ವಿಷಯಕ್ಕೆ ಹೋಗು

ಬಿ. ಪಿ. ಅದಿತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Aditi (1).jpg
'ಕುಮಾರಿ.ಬಿ.ಪಿ.ಅದಿತಿ'

ಅದಿತಿ ಪ್ರಹ್ಲಾದ್,'ಬೆಂಗಳೂರಿನ ಬಾಲ ಕಲಾವಿದೆ', ಸುಮಾರು ೯ ವರ್ಷದ ಎಳೆಯ ಪ್ರಾಯದಲ್ಲೇ 'ಶಾಸ್ತ್ರೀಯಸಂಗೀತ'ವನ್ನು ತನ್ನ ಆಯ್ಕೆಯಾಗಿ ಮಾಡಿಕೊಂತ್ತಿದ್ದಾಳೆ.[] . ಬೆಂಗಳೂರಿನ ಜಯನಗರದ ೩ ನೇ ಬಡಾವಣೆಯಲ್ಲಿ ವಾಸಿಸುತ್ತಿರುವ ಅವಳ ತಂದೆ-ತಾಯಿಗಳು : ತಂದೆ, ಬಿ.ಎನ್.ಪ್ರಹ್ಲಾದ್ ರವರು. ತಾಯಿ, ಎಸ್. ಅನ್ನಪೂರ್ಣರವರು. 'ಅದಿತಿ' ೨೦೦೧ ರ ಜೂನ್ ತಿಂಗಳ ೭ ನೇ ತಾರೀಖು ಜನಿಸಿದಳು. ಈಗ 'ಜಯನಗರದ ಸರಸ್ವತೀ ವಿದ್ಯಾಮಂದಿರ ಶಾಲೆ'ಯಲ್ಲಿ ೪ ನೇ ತರಗತಿಯಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದಾಳೆ.

ಸಂಗೀತಾಭ್ಯಾಸ

[ಬದಲಾಯಿಸಿ]

'ಕರ್ನಾಟಕ ಶಾಸ್ತ್ರೀಯ ಸಂಗೀತ'ದ ಪ್ರಾರಂಭವನ್ನು ವಿದ್ವಾನ್, ಕಮಲ್ ಕುಮಾರ್ ರವರ ಗುರುತ್ವದಲ್ಲಿ ಮಾಡಿದಳು. (ಕಮಲ್ ಕುಮಾರ್ ರವರು, ವಿದ್ವಾನ್ ಆರ್. ಕೆ. ಶ್ರೀಕಂಠನ್ ರವರ ಶಿಷ್ಯರು) ಬಾಲ್ಯಾವಸ್ತೆಯಲ್ಲೇ ಅಂದರೆ ೫ ನೇ ವರ್ಷದ ಪ್ರಾಯದಲ್ಲಿ(೩ ರಿಂದ ೫ ನೇ ವಯಸ್ಸಿನಲ್ಲಿ) ಶ್ರೀ ನರಹರಿ ದೀಕ್ಷಿತ್ ರವರ ನೇತೃತ್ವದಲ್ಲಿ ಸುಮಾರು ೫೦ ಸಂಗೀತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಎಲ್ಲದರಲ್ಲೂ ಬಹುಮಾನವನ್ನು ಗಳಿಸಿರುತ್ತಾಳೆ.

ಪ್ರಾರ್ಥನಾಗೀತೆಗಳು/ಸಂಗೀತ ಕಚೇರಿಗಳು

[ಬದಲಾಯಿಸಿ]

ಇದುವರೆವಿಗೆ ೧೪೮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, 'ಶಾಸ್ತ್ರೀಯ ಸಂಗೀತ', ಹಾಗೂ 'ಸುಗಮ ಸಂಗೀತ ಕ್ಷೇತ್ರ',ಗಳಲ್ಲಿ ತನ್ನ ಯೋಗದಾನ ಮಾಡಿದ್ದಾಳೆ. ಬೆಂಗಳೂರಿನ ಉಪನಗರ, ಕೋರಮಂಗಲದಲ್ಲಿ ಹಮ್ಮಿಕೊಂಡ 'ವಾರ್ಷಿಕ ರಾಮೋತ್ಸವ ಕಾರ್ಯಕ್ರಮ'ಗಳಲ್ಲಿ ಪಾಲ್ಗೊಂಡು ತನ್ನ ೧೨೩ ನೇ ಕಾರ್ಯಕ್ರಮದಲ್ಲಿ ಸತತ ೨ ಗಂಟೆಗಳ ಕಾಲ ಹಾಡಿರುತ್ತಾಳೆ. ತಿರುಪತಿಯ, 'ತಿರುಮಲ ವೆಂಕಟೇಶ್ವರ ಸ್ವಾಮಿ'ಯ ಸನ್ನಿಧಿಯಲ್ಲಿ ಕೊಟ್ಟ ಕಾರ್ಯಕ್ರಮ, ೧೩೭ ನೆಯದಾಗಿತ್ತು. ಯಾವುದೇ ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವ ಪ್ರಕ್ರಿಯೆಯಲ್ಲಿ ಅದಿತಿ ಸುಮಾರು ೯೨ ಅವಕಾಶಗಳಲ್ಲಿ ಹಾಡಿದ್ದಾಳೆ. ಬೆಂಗಳೂರಿನ ಬಸವನಗುಡಿ ಉಪನಗರದಲ್ಲಿ ಸ್ಥಾಪಿಸಲಾಗಿರುವ ಡಾ. ಹೆಚ್.ಎನ್. ಸಭಾಗೃಹದಲ್ಲಿ ಬಿ.ಜೆ.ಪಿ. ಪಕ್ಷ ನಡೆಸಿದ Friends' of BJP ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಿದಾಗ, ಅದು ಅವಳ ೯೧ ನೇ ಪ್ರಾರ್ಥನಾ ಗೀತೆ'ಯಾಗಿತ್ತು.

