ವಿಷಯಕ್ಕೆ ಹೋಗು

ಬಸ್ರೂರು

Coordinates: 13°37′53″N 74°44′20″E / 13.6313°N 74.7388°E / 13.6313; 74.7388
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Basrur
ಬಸ್ರೂರು
ಹಳ್ಳಿ
Basrur is located in Karnataka
Basrur
Basrur
ಕರ್ನಾಟಕದಲ್ಲಿ ಸ್ಥಳ ನಿರ್ದೇಶನ
Coordinates: 13°37′53″N 74°44′20″E / 13.6313°N 74.7388°E / 13.6313; 74.7388
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಉಡುಪಿ ಜಿಲ್ಲೆ
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
PIN
576 211
Vehicle registrationKA-20


ಬಸ್ರೂರು ಉಡುಪಿ ಜಿಲ್ಲೆಕುಂದಾಪುರ ತಾಲೂಕಿನಲ್ಲಿರುವ ಒಂದು ಸ್ಥಳ.ಐತಿಹಾಸಿಕವಾಗಿ ಇದು ಒಂದು ಬಂದರು ನಗರವಾಗಿತ್ತು.ಇದನ್ನು 'ವಸುಪುರ'.ಬಾರ್ಸೆಲೋರ್,ಬಾರ್ಕೊಲೊರ್,ಬಸ್ನೂರ್,ಬಾರ್ಸ್,ಅಬು-ಸರೂರ್ ಮತ್ತು ಬಾರ್ಸೆಲ್ಲೋರ್ ಎಂದೂ ವಿವಿಧ ಕಾಲಘಟ್ಟದಲ್ಲಿ ಉಲ್ಲೇಖಿಸಲಾಗಿತ್ತು.

ಇತಿಹಾಸ

[ಬದಲಾಯಿಸಿ]

ಐತಿಹಾಸಿಕವಾಗಿ ಬಸ್ರೂರು ಒಂದು ಮುಖ್ಯ ಬಂದರು ನಗರವಾಗಿ ಗುರುತಿಸಲ್ಪಟ್ಟಿತ್ತು.ಪುರಾಣದ ಪ್ರಕಾರ ಇದು ವಸು ಚಕ್ರವರ್ತಿಯ ರಾಜಧಾನಿಯಾಗಿದ್ದು, ಅವನು ಹಲವಾರು ದೇಗುಲಗಳನ್ನು, ಕೆರೆಗಳನ್ನು ಕಟ್ಟಿಸಿದ.೧೭ ಮತ್ತು ೧೮ ನೆಯ ಶತಮಾನದ ಶಾಸನಗಳಲ್ಲಿ ಇದನ್ನು ವಸುಪುರ ಎಂದೇ ಉಲ್ಲೇಖಿಸಲಾಗಿದೆ [] ಮೊರೊಕ್ಕೋದ ಯಾತ್ರಿ ಇಬಿನ್ ಬಟೂಟ ಉಲ್ಲೇಖಿಸಿದ ಅಬು-ಸರೂರ್ ಮತ್ತು ಟಾಲೆಮಿಯ ಭೂಪಟದಲ್ಲಿರುವ ಬಾರ್ಸೆಲೋರ್ ಎಂಬ ಸ್ಥಳವೂ ಇದೇ ಬಸ್ರೂರು ಆಗಿತ್ತು ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ.೧೫೧೪ರಲ್ಲಿ ಬಾರ್ಬೋಸ ಉಲ್ಲೇಖಿಸಿದಂತ ಇಲ್ಲಿಗೆ ಮಲಬಾರ್, ಏಡೆನ್,ಒರ್ಮುಜ್ ಮುಂತಾದ ಸ್ಥಳಗಳಿಂದ ಹಲವಾರು ಹಡಗುಗಳು ಬರುತ್ತಿದ್ದು, ಇದೊಂದು ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು.[]೧೬ನೆಯ ಶತಮಾನದಲ್ಲಿ ಇದು ಪೋರ್ಚುಗೀಸರ ವಶದಲ್ಲಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "ಕರ್ನಾಟಕ ಗೆಝೆಟಿಯರ್" (PDF). Retrieved 30 ಜುಲೈ 2014.
"https://kn.wikipedia.org/w/index.php?title=ಬಸ್ರೂರು&oldid=1114345" ಇಂದ ಪಡೆಯಲ್ಪಟ್ಟಿದೆ