ಬರಂತಿ
ಗೋಚರ
ಬರಂತಿ ಭಾರತದ ಪಶ್ಚಿಮ ಬಂಗಾಳದ ಪುರೂಲಿಯಾ ಜಿಲ್ಲೆಯಲ್ಲಿನ ರಘುನಾಥ್‍ಪುರ್ ಉಪವಿಭಾಗದ ಸಂತುರಿಯಲ್ಲಿ (ಅಭಿವೃದ್ಧಿ ಕ್ಷೇತ್ರ) ಸ್ಥಿತವಾಗಿರುವ ಒಂದು ಚಿಕ್ಕ ಆದಿವಾಸಿ ಗ್ರಾಮವಾಗಿದೆ. ಇದು ಬರಂತಿ ಸರೋವರದ ಪಕ್ಕದಲ್ಲಿ ಸ್ಥಿತವಾಗಿದೆ. ಇದು ಒಂದು ಬೆಳೆಯುತ್ತಿರುವ, ಆದರೆ ಪ್ರಶಾಂತವಾದ ಪ್ರವಾಸಿ ತಾಣವಾಗಿದೆ.[೧]
ಪ್ರವಾಸೋದ್ಯಮ
[ಬದಲಾಯಿಸಿ]ಬರಂತಿ ಗೊರೊಂಗಿ ಗುಡ್ಡದ ಮಡಿಲಿನಲ್ಲಿ ಸ್ಥಿತವಾಗಿರುವ ಬೆಳೆಯುತ್ತಿರುವ ಪ್ರವಾಸಿ ಕೇಂದ್ರವಾಗಿದೆ. ಈ ಹಳ್ಳಿಯನ್ನು ಒಂದು ಪಾರ್ಶ್ವದಲ್ಲಿ ಪಂಚ್‍ಕೋಟ್ ಗುಡ್ಡ ಸುತ್ತುವರಿದಿದೆ ಮತ್ತು ಇನ್ನೊಂದು ಪಾರ್ಶ್ವದಲ್ಲಿ ಬಿಹಾರಿನಾಥ್ ಗುಡ್ಡವು ಸುತ್ತುವರಿದಿದೆ. ರಾಮ್‍ಚಂದ್ರಾಪುರ್ ಮಧ್ಯಮ ನೀರಾವರಿ ಯೋಜನೆಯಡಿ ಒಂದು ಜಲಾಶಯವಿದೆ. ಇದರ ನೈಸರ್ಗಿಕ ಪರಿಸರದ ಕಾರಣ ಈ ಪ್ರದೇಶವು ಗುಡ್ಡ ಮತ್ತು ಅರಣ್ಯ ಚಾರಣಕ್ಕೆ ಜನಪ್ರಿಯವಾಗಿದೆ.[೨] ಬರಂತಿಯಿಂದ ಗಢ್ ಪಂಚ್‍ಕೋಟ್ ೧೨ ಕಿ.ಮಿ. ದೂರದಲ್ಲಿದೆ ಮತ್ತು ಜೊಯ್‍ಚಂದಿ ಪಹಾರ್ ೨೧ ಕಿ.ಮಿ. ದೂರದಲ್ಲಿದೆ.[೩] ಬಂಗಾಳದ ಅರಕು ಕಣಿವೆಯಾದ ಬಿಹಾರಿನಾಥ್ ಬರಂತಿಯಿಂದ ೧೮ ಕಿ.ಮಿ. ದೂರದಲ್ಲಿದೆ.
ಛಾಯಾಂಕಣ
[ಬದಲಾಯಿಸಿ]-
ಬರಂತಿಯಲ್ಲಿ ಪ್ರತಿಬಿಂಬ
-
ವಿಹಂಗಮ ನೋಟ
-
ಅರಳುತ್ತಿರುವ ಪಲಾಶದ ಹೂವುಗಳು
-
ಬರಂತಿ ಗ್ರಾಮದ ರಸ್ತೆ
-
ಬರಂತಿ ಸರೋವರದಲ್ಲಿ ಸೂರ್ಯಾಸ್ತ
-
ದಿನವು ಮುಗಿಯುತ್ತಿದೆ
ಉಲ್ಲೇಖಗಳು
[ಬದಲಾಯಿಸಿ]- ↑ "Tourist spots in Purulia being developed by the Bengal Govt". news.webindia123.com. 24 May 2017. Archived from the original on 27 ಆಗಸ್ಟ್ 2017. Retrieved 27 August 2017.
- ↑ "Next weekend you can be at ... Baranti". telegraphindia.com. 27 December 2009. Archived from the original on 27 ಆಗಸ್ಟ್ 2017. Retrieved 27 August 2017.
- ↑ "নীলাভ সুন্দরী হয়ে প্রতীক্ষায় বড়ন্তি". anandabazar.com. 25 May 2017. Archived from the original on 27 ಆಗಸ್ಟ್ 2017. Retrieved 27 August 2017.