ವಿಷಯಕ್ಕೆ ಹೋಗು

ಫೇಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫೇಣಿ ಚೂರುಚೂರು ಮಾಡಲಾದ, ಹಲ್ಲೆಹಲ್ಲೆಯಾಗಿರುವ, ತುಪ್ಪದಲ್ಲಿ ಕರಿಯಲಾಗುವ ಅಕ್ಕಿ ಹಿಟ್ಟಿನ ಒಂದು ಭಾರತೀಯ ಸಿಹಿ ತಿಂಡಿ. ಇದನ್ನು ಬಡಿಸುವಾಗ ಕರಗಿದ ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಸಕ್ಕರೆ ಮಿಠಾಯಿಯಂತೆ ರೂಪಿಸಲಾಗುತ್ತದೆ, ಮತ್ತು ಮೇಲೆ ನಯವಾಗಿ ಕತ್ತರಿಸಿದ ಪಿಸ್ತಾ ಹಾಗೂ ಬಾದಾಮಿಯನ್ನು ಸಿಂಪಡಿಸಲಾಗುತ್ತದೆ. ಈ ಖಾದ್ಯವನ್ನು ಸಾಮಾನ್ಯವಾಗಿ ಏಲಕ್ಕಿ ಪುಡಿಯಿಂದ ಸುವಾಸಿತಗೊಳಿಸಲಾಗುತ್ತದೆ. ಇದು ಗುಲಾಬಿ ಜಲ ಅಥವಾ ಕೇದಗೆಯಂತಹ ಹೂವಿನ ಸಾರದ ಪರಿಮಳವನ್ನು ಹೊಂದಿದ್ದು ಬಿಳಿ ಬಣ್ಣದ್ದಾಗಿರಬಹುದು, ಅಥವಾ ಬಣ್ಣ ಹೊಂದಿದ್ದು ಕೇಸರಿಯ ಪರಿಮಳ ಹೊಂದಿರಬಹುದು.

ತಯಾರಿಕೆ

[ಬದಲಾಯಿಸಿ]

ಸಕ್ಕರೆ/ಹಿಟ್ಟಿನ ಮಿಶ್ರಣವನ್ನು ಕರಗಿಸಲು ಮತ್ತು ಎಳೆಗಳಾಗಿ ನೇಯಲು ಯಾವುದೇ ವಿಶೇಷ ಉಪಕರಣವಿಲ್ಲದೇ, ಫೇಣಿಯನ್ನು ಮಾಡುವುದು ಪ್ರಯಾಸಕರವಾಗಬಹುದು ಮತ್ತು ಈ ಖಾದ್ಯವನ್ನು ಮನೆಯಲ್ಲಿ ತಯಾರಿಸುವುದು ಸೂಕ್ತವಲ್ಲ. ಪರ್ಯಾಯ ಪಾಕವಿಧಾನಗಳು ಬೆಣ್ಣೆ ಅಥವಾ ಕೊಬ್ಬಿನಲ್ಲಿ ಕರೆಯಲಾದ ಚೂರುಚೂರಾದ ಫಿಲೊ ಪೇಸ್ಟ್ರಿಯಿಂದ[], ಅಥವಾ ಅಂಗಡಿಯಲ್ಲಿ ಖರೀದಿಸಿದ ಸಿದ್ಧ, ಕರಿದ ಗೋಧಿ ಶಾವಿಗೆಯಿಂದ ಆರಂಭಗೊಳ್ಳುತ್ತವೆ. ನಂತರ ಪೇಸ್ಟ್ರಿಯನ್ನು ಅದರ ತೂಕದ ಸುಮಾರು ಅರ್ಧದಷ್ಟು (೨ ಭಾಗ ಸಕ್ಕರೆಗೆ ೧ ಭಾಗ ನೀರು ಸೇರಿಸಿ ತಯಾರಿಸಲಾದ) ಸಕ್ಕರೆ ಪಾಕದೊಂದಿಗೆ ಸೇರಿಸಲಾಗುತ್ತದೆ. ಇದು ಕ್ರಮೇಣವಾಗಿ ಪೇಸ್ಟ್ರಿಯಲ್ಲಿ ಹೀರಲ್ಪಡುತ್ತದೆ, ಮತ್ತು ಹಾಗಾಗಿ ಅಂತಿಮ ಉತ್ಪನ್ನವು ಒಣಗಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಫೇಣಿ&oldid=1243150" ಇಂದ ಪಡೆಯಲ್ಪಟ್ಟಿದೆ