ವಿಷಯಕ್ಕೆ ಹೋಗು

ಬಾವಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾವಲಿಗಳು ಮುಂಗಾಲುಗಳು ಜಾಲ ರೆಕ್ಕೆಗಳನ್ನು ರಚಿಸುವ, ಮತ್ತು ಇದರಿಂದ ಇವು ಸಹಜವಾಗಿ ನಿಜವಾದ ಮತ್ತು ಅವಿಶ್ರಾಂತವಾದ ಹಾರಾಟವನ್ನು ನಡೆಸಬಲ್ಲ ಏಕೈಕ ಸಸ್ತನಿಯಾಗಿರುವ ಕೈರಾಪ್ಟರಾ ಗಣದ ಸಸ್ತನಿಗಳು. ತದ್ವಿರುದ್ಧವಾಗಿ, ಹಾರುವಳಿಲುಗಳು, ತೇಲುವ ಪಾಸಮ್‍ಗಳು, ಮತ್ತು ಕಲೂಗೊಗಳಂತಹ, ಹಾರುತ್ತವೆ ಎಂದು ಹೇಳಲಾಗುವ ಇತರ ಸಸ್ತನಿಗಳು, ಕೇವಲ ಅಲ್ಪ ದೂರದವರೆಗೆ ತೇಲಬಲ್ಲವು. ಬಾವಲಿಗಳು ಪಕ್ಷಿಗಳಂತೆ ತಮ್ಮ ಇಡಿ ಮುಂಗಾಲುಗಳನ್ನು ಬಡಿಯುವುದಿಲ್ಲ, ಬದಲಾಗಿ ತಮ್ಮ ಹೊರ ಹರಡಿಕೊಂಡ, ಅತಿ ಉದ್ದನೆಯ ಮತ್ತು ತೆಳು ಪೊರೆಯಿಂದ ಅಥವಾ ಪಟೇಜಿಯಮ್‍ನಿಂದ ಆವೃತವಾಗಿರುವ ಬೆರಳುಗಳನ್ನು ಬಡಿಯುತ್ತವೆ. []

ವಿಧಗಳು

[ಬದಲಾಯಿಸಿ]
ಸುವರ್ಣ ಶಿರ ಫಲಭಕ್ಷಿ ಕಪಟ (Golden crowned fruit bat)
  • ವಿಶ್ವದಲ್ಲಿ 1017 ಪ್ರಭೇದದ ಬಾವಲಿಗಳಿವೆ. ಭಾರತದಲ್ಲಿ 126, ರಾಜ್ಯದಲ್ಲಿ ಅಂದಾಜು 36 ಪ್ರಭೇದಗಳಿರಬಹುದು ಎಂದು ಊಹಿಸಲಾಗಿದೆ. ಖಚಿತವಾಗಿ ಎಷ್ಟು ಪ್ರಭೇದಗಳಿವೆ ಎಂಬ ಕುರಿತು ಸೂಕ್ತ ಅಧ್ಯಯನ ನಡೆದಿಲ್ಲ. ಬಾವಲಿಗಳನ್ನು ದೊಡ್ಡ (ಮೆಗಾ ಬ್ಯಾಟ್ಸ್) ಹಾಗೂ ಚಿಕ್ಕ ಬಾವಲಿ (ಮೈಕ್ರೊ ಬ್ಯಾಟ್ಸ್) ಎಂದು ವಿಂಗಡಿಸಬಹುದು.
