ಬಾಬ್ ಮಾರ್ಷಲ್
ರಾಬರ್ಟ್ ಬಾಬ್ ಮಾರ್ಷಲ್. | |
---|---|
Born | |
Died | November 11, 1939 New York City | (aged 38)
Cause of death | heart failure |
Occupation | Forester |
Employer(s) | Bureau of Indian Affairs; United States Forest Service |
Known for | Founder, The Wilderness Society |
Notable work | Arctic Village (1933) |
Parent(s) | Louis Marshall, Florence Lowenstein Marshall |
Relatives | George Marshall, James Marshall, Ruth (Putey) Marshall |
ಅಮೆರಿಕದ ಮೌಂಟಾನ ಗೊಂಡಾರಣ್ಯ ಇಂದಿಗೂ ಹಾಗೇ ಉಳಿದಿದೆ ಎಂದರೆ ಅದರ ಹಿಂದೆ ಒಬ್ಬ ಅಸಾಮಾನ್ಯ ಪ್ರೇಮಿ ಇದ್ದಾರೆ. ಅವರ ಹೆಸರು ಬಾಬ್ ಮಾರ್ಷಲ್. ಸುಮಾರು ನೂರಾರು ಏಕರೆ ವಿಸ್ತೀರ್ಣದ ಈ ದಟ್ಟಕಾಡು ನಾಶವಾಗುತ್ತೆ ಎಂದಾಗ ಸರ್ಕಾರದ ವಿರುದ್ಧ ತೊಡೆತಟ್ಟಿ ನಿಂತವರು ಇವರು. ನ್ಯೂಯಾರ್ಕಿನ ಶ್ರೀಮಂತ ಮನೆತನವೊಂದರಲ್ಲಿ ಜನಿಸಿದ ಮಾರ್ಷಲ್ಗೆ ಬಾಲ್ಯದಿಂದಲೇ ಅರಣ್ಯ ಕಂಡರೆ ಪ್ರೀತಿ. ಕಾಲೇಜನಲ್ಲಿ ಓದುತ್ತಿರುವಾಗಲೇ ಅವರು ಅರಣ್ಯದ ಕುರಿತು ಅಧ್ಯಯನ ಶುರುಮಾಡಿದ್ದರು. ಕಾಡುಗಳನ್ನು ಕಡಿಯುವ ಸರ್ಕಾರದ ಕ್ರಮವನ್ನು ವಿರೋಧಿಸಿದ ಮಾರ್ಷಲ್ನ ವಾದಕ್ಕೆ ಸರ್ಕಾರವೇ ದಂಗಾಗಿತ್ತು. ಒಂದು ಬಾರಿ ಮಾರ್ಷಲ್ ಅವರ ವಿಭಿನ್ನ ವಾದವನ್ನು ಕಂಡ ಅಮೆರಿಕಾದ ಅಧಿಕಾರಿಗಳು, 'ನಿನಗೆಷ್ಟು ಕಾಡು ಬೇಕು ಹೇಳಪ್ಪ?' ಎಂದರಂತೆ. 'ನನಗಲ್ಲ, ದೇಶಕ್ಕೆ ಬೇಕಾಗಿರುವುದು. ಎಷ್ಟು ಷೇಕ್ಸ್ಪಿಯರ್ ಗಳು, ಬಿಠೋವನ್ ಗಳು ಬೇಕು ಎಂದು ಕೇಳಿದಷ್ಟು ಹಾಸ್ಯಸ್ಪದ ಪ್ರಶ್ನೆ ನಿಮ್ಮದು.' ಎಂದು ಕೇಳಿ ಸುಮ್ಮನಾದರಂತೆ. ಕಾಡಿಗೆ ಜನರನ್ನು ಪ್ರವೇಶಿಸಲು ಅವಕಾಶ ನೀಡದೆ, ಹೊರಗಿನಂದಲೇ ಸರ್ಕಾರ ಕಾಡನ್ನು ಕಾಯಬೇಕೆಂದು' ಬೇಡಿಕೆ ಮುಂದಿಟ್ಟರು. ಇದರ ಪರಿಣಾಮವೇ ಇಂದಿಗೂ ಮೌಂಟಾನ ಗೊಂಡಾರಣ್ಯಗಳಲ್ಲಿ ಬೇಟೆ, ವಾಸ, ವಾಹನಗಳ ನಿಷೇಧಿಸಲಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Bob Marshall Wilderness Foundation website – Wilderness Volunteer Projects in The Bob
- The Wilderness Society's official website
- The Robert Marshall Collection, New York State Archives Archived 2011-01-06 at the Library of Congress
- The Robert Marshall Papers, American Jewish Archives Archived 2012-08-06 ವೇಬ್ಯಾಕ್ ಮೆಷಿನ್ ನಲ್ಲಿ.
- Bob Marshall at Findagrave.com