ಫಾರೂಕಿ ರಾಜವಂಶ
ಗೋಚರ
ಫಾರೂಕಿ ರಾಜವಂಶ ಅಥವಾ ಫಾರೂಕ್ ಷಾಹಿ ಖಾನ್ ದೇಶವನ್ನು (ಖಾಂದೇಶ ಪ್ರದೇಶ) ಆಳಿದ ರಾಜವಂಶ. ತುಘಲಕ್ ಸುಲ್ತಾನ್ ಫಿರೂಜ಼್ ಷಹನ ಮರಣಾನಂತರ (1388) ಮಲಿಕ್ ಫರೂಕಿಯಿಂದ ಖಾನ್ ದೇಶದಲ್ಲಿ ಈ ರಾಜವಂಶ ಸ್ಥಾಪಿತವಾಯಿತು.
ಘಜ಼್ನೀ ಖಾನ್ ಈ ರಾಜವಂಶದ ಏಳನೆಯ ಸುಲ್ತಾನ. ಇವನು ದಾವೂದ್ ಖಾನನ ಮಗ. ದಾವೂದ್ ಖಾನ್ 1508ರಲ್ಲಿ ತೀರಿಕೊಂಡಾಗ ಇವನು ಪಟ್ಟಕ್ಕೆ ಬಂದ.[೧] ಆದರೆ ಹತ್ತೇ ದಿವಸಗಳೊಳಗಾಗಿ ವಿಷಪ್ರಯೋಗದಿಂದ ಕೊಲೆಗೀಡಾದ. ಸಿಂಹಾಸನಕ್ಕಾಗಿ ಅಹಮದ್ನಗರದ ಅಹಮದ್ ನಿಜಾ಼ಂ ಷಹನಿಗೂ, ಗುಜರಾತಿನ ಮಹಮೂದ್ ಬೇಘರಾನಿಗೂ ಸ್ಪರ್ಧೆ ಏರ್ಪಟ್ಟು ಇವರ ಎರಡು ಗುಂಪುಗಳ ನಡುವೆ ಕಲಹಗಳೇರ್ಪಟ್ಟವು. ಕೊನೆಗೆ ಬೇಘರಾನ ಗುಂಪು ಜಯಗಳಿಸಿತು. ಅವನು 3ನೆಯ ಆದಿಲ್ ಖಾನ್ ಎಂಬ ಹೆಸರು ತಳೆದು 1520ರ ವರೆಗೂ ರಾಜ್ಯವಾಳಿದ. ಅವನ ಅನಂತರ ಬಂದ ಸುಲ್ತಾನರು ದುರ್ಬಲರಾಗಿದ್ದರು. 1601ರಲ್ಲಿ ಖಾನ್ ದೇಶ ಅಕ್ಬರನ ವಶವಾಯಿತು.
ಉಲ್ಲೇಖಗಳು
[ಬದಲಾಯಿಸಿ]