  • ಅವು ಕ್ರಿಮಿ ಕೀಟಗಳನ್ನು ಸೇವಿಸುವುರಿಂದ ಕೀಟನಾಶಕಗಳನ್ನು ಅಗತ್ಯವನ್ನು ಕಡಿಮೆಮಾಡುವುದು; ಆದ್ದರಿಂದ ಬಾವಲಿಗಳು, ಆರ್ಥಿಕವಾಗಿ ಮುಖ್ಯ. ಅತಿ ಚಿಕ್ಕ ಬಾವಲಿ 'ಕಿಟ್ಟಿನ ಹಾಗ್ ಮೂಗಿನ' ಬಾವಲಿ ಅಳತೆ ಉದ್ದ, 29-34 ಮಿಮೀ (1.14-1.34 ಅಂ.),ರಿಂದ 15 ಸೆಂ (5.91 ಅಂ.) ರೆಕ್ಕೆಗಳು ಸೇರಿ ಒಟ್ಟು; ತೂಕ 2-2.6 ಗ್ರಾಂ (0.07-0.09 ಔನ್ಸ್) ಇದು 'ಎಟ್ರುಸ್ಕಾನ್ ಚಂಡಿ' ಜಾತಿ(Etruscan shrew) ಬಿಟ್ಟರೆ ಸಸ್ತನಿಗಳಲ್ಲಿ ಅತಿ ಚಿಕ್ಕ ಉಪಲಬ್ಧ ಜಾತಿ ಎಂದು ನಿರ್ಣಯವಾಗಿದೆ. ಬ್ಯಾಟ್ನ ದೊಡ್ಡ ಜಾತಿಯು ಟೆರೊಪಸ್ (Pteropus) ಕೆಲವು ಜಾತಿಗಳು (ಹಣ್ಣು ಬಾವಲಿಗಳು ಅಥವಾ ಹಾರುವ ನರಿಗಳು) ಮತ್ತು ದೈತ್ಯ 'ಚಿನ್ನದಶಿರ' 'ಹಾರುವ ನರಿ' ಇವು 1.6 ಕೆಜಿ (4 ಪೌಂಡ್) ವರೆಗೆ ತೂಕವುಳ್ಳವು, ಹಾಗೂ (5 ಅಡಿ 7 ಅಂಗುಲ) 1.7 ಮೀ ಅಗಲದ ರೆಕ್ಕೆಯನ್ನು ಹೊಂದಿವೆ.[] []
  • ತಲೆಕೆಳಗಾಗಿ ಜೋತುಬಿದ್ದಿರುತ್ತವೆ. ನೆಲಕ್ಕೆ ಬಿದ್ದರೆ ಸರಿಯಾಗಿ ನಡೆಯಲೂ ಬರುವುದಿಲ್ಲ.
  • ದೊಡ್ಡ ಬಾವಲಿಗಳು ಹಣ್ಣು ಹಾಗೂ ಹೂವಲ್ಲಿನ ಮಕರಂದ ಹೀರಿ ಜೀವಿಸುತ್ತವೆ. ಗಾತ್ರದಲ್ಲಿ ಚಿಕ್ಕದಾಗಿರುವ ಬಾವಲಿಗಳು ಕ್ರಿಮಿಕೀಟ ಹಾಗೂ ಹುಳುಗಳನ್ನು ತಿಂದು ಜೀವಿಸುತ್ತವೆ. ದೊಡ್ಡ ಬಾವಲಿಗಳು 40 ರಿಂದ 150 ಗ್ರಾಂ ತೂಕವಿದ್ದು, ಒಂದೇ ಹಾರುತ್ತಿರುವಾಗ ಹದ್ದಿನಂತೆ ಕಾಣುತ್ತದೆ. ಚಿಕ್ಕ ಬಾವಲಿಗಳು 10 ರಿಂದ 25 ಗ್ರಾಂ ಇರುತ್ತದೆ.ಇದನ್ನು ಕಪಟ, ತೊಲೆಹಕ್ಕಿ ಎಂದೂ ಕರೆಯಲಾಗುತ್ತದೆ.
  • ಕಪಟ, ಗಂಟೆಗೆ ಒಂದು ಸಾವಿರದಿಂದ ಎರಡು ಸಾವಿರ ಸೊಳ್ಳೆಗಳನ್ನು ತಿನ್ನುತ್ತದೆ. ತೊಲೆಹಕ್ಕಿ, ಕಂಬಳಿ ಹುಳು ಸೇರಿದಂತೆ ಇತರೆ ಕೀಟಗಳನ್ನು ತಿನ್ನುತ್ತದೆ. ಸಾಮಾನ್ಯವಾಗಿ ಚಿಕ್ಕ ಬಾವಲಿಗಳು ಅಂದಾಜು 8 ರಿಂದ 10 ವರ್ಷ ಬದುಕಿದರೆ, ದೊಡ್ಡ ಬಾವಲಿಗಳು 30–40 ವರ್ಷ ಬದುಕಿರುವ ನಿದರ್ಶನಗಳಿವೆ. ಬಂಡೆ, ಪಾಳು ಬಿದ್ದ ಕೋಟೆ, ಮನೆಗಳಲ್ಲಿ ಕೀಟಗಳನ್ನು ತಿನ್ನುವ ಬಾವಲಿಗಳು ಜೀವಿಸುತ್ತವೆ.
