ವಿಷಯಕ್ಕೆ ಹೋಗು

ಬಿ. ಕೆ. ಎಸ್. ಐಯ್ಯಂಗಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಬಿ.ಕೆ.ಎಸ್.ಐಯ್ಯಂಗಾರ್
ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್
Born(೧೯೧೮-೧೨-೧೪)೧೪ ಡಿಸೆಂಬರ್ ೧೯೧೮
ಬೆಳ್ಳೂರು, ಕೋಲಾರ ಜಿಲ್ಲೆ, ಬ್ರಿಟಿಷ್ ಭಾರತ(ಈಗಿನ ಕರ್ನಾಟಕ,ಭಾರತ)
Occupation(s)ಯೋಗ ಗುರು, ಲೇಖಕ,
Known forಅಯ್ಯಂಗಾರ್ ಯೋಗ
Spouseರಮಾಮಣಿ
Children
Websitewww.bksiyengar.com

ಬೆಳ್ಳೂರು [] ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್, [](ಡಿಸೆಂಬರ್ ೧೪, ೧೯೧೮ - ಆಗಸ್ಟ್ ೨೦, ೨೦೧೪) ಪ್ರಸಿದ್ಧ ಯೋಗ ಗುರುಗಳು. ಇವರು ಭಾರತೀಯ ಯೋಗವನ್ನು ಪ್ರಪಂಚದಾದ್ಯಂತ ಪಸರಿಸಲು ಶ್ರಮ ಪಟ್ಟವರು. ಹಲವಾರು ವಿದ್ವತ್‍ಪೂರ್ಣ ಪುಸ್ತಕಗಳನ್ನು ಪ್ರಕಟಿಸಿ ಯೋಗದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿದರು. [][]

ಜನನ ಹಾಗೂ ಬಾಲ್ಯ

[ಬದಲಾಯಿಸಿ]

ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಐಯ್ಯಂಗಾರ್, []ಮೈಸೂರು ನಗರದಲ್ಲಿ, ಡಿಸೆಂಬರ್ ೧೪, ೧೯೧೮ ರಲ್ಲಿ ಜನಿಸಿದರು. ಅವರ ತಂದೆ ಕೃಷ್ಣಮಾಚಾರ್ ಶಿಕ್ಷಕ. ತಾಯಿ, ಶೇಷಮ್ಮ. ೯ ನೇ ವಯಸ್ಸಿನಲ್ಲೇ ತಂದೆಯ ಮರಣ. ಬಾಲ್ಯದಲ್ಲಿ 'ಇನ್ಫ್ಲೂಯೆಂಝಾ', 'ಟೀ.ಬಿ ರೋಗ'ಗಳಿಂದ ನರಳುತ್ತಿದ್ದರು. ಬಡ ಕುಟುಂಬದಲ್ಲಿ ಜನಿಸಿದ ಅವರಿಗೆ ಪೌಷ್ಟಿಕ ಆಹಾರದ ಕೊರತೆ ಸದಾ ಕಾಡುತ್ತಿತ್ತು. ತಮ್ಮ ೧೫ ನೇ ವಯಸ್ಸಿನಲ್ಲಿ ಮೈಸೂರಿಗೆ ಹೋಗಿ ಅವರ ಗುರುಗಳಾದ, 'ತಿರುಮಲೈ ಕೃಷ್ಣಮಾಚಾರ್' (೧೮೮೮-೧೯೮೯) ಮನೆಯಲ್ಲೇ ಇದ್ದುಕೊಂಡು, ಅವರ ಮಾರ್ಗದರ್ಶನದಲ್ಲಿ 'ಯೋಗಾಭ್ಯಾಸ' ಮಾಡಿದರು.

