ವಿಷಯಕ್ಕೆ ಹೋಗು

ಬಂಗಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಗಲೆ ಮನೆ

ಬಂಗಲೆ ಎಂದರೆ ಒಂದು ಮಹಡಿ ಅಥವಾ ಎರಡನೆಯ ಮಹಡಿಯನ್ನು ಇಳಿಜಾರಾದ ಚಾವಣಿಯಾಗಿ ನಿರ್ಮಿಸಲಾಗಿರುವ ಚಿಕ್ಕ ಮನೆ ಅಥವಾ ಕುಟೀರ,[] ಇದರ ಸುತ್ತ ವಿಶಾಲವಾದ ವರಾಂಡಗಳು ಇರಬಹುದು.

ಈ ಶೈಲಿಯು ಬಂಗಾಳಿ ರೈತರ ಹುಲ್ಲಿನ ಚಾವಣಿಯಿರುವ ಗುಡಿಸಲುಗಳಿಂದ ಹುಟ್ಟಿಕೊಂಡಿದೆ.[] ಬ್ರಿಟೀಷರು ಈ ಶೈಲಿಯನ್ನು ಮಾರ್ಪಡಿಸಿ ಬ್ರಿಟಿಷ್ ಭಾರತದಾದ್ಯಂತ ಬಂಗಲೆಗಳನ್ನು ನಿರ್ಮಿಸಿದರು. ಬಂಗಲೆ ಎಂದು ವರ್ಗೀಕರಿಸಲಾದ ಮೊದಲ ಮನೆಯನ್ನು ಇಂಗ್ಲಂಡ್‍ನಲ್ಲಿ ೧೮೬೯ರಲ್ಲಿ ನಿರ್ಮಿಸಲಾಯಿತು. ಆರಂಭದಲ್ಲಿ ಅಮೇರಿಕದಲ್ಲಿ ಇದನ್ನು ರಜಾಕಾಲದ ವಾಸ್ತುಕಲೆಯಾಗಿ ಬಳಸಲಾಗಿತ್ತು, ಮತ್ತು 1900–1918 ರ ನಡುವೆ ಅತ್ಯಂತ ಜನಪ್ರಿಯವಾಗಿತ್ತು, ವಿಶೇಷವಾಗಿ ಕಲಾ ಮತ್ತು ಕರಕುಶಲ ಚಳುವಳಿಯಲ್ಲಿ.

ಬಂಗಲೆಗಳು ಅದರ ಮಾಲೀಕರಿಗೆ ಬಹಳ ಅನುಕೂಲಕರವಾಗಿರುತ್ತವೆ ಏಕೆಂದರೆ ಎಲ್ಲ ವಸತಿ ಪ್ರದೇಶಗಳು ಒಂದೇ ಮಹಡಿಯಲ್ಲಿರುತ್ತವೆ ಮತ್ತು ವಸತಿ ಪ್ರದೇಶಗಳ ಮಧ್ಯೆ ಯಾವುದೇ ಮೆಟ್ಟಲು ಸಾಲುಗಳಿರುವುದಿಲ್ಲ. ಬಂಗಲೆಯು ವೃದ್ಧರು ಅಥವಾ ಗಾಲಿಕುರ್ಚಿ ಬಳಸುವವರಂತಹ ದುರ್ಬಲ ಚಲನೆಯುಳ್ಳವರಿಗೆ ಅತ್ಯಂತ ಸೂಕ್ತವಾಗಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Powell, Jane (2004). Bungalow Details: They have small windows at the top with makes them bungalows Exterior. p. 12. ISBN 978-1-4236-1724-2. {{cite book}}: Invalid |ref=harv (help)


"https://kn.wikipedia.org/w/index.php?title=ಬಂಗಲೆ&oldid=986511" ಇಂದ ಪಡೆಯಲ್ಪಟ್ಟಿದೆ