  • ಉಳಿದಂತೆ ಮರಗಳು ಹೆಚ್ಚಾಗಿದ್ದು, ಹಣ್ಣಿನ ಮರಗಳಿರುವ ಕಡೆ ದೊಡ್ಡ ಬಾವಲಿಗಳು ಇರುತ್ತವೆ. ಅದರಲ್ಲೂ ಬದಲಾವಣೆಗಳಿಗೆ ತಕ್ಕಂತೆ ಮನುಷ್ಯನೊಂದಿಗೆ ಹೊಂದಿಕೊಂಡಿರುವ ಬಾವಲಿಗಳೆಂದರೆ, ಕಪಟ ಹಾಗೂ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಹಾಗೂ ಗಿಡ್ಡ ಮೂಗಿನ ಬಾವಲಿ. ಗಿಡ್ಡ ಮೂಗಿನ ಬಾವಲಿ ಹಾಗೂ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಎರಡೂ, ಹಣ್ಣುಗಳನ್ನು ತಿಂದು ಜೀವಿಸುತ್ತವೆ. ಹೀಗಾಗಿಯೇ ಮರಗಳು ಇರುವ ಕಡೆಗಳಲ್ಲಿ ಸಂಜೆಯಾಗುತ್ತಿದ್ದಂತೆಯೇ ಇವುಗಳ ಹಾರಾಟ ಕಾಣಬಹುದು.ಅತ್ತಿ ಹಣ್ಣು, ಆಲದ ಮರದ ಹಣ್ಣು, ಸೀಬೇಕಾಯಿ, ಗಸಗಸೆ ಹಣ್ಣು ಹಾಗೂ ಕಾಡು ಹಣ್ಣುಗಳು ಇವುಗಳ ಆಹಾರ.
ಫಲ ಭಕ್ಷಕ ಬಾವಲಿ ಇಸ್ರೇಲಿದು(Bat-003)
  • ಬಾವಲಿಗಳ ವಾಸಸ್ಥಾನ: ಬಾವಲಿಗಳು ಸದಾ ಗುಂಪಿನಲ್ಲಿ ವಾಸಿಸುತ್ತವೆ. ಪಾಳುಬಿದ್ದ ಮನೆ, ಗುಹೆ, ಹಳೇ ಕೋಟೆ, ಕಲ್ಲುಬಂಡೆಗಳು, ಬಂಡೆಗಳ ನಡುವಿನ ಕೊರಕಲು ಪ್ರದೇಶ, ಗೋಡೆಗಳ ನಡುವಿನ ಕಿರಿದಾದ ಸ್ಥಳಗಳು, ಪೊಟರೆ, ಒಣಗಿದ ಮರಗಳೇ ಇವುಗಳ ವಾಸಸ್ಥಾನ.
  • ‘ಬಾವಲಿಗಳು ವರ್ಷಕ್ಕೆ ಒಂದು ಬಾರಿ ಮಾತ್ರ ಮರಿ ಹಾಕುತ್ತವೆ. ಅದರಲ್ಲೂ ಒಂದೇ ಮರಿಗೆ ಜನ್ಮ ನೀಡಿ, ಅದು ಭಾರವೆನಿಸುವವರೆಗೂ ಅದನ್ನು ಅಪ್ಪಿಕೊಂಡೇ ಜೀವನ ಸಾಗಿಸುತ್ತವೆ. ಆಹಾರ ಹುಡುಕಲು ಹೊರಟಾಗಲೂ ಅದನ್ನು ಎತ್ತಿಕೊಂಡೇ ಹೋಗುತ್ತದೆ.