ಪುಣೆಯಲ್ಲಿ, (RIMYI)ಯ ಸ್ಥಾಪನೆ

[ಬದಲಾಯಿಸಿ]

ಯೋಗಾಚಾರ್ಯ ಬೆಳ್ಳೂರ್ ಕೃಷ್ಣಮಾಚಾರ್ ಸುಂದರ್ ರಾಜ ಐಯ್ಯಂಗಾರ್,[] ಸುಮಾರು ೭೦ ವರ್ಷ 'ಪತಾಂಜಲಿ ಯೋಗ ಮಹಿಮೆ' ಯನ್ನು ವಿಶ್ವದ 'ಯೋಗಾಸಕ್ತರಿಗೆ ಕೊಡುತ್ತಾ ಬಂದಿದ್ದಾರೆ. ಬಾಲ್ಯದ ಅನಾರೋಗ್ಯದಿಂದ ಧೃತಿಗೆಡದೆ ಯೋಗಾಭ್ಯಾಸವನ್ನು ತಮ್ಮ ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನಗಳಿಂದ, ಕಟ್ಟುನಿಟ್ಟಾಗಿ ಅಭ್ಯಸಿಸಿ, ಭೀಮ ಕಾಯರಾದರು. ಜಗತ್ತಿನ ಲಕ್ಷಾಂತರ ಜನರ ಜೀವನವನ್ನು ಸದೃಢಗೊಳಿಸಲು ಸದಾ ಪ್ರಯತ್ನಶೀಲರಾಗಿ, ಶ್ರೀ. ಯೋಗವಿದ್ಯೆಯನ್ನು ಅತ್ಯಂತ ವಿಧಿವತ್ತಾಗಿ ಮತ್ತು ವೈಜ್ಞಾನಿಕವಾಗಿ ಭಾರತ ಹಾಗೂ ವಿಶ್ವದ ಜನರಿಗೆ[] ಭೋಧಿಸುತ್ತ ಬಂದ 'ಶ್ರೀ.ಬಿ.ಕೆ.ಎಸ್.ಐಯ್ಯಂಗಾರ್' ಪುಣೆಯಲ್ಲಿ ತಮ್ಮ ಯೋಗಭ್ಯಾಸ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಅವರಿಗೆ ಈಗ ೯೦ ವರ್ಷ ವಯಸ್ಸು. ಅವರು ಜಗತ್ತಿನ ೪೦ ರಾಷ್ಟ್ರಗಳಲ್ಲಿ ೧೮೦ ಯೋಗ ಕೆಂದ್ರಗಳನ್ನು ಸ್ಥಾಪಿಸಿದ್ದು, ಸುಮರು ೨,೦೦೦ ನುರಿತ ಯೋಗ-ಶಿಕ್ಷಕರು, ಯೋಗವಿದ್ಯೆಯ ಮಹತ್ವವನ್ನು ಪ್ರಚಾರ ಮಾಡುವುದರ ಮೂಲಕ ಅವರ ಸಂದೇಶವನ್ನು ಜೀವಂತವಾಗಿಟ್ಟಿದ್ದಾರೆ.

೯೦ ನೆಯ ಹುಟ್ಟು ಹಬ್ಬದ ದಿನ 'ಮೈಸೂರು ಝೂಗೆ ಉಡುಗೊರೆ'

[ಬದಲಾಯಿಸಿ]

ಬಿ.ಕೆ.ಎಸ್. ಅಯ್ಯಂಗಾರ್ ತಮ್ಮ ೯೦ ರ, ಜನ್ಮದಿನದಂದು ಮೈಸೂರಿನ ಮೃಗಾಲಯಕ್ಕೆ ೨೦ ಲಕ್ಷ (ಸುಮಾರು 41,000 ಅಮೆರಿಕನ್ ಡಾಲರ್ ನಲ್ಲಿ,USD) ಉಡುಗೊರೆಯನ್ನು ಕೊಟ್ಟರು. ಇದು ಅವರ ಪ್ರೀತಿಯ ಪತ್ನಿ,(ದಿವಂಗತ) 'ರಮಾಮಣಿ ಸುಂದರ್ ರಾಜ್ ಅಯ್ಯಂಗಾರ್ ಹೆಸರಿನಲ್ಲಿ.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಬಿ. ಕೆ. ಎಸ್ ರವರು, ೧೯೩೭ ರಲ್ಲಿ ಪುಣೆಗೆ ಬಂದು ನೆಲೆಸಿದರು. ೧೯೪೩ ರಲ್ಲಿ ೧೬ ವರ್ಷ ವಯಸ್ಸಿನ ರಮಾಮಣಿಯವರ ಜೊತೆಗೆ ವಿವಾಹವಾಯಿತು. ಬಿ.ಕೆ.ಎಸ್.ರವರಿಗೆ ೫ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ಅಕಾಲ ಮರಣಗೊಂಡ ತಮ್ಮ ಹೆಂಡತಿಯ ಹೆಸರಲ್ಲಿ, ೧೯೭೫ರಲ್ಲಿ, 'ರಮಾಮಣಿ ಅಯ್ಯಂಗಾರ್ ಯೋಗ ಇನ್ಸ್ಟಿಟ್ಯೂಟ್' (RIMYI) ಅನ್ನು ಪುಣೆಯಲ್ಲಿ ಸ್ಥಾಪಿಸಿದರು. []

