ವಿಷಯಕ್ಕೆ ಹೋಗು

ಬರಾಬರ್ ಗುಹೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬರಾಬರ್ ಗುಡ್ಡದ ಗುಹೆಗಳು ಭಾರತದಲ್ಲಿ ಉಳಿದುಕೊಂಡಿರುವ ಅತ್ಯಂತ ಹಳೆಯ ಕಲ್ಲಿನಲ್ಲಿ ಕೆತ್ತಿದ ಗುಹೆಗಳಾಗಿವೆ. ಇವುಗಳ ಕಾಲಮಾನ ಮೌರ್ಯ ಸಾಮ್ರಾಜ್ಯದಿಂದ (ಕ್ರಿ.ಶ. ೩೨೨-೧೮೫) ಎಂದು ಹೇಳಲಾಗಿದೆ. ಕೆಲವು ಅಶೋಕನ ಶಾಸನಗಳನ್ನು ಹೊಂದಿವೆ. ಇದು ಭಾರತದ ಬಿಹಾರ ರಾಜ್ಯದ ಜೆಹಾನಾಬಾದ್ ಜಿಲ್ಲೆಯ ಮಖ್‍ದುಂಪುರ್ ಪ್ರದೇಶದಲ್ಲಿ, ಗಯಾದ ೨೪ ಕಿ.ಮಿ. ಉತ್ತರಕ್ಕೆ ಸ್ಥಿತವಾಗಿದೆ.[]

ಬರಾಬರ್ ಗುಡ್ಡದಲ್ಲಿರುವ ಗುಹೆಗಳು

[ಬದಲಾಯಿಸಿ]

ಬರಾಬರ್ ಗುಡ್ಡದಲ್ಲಿ ನಾಲ್ಕು ಗುಹೆಗಳಿವೆ: ಕರನ್ ಚೌಪಾರ್, ಲೋಮಸ್ ರಿಶಿ, ಸುದಾಮಾ ಮತ್ತು ವಿಶ್ವಕರ್ಮ.[]

ಲೋಮಸ್ ಋಷಿ ಗುಹೆ

[ಬದಲಾಯಿಸಿ]


ಲೋಮಸ್ ಋಷಿಯ ಗುಹೆಯು ಪ್ರಾಯಶಃ ಬರಾಬರ್‌ನ ಅತ್ಯಂತ ಪ್ರಸಿದ್ಧ ಗುಹೆಯಾಗಿದೆ, ಇದರ ಸುಂದರವಾಗಿ ಕೆತ್ತಿದ ಬಾಗಿಲಿನ ಕಾರಣದಿಂದ. ಇದು ಬರಾಬರ್ ಗ್ರನೈಟ್ ಗುಡ್ಡದ ದಕ್ಷಿಣ ಬದಿಯಲ್ಲಿಅದೆ, ಮತ್ತು ಸುದಾಮಾ ಗುಹೆಯ ಪಕ್ಕದಲ್ಲಿದೆ.

ಒಬ್ಬ ಆಜೀವಿಕ ತಪಸ್ವಿಯ ಚಿತ್ರಣ, ಗಾಂಧಾರ ಶಿಲ್ಪಕಲೆಯಲ್ಲಿ.[][][]

ಸುದಾಮಾ ಗುಹೆ

[ಬದಲಾಯಿಸಿ]


ಸುದಾಮಾ ಗುಹೆಯು ಬರಾಬರ್ ಗ್ರಾನೈಟ್ ಗುಡ್ಡದ ದಕ್ಷಿಣ ಬದಿಯ ಮೇಲೆ ಸ್ಥಿತವಾಗಿದೆ. ಇದು ಲೋಮಸ್ ಋಷಿಗೆ ಹತ್ತಿರವಿದೆ. ಇದು ಬಹುಶಃ ಗುಂಪಿನಲ್ಲಿ ಅಗೆಯಲಾದ ಮೊದಲ ಗುಹೆಯಾಗಿದೆ. ಈ ಗುಹೆಯನ್ನು ಸಾಮ್ರಾಟ್ ಅಶೋಕನು ಕ್ರಿ.ಪೂ. ೨೫೭ರಲ್ಲಿ ಸಮರ್ಪಿಸಿದನು.

ಕರನ್ ಚೌಪಾರ್ ಗುಹೆ

[ಬದಲಾಯಿಸಿ]


ಕರನ್ ಚೌಪಾರ್ (ಅಥವಾ ಕರ್ಣ ಚೌಪಾರ್) ಬರಾಬರ್ ಗ್ರಾನೈಟ್ ಗುಡ್ಡದ ಉತ್ತರ ಬದಿಯಲ್ಲಿದೆ. ಇದು ಅವನ ಆಳ್ವಿಕೆಯ ಕಾಲದ ೧೯ನೇ ವರ್ಷದ ಕಾಲಮಾನದ್ದೆಂದು ನಿರ್ಧರಿಸಲಾದ ಅಶೋಕನ ಒಂದು ಶಾಸನವನ್ನು ಹೊಂದಿದೆ, ಅಂದರೆ ಸುಮಾರು ಕ್ರಿ.ಪೂ. ೨೫೦ರಲ್ಲಿ.