  • ಒಮ್ಮೆ ಮರಿ ಭಾರವೆನಿಸಿದಾಗ ತಮ್ಮ ಗುಂಪಿನಲ್ಲೇ ಇರುವ ಮರಿಗಳನ್ನು ಒಂದೆಡೆ ಸೇರಿಸಿ ನೋಡಿಕೊಳ್ಳುತ್ತವೆ. ಇಲ್ಲಿಯೂ ಗಂಡು ಬಾವಲಿ ಬೆದೆಗೆ ಬಂದಾಗ ಹೆಣ್ಣನ್ನು ಆಕರ್ಷಿಸಲು ನಾನಾ ರೀತಿಯ ಕಸರತ್ತನ್ನು ಮಾಡುತ್ತದೆ. ಕೆಲವೊಂದು ಪ್ರಭೇದಗಳಲ್ಲಿ ಬೆದೆಗೆ ಬಂದಾಗ ಗಂಡು ಮತ್ತು ಹೆಣ್ಣು ಬಾವಲಿಗಳೆರಡರ ದೇಹದ ಬಣ್ಣ ಬದಲಾಗುತ್ತದೆ.
  • ಅವುಗಳಲ್ಲೂ ಗಡಿ ಸಮಸ್ಯೆ ಇರುತ್ತದೆ. ಅದಕ್ಕಾಗಿ ಕಾಳಗವೂ ನಡೆಯುತ್ತದೆ’ ಎಂದು ವಿವರಿಸುತ್ತಾರೆ ರಾಜೇಶ್ ಪುಟ್ಟಸ್ವಾಮಯ್ಯ. ನಮ್ಮ ದೇಶದಲ್ಲಿರುವ ಚಿಕ್ಕ ಬಾವಲಿಗಳು 20 ಕಿಲೊ ಹರ್ಟ್ಸ್‌ನಿಂದ 150 ಕಿಲೊ ಹರ್ಟ್ಸ್‌ವರೆಗೆ ಶಬ್ದವನ್ನು ಗ್ರಹಿಸಿಕೊಳ್ಳುತ್ತವೆ. ಶಬ್ದತರಂಗಗಳ ಮೂಲಕವೇ ಚಿಕ್ಕ ಬಾವಲಿಗಳು ಕೀಟಗಳನ್ನು ಹಿಡಿದು ತಿನ್ನುತ್ತವೆ. ದೊಡ್ಡ ಬಾವಲಿಗಳು ಹಣ್ಣಿನ ಮರಗಳು ಇರುವುದನ್ನು ಗುರುತಿಸಿ ಅದನ್ನು ನೆನಪಿನಲ್ಲಿಟ್ಟುಕೊಂಡಿರುತ್ತವೆ. ಸಂಜೆಯಾಗುತ್ತಿದ್ದಂತೆ ಹಣ್ಣಿಗಾಗಿ ಹೊರಟು, ಮಧ್ಯದಲ್ಲಿ ಅದನ್ನು ತಿನ್ನಲು ಒಂದು ಸ್ಥಳ ಮಾಡಿಕೊಂಡಿರುತ್ತವೆ. ಹಣ್ಣನ್ನು ತಿಂದು ಸ್ವಲ್ಪ ವಿಶ್ರಾಂತಿ ಪಡೆದು ನಂತರ ಮತ್ತೆ ಹಣ್ಣು ತಿಂದು ಗೂಡಿನತ್ತ ಹೊರಡುತ್ತವೆ.
  • ನಿತ್ಯ ಸಂಜೆ 6ರಿಂದ 8 ಗಂಟೆ ಒಳಗೆ ಆಹಾರಕ್ಕೆ ಗೂಡಿನಿಂದ ಹೊರಡುವ ಬಾವಲಿಗಳು ರಾತ್ರಿ 12ರವರೆಗೆ ಹಣ್ಣು ತಿನ್ನುತ್ತವೆ. ನಂತರ ವಿಶ್ರಾಂತಿ ಮಾಡಿ ಮತ್ತೆ 3 ಗಂಟೆಗೆ ಹುಡುಕಾಟ ಆರಂಭಿಸಿ ಬೆಳಿಗ್ಗೆ ಸುಮಾರು ಆರು ಗಂಟೆಗೆ ಗೂಡು ಸೇರುತ್ತವೆ. ಬಾವಲಿಗಳನ್ನು ನೋಡಲು ಬಯಸುವವರು ಮರಗಳು ಹೆಚ್ಚಿದ್ದ ಕಡೆ ಸಂಜೆಯಾಗುತ್ತಿದ್ದಂತೆ ಐದು ನಿಮಿಷ ಆಕಾಶ ನೋಡಿದರೆ ಸಾಕು, ಅವುಗಳ ಹಾರಾಟ ಕಾಣುತ್ತದೆ.