ವಿದೇಶಗಳಲ್ಲಿ ಯೋಗಭ್ಯಾಸ ಶಾಲೆಗಳ ಸ್ಥಾಪನೆ

[ಬದಲಾಯಿಸಿ]

೧೯೫೦ ರಲ್ಲಿ ಪ್ರಪ್ರಥಮವಾಗಿ ಯೋಗದ ಪ್ರಭಾವವನ್ನು ವಿದೇಶದಲ್ಲೂ ಸಾರಿದ 'ಪ್ರಥಮ'ರೆಂದು ಹೆಸರಾದರು. ಅವರಿಗೆ ದಾರಿದೀಪವಾದವರು,[೧೦] ವಿಶ್ವದ ಪ್ರಖ್ಯಾತ ಪಿಟೀಲ್ ವಾದಕ, ಶ್ರೀ ಯೆಹೂದಿ ಮೆನ್ಹನ್ ರವರು. ೧೯೫೨ ರಲ್ಲಿ 'ಮೆನ್ ಹನ್ ರವರು' ಐಯ್ಯಂಗಾರ್ ರವರನ್ನು 'ಲಂಡನ್', 'ಪ್ಯಾರಿಸ್', 'ಸ್ವಿಟ್ಜರ್ ಲ್ಯಾಂಡ್' ನ ಪ್ರೇಕ್ಷಕರಿಗೆ ಪರಿಚಯಿಸಿದರು. ಅಲ್ಲಿಂದ ಪ್ರಾರಂಭವಾದ ಅವರ ಯಶಸ್ಸು ನಿರಂತರವಾಗಿ ಬೆಳೆಯುತ್ತಲೇ ಹೋಯಿತು. ೧೯೫೬ ರಲ್ಲಿ ಅವರು 'ಅಮೆರಿಕ ಸಂಯುಕ್ತ ಸಂಸ್ಥಾನ'ಕ್ಕೆ ಭೇಟಿ ಕೊಟ್ಟರು. ಯೊಗದ ಬಗ್ಯೆ ಅವರಿಗಿದ್ದ ಉತ್ಕಟ ಆಸಕ್ತಿ, ಪರಿಶ್ರಮ ಹಾಗೂ ಸಂಪಾದಿಸಿದ ಅಪಾರ ಜ್ಞಾನದಿಂದ ಅಲ್ಲಿನ ಜನರ ಮನವನ್ನು ಗೆದ್ದರು. ಎಲ್ಲಿ ನೋಡಿದರೂ 'ಹೊಸ-ಹೊಸ ಯೋಗ ಶಿಕ್ಷಣ ಶಿಬಿರ'/ಕೇಂದ್ರಗಳನ್ನು ತೆರೆಯಲು ಒತ್ತಾಯ ಬಂತು. ೧೯೮೪ ರಲ್ಲಿ ಅಯ್ಯಂಗಾರ್ ತಾವೇ 'ಯೋಗಪ್ರದರ್ಶನ ' ಮಾಡಿ ತೋರಿಸುವುದನ್ನು ನಿಲ್ಲಿಸಿದರು. ಯುವ ಜನರನ್ನು ತಯಾರು ಮಾಡಿದ್ದರಿಂದ ಅವರೇ ಆ ಕೆಲಸವನ್ನು ಮಾಡಬೇಕಾಗಿರಲಿಲ್ಲ. ಅವರು ಬರದ ಪುಸ್ತಕಗಳಸಂಖ್ಯೆ ೧೫ ಕ್ಕಿಂತ ಹೆಚ್ಚು.[೧೧]