ವಿಶ್ವಕರ್ಮ ಗುಹೆ

[ಬದಲಾಯಿಸಿ]


ವಿಶ್ವ ಮಿತ್ರ ಎಂದೂ ಕರೆಯಲ್ಪಡುವ ವಿಶ್ವಕರ್ಮ ಗುಹೆಯನ್ನು ಕಡಿಬಂಡೆಯೊಳಗೆ ಕೆತ್ತಲ್ಪಟ್ಟ "ಅಶೋಕನ ಮೆಟ್ಟಿಲು"ಗಳಿಂದ ಪ್ರವೇಶಿಸಬಹುದು. ಇದು ನೂರು ಮೀಟರ್‌ಗಳಷ್ಟಿದ್ದು ಮುಖ್ಯ ಗ್ರಾನೈಟ್ ಗುಡ್ಡದ ಸ್ವಲ್ಪ ಪೂರ್ವದಲ್ಲಿದೆ.

ನಾಗಾರ್ಜುನಿ ಗುಹೆಗಳು

[ಬದಲಾಯಿಸಿ]


ನಾಗಾರ್ಜುನಿ ಗುಡ್ಡದ ಹತ್ತಿರದ ಗುಹೆಗಳನ್ನು ಬರಾಬರ್ ಗುಹೆಗಳ ಕೆಲವು ದಶಕಗಳ ನಂತರ ನಿರ್ಮಿಸಲಾಯಿತು. ಇವನ್ನು ಅಶೋಕನ ಮೊಮ್ಮಗ ಮತ್ತು ಉತ್ತರಾಧಿಕಾರಿಯಾದ ದಶರಥ ಮೌರ್ಯನು ಸಮರ್ಪಿಸಿದನು.

ಗೋಪಿಕಾ ಗುಹೆ

[ಬದಲಾಯಿಸಿ]

ಗೋಪಿ ಅಥವಾ ಗೋಪಿ ಕಾ ಕುಭಾ ಅಥವಾ ಸರಳವಾಗಿ ನಾಗಾರ್ಜುನಿ ಎಂದೂ ಕರೆಯಲ್ಪಡುವ ಗೋಪಿಕಾ ಗುಹೆಯು ಬರಾಬರ್ ಸಂಕೀರ್ಣದ ಎಲ್ಲ ಗುಹೆಗಳ ಪೈಕಿ ಅತಿ ದೊಡ್ಡದು. ಇತರ ಗುಹೆಗಳಿಗೆ ಭಿನ್ನವಾಗಿ, ಕೋಣೆಯ ಎರಡೂ ತುದಿಗಳು ವೃತ್ತಾಕಾರವಾಗಿರುವ ವಿಶಿಷ್ಟತೆಯನ್ನು ಹೊಂದಿವೆ.

ವದಥೀಕ ಮತ್ತು ವಪೀಯಕ ಗುಹೆಗಳು

[ಬದಲಾಯಿಸಿ]


ಈ ಎರಡು ಗುಹೆಗಳು ಗುಡ್ಡದ ಉತ್ತರ ಬದಿಯ ಮೇಲೆ ಸ್ವಲ್ಪ ಎತ್ತರದಲ್ಲಿವೆ.

  • ವದಥೀಕ ಗುಹೆ. ಇದು ಬಂಡೆಯ ಒಂದು ಕೊರಕಲಿನಲ್ಲಿ ಸ್ಥಿತವಾಗಿದೆ. ಈ ಗುಹೆಯನ್ನು ದಶರಥ ಮೌರ್ಯನು ಆಜೀವಿಕ ಪಂಥಕ್ಕಾಗಿ ಸಮರ್ಪಿಸಿದನು.
  • ವಪೀಯಕ ಗುಹೆ, "ಬಾವಿ ಗುಹೆ" ಎಂದೂ ಕರೆಯಲ್ಪಡುತ್ತದೆ. ಇದು ಕೂಡ ಆಜೀವಿಕರ ಪಂಥಕ್ಕೆ ದಶರಥನು ಸಮರ್ಪಿಸಿದನು.

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ Sir Alexander Cunningham (1871). Four Reports Made During the Years, 1862-63-64-65. Government Central Press. pp. 43–52.
  2. Balcerowicz, Piotr (2015). Early Asceticism in India: Ājīvikism and Jainism (in ಇಂಗ್ಲಿಷ್). Routledge. p. 278. ISBN 9781317538530.
  3. Balcerowicz, Piotr (2015). Early Asceticism in India: Ājīvikism and Jainism (in ಇಂಗ್ಲಿಷ್). Routledge. p. 279. ISBN 9781317538530.
  4. Balcerowicz, Piotr (2015). Early Asceticism in India: Ājīvikism and Jainism (in ಇಂಗ್ಲಿಷ್). Routledge. p. 281. ISBN 9781317538530.
  5. Photos


ಉಲ್ಲೇಖಗಳು

[ಬದಲಾಯಿಸಿ]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]