ವಿಶಿಷ್ಟ ಶ್ರವಣಾತೀತ ಶಬ್ದ ಗ್ರಹಣ ಸಾಮರ್ಥ್ಯ

[ಬದಲಾಯಿಸಿ]
ದೊಡ್ಡಕಿವಿ ಕಂದು ಬಣ್ಣದ ಕಪಟ-ಕೈಚಿತ್ರ (Plecotus auritus 01)
  • ಕಪಟದ ಪ್ರತಿಫಲನ ಶಬ್ದಗ್ರಹಣ ಶಕ್ತಿ ಅಥವಾ ವ್ಯವಸ್ಥೆ (ಬ್ಯಾಟ್ ಎಖೋಲೇಷನ್) ಅಲ್ಟ್ರಾಸಾನಿಕ್ ಶಬ್ದಗಳ ಪ್ರತಿಧ್ವನಿಯನ್ನು ಉತ್ಪಾದಿಸಲು ವಿಶೇಷವಾಗಿ ಹೊರಹಾಕಲ್ಪಟ್ಟ ಶಬ್ದ -ಅದರ ಗ್ರಾಹ್ಯ ವ್ಯವಸ್ಥೆ ವಿಶಿಷ್ಟವಾದುದು. ತನು ಕಳಿಸಿದ ಶ್ರವಣಾತೀತ ಶಬ್ದದ ಹಿಂದಿರುಗಿದ ಪ್ರತಿಧ್ವನಿಗಳು ಮತ್ತು ಹೊರಹೋಗುವ ನಾದ ಹೋಲಿಸಿ, ಅದರ ಮೆದುಳು ಮತ್ತು ಶ್ರವಣೇಂದ್ರಿಯದ ನರಮಂಡಲ ಬಾವಲಿಯ ಸುತ್ತಮುತ್ತಲ ಪ್ರದೇಶಗಳ ವಿಸ್ತೃತ ಚಿತ್ರಗಳನ್ನು ಉತ್ಪತ್ತಿ ಮಾಡುವುದು. ಈ ಪತ್ತೆ ಬಾವಲಿಗಳಿಗೆ ಸ್ಥಾನಿಕವಾಗುತ್ತವೆ, ಮತ್ತು ಸಂಪೂರ್ಣ ಕತ್ತಲೆಯಲ್ಲಿ ತಮ್ಮ ಬೇಟೆಯನ್ನು ವರ್ಗೀಕರಿಸಲು ಅನುಮತಿಸುತ್ತದೆ (ಶಕ್ತಿನೀಡುತ್ತದೆ). 130 ಡೆಸಿಬಲ್ ತೀವ್ರತೆಯಲ್ಲಿ ಬಾವಲಿಯ ಕರೆಗಳು, ಕೆಲವು ಪ್ರಾಣಿಗಳ ಅತ್ಯಂತ ತೀವ್ರವಾದ, ವಾಯುಗಾಮಿ ಧ್ವನಿಗಳು.