ಯೋಗಾಭ್ಯಾಸದ ಮೇಲೆ ರಚಿಸಿದ ಪುಸ್ತಕಗಳು

[ಬದಲಾಯಿಸಿ]

೧೯೬೬ ರಲ್ಲೇ ಅವರ ಪ್ರಥಮ ಪುಸ್ತಕ 'Light on Yoga ' ೧೭ ಭಾಷೆಗಳಲ್ಲಿ ತರ್ಜುಮೆಗೊಂಡು ಸುಮಾರು ೧೦ ಲಕ್ಷ ಪ್ರತಿಗಳು ಮಾರಾಟವಾದವು. ೨೦೦೪ ರಲ್ಲಿ ಇತ್ತೀಚೆಗೆ ಪ್ರಕಟಗೊಂಡ 'Light on Life' ಅವರ ಸಮಗ್ರ ವ್ಯಕ್ತಿತ್ವ, ಸಾಧನೆಗಳ ದಾಖಲೆಗಳನ್ನೊಳಗೊಂಡ ವಿಶೇಷ ಕೃತಿ. 'ನ್ಯೂಯಾರ್ಕ್ ಟೈಮ್ಸ್' ಅವರ ಬಗ್ಗೆ ಬರೆಯುತ್ತಾ 'ಯೊಗವನ್ನು ಅತಿ ಗಹನವಾಗಿ ಅಭ್ಯಸಿಸಿ, ಅತ್ಯಂತ ಸಮರ್ಥವಾಗಿ ಬರೆದು ಪ್ರಚುರಪಡಿಸಿದ ಜೀವಂತ ವ್ಯಕ್ತಿಗಳಲ್ಲೊಬ್ಬ'ರೆಂದು ವರ್ಣಿಸಿತು. 'ಟೈಮ್ಸ್' ಪತ್ರಿಕೆ 'ಪ್ರಪಂಚದ ಅತಿ ಹೆಚ್ಚು ಜನರಮೇಲೆ ಪ್ರಭಾವ ಬೀರಿದ ೧೦೦ ಪ್ರತಿಭಾನ್ವಿತ ವ್ಯಕ್ತಿಗಳಲ್ಲೊಬ್ಬರೆಂದು ಶ್ಲಾಘಿಸಿತು. [೧೨]

ಬಿ.ಕೆ.ಎಸ್.ಅಯ್ಯಂಗಾರ್ ಜಗತ್ತಿನಲ್ಲೇ ಪ್ರಥಮವಾಗಿ 'ಪತಾಂಜಲಿ ಮಹರ್ಷಿದೇವಸ್ಥಾನವನ್ನು ೨೦೦೪ ರಲ್ಲಿ ಬೇಲ್ಲೂರಿನಲ್ಲಿ ಕಟ್ಟಿಸಿದರು. ಅವರ ಯೊಗ ಶಿಕ್ಷಣದ ಪ್ರಭಾವಕ್ಕೆ ಒಳಗಾದವರಲ್ಲಿ, ಜೆ.ಕೃಷ್ಣಮೂರ್ತಿ, ಆಲ್ಡುಅಸ್ ಹಕ್ಸಲೀ , ಮೆನ್ಹುನ್ ಮುಂತಾದವರಿದ್ದಾರೆ. ಅಯ್ಯಂಗಾರರನ್ನು ಕೆಲವರು 'Michelangelo of Yoga,' ಎಂದರೆ, ಮತ್ತೆ ಕೆಲವರು 'King of Yoga,', ಎನ್ನುತ್ತಾರೆ. ಅವೆಲ್ಲಾ ಮಾತುಗಳು ಅವರ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತವೆ. 'ಬಿ.ಕೆ.ಎಸ್.ಅಯ್ಯಂಗಾರರ' ಬಹುತೇಕ ಪುಸ್ತಕಗಳು ಇಂಗ್ಲೀಷ್ ಭಾಷೆಯಲ್ಲಿವೆ. ಮರಾಠಿ, ಮತ್ತು ಕನ್ನಡದಲ್ಲೂ ಅವರು 'ಕೈಪಿಡಿಗಳನ್ನು' ರಚಿಸಿದ್ದಾರೆ.

