ವಿಷಯಕ್ಕೆ ಹೋಗು

ಬಿರುದುರಾಜು ರಾಮರಾಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿರುದುರಾಜು ರಾಮರಾಜು
Born (1925-04-16) ೧೬ ಏಪ್ರಿಲ್ ೧೯೨೫ (ವಯಸ್ಸು ೯೯)
Nationalityಭಾರತೀಯ

ಬಿರುದುರಾಜು ರಾಮರಾಜುರವರು ಭಾರತೀಯ ಬರಹಗಾರ, ವಿದ್ವಾಂಸ ಮತ್ತು ಪ್ರೊಫೆಸರ್ ಆಗಿದ್ದು ತೆಲುಗು ಭಾಷೆಯ ಜಾನಪದ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದಾರೆ.

ರಾಮರಾಜು ಅವರು ೧೬ನೇ ಏಪ್ರಿಲ್ ೧೯೨೫ ರಂದು ಭಾರತದ ಇಂದಿನ ತೆಲಂಗಾಣದಲ್ಲಿರುವ ದೇವುನೂರು ಎಂಬ ದೂರದ ಹಳ್ಳಿಯಲ್ಲಿ ಶ್ರೀಮಂತ ಜಮೀನ್ದಾರರ ಕುಟುಂಬದಲ್ಲಿ ಜನಿಸಿದರು.

ವಿದ್ಯಾಭ್ಯಾಸ

[ಬದಲಾಯಿಸಿ]

ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನುದೇವುನೂರು ಗ್ರಾಮದಲ್ಲಿ ಪೂರ್ಣಗೊಳಿಸಿದರು.  ಅವರ ಮಾಧ್ಯಮಿಕ ಶಿಕ್ಷಣಕ್ಕಾಗಿ ಅವರು ಹನಮಕೊಂಡದ ಬಳಿ ಇರುವ ಈಗಿನ ವಾರಂಗಲ್ ಜಿಲ್ಲಾ ಕೇಂದ್ರದ ಭಾಗವಾಗಿರುವ ಮಡಿಕೊಂಡಕ್ಕೆ ೧೪ ಕಿ.ಮೀ ನೆಡೆದುಕೊಂಡು ಶಾಲೆಗೆ ಹೋಗಿ ಬರುತ್ತಿದ್ದರು.[]

ಜೀವನ ಮತ್ತು ವೃತ್ತಿ

[ಬದಲಾಯಿಸಿ]

