ಫ್ಯಾಮಿಲಿ ಪ್ಯಾಕ್ (ಚಲನಚಿತ್ರ)
ಫ್ಯಾಮಿಲಿ ಪ್ಯಾಕ್ | |
---|---|
ನಿರ್ದೇಶನ | ಅರ್ಜುನ್ ಕುಮಾರ್ ಎಸ್. |
ನಿರ್ಮಾಪಕ | ಅಶ್ವಿನಿ ಪುನೀತ್ ರಾಜ್‌ಕುಮಾರ್ |
ಪಾತ್ರವರ್ಗ | |
ಸಂಗೀತ | ಗುರುಕಿರಣ್ ವಿರಾಜ್ ಕನ್ನಡಿಗ |
ಸ್ಟುಡಿಯೋ | ಪಿ ಆರ್ ಕೆ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು | ೧೭ -ಫೆಬ್ರುವರಿ ೨೦೨೨ |
ಫ್ಯಾಮಿಲಿ ಪ್ಯಾಕ್ 2022 ರ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದ್ದು ಅರ್ಜುನ್ ಕುಮಾರ್ ಎಸ್., [೧] ಅವರು ಈ ಹಿಂದೆ ಸಂಕಷ್ಟ ಕರ ಗಣಪತಿಯನ್ನು ನಿರ್ದೇಶಿಸಿದ್ದಾರೆ. [೨] ಚಿತ್ರದಲ್ಲಿ ಲಿಕಿತ್ ಶೆಟ್ಟಿ, ಅಮೃತ ಅಯ್ಯಂಗಾರ್, ರಂಗಾಯಣ ರಘು, ಮತ್ತು ಅಚ್ಯುತ್ ಕುಮಾರ್ ನಟಿಸಿದ್ದಾರೆ. ಈ ಚಿತ್ರವು ಎರಡು ಕುಟುಂಬಗಳು ಮತ್ತು ರಘು ನಿರ್ವಹಿಸಿದ ಮಾನವ ತರಹದ ಪ್ರೇತದ ಕತೆ ಹೊಂದಿದೆ. [೩] [೪] [೫] [೬] ಚಲನಚಿತ್ರವು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಪ್ರಥಮ ಪ್ರದರ್ಶನಗೊಂಡಿತು. [೭]
ಪಾತ್ರವರ್ಗ
[ಬದಲಾಯಿಸಿ]- ಅಭಿ ಪಾತ್ರದಲ್ಲಿ ಲಿಕಿತ್ ಶೆಟ್ಟಿ
- ಭೂಮಿಕಾ ( ಬೇಬಿ ಬೂ) ಆಗಿ ಅಮೃತಾ ಅಯ್ಯಂಗಾರ್
- ಮಂಜುನಾಥ್/ಮಂಜಣ್ಣ ಪಾತ್ರದಲ್ಲಿ ರಂಗಾಯಣ ರಘು
- ಅಭಿಯ ತಂದೆಯಾಗಿ ಅಚ್ಯುತ್ ಕುಮಾರ್
- ಅಭಿಯ ತಾಯಿಯಾಗಿ ಪದ್ಮಜಾ ರಾವ್
- ಸಿಹಿ ಕಹಿ ಚಂದ್ರು
- ಕೃಷ್ಣನಾಗಿ ಸಾಧು ಕೋಕಿಲ
- ದತ್ತಣ್ಣ
- ತಿಲಕ್
- ಶಿವರಾಂ
- ಶರ್ಮಿತಾ ಗೌಡ
- ಚಂದು ಗೌಡ
- ಜಹಾಂಗೀರ್
- ನಾಗಭೂಷಣ
- ರಘು ರಾಮನಕೊಪ್ಪ
- ಸುಜಯ್ ಶಾಸ್ತ್ರಿ
- ಮಹಾಂತೇಶ ಹಿರೇಮಠ
- ಶ್ರುತಿ ರಮೇಶ್
- ಸಂತೋಷ್ ಶೆಟ್ಟಿ
- ನಿಶ್ಚಿತಾ
ತಯಾರಿಕೆ
[ಬದಲಾಯಿಸಿ]ಸಂಕಷ್ಟಕರ ಗಣಪತಿಯ ಯಶಸ್ಸಿನ ನಂತರ, ನಿರ್ದೇಶಕ ಅರ್ಜುನ್ ಕುಮಾರ್ ಮತ್ತು ನಟ ಲಿಕಿತ್ ಶೆಟ್ಟಿ ಈ ಯೋಜನೆಗಾಗಿ ಮತ್ತೆ ಒಂದಾದರು. ಮೊದಲಿಗೆ ನಿರ್ಮಾಪಕರನ್ನು ಹುಡುಕಲು ಅವರು ಹೆಣಗಾಡಿದರು. ನಂತರ ಪುನೀತ್ ರಾಜ್‌ಕುಮಾರ್ ಮತ್ತು ಅವರ ಪತ್ನಿ ಅಶ್ವಿನಿ ನಂತರ ತಮ್ಮ ಬ್ಯಾನರ್‌ನ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದರು. [೮] [೯] [೧೦] ಚಿತ್ರೀಕರಣವು ಸೆಪ್ಟೆಂಬರ್ 2020 ರಲ್ಲಿ ಪ್ರಾರಂಭವಾಯಿತು, [೧೧] [೧೨] [೧೩] ಮತ್ತು ಅದು ಜುಲೈ 2021 ರಲ್ಲಿ ಮುಕ್ತಾಯವಾಯಿತು.
ಧ್ವನಿಮುದ್ರಿಕೆ