  • ಬಾವಲಿಗಳು ಹಿಂದಿರುಗಿದ ಶಬ್ದ ತರಂಗವನ್ನು ಅವು ಸ್ಪಷ್ಟವಾಗಿ ತಮ್ಮ ಮತ್ತು ಇತರ ಶಬ್ದ ತರಂಗದೊಡನೆ ವ್ಯತ್ಯಾಸವನ್ನು ಗುರುತಿಸಲು ಶಕ್ತವಾಗಿರಬೇಕು.. ಮಾಹಿತಿ ಬಾವಲಿಗಳು ಅವರು ಸ್ವೀಕರಿಸುವ ಪ್ರತಿಧ್ವನಿಗಳು ತಮ್ಮ ಕರೆಗಳನ್ನು ಪ್ರತ್ಯೇಕಿಸಲು ಶಕ್ತವಾಗಿರಬೇಕು. ಈ ಚಿಕ್ಕ ಬಾವಲಿಗಳು ಎರಡು ರೀತಿಯ ವಿಧಾನಗಳನ್ನು ಬಳಸುತ್ತವೆ.[]
  • ಕಡಿಮೆ ಕ್ರಿಯಾ ಆವರ್ತನೆಯ ಪ್ರತಿಧ್ವನಿ (ಎಖೋಲೇಷನ್) : ಬಾವಲಿಗಳು ತಮ್ಮ ಕರೆಗಳನ್ನು ಮತ್ತು ಹಿಂದಿರುಗಿದ ಪ್ರತಿಧ್ವನಿಗಳನ್ನು ಸಮಯಾಧಾರಿತವಾಗಿ ಬೇರೆಯಾಗಿ ಗುರುತಿಸುವುವು. ಪ್ರತಿಧ್ವನಿಗಳು ಮರಳುವ ಮೊದಲು ತಮ್ಮ ಸಣ್ಣ ಕರೆಗಳನ್ನು ಮುಗಿಸುವುವು. ಏಕೆಂದರೆ, ಈ ಬಾವಲಿಗಳು ತಮ್ಮ ಕರೆ ಹೊರಸೂಸುವ ಸಮಯದಲ್ಲಿ ತಮ್ಮ ಮಧ್ಯಮ ಕಿವಿ ಸ್ನಾಯುಗಳನ್ನು ಸಂಕುಚಿಸುವುವು. ಅವು ತಮ್ಮನ್ನು ಕಿವುಡುತನದಿಂದ ತಪ್ಪಿಸಲು ಇದು ತುಂಬಾ ಮುಖ್ಯ. ಕರೆ ಮತ್ತು ಪ್ರತಿಧ್ವನಿ ನಡುವೆ ಕಾಲಾವಧಿಯಲ್ಲಿ ಅವುಗಳ ಈ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ, ಆದ್ದರಿಂದ ಅವು ಸ್ಪಷ್ಟವಾಗಿ ಹಿಂದಿರುಗಿದ ಪ್ರತಿಧ್ವನಿ ಕೇಳಬಹುದು ಅನುಮತಿಸುತ್ತದೆ. ಹಿಂದಿರುಗಿದ ಪ್ರತಿಧ್ವನಿಗಳ ವಿಳಂಬ ತಮ್ಮ ಬೇಟೆಯ ವ್ಯಾಪ್ತಿಯ ದೂರ ಮತ್ತು ಸ್ಥಾನವನ್ನು ಅಂದಾಜುಮಾಡುವ ಸಾಮರ್ಥ್ಯವನ್ನು ಬಾವಲಿಗೆ ಒದಗಿಸುತ್ತದೆ.

ಅವು ತಮ್ಮ ಹಾರಾಟದ ವೇಗಕ್ಕೆ ಅನುಗುಣವಾಗಿ (ಸಂಬಂಧಿಸಿದಂತೆ) ಅವರ ದ್ವನಿತರಂಗಗಳನ್ನು ಬದಲಾಯಿಸಿ ಹೊರಸೂಸುತ್ತವೆ; ಆದ್ದರಿಂದ ಚಲನೆಯಲ್ಲಿದ್ದರೂ ಪ್ರತಿಧ್ವನಿಗಳು ಆವರ್ತನ ಸೂಕ್ತ ಶ್ರವಣಕ್ಕೆ ಅನುಕೂಲ ವ್ಯಾಪ್ತಿಯಲ್ಲಿ ಮರಳುತ್ತವೆ.(They have adapted to change their pulse emission frequency in relation to their flight speed so echoes still return in the optimal hearing range.) [][]