ಅವರು ತಮ್ಮ ಸ್ನಾತಕೋತ್ತರ ಅಧ್ಯಯನಕ್ಕಾಗಿ ಉಸ್ಮಾನಿಯಾ ವಿಶ್ವವಿದ್ಯಾನಿಲಯಕ್ಕೆ ಸೇರುವ ಮೊದಲು ನಿಜಾಮ್ ಕಾಲೇಜಿನಲ್ಲಿ ಪದವಿ ಹಂತದವರೆಗೆ ಅಧ್ಯಯನ ಮಾಡಿದರು. ಅವರು ೧೯೫೨ರಲ್ಲಿ ರಾಮರಾಜು ಅವರು ಜಾನಪದವನ್ನು ಅಧ್ಯಯನ ಮಾಡಲು ನಿರ್ಧರಿಸಿದರು ಮತ್ತು ೧೯೫೬ರಲ್ಲಿ ತೆಲುಗು ಜಾನಪದದಲ್ಲಿ ಪಿಎಚ್‌ಡಿ ಪದವಿ ಪಡೆದರು. ಉಸ್ಮಾನಿಯಾದಲ್ಲಿ ತೆಲುಗು ಭಾಷೆ ಮತ್ತು ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದವರೂ ಮತ್ತು ದಕ್ಷಿಣ ಭಾರತದಲ್ಲಿ ಜಾನಪದದಲ್ಲಿ ಪಿಎಚ್‌ಡಿ ಪಡೆದದವರಲ್ಲಿ ಮೊದಲಿಗರಾದರು . ೧೯೫೨ರ ಚುನಾವಣೆಯಲ್ಲಿ ಗೆದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿ ಸಂಸತ್ತಿನಲ್ಲಿ ಸ್ಥಾನವನ್ನು ಪಡೆದರೂ ಕೂಡ, ರಾಮರಾಜು ಅವರು ತಮ್ಮ ಜಾನಪದ ಅಧ್ಯಯನವನ್ನು ಮುಂದುವರಿಸಲು ರಾಜಕೀಯವನ್ನು ಮುಂದುವರೆಸಲು ನಿರಾಕರಿಸಿದರು. "ತೆಲುಗು ಜಾನಪದ ಗೇಯ ಸಾಹಿತ್ಯಮು" (ತೆಲುಗು ಜಾನಪದ ಗೀತೆ ಸಾಹಿತ್ಯ), ಅವರ ಡಾಕ್ಟರೇಟ್ ಪ್ರಬಂಧವು ೧೯೫೦ರ ದಶಕದ ಉತ್ತರಾರ್ಧದಲ್ಲಿ ಮೊದಲು ಪ್ರಕಟವಾಯಿತು ಮತ್ತು ತೆಲುಗು ಜಾನಪದ ಅಧ್ಯಯನದ "ಬೈಬಲ್" ಎಂದು ಪರಿಗಣಿಸಲ್ಪಟ್ಟ ಅದರ ಪ್ರಾಮುಖ್ಯತೆಯಿಂದಾಗಿ ಅನೇಕ ಬಾರಿ ಮರುಪ್ರಕಟಿಸಲಾಯಿತು.[]