[ಬದಲಾಯಿಸಿ]"ಬಿದ್ದಳಪ್ಪೋ" ಹಾಡನ್ನು ಗುರುಕಿರಣ್ ಸಂಯೋಜಿಸಿದ್ದಾರೆ, ಚಿಂತನ್ ವಿಕಾಸ್ ಹಾಡಿದ್ದಾರೆ ಮತ್ತು ವಿ. ಮನೋಹರ್ ಬರೆದಿದ್ದಾರೆ. [೧೪] [೧೫] "ಬೇಕಾಗಿದೆ" ಗೀತೆಯನ್ನು ವಿರಾಜ್ ಕನ್ನಡಿಗ ರಚಿಸಿ, ಬರೆದು, ಹಾಡಿದ್ದಾರೆ. [೧೬]
ಪ್ರತಿಕ್ರಿಯೆಗಳು
[ಬದಲಾಯಿಸಿ]ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಎ. ಶಾರದಾ ಅವರು " ಫ್ಯಾಮಿಲಿ ಪ್ಯಾಕ್ ಆರಾಮದಾಯಕ ನೋಡತಕ್ಕ ಚಿತ್ರವಾಗಿದ್ದು ಒಂದು ಸಂದೇಶ ಹೊಂದಿದೆ " ಎಂದು ಅಭಿಪ್ರಾಯಪಟ್ಟಿದ್ದಾರೆ. [೧೭] ಡೆಕ್ಕನ್ ಹೆರಾಲ್ಡ್‌ನ ಜಗದೀಶ್ ಅಂಗಡಿ ಬರೆದಿದ್ದಾರೆ- "'ಫ್ಯಾಮಿಲಿ ಪ್ಯಾಕ್' ನ್ಯೂನತೆಗಳನ್ನು ಹೊಂದಿದೆ ಆದರೆ ಚಿತ್ರದ ತಿರುವುಗಳು ಚೆನ್ನಾಗಿವೆ. ಅನೇಕ ಘಟನೆಗಳುಳ್ಳ ಎರಡನೇ ಭಾಗವು ಬಸವನ ಹುಳುವಿನಷ್ಟು ವೇಗದ ಮೊದಲ ಅರ್ಧ ಭಾಗವನ್ನು ಸರಿದೂಗಿಸುತ್ತದೆ. ಈ ಚಲನಚಿತ್ರವು ಮಾನವ ಭಾವನೆಗಳ ಪ್ರೀತಿಯ ಕಥೆಯಾಗ ಬಹುದಿತ್ತು" [೧೮] ದಿ ನ್ಯೂಸ್ ಮಿನಿಟ್‌ನ ಸೌಮ್ಯಾ ರಾಜೇಂದ್ರನ್ ಅವರು "ಸುಮಾರು ಎರಡು ಗಂಟೆಗಳ ಚಿತ್ರವಾದ, ಫ್ಯಾಮಿಲಿ ಪ್ಯಾಕ್ ಸಹಿಷ್ಣುತೆಯ ಪರೀಕ್ಷೆಯಂತೆ ಭಾಸವಾಗುತ್ತದೆ,ನೋಡುಗರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಕೆಟ್ಟ ಚಲನಚಿತ್ರಗಳನ್ನು ನೋಡಬೇಕಾದ ಚಲನಚಿತ್ರ ವಿಮರ್ಶಕರಾಗಿರದ ಹೊರತು ಈ ಚಿತ್ರವನ್ನು ಸಹಿಸಲು ವಿಫಲರಾಗುವ ಸಾಧ್ಯತೆಯಿದೆ. ". [೧೯] ಟೈಮ್ಸ್ ಆಫ್ ಡಿಯಾದ ಸುನಯನಾ ಸುರೇಶ್ ಅವರು " ಫ್ಯಾಮಿಲಿ ಪ್ಯಾಕ್ ದ ಹಾಸ್ಯವು ಅದರ ದೊಡ್ಡ ಶಕ್ತಿಯಾಗಿದೆ. ನಿರ್ದೇಶಕ ಅರ್ಜುನ್ ಕುಮಾರ್ ಮತ್ತೊಂದು ತಮಾಷೆಯ ಚಿತ್ರವನ್ನು ನೀಡಿದ್ದಾರೆ". [೨೦]
ಉಲ್ಲೇಖಗಳು
[ಬದಲಾಯಿಸಿ]- ↑ Anandraj, Shilpa (February 17, 2022). "Arjun Kumar on Kannada film 'Family Pack': 'Comedy is a great genre'". The Hindu.
- ↑ "Family Pack reunites Arjun Kumar and Likith Shetty". The New Indian Express.
- ↑ "Fun apart, people will sense the message of 'Family Pack': Director Arjun Kumar". The New Indian Express.
- ↑ "Family Pack is a landmark movie for me and marks a very important project in my career: Likith Shetty - Times of India". The Times of India.