  • ೨೦೦೮ ರಲ್ಲಿ, ಕರ್ನಾಟಕ ಸರಕಾರ ಆಯೋಜಿಸಿದ್ದ ಮೈಸೂರು ದಸರಾ ವಿಶೇಷ ಕಾರ್ಯಕ್ರಮದಲ್ಲಿ ಒಂದು ಗಂಟೆಯ ಕಾಲ, ಶಾಸ್ತ್ರೀಯ ಸಂಗೀತ, ಮತ್ತು ಸುಗಮ ಸಂಗೀತವನ್ನು ಪ್ರಸ್ತುತಪಡಿಸಿರುತ್ತಾಳೆ.
  • ೨೦೦೮ ರಲ್ಲಿ, 'ಬೆಂಗಳೂರಿನ ಇಸ್ಕಾನ್ ದೇವಾಲಯ'ದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ೯೦ ನಿಮಿಷಗಳ ಕಾಲ ಹಾಡಿದಳು.
  • ಸನ್, ೨೦೦೮ ರಲ್ಲಿ, 'ಬೆಂಗಳೂರಿನ ಶೃಂಗೇರಿ ಶಂಕರಮಠದ ಸಭಾಗೃಹ'ದಲ್ಲಿ ೯೦ ನಿಮಿಷಗಳ ಕಾಲ ಹಾಡಿದ ಹೆಗ್ಗಳಿಕೆಯನ್ನು ಗಳಿಸಿರುತ್ತಾಳೆ.
  • ಸನ್, ೨೦೧೧ ರ ಫೆಬ್ರವರಿ ತಿಂಗಳ, ೧೩ ನೇ, ರವಿವಾರದಂದು, ಮಹಾರಾಷ್ಟ್ರದ ದೊಂಬಿವಿಲಿಯಲ್ಲಿರುವ, 'ಮೈಸೂರು ಸಂಗೀತ ವಿದ್ಯಾಲಯ' ಆಯೋಜಿಸಿದ, 'ಪುರುಂದರದಾಸ, ಮತ್ತು ತ್ಯಾಗರಾಜರ ಆರಾಧನಾ ಸಂಗೀತ ಕಾರ್ಯಕ್ರಮ'ದಲ್ಲಿ ಸುಮಾರು ೩ ಗಂಟೆಗಳಕಾಲ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಸಂಗೀತವನ್ನು ಹಾಡಿ ಎಲ್ಲಾ ಸಂಗೀತ ರಸಿಕರ ಮೆಚ್ಚುಗೆಯನ್ನು ಗಳಿಸಿದಳು.
  • ೨೦೧೩ ರಲ್ಲಿ ಒಂದು ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಳು.[]

ಪ್ರಶಸ್ತಿ ಹಾಗೂ ಪಾರಿತೋಷಕಗಳು

[ಬದಲಾಯಿಸಿ]
  • 'ಬಾಲ ಕಲಾವಿದೆ ಅದಿತಿ', ಒಟ್ಟಾರೆ ಗಳಿಸಿದ ಬಹುಮಾನಗಳ ಸಂಖ್ಯೆ, ೨೬೧
  • ಅವಳು, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಸಂಖ್ಯೆ, ೧೩

ಟೆಲೆವಿಶನ್ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿ

[ಬದಲಾಯಿಸಿ]

ದೂರದರ್ಶನದ ಚಂದನ ವಾಹಿನಿ, ಉದಯ ಕನ್ನಡ, ಝೀಕನ್ನಡ, ಸುವರ್ಣ ಕನ್ನಡ, ಟಿ.ವಿ. ೯ ಕನ್ನಡ, ಹಾಗೂ ಶಂಕರದಲ್ಲಿ ಪ್ರಸ್ತುತಪಡಿಸಿರುತ್ತಾಳೆ.

ಪುರಸ್ಕಾರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಕರ್ನಾಟಕ ಸರ್ಕಾರ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, 'ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳು,'ಕ್ರಮ ಸಂಖ್ಯೆ 20
  2. "Prajavani, 6,13,2013, ನಾದದ ಬೆನ್ನೇರಿ... `ಶ್ರೀಹರಿ' ಪ್ರತಿಭೆಗಳ ಲಹರಿ". Archived from the original on 2013-09-18. Retrieved 2014-04-05.
  3. oneindia.com, August 20, 2010, ಅಕ್ಕ ಸಮ್ಮೇಳನ : ಕಲಾವಿದರ ಎರಡನೇ ಪಟ್ಟಿ,ಕ್ರಮ ಸಂಖ್ಯೆ 14

ಬಾಹ್ಯ ಸಂಪರ್ಕಗಳು :

  1. 'ಕುಮಾರಿ ಅದಿತಿಯ ಹಾಡಿನ ವಿಡಿಯೋ'