ೧೯೯೭ ರಿಂದ ೨೦೦೧ ರವರೆಗೆ ಭಾರತದ ರಾಜ್ಯ, ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.[೩]
ಆರಂಭಿಕ ಜೀವನ
[ಬದಲಾಯಿಸಿ]ಫಾತಿಮಾ ಬೀವಿ ಅವರು ೩೦ ಏಪ್ರಿಲ್ ೧೯೨೭ ರಂದು ತಿರುವಾಂಕೂರಿನ ಪಥನಂತಿಟ್ಟಾದಲ್ಲಿ, ಈಗ ಭಾರತದ ಕೇರಳ ರಾಜ್ಯದಲ್ಲಿ, ಅನ್ನವೀತಿಲ್ ಮೀರಾ ಸಾಹಿಬ್ ಮತ್ತು ಖದೇಜಾ ಬೀಬಿ ದಂಪತಿಯ ಪುತ್ರಿಯಾಗಿ ಜನಿಸಿದರು.
ಶಿಕ್ಷಣ
[ಬದಲಾಯಿಸಿ]ಅವರು ಪಥನಂತಿಟ್ಟಾ ಕ್ಯಾಥೊಲಿಕ್ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ಮತ್ತು ಯೂನಿವರ್ಸಿಟಿ ಕಾಲೇಜಿನಿಂದ ಬಿ.ಎಸ್ಸಿ ಶಿಕ್ಷಣವನ್ನು ಪಡೆದರು. ಅವರು ತನ್ನ ಬಿ.ಎಲ್. ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜಿನಿಂದ ಮುಗಿಸಿದರು.
ವೃತ್ತಿ ಜೀವನ
[ಬದಲಾಯಿಸಿ]ಬೀವಿ ಅವರನ್ನು ನವೆಂಬರ್ ೧೪, ೧೯೫೦ ರಂದು ವಕೀಲರನ್ನಾಗಿ ಸೇರಿಸಲಾಯಿತು. ಅವರು ತಮ್ಮ ವೃತ್ತಿಜೀವನವನ್ನು ಕೇರಳದ ಕೆಳ ನ್ಯಾಯಾಂಗದಲ್ಲಿ ಪ್ರಾರಂಭಿಸಿದರು. ಮೇ, ೧೯೫೮ ರಲ್ಲಿ ಕೇರಳ ಸಬ್-ಆರ್ಡಿನೇಟ್ ನ್ಯಾಯಾಂಗ ಸೇವೆಗಳಲ್ಲಿ ಮುನ್ಸಿಫ್ ಆಗಿ ನೇಮಕಗೊಂಡರು. ೧೯೬೮ ರಲ್ಲಿ ಸಬ್-ಆರ್ಡಿನೇಟ್ ನ್ಯಾಯಾಧೀಶರಾಗಿ ಮತ್ತು ೧೯೭೨ ರಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಗಿ ೧೯೭೪ ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
ಅವರು ೧೯೮೦ ರ ಜನವರಿಯಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯರಾಗಿ ನೇಮಕಗೊಂಡರು. ನಂತರ ಅವರನ್ನು ಆಗಸ್ಟ್ ೪, ೧೯೮೩ ರಂದು ಹೈಕೋರ್ಟ್‌ಗೆ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.
ಅವರು ಮೇ ೧೪, ೧೯೮೪ ರಂದು ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾದರು. ಅವರು ೨೯ ಏಪ್ರಿಲ್ ೧೯೮೯ ರಂದು ಹೈಕೋರ್ಟ್‌ನ ನ್ಯಾಯಾಧೀಶರಾಗಿ ನಿವೃತ್ತರಾದರು. ನಂತರ ೬ ಅಕ್ಟೋಬರ್ ೧೯೮೯ ರಂದು ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರಾಗಿ ಉನ್ನತೀಕರಿಸಲ್ಪಟ್ಟರು. ಮತ್ತು ಅವರು ೨೯ ಏಪ್ರಿಲ್ ೧೯೯೨ ರಂದು ನಿವೃತ್ತರಾದರು.
ತಮಿಳುನಾಡಿನ ರಾಜ್ಯಪಾಲರು(೧೯೯೭)
[ಬದಲಾಯಿಸಿ]ನಂತರ ಅವರು ಜನವರಿ ೨೫, ೧೯೯೭ ರಂದು ತಮಿಳುನಾಡಿನ ರಾಜ್ಯಪಾಲರಾದರು.[೪] ರಾಜ್ಯಪಾಲರಾಗಿ, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಖಂಡನೆಗೊಳಗಾದ ನಾಲ್ಕು ಕೈದಿಗಳು ಸಲ್ಲಿಸಿದ ಕರುಣೆ ಅರ್ಜಿಗಳನ್ನು ಅವರು ತಿರಸ್ಕರಿಸಿದರು. ಸಂವಿಧಾನದ ೧೬೧ ನೇ ವಿಧಿ (ಸಂವಿಧಾನದ) ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸುವಂತೆ ಮನವಿ ಮಾಡಿದರು.
ರಾಜ್ಯಪಾಲರಾಗಿ ಅವರು ಮದ್ರಾಸ್ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಕೇರಳದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿಯೂ (೧೯೯೩) ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿಯೂ (೧೯೯೩) ಸೇವೆ ಸಲ್ಲಿಸಿದ್ದರು. ಅವರು ೧೯೯೦ ರಲ್ಲಿ ಡಿ ಲಿಟ್ ಮತ್ತು ಮಹಿಲಾ ಶಿರೋಮಣಿ ಪ್ರಶಸ್ತಿ. ಅವರಿಗೆ ಭಾರತ್ ಜ್ಯೋತಿ ಪ್ರಶಸ್ತಿಯನ್ನೂ ನೀಡಲಾಯಿತು.[೫]
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "M. FATHIMA BEEVI". web.archive.org. 5 December 2008. Archived from the original on 5 ಡಿಸೆಂಬರ್ 2008. Retrieved 10 March 2020.
{{cite web}}
: CS1 maint: bot: original URL status unknown (link) - ↑ "New Page 0". www.womenofindia.net. Retrieved 10 March 2020.
- ↑ "Raj Bhavan, Chennai - Past Governors". www.tnrajbhavan.gov.in. Retrieved 10 March 2020.
- ↑ "Women Governors In India ! - Indian Officer". web.archive.org. 5 March 2008. Archived from the original on 5 ಮಾರ್ಚ್ 2008. Retrieved 10 March 2020.
{{cite web}}
: CS1 maint: bot: original URL status unknown (link) - ↑ "Shailendra Kumar". web.archive.org. 15 May 2009. Archived from the original on 15 ಮೇ 2009. Retrieved 10 March 2020.
{{cite web}}
: CS1 maint: bot: original URL status unknown (link)