ಬಿ.ತಿಪ್ಪೇರುದ್ರಪ್ಪ
ಬಿ. ತಿಪ್ಪೇರುದ್ರಪ್ಪ' ಕನ್ನಡದ ಸಮ ಕಾಲೀನ ವೈಚಾರಿಕ ಹಾಸ್ಯ ಸಾಹಿತ್ಯ ಕ್ಷೇತ್ರದ ಸಾಹಿತಿ. ದಿನಾಂಕ ೨೦-೧೦-೧೯೪೨ರಲ್ಲಿ ಚಿತ್ರದುರ್ಗದ ಸಮೀಪದ ಗುಡ್ಡದರಂಗವ್ವನಹಳ್ಳಿಯಲ್ಲಿ ಜನಿಸಿದ ಶ್ರೀಯುತರು, ಚಿತ್ರದುರ್ಗದಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ನಿವೃತ್ತ ರಾಜನೀತಿ ಶಾಸ್ತ್ರದ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಸಾಹಿತಿ.
ಕೃತಿಗಳು
[ಬದಲಾಯಿಸಿ]ಪಠ್ಯ : ರಾಜ್ಯ ಶಾಸ್ತ್ರ ಪರಿಚಯ ( ದ್ವಿತೀಯ ಪಿಯುಸಿ ಪಠ್ಯಪುಸ್ತಕ),
ಹಾಸ್ಯ ಕೃತಿಗಳು :ಮುವ್ವತ್ತು ವಿಡಂಬನೆಗಳು,ನಿಂಬಣ್ಣನ ಎಲೆಕ್ಷನ್ ಡ್ಯೂಟಿ, ಸಾಲಾಯ ತಸ್ಮೈನಮಃ,ಹಾಸ್ಯ ರಸಾಯನ,ವಿ ವಾಂಟ್ ಡೇಟಿಂಗ್ ಪವರ್,ಇಂಗ್ಲೀಷ್ ಇಂಜಕ್ಷನ್ ( ವಿನೋದ ಸಾಹಿತ್ಯ ಪ್ರಶಸ್ತಿ ವಿಜೇತ ಕೃತಿ),
ಮಕ್ಕಳ ಸಾಹಿತ್ಯ :ಹಕ್ಕಿಗಳು (ಪದ್ಯಗಳು),ಪುಟ್ಟನ ಕಾನ್ವೆಂಟ್ (ಪದ್ಯಗಳು),ಕಾಡಿನಲ್ಲಿ ಕ್ರಿಕೆಟ್ ( ಕತೆಗಳು ),ಕಾಡಿನಲ್ಲಿ ಕ್ರಿಕೆಟ್ ( ಪದ್ಯಗಳು),ಕಿಟ್ಟ ಮತ್ತು ಗಿಳಿ (ಪದ್ಯಗಳು ),
ನಾಟಕಗಳು :ಬಡವ ಬದುಕ್ದ, ತಲೆಗೊಂದು ಮುಂಡಾಸು ; ಮನೆಗೋಂದು ಸಂಡಾಸು, ಕಾಡಿನಲ್ಲಿ ಕ್ರಿಕೆಟ್( ಮಕ್ಕಳ ನಾಟಕ)
ಸಂಪಾದನೆ
[ಬದಲಾಯಿಸಿ]ವಿನೋದ ೯೯ ( ಕರ್ನಾಟಕ ಸಾಹಿತ್ಯ ಅಕ್ಯಾಡಮಿಗಾಗಿ), ಸುನಾಮಿಯ ಸುಳಿಯಲ್ಲಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಅಧಿನಿಯಮ ( ೨೦೦೫) ಮಾಹಿತಿ ರೂಪದ ಕೃತಿ,
ಅವರ ಮಕ್ಕಳ ಕವನ ಸಂಕಲನಕ್ಕೆ ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ಮಹದೇವಪ್ಪ ಲೋಕಪ್ಪ ಕರಲಟ್ಟಿ ಸಾಹಿತ್ಯ ಪ್ರತಿಷ್ಟಾನದವರು ಕೊಡುವ ಪ್ರಶಸ್ತಿ ಲಭಿಸಿದೆ.
ಕಳೆದ ೨೨ ವರ್ಷಗಳಿಂದ ಪ್ರಜಾವಾಣಿ, ಸುಧಾ, ಮಯೂರ ಬಳಗಕ್ಕೆ ಸತತ ಲೇಖನಗಳು,ಪುಂಡಲೀಕ್ ಸೇಟ್ ಪತ್ರಿಕೆಗೆ,ಮೂರು ವರ್ಷಗಳ ಅಂಕಣ ಬರಹ.
ತಿಪ್ಪೇರುದ್ರಪ್ಪನವರು ರಚಿಸಿ ಅಭಿನಯಿಸಿದ ನಾಟಕಗಳು, ಚಿನ್ನದಸರ, ಮಲೆನಾಡ ಮಡಿಲಲ್ಲಿ, ಕೋಟು, ಸೂರ್ಯೋದಯ,
ಶ್ರೀಯುತರು ಪ್ರಜಾವಾಣಿ ದೀಪಾವಳಿ ಸಂಚಿಕೆಯ ಮಕ್ಕಳ ಕವನಗಳ ತೀರ್ಪುಗಾರರಾಗಿದ್ದರು.ಮಧ್ಯಪ್ರದೇಶದ ಭೂಪಾಲ್ ನಲ್ಲಿ ೧೯೯೩ರಲ್ಲಿ ನಡೆದ ಕನ್ನಡ,ಹಿಂದಿ ಮಕ್ಕಳ ಸಾಹಿತ್ಯ ರಚನಾ ಸಿಬಿರದ ಡೆಲಿಗೇಟ್ ಆಗಿದ್ದರು.