ಉಪಯೋಗ-ರೈತ ಸ್ನೇಹಿ

[ಬದಲಾಯಿಸಿ]
  • ಹಣ್ಣು ತಿನ್ನುವ ಬಾವಲಿಗಳು ತಿಂದ ಹಣ್ಣಿನ ಬೀಜಗಳನ್ನು ತಮ್ಮ ಹಿಕ್ಕೆಗಳ ಮೂಲಕ ಬೇರೆಡೆ ಹೊರ ಹಾಕುತ್ತವೆ. ಇದರಿಂದ ಅಲ್ಲಿ ಆ ಹಣ್ಣಿನ ಗಿಡಗಳು ಬೆಳೆಯುತ್ತವೆ. ಗಿಡ–ಮರಗಳ ಹುಟ್ಟಿಗೆ ಕಾರಣವಾಗುತ್ತವೆ. ಮರಗಳು ಮಾಯವಾಗುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಬಾವಲಿಗಳು ಗಿಡ–ಮರಗಳನ್ನು ಬೆಳೆಸುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
  • ಕೀಟಗಳನ್ನು ತಿನ್ನುವ ಸಣ್ಣ ಗಾತ್ರದ ಬಾವಲಿಗಳು ಒಂದು ಗಂಟೆಗೆ ಸುಮಾರು ಸಾವಿರ ಸೊಳ್ಳೆ ಹಾಗೂ ಇತರೆ ಕೀಟಗಳನ್ನು ತಿನ್ನುತ್ತವೆ. ಇದರಿಂದ ಸೊಳ್ಳೆ, ನೊಣ ಹಾಗೂ ಇತರೆ ಕೀಟಗಳಿಂದ ಬರುವ ರೋಗಗಳೂ ನಿಯಂತ್ರಣದಲ್ಲಿರುತ್ತವೆ. ರೈತನ ಬೆಳೆಗೆ ಕಾಡುವ ಕೊರಕು ಹುಳು, ರಾತ್ರಿ ವೇಳೆ ಸಂಚರಿಸುವ ಚಿಟ್ಟೆ ಅಥವಾ ಇನ್ನೂ ಲಾರ್ವಾ ಹಂತದಲ್ಲಿರುವ ಚಿಟ್ಟೆಗಳನ್ನು ಕೊಂದು ರೈತನ ಬೆಳೆಗೆ ಆಗುವ ಹಾನಿಯನ್ನು ತಪ್ಪಿಸುತ್ತವೆ.
  • ಸಾಲದ್ದಕ್ಕೆ ಮಕರಂದ ಹೀರುವ ಬಾವಲಿಗಳು ಮರ ಹಾಗೂ ಗಿಡಗಳಲ್ಲಿ ಪರಾಗಸ್ಪರ್ಶ ಕ್ರಿಯೆ ನಡೆಸುತ್ತವೆ. ಇದರಿಂದ ಇಳುವರಿ ಹೆಚ್ಚುತ್ತದೆ. ಬಾವಲಿಗಳು ಇಡುವ ಹಿಕ್ಕೆಯನ್ನು ಬೆಳೆಗಳಿಗೆ ಗೊಬ್ಬರವಾಗಿ ಬಳಸಬಹುದು. ಸುಮಾರು ಹದಿನೈದರಿಂದ ಇಪ್ಪತ್ತು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಬೆಳೆಗಳಿಗೆ ಈ ಗೊಬ್ಬರವನ್ನು ಬಳಕೆ ಮಾಡುತ್ತಿದ್ದರು.
ಹೆಕಲ್ ಪ್ಲೆಕೊಟಸ್‍ ಬರೆದ ಚಿತ್ರ
  • ಕೋಲಾರ ಹಾಗೂ ಬೆಳಗಾವಿಖಾನಾಪುರದ ಗುಹೆಗಳಲ್ಲಿ ಅತಿ ವಿರಳವಾದ ಪ್ರಭೇದದ ಬಾವಲಿಗಳಿವೆ. ಆದರೆ ಅವುಗಳ ಸಂಖ್ಯೆ 100–150 ಇರಬಹುದು ಅಷ್ಟೆ.ಕೋಲಾರದ ಗುಹೆಯೊಂದರಲ್ಲಿ ಪತ್ತೆಯಾಗಿರುವ ಬಾವಲಿ ಬೇರೆಲ್ಲೂ ಪತ್ತೆಯಾಗಿಲ್ಲ. ಹೀಗಾಗಿಯೇ ಇದಕ್ಕೆ ‘ಕೋಲಾರದ ಎಲೆ ಮೂಗಿನ ಬಾವಲಿ’ ಎಂದು ಹೆಸರಿಡಲಾಗಿದೆ. ಇದೂ ಅಳಿವಿನ ಅಂಚಿನಲ್ಲಿದೆ.
