ಬಾಲ ಯೇಸುವಿನ ಪುಣ್ಯಕ್ಷೇತ್ರ ಬೆಂಗಳೂರು
ಬಾಲ ಯೇಸುವಿನ ಪುಣ್ಯಕ್ಷೇತ್ರ[ಬದಲಾಯಿಸಿ]
![](http://upload.wikimedia.org/wikipedia/commons/thumb/7/73/InfantJesus_Church_Blr2.jpg/220px-InfantJesus_Church_Blr2.jpg)
ಬಾಲ ಯೇಸುವಿನ ಇಗರ್ಜಿಯು ಬೆಂಗಳೂರಿನ ರೋಮನ್ ಕಥೊಲಿಕರಿಗೆ ಸಮರ್ಪಿಸಲಾಗಿದೆ.೧೯೭೧ ರಲ್ಲಿ ಬೆಂಗಳೂರಿನ ವಿವೇಕನಗರ ಪ್ರದೇಶದಲ್ಲಿ ಈ ಇಗರ್ಜಿಯು ಸ್ಥಾಪನೆಯಾಗಿದೆ. ಈ ಇಗರ್ಜಿಯನ್ನು ಬಾಲ ಯೇಸುವಿನ ಪುಣ್ಯಕ್ಷೇತ್ರ ಎಂದು ಕರೆಯಲ್ಪಡುತ್ತದೆ ಮತ್ತು ಐತಿಹಾಸಿಕ ಬಾಲ ಯೇಸುವನ್ನು ಪ್ರಾಗದ ನೆನಪಿಗಾಗಿ ನಿರ್ಮಿಸಲಾಗಿದೆ.ಅದರ ನಂತರ ಹಲವಾರು ಪವಾಡಗಳು ಈ ದೇವಾಲಯಕ್ಕೆ ಕಾರಣವಾಗಿದ್ದು ಜನರ ಮನಸ್ಸಿನಲ್ಲಿ ಜನಪ್ರೀಯತೆ ಹೆಚ್ಚಾಗಿದೆ. ದೇವಾಲಯದ ಹಳೆಯ ಕಟ್ಟಡವನ್ನು ತೆಗೆದು ಸಮೀಪದಲ್ಲಿ ಹೊಸ ದೇವಾಲಯದ ನಿರ್ಮಣಕ್ಕೆ ೨೦೦೫ ರಲ್ಲಿ ಸೇರಿಸಲಾಯಿತು.[೧]
ಇತಿಹಾಸ[ಬದಲಾಯಿಸಿ]
ಬಾಲ ಯೇಸುವಿನ Archived 2018-08-08 ವೇಬ್ಯಾಕ್ ಮೆಷಿನ್ ನಲ್ಲಿ. ದೇವಾಲಯ ಸ್ಥಾಪನೆಯು ಎಪ್ರಿಲ್ ೧೮,೧೯೬೯ ರಂದು ಬೆಂಗಳೂರಿನ ಆಗಿನ ಆರ್ಚ್ ಬಿಷಪ್ ಆಗಿದ್ದ ರೆ|ಫಾ|ಡ್ಯುರೈಸ್ವಾಮಿ ಸೈಮನ್ ಲೊರ್ಡ್ಸ್ವಾಮಿ ಇವರು ಸ್ಥಾಪನೆ ಮಾಡಿದರು.ನಂತರ ೧೯೭೧ ರಲ್ಲಿ ರೆ|ಫಾ|ಎಲ್ ಪೀಟರ್ ಗುರುಗಳಾಗಿ ನೇಮಕಗೊಂಡು ಬೆಂಗಳೂರಿನ ಸೇಕ್ರೆಡ್ ಹಾರ್ಟ್ ದೇವಾಲಯದಿಂದ ಬಾಲ ಯೇಸುವಿನ ಪ್ರತಿಮೆಯನ್ನು ತಂದರು. ಈ ದೇವಾಲಯಕ್ಕೆ ಮುಂದಿನ ಎಂಟು ವರ್ಷಗಳಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು.ಅಂತಿಮವಾಗಿ ಜೂನ್ ೨೯,೧೯೭೯ರಂದು ರೆ|ಫಾ|ಡ್ಯುರೈಸ್ವಾಮಿ ಸೈಮನ್ ಲೊರ್ಡ್ಸ್ವಾಮಿ ಬಿಷಪ್ ರವರು ದೇವಾಲಯವನ್ನು ಉದ್ಗಾಟಿಸಿದರು.[೨]