೧೯೫೩ರಲ್ಲಿ ಪಾದ್ರಿಯೊಂದಿಗಿನ ಮುಖಾಮುಖಿಯ ಮೂಲಕ ತಾಳೆಗರಿ ಹಸ್ತಪ್ರತಿ ಸಂರಕ್ಷಣೆಯ ಕಳಪೆ ಸ್ಥಿತಿಯನ್ನು ನೋಡಿದ ನಂತರ, ರಾಮರಾಜುರವರು ಅವುಗಳನ್ನು ಸಂಶೋಧಿಸಲು ಮತ್ತು ಸಂಗ್ರಹಿಸಲು ನಿರ್ಧರಿಸಿದರು. ಈ ಕೆಲಸಕ್ಕಾಗಿ ದೇಶಾದ್ಯಂತ ಪ್ರಯಾಣಿಸಿದರು. ಈ ಪ್ರಕ್ರಿಯೆಯಲ್ಲಿ ಅವರು ಕಲಾ ಮತ್ತು ಸಂಸ್ಕೃತದಲ್ಲಿ ಮತ್ತೊಂದು ಪಿಎಚ್‌ಡಿ ಪಡೆದಿದ್ದಾರೆ. ಅವರ ಪ್ರಬಂಧವನ್ನು ಸಂಸ್ಕೃತ ಸಾಹಿತ್ಯಕ್ಕೆ ಆಂಧ್ರರ ಕೊಡುಗೆ ಎಂಬ ಶೀರ್ಷಿಕೆಯ ಪುಸ್ತಕವಾಗಿ ಪ್ರಕಟಿಸಲಾಯಿತು, ಇದು ಆ ಅವಧಿಯಲ್ಲಿ ತೆಲುಗು ಮತ್ತು ಸಂಸ್ಕೃತ ಸಾಹಿತ್ಯಕ್ಕೆ ತೆಲುಗು ಜನರ ಕೊಡುಗೆಯನ್ನು ಪ್ರಕಟಿಸಿತು. ಆಂಧ್ರಪ್ರದೇಶದ ಸಂತರಿಗೆ ಹಿಂದಿನ ವಿದ್ವಾಂಸರಿಂದ ಯಾವುದೇ ಮನ್ನಣೆ ಸಿಗದಿರುವುದನ್ನು ನೋಡಿದ ನಂತರ, ಸಂತರ ಬಗ್ಗೆ ವಿಷಯಗಳನ್ನು ದಾಖಲಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಉರ್ದು ಭಾಷೆಯಲ್ಲಿ ಪ್ರವೀಣರಾಗಿದ್ದರು ಮತ್ತು ಉರ್ದು-ತೆಲುಗು ನಿಘಂಟನ್ನು ಸಂಪಾದಿಸಿದರು. ಶರತ್ ಚಂದ್ರ ಚಟರ್ಜಿ ಮತ್ತು ಪ್ರೇಮಚಂದ್ ಅವರ ಕೃತಿಗಳನ್ನು ಮೊದಲ ಬಾರಿಗೆ ತೆಲುಗಿಗೆ ಅನುವಾದಿಸಿದರು. ರಾಮರಾಜು ನಂತರ ಉಸ್ಮಾನಿಯಾದಲ್ಲಿ ತೆಲುಗು ವಿಭಾಗದಲ್ಲಿ ಪ್ರಾಧ್ಯಾಪಕರಾದರು ಮತ್ತು ದೇಶದ ಐವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಭಾರತದ ಸಾಂಸ್ಕೃತಿಕ ವಿನಿಮಯ ಯೋಜನೆಗಳ ಭಾಗವಾಗಿ ವಿದೇಶ ಪ್ರವಾಸಕ್ಕೆ ಅವಕಾಶಗಳನ್ನು ಪಡೆದರು. ಅವರ ನಂತರದ ವೃತ್ತಿಜೀವನದಲ್ಲಿ, ಅವರು ವಿಭಾಗದ ಡೀನ್ ಆಗಿದ್ದರು, ಹಲವಾರು ಸಂಶೋಧನಾ ಪ್ರಬಂಧಗಳು ಮತ್ತು ವಿಶ್ವಕೋಶ ಲೇಖನಗಳನ್ನು ಪ್ರಕಟಿಸಿದರು ಮತ್ತು ನಿವೃತ್ತಿಯ ಮೊದಲು ರೇಡಿಯೊದಲ್ಲಿ ಭಾಷಣಗಳನ್ನು ನೀಡಿದರು.[] ೧೯೯೫ರಲ್ಲಿ ಭಾರತ ಸರ್ಕಾರವು ಅವರಿಗೆ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಎಂಬ ಬಿರುದನ್ನು ನೀಡಿತು.[]

ರಾಮರಾಜು ಅವರು ೮ ಫೆಬ್ರವರಿ ೨೦೧೦ರಂದು ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಕಾಕತೀಯ ವಿಶ್ವವಿದ್ಯಾನಿಲಯದ ತೆಲುಗು ವಿಭಾಗವು ಅವರನ್ನು ಶ್ಲಾಘಿಸಲು ಸಭೆಯನ್ನು ನಡೆಸಿತು ಮತ್ತು ಅವರ ಸಂಗ್ರಹವನ್ನು ಕಡಪಾದಲ್ಲಿರುವ ಸಿಪಿ ಬ್ರೌನ್ ಸ್ಮಾರಕ ಗ್ರಂಥಾಲಯಕ್ಕೆ ದಾನ ಮಾಡಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. https://www.thehindu.com/features/friday-review/music/Bridging-the-language-divide/article16366695.ece
  2. "ಆರ್ಕೈವ್ ನಕಲು". Archived from the original on 2024-02-03. Retrieved 2024-02-03.
  3. https://www.newindianexpress.com/cities/hyderabad/2009/Jun/09/cp-brown-academy-award-for-folkore-veteran-55972.html
  4. https://www.thenewsminute.com/telangana/forgotten-telugu-literary-hero-and-osmania-s-first-phd-biruduraju-rama-raju-31044