  • ಕ್ವಾರಿ ಕೆಲಸ ನಡೆಯುತ್ತಿದ್ದ ಪ್ರದೇಶದಲ್ಲಿರುವ ಗುಹೆಯಲ್ಲಿ ಇದು ಪತ್ತೆಯಾಗಿದ್ದು, ಕಳೆದ 6 ತಿಂಗಳಿನಿಂದ ಇಲ್ಲಿ ಕ್ವಾರಿ ಕೆಲಸ ನಿಲ್ಲಿಸಲಾಗಿದೆ. ಇದರೊಂದಿಗೆ ಮಧ್ಯಪ್ರದೇಶದ ಜಬಲ್‌ಪುರದ ಗುಹೆಗಳಲ್ಲಿರುವ ‘ಕಜುರಾಹೊ ಎಲೆಮೂಗಿನ’ ಬಾವಲಿಯೂ ಕೋಲಾರದ ಇದೇ ಗುಹೆಯಲ್ಲಿ ಪತ್ತೆಯಾಗಿರುವುದು ಮತ್ತೊಂದು ವಿಶೇಷ. ಉಳಿದಂತೆ ವಿಶ್ವದಲ್ಲಿ ಕೇವಲ ಮೂರು ಕಡೆ ಕಂಡು ಬರುವ ವಿರಳವಾದ ‘ರಾಟನ್ಸ್ ಫ್ರೀ ಟೇಲ್’ ಬಾವಲಿ. ಮೇಘಾಲಯ, ಕಾಂಬೋಡಿಯ ಹಾಗೂ ಖಾನಾಪುರದಲ್ಲಿ ಇದೆ. ಇದು ಖಾನಾಪುರದಗುಹೆಗಳಲ್ಲಿ ಈಗ ಕೇವಲ 150– 200ರ ಸಂಖ್ಯೆಯಲ್ಲಿದೆ.

ಅಳಿವಿನ ಅಂಚಿಗೆ

[ಬದಲಾಯಿಸಿ]
  • ದೇಶದಲ್ಲಿರುವ ಬಾವಲಿಗಳ ಪ್ರಭೇದಗಳ ಕುರಿತು ಸಾಕಷ್ಟು ಅಧ್ಯಯನ ನಡೆಯಬೇಕಿದೆ. ಯಾವಾಗಲೋ ನಡೆಯುವ ಅಧ್ಯಯನಗಳು ಜನರನ್ನು ತಲುಪುತ್ತಿಲ್ಲ. ಹೀಗಾಗಿಯೇ ಬಾವಲಿಗಳು ಅವನತಿಯತ್ತ ಸಾಗುತ್ತಿವೆ. ಅವುಗಳನ್ನು ಉಳಿಸುವ ಉದ್ದೇಶದಿಂದಲೇ ‘ಬ್ಯಾಟ್ ಕನ್ಸರ್ವೇಷನ್ ಇಂಡಿಯಾ ಟ್ರಸ್ಟ್’ ಅನ್ನು ಸ್ಥಾಪಿಸಲಾಗಿದೆ. ಇಲ್ಲಿ ಕಳೆದೆರಡು ವರ್ಷಗಳಿಂದ ಬಾವಲಿಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಇದರಿಂದಾಗಿ ಬಾವಲಿಗಳ ಕುರಿತು ಅರಿಯುವವರಿಗೆ ಸಾಕಷ್ಟು ಮಾಹಿತಿ ಲಭ್ಯವಾಗುತ್ತದೆ.[][]

ಹೊರ ಸಂಪರ್ಕ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. BASIC FACTS ABOUT BATS
  2. "Hog-nosed Bat (Craseonycteris thonglongyai)". Archived from the original on 2016-08-19. Retrieved 2016-09-27.
  3. Nowak, R. M., editor (1999). Walker's Mammals of the World. Vol. 1.
  4. Bat echolocation call
  5. Jones, G. & M. W. Holderied (2007)
  6. Trends in Ecology & Evolution. 24 (7): 351–354.
  7. "ಮರೆಯಾಗುವ ಅಂಚಿನಲಿ ಬಾವಲಿ". Archived from the original on 2016-09-27. Retrieved 2016-09-27.
  8. Spooky Science: Bat Trivia
"https://kn.wikipedia.org/w/index.php?title=ಬಾವಲಿ&oldid=1251526" ಇಂದ ಪಡೆಯಲ್ಪಟ್ಟಿದೆ