ಈಗಿನ ದೇವಾಲಯದ ಕಟ್ಟಡವನ್ನು ಜೂನ್ ೯,೨೦೦೫ ರಂದು ಆರ್ಚ್ ಬಿಷಪ್ ರೆ|ಫಾ|ಡಾ. ಬರ್ನಾಡ್ ಮೊರಾಸ್ ರವರು ಉದ್ಗಾಟಿಸಿದರು ಮತ್ತು ಭಾರತದ ಅಪೊಸ್ತೊಲಿಕ್ ನುನ್ಸಿಯೋದ ಬಿಷಪ್ ರೆ|ಫಾ|ಡಾ.ಪೆಡ್ರೊ ಲೋಪೆಜ್ ಕ್ವಿಂಟಾನಾ ಅವರಿಂದ ಅರ್ಪಿಸಲ್ಪಟ್ಟಿತು. ಇದು ಪ್ಯಾನ್ ಆಕಾರದ ಹಾಲ್ ಅನ್ನು ಹೊಂದಿದೆ. ಇದು ೨೫೦೦ ಜನರನ್ನು ಕುಳಿತುಕೊಳ್ಳುವ ಜಾಗವಿದೆ ಮತ್ತು ಅಸೋಸಿಯೆಟ್ಸ್,ಬೆಂಗಳೂರಿನವರು ವಿನ್ಯಾಸಗೊಳಿಸಿದರು.ದೇವಾಲಯದ ಮಧ್ಯೆ ಬೆತ್ಲೆಹೆಮ್ನ ಇಗರ್ಜಿಯ ದ್ರಶ್ಯವನ್ನು ಪುನರಾವರ್ತಿಸುತ್ತದೆ.
![](http://upload.wikimedia.org/wikipedia/commons/thumb/c/c4/InfantJesus_Shrine_Blr1.jpg/220px-InfantJesus_Shrine_Blr1.jpg)
ದೇವಾಲಯದ ಪವಾಡದ ನಂತರ ಜನರ ಸಂಖ್ಯೆಯು ತುಂಬಾ ಬೆಳೆಯಿತು.ಬಾಲ ಯೇಸುವಿನ ಪ್ರಾರ್ಥನೆಯು ನಮ್ಮ ಕಷ್ಟಗಳ ಸಮಯದಲ್ಲಿ ಬೇಡಿದ ಪ್ರಬಲ ಪ್ರಾರ್ಥನೆ. ಈ ದೇವಾಲಯದಲ್ಲಿ ತಮಿಳು ಚಿತ್ರ ಕುಳತೈಯಸು೧೯೮೪ ರಂದು ತೆಗೆದಿದ್ದಾರೆ. ಈ ಚಿತ್ರದಲ್ಲಿ ಸರಿತ,ರಾಜೇಶ್,ವಿಜಯಕಾಂತ್ ಮತ್ತು ಹಾಸ್ಯನಟ ಸೆಂಥಿಲ್ ನಟಿಸಿದ್ದಾರೆ. ಈ ದೇವಾಲಯದಲ್ಲಿ ವರ್ಷಗಳಲ್ಲಿ ಗುರುವಾರ ಜನಸಮೂಹವು ಪ್ರೇಕ್ಷಕರಲ್ಲಿ ಬೆಳೆದಿದೆ ಮತ್ತು ಇಂದು ವಿವಿಧ ಧರ್ಮಗಳ ಹತ್ತು ಸಾವಿರಕಿಂತಲೂ ಹೆಚ್ಚು ಜನರು ಆಗಾಗ್ಗೆ ಬರುತ್ತಾರೆ. ಗುರುವಾರದಂದು ಇಗರ್ಜಿಯಲ್ಲಿ ವಿವಿಧ ಬಾಷೆಯಲ್ಲಿ ಒಂಬತ್ತು ಬಲಿಪೂಜೆಗಳು ನಡೆಯುತ್ತವೆ.[೩]
ವಾರ್ಷಿಕ ಹಬ್ಬ[ಬದಲಾಯಿಸಿ]
![](http://upload.wikimedia.org/wikipedia/commons/thumb/3/30/Kids_playing_outside_of_%22Infant_Jesus%22_shrine_%283943675002%29.jpg/220px-Kids_playing_outside_of_%22Infant_Jesus%22_shrine_%283943675002%29.jpg)
ಪ್ರತಿ ವರ್ಷ ೧೯೭೧ ರಿಂದು ಇಗರ್ಜಿಯಲ್ಲಿ ವಾರ್ಷಿಕ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ.ಸಾವಿರಾರು ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ನೂರಾರು ಮಂದಿ ಈ ಹಬ್ಬವನ್ನು ಆಚರಿಸುತ್ತಾರೆ.