- ↑ "'Family Pack' is the most important film of my career: Amrutha Iyengar". www.daijiworld.com.
- ↑ "The cast and director of 'Family Pack' share their real-life experiences on guiding ghosts! - Times of India". The Times of India.
- ↑ "'Family Pack' to premiere on Prime Video". The New Indian Express.
- ↑ R, Shilpa Sebastian (June 22, 2020). "Likith Shetty: 'In the Kannada film industry there is no insider or outsider'". The Hindu.
- ↑ India, The Hans (February 11, 2022). "PRK productions Kannada comedy drama 'Family Pack' trailer unveiled". The Hans India.
- ↑ "Puneeth Rajkumar to bankroll Likith Shetty's upcoming film Family Pack". India Today.
- ↑ "Team Family Pack begins shooting with short schedules - Times of India". The Times of India.
- ↑ "It's a wrap for 'Family Pack'". The New Indian Express.
- ↑ "Likith Shetty-starrer Family Pack shooting to start today". The New Indian Express.
- ↑ "Makers of Kannada film 'Family Pack' released a mesmerising love track on Valentine's day". DT next.
- ↑ "'Biddalappo' from 'Family Pack' celebrates love - Times of India". The Times of India.
- ↑ "Team 'Family Pack' drops new single titled 'Bekagide' - Times of India". The Times of India.
- ↑ "Family Pack Movie Review: Packed with laughter and surprise". The New Indian Express.
- ↑ "Family Pack review: A comedy drama that defies logic". Deccan Herald. February 18, 2022.
- ↑ "Family Pack review: This meandering Kannada comedy is best avoided". The News Minute. February 17, 2022.
- ↑ "Family Pack Review: A comedy of many errors that holds its own eventually". The Times of India.