ವಿಷಯಕ್ಕೆ ಹೋಗು

ಬಾಹ್ಯ ಔಷಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಹ್ಯ ಔಷಧ ಶರೀರದ ಮೇಲಿನ ಅಥವಾ ಒಳಗಿನ ಒಂದು ನಿರ್ದಿಷ್ಟ ಸ್ಥಳಕ್ಕೆ ಲೇಪಿಸಲಾದ ಔಷಧ. ಇದಕ್ಕೆ ವಿರುದ್ಧವಾಗಿ ಸಂಪೂರ್ಣ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಔಷಧಗಳಿರುತ್ತವೆ. ಬಹುತೇಕ ವೇಳೆ ಇದರರ್ಥ ಚರ್ಮ ಅಥವಾ ಲೋಳೆ ಪೊರೆಯಂತಹ ಶರೀರದ ಮೇಲ್ಮೈಗಳ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಲೇಪಿಸುವುದು. ಬಾಹ್ಯ ಔಷಧಗಳ ದೊಡ್ಡ ವ್ಯಾಪ್ತಿಯ ವರ್ಗಗಳಿವೆ. ಇದರಲ್ಲಿ ಚರ್ಮಲೇಪಗಳು, ನೊರೆಗಳು, ಜೆಲ್‍ಗಳು, ದ್ರವ ಲೇಪಗಳು, ಮತ್ತು ಅನುಲೇಪನಗಳು ಸೇರಿವೆ.[]

ಅನೇಕ ಬಾಹ್ಯ ಔಷಧಗಳನ್ನು ನೇರವಾಗಿ ಚರ್ಮಕ್ಕೆ ಲೇಪಿಸಲಾಗುತ್ತದೆ. ಬಾಹ್ಯ ಔಷಧಗಳು ಉಬ್ಬಸ ಔಷಧಗಳಂತಹ ಉಸಿರಿನ ಮೂಲಕ ಎಳೆದುಕೊಳ್ಳುವಂಥವು, ಕಂಜಂಕ್ಟೈವಾಕ್ಕೆ ಲೇಪಿಸುವ ಕಣ್ಣಿನ ತೊಟ್ಟೌಷಧಿ, ಅಥವಾ ಕಿವಿಯಲ್ಲಿ ಹಾಕಲಾದ ಕಿವಿಯ ತೊಟ್ಟೌಷಧಿ, ಅಥವಾ ಹಲ್ಲಿನ ಮೇಲ್ಮೈಗೆ ಲೇಪಿಸುವ ಔಷಧಗಳಂತಹ ಚರ್ಮವಲ್ಲದೆ ಬೇರೆ ಅಂಗಾಂಶಗಳ ಮೇಲ್ಮೈಗೆ ಲೇಪಿಸುವಂಥವೂ ಆಗಿರಬಹುದು. ಒಂದು ಕೊಡುಗೆಯ ಹಾದಿಯಾಗಿ, ಬಾಹ್ಯ ಮಾರ್ಗವು ಬಾಯಿ ಮಾರ್ಗ, ಅಭಿಧಮನಿ ಮಾರ್ಗ, ಮತ್ತು ಬೇರೆಯವಕ್ಕಿಂತ ಭಿನ್ನವಾಗಿದೆ.

ಅನುಲೇಪನ

ಅನುಲೇಪನ (ಆಯಿಂಟ್‍ಮೆಂಟ್) ಒಂದು ಏಕರೂಪದ, ಜಿಗುಟಾದ, ಅರೆಘನ ಔಷಧಿ, ಬಹಳ ಸಾಮಾನ್ಯವಾಗಿ ಚರ್ಮ ಅಥವಾ ಲೋಳೆ ಪೊರೆಗಳ ಬಾಹ್ಯ ಲೇಪನಕ್ಕೆ ಉದ್ದೇಶಿತವಾದ ಹೆಚ್ಚಿನ ಸ್ನಿಗ್ಧತೆಯ, ಜಿಡ್ಡಾಗಿರುವ, ಗಟ್ಟಿ ಎಣ್ಣೆ (ಎಣ್ಣೆ ೮೦% - ನೀರು ೨೦%). ಅನುಲೇಪನಗಳು ಒಂದು ಜಲ ಸಂಖ್ಯೆಯನ್ನು ಹೊಂದಿರುತ್ತವೆ, ಇದು ಅದರಲ್ಲಿರಬಹುದಾದ ನೀರಿನ ಗರಿಷ್ಠ ಪ್ರಮಾಣವನ್ನು ಗೊತ್ತುಮಾಡುತ್ತದೆ. ಅವನ್ನು ಶಾಮಕಗಳಾಗಿ ಅಥವಾ ರಕ್ಷಣಾ, ಚಿಕಿತ್ಸಕ, ಅಥವಾ ರೋಗನಿರೋಧಕ ಉದ್ದೇಶಗಳಿಗಾಗಿ ಚರ್ಮಕ್ಕೆ ಸಕ್ರಿಯ ಘಟಕಾಂಶಗಳ ಲೇಪನಕ್ಕಾಗಿ ಬಳಸಲಾಗುತ್ತದೆ ಮತ್ತು ಎಲ್ಲಿ ಒಂದು ಮಟ್ಟದ ಅಕ್ಲೂಡಣೆ ಬಯಸಲಾಗುತ್ತದೆಯೊ ಅಲ್ಲಿ.

ಅನುಲೇಪನಗಳನ್ನು ಶರೀರದ ವಿವಿಧ ಮೇಲ್ಮೈಗಳ ಮೇಲೆ ಬಾಹ್ಯವಾಗಿ ಬಳಸಲಾಗುತ್ತದೆ. ಇದರಲ್ಲಿ ಚರ್ಮ ಮತ್ತು ಕಣ್ಣಿನ ಲೋಳೆ ಪೊರೆ, ಎದೆ, ಯೋನಿ, ಗುದದ್ವಾರ ಮತ್ತು ಮೂಗು ಸೇರಿವೆ. ಅನುಲೇಪನವು ಔಷಧವನ್ನು ಹೊಂದಿರಬಹುದು ಅಥವಾ ಹೊಂದಿಲ್ಲದಿರಬಹುದು.

ಅನುಲೇಪನಗಳು ಸಾಮಾನ್ಯವಾಗಿ ಬಹಳ ಆರ್ದ್ರಕವಾಗಿದ್ದು, ಒಣ ಚರ್ಮಕ್ಕೆ ಉತ್ತಮವಾಗಿವೆ.

ಉಲ್ಲೇಖಗಳು

[ಬದಲಾಯಿಸಿ]
  1. "Psoriasis-Treatment". Medical Reference. University of Maryland Medical System. 2009. Archived from the original on 2013-05-20. Retrieved 2017-05-19.