ಬಲಿಪೂಜೆಯ ವೇಳಾಪಟ್ಟಿ[ಬದಲಾಯಿಸಿ]
- ಭಾನುವಾರ
- 5:45 a.m -ತಮಿಳು
- 7:00 a.m-ಇಂಗ್ಲೀಷ್
- 8:30 a.m-ತಮಿಳು
- 10:00 a.m-ಕನ್ನಡ
- 11:15 a.m-ತಮಿಳು
- 5:00 p.m-ಇಂಗ್ಲೀಷ್
- 6:00 p.m-ತಮಿಳು
ವಾರಾದ ಬಲಿಪೂಜೆಯ ವೇಳಾಪಟ್ಟಿ[ಬದಲಾಯಿಸಿ]
- ಸೋಮವಾರ,ಮಂಗಳವಾರ,ಶುಕ್ರವಾರ ಮತ್ತು ಶನಿವಾರ
- 5:45 a.m-ಕನ್ನಡ
- 6:30 a.m-ತಮಿಳು
- 11:15 a.m-ತಮಿಳು
- 6:00 p.m-ಇಂಗ್ಲೀಷ್
- ಬುಧವಾರ
- 5:45 a.m-ಕನ್ನಡ
- 6:30 a.m-ಇಂಗ್ಲೀಷ್
- 11:15 a.m-ತಮಿಳು
- 6:00 p.m-ತಮಿಳು
- ಗುರುವಾರ ನೊವೆನಾಂ ಬಲಿಪೂಜೆಯ ವೇಳಾಪಟ್ಟಿ
- 5:45 a.m-ತಮಿಳು
- 6:30 a.m-ಇಂಗ್ಲೀಷ್
- 9:00 a.m-ತೆಲುಗು
- 10:00 a.m-ಕನ್ನಡ
- 11:15 a.m-ತಮಿಳು
- 4:00 p.m-ಕೊಂಕಣಿ
- 5:00 p.m-ಇಂಗ್ಲೀಷ್
- 6:00 p.m-ತಮಿಳು
- 7:30 p.m-ಮಲಯಾಳಂ
ವಾರ್ಷಿಕ ಹಬ್ಬದ ಬಲಿಪೂಜೆಗಳು[ಬದಲಾಯಿಸಿ]
![](http://upload.wikimedia.org/wikipedia/commons/thumb/b/b1/Church_of_the_Infant_Jesus.jpg/220px-Church_of_the_Infant_Jesus.jpg)
ಬಾಲ ಯೇಸುವಿನ ಪ್ರತಿ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ಹಬ್ಬದ ೧೦ ದಿನ ಮುಂಚೆ,ಅಂದರೆ ಜನವರಿ ೪ ರಂದು ಧ್ವಜರೋಹಣ ಆರಿಸಿ ೧೦ ದಿನ ನೊವೆನಾ ಬಲಿಪೂಜೆಯನ್ನು ಮಾಡುತ್ತಾರೆ.ಜನವರಿ ೧೪ ರಂದು ವಾರ್ಷಿಕ ಹಬ್ಬವನ್ನು ವಿಭ್ರಂಜನೆಯಿಂದ ಆಚರಿಸುತ್ತಾರೆ.ಆ ದಿನ ವಿವಿಧ ಭಾಷೆಯಲ್ಲಿ ೧೨ ಬಲಿ ಪೂಜೆಗಳು ನಡೆಯುತ್ತವೆ.
೨೦೧೮ ರ ಈಗಿನ ಆರ್ಚ್ಬಿಷಪ್ ರವರ ಹೆಸರು ರೆ|ಫಾ|ಪೀಟರ್ ಮಚಾದೊ ಬೆಂಗಳೂರಿನ ಆರ್ಚ್ಬಿಷಪ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಫಾ|ಮೈಕಲ್ ಅಂತೊನಿ ದೇವಾಲಯದ ಜವಾಬ್ದಾರಿಯನ್ನು ನಡೆಸುತ್ತಿದ್ದಾರೆ.
ಉಲ್ಲೇಖಗಳು[ಬದಲಾಯಿಸಿ]
- ↑ <https://www.justdial.com[ಶಾಶ್ವತವಾಗಿ ಮಡಿದ ಕೊಂಡಿ] › ... › Infant Jesus Church And Shrine>
- ↑ <https://www.tripadvisor.in/Attraction_Review-g297628-d2734131-Reviews-Infant_Jes..>
- ↑ <http://www.trip2blr.com › Bangalore Tourist Places › Religious and Spiritual Places>