ಆತ್ಮೀಯರು ಅವರಿಗೆ ನೋಬೆಲ್ ಪ್ರಶಸ್ತಿಯನ್ನು ಆಶಿಸಿದ್ದಾರೆ

[ಬದಲಾಯಿಸಿ]

[೧೩]

ಪ್ರಶಸ್ತಿಗಳು

[ಬದಲಾಯಿಸಿ]
  1. ಪದ್ಮಶ್ರೀ ೧೯೯೧ ರಲ್ಲಿ,
  2. ಪದ್ಮ ಭೂಷಣ ೨೦೦೨ ರಲ್ಲಿ,
  3. ಪದ್ಮ ವಿಭೂಷಣ, ೨೦೧೪ ರಲ್ಲಿ, [೧೪]

ಬಿ.ಕೆ.ಎಸ್.ಅಯ್ಯಂಗಾರ್[೧೫] ರವರು ತಮ್ಮ ೯೫ನೆಯ ವಯಸ್ಸಿನಲ್ಲಿ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸ್ ಚಿಕಿತ್ಸೆಗೂ ಸ್ಪಂದಿಸದೆ, ೨೦೧೪ ರ, ಆಗಸ್ಟ್, ೨೦ ರಂದು ಪುಣೆಯ ಆಸ್ಪತ್ರೆಯಲ್ಲಿ ನಿಧರಾದರು [೧೬]

ಪ್ರಮುಖ ಪುಸ್ತಕಗಳು

[ಬದಲಾಯಿಸಿ]
  • B.K.S. Iyengar, Light on Yoga, Schocken Books; Revised edition (January 3, 1995), trade paperback, 544 pages, ISBN 0-8052-1031-8
  • B.K.S. Iyengar, Light on Pranayama, Crossroad/Herder & Herder; (June 1995), trade paperback, 320 * pages, ISBN 0-8245-0686-3
  • B.K.S. Iyengar, The Tree of Yoga, Shambala, (1988), trade paperback, 184 pages, ISBN 0-87773-464-
  • B.K.S. Iyengar, Light on the Yoga Sutras of Patanjali, South Asia Books; 1 edition (August 1, * 1993), trade paperback, 337 pages, ISBN 1-85538-225-3
  • B.K.S. Iyengar, Light on Life: The Yoga Journey to Wholeness, Inner Peace, and Ultimate Freedom, Rodale; (2005), hardcover, 282 pages, ISBN 1-59486-248-6

ಉಲ್ಲೇಖಗಳು

[ಬದಲಾಯಿಸಿ]
  1. wikiedit.org, Bellur/221985
  2. 'ಗುರುಜಿ'
  3. "'ಪದ್ಮ ವಿಭೂಷಣ ಪ್ರಶಸ್ತಿ'". Archived from the original on 2014-08-25. Retrieved 2014-01-26.
  4. "Padma Awards Announced". Press Information Bureau, Ministry of Home Affairs. 25 January, 2014. Retrieved 2014-01-26. {{cite web}}: Check date values in: |date= (help)
  5. "ಆರ್ಕೈವ್ ನಕಲು". Archived from the original on 2009-04-16. Retrieved 2014-04-16.
  6. August 20, 2014m rediff.com
  7. https://iynaus.org/
  8. "Iyengar Donates to Mysore Zoo,'Yoga journal,' Feb, 01, 2009". Archived from the original on 2015-12-23. Retrieved 2014-12-19.
  9. http://www.iyengaryogavancouver.com/assoc/history
  10. 'ಕನ್ನಡ ಪ್ರಭ', 'ಸಹಸ್ರಯೋಗ' 20 Jun 2013
  11. http://www.iyengaryogaamsterdam.com/
  12. htmlhttp://www.iyila.org/
  13. http://www.rediff.com/news/report/petition-why-b-k-s-iyengar-deserves-the-nobel-peace-prize/20140115.htm
  14. "ಅಯ್ಯಂಗಾರರ ಸಾಧನೆಗಳು". Archived from the original on 2014-08-22. Retrieved 2014-08-22.
  15. ಬಿ.ಕೆ.ಎಸ್.ಐಯ್ಯಂಗಾರ್ ನಿಧನಕ್ಕೆ ಮೋದಿ ಸಂತಾಪ August 21, 2014 One India kannada
  16. 'BBC.Com. India yoga guru BKS Iyengar dies'


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]