ಬಿ. ಪ್ರಭಾಕರ ಶಿಶಿಲ
ಗೋಚರ
ಕನ್ನಡದ ಬರಹಗಾರರು[೧], ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹೆಸರು ಪಡೆದಿರುವ ಡಾ.ಶಿಶಿಲರು.
ಹುಟ್ಟು
[ಬದಲಾಯಿಸಿ]ಸುಳ್ಯ ತಾಲೂಕಿನಪಂಜ ಸಮೀಪದ ಕೂತ್ಕುಂಜದಲ್ಲಿ 21-12-1953ರಲ್ಲಿ ಜನನ. ಪ್ರಸ್ತುತ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ನೆಲೆಸಿದ್ದಾರೆ.
ವಿದ್ಯಾರ್ಹತೆ
[ಬದಲಾಯಿಸಿ]ಪ್ರಾರಂಭಿಕ ಶಿಕ್ಷಣ ಶಿಶಿಲ, ಕುಂಟಲ ಪಲ್ಕೆ, ಕೊಕ್ಕಡ ಮತ್ತು ಅರಸಿನ ಮಕ್ಕಿ ಮುಂತಾದೆಡೆಗಳಲ್ಲಿ ಪೊರೈಸಿದ್ದಾರೆ.
- 1974ಉಜಿರೆಯ ಎಸ್.ಡಿ.ಎಂ.ಕಾಲೇಜಿನಿಂದ ಬಿ. ಎ. ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ.
- 1976 ಮೈಸೂರು ವಿವಿ.ಯಿಂದ ಎಂ. ಎ. ನಾಲ್ಕು ಬಂಗಾರದ ಪದಕಗಳೊಡನೆ.
- 1993 ಗುಲಬರ್ಗ ವಿಶ್ವವಿದ್ಯಾಲಯಕ್ಕೆ ‘ಫಿಶರೀಸ್ ಕೋ ಆಪರೇಟಿವ್ ಇನ್ ಇಂಡಿಯಾ ವಿತ್ ಪರ್ಟಿಕ್ಯುಲರ್ ರೆಫರೆನ್ಸ್ ಟು ಕರ್ನಾಟಕ’ ಪ್ರಬಂಧ ಮಂಡಿಸಿ ಪಡೆದ ಪಿ.ಎಚ್.ಡಿ. ಪದವಿ
ಪ್ರಕಟಿತ ಕೃತಿಗಳು
[ಬದಲಾಯಿಸಿ]- ಗಗ್ಗರ
- ಬಾರಣೆ
- ಗುಜರಿ ಅದ್ದಿಲಿಚ್ಚನ ಜಿಹಾದಿಯ.
- ಕೊಡಗಿನ ಐತಿಹ್ಯ ಕಥೆಗಳು.
- ಬೆಟ್ಟದಾ ಮೇಲೊಂದು
- ಕಪಿಲಳ್ಳಿಯ ಕತೆಗಳು.
- ಜಲಲ ಜಲದಾರೆ.
- ಮೂಡಣದ ಕೆಂಪು ಕಿರಣ.
- ಎನ್ ಗ್ರಾಚರ ಸಾ.
- ಕುಡೆಕಲ್ಲು ಅಪ್ಪಯ್ಯ ಗೌಡ.
- ದೊಡ್ಡ ವೀರ ರಾಜೇಂದ್ರ.
- ಕೊಡಗಿನ ಕತೆಗಳು[೨]
- ಪುಂಸ್ತ್ರೀ[೩].
- ಕನ್ನಡದಲ್ಲಿ 115 ಅರ್ಥಶಾಸ್ತ್ರ ವಿಚಾರ ಸಾಹಿತ್ಯ ಕೃತಿಗಳು.
- ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳು.
ಶಿಶಿಲರ ಬಗ್ಗೆ ಬಂದ ಕೃತಿಗಳು
[ಬದಲಾಯಿಸಿ]- 2003 ಹೆಜ್ಜೆ: ಸುವರ್ಣ ಅಭಿನಂದನಾ ಸ್ಮರಣಿಕೆ.
- 2013 ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ
- 2017 ಹಿರಿಯ ಸಾಹಿತಿ ಪ್ರಭಾಕರ ಶಿಶಿಲ: ಶಿಶಿಲರ ಜೀವನ ಮತ್ತು ಸಾಧನೆಗಳು.
- 2018 ಪ್ರಭಾಕರ ಶಿಶಿಲರ ಸಾಹಿತ್ಯ: ಡಾ. ಮೋಹನ ಕುಮಾರರ ಪಿಹೆಚ್.ಡಿ. ಮಹಾ ಪ್ರಬಂಧ[೪]
ಅನುವಾದಗೊಳ್ಳುತ್ತಿರುವ ಕೃತಿಗಳು
[ಬದಲಾಯಿಸಿ]- ಪುಂಸ್ತ್ರೀ - ಸಂಸ್ಕøತ, ಹಿಂದಿ, ಮಲೆಯಾಳಂ, ತೆಲುಗು, ತಮಿಳು, ತುಳು, ಕೊಂಕಣಿ, ಮರಾಠಿ, ಅರೆಭಾಷೆ
- ಮತ್ಸ್ಯಗಂಧಿ- ಇಂಗ್ಲೀಷ್, ತೆಲುಗು, ತಮಿಳು, ತುಳು, ಅರೆಭಾಷೆ
- ಕಪಿಲಳ್ಳಿಯ ಕತೆಗಳು – ತುಳು ಮತ್ತು ಅರೆಭಾಷೆ
- ಮೂಡಣದ ಕೆಂಪುಕಿರಣ – ತುಳು
- ಇರುವುದೆಲ್ಲವ ಬಿಟ್ಟು – ತುಳು
ಸಂಶೋಧನ ಮಾರ್ಗದರ್ಶಕ
[ಬದಲಾಯಿಸಿ]- ಹಂಪಿ ಕನ್ನಡ ವಿ.ವಿ. ಸಂಶೋಧನಾ ಮಾರ್ಗದರ್ಶಕ
- ನಾಲ್ವರಿಗೆ ಕನ್ನಡದಲ್ಲಿ ಪಿಹೆಚ್.ಡಿ.ಗೆ ಮಾರ್ಗದರ್ಶಕ.
- ಏಳು ಕನ್ನಡಿಗ ವಿದ್ಯಾರ್ಥಿಗಳಿಗೆ ಎಂ.ಫಿಲ್ಲ್ ಮಾರ್ಗದರ್ಶಕ
- ಕನ್ನಡಿಗ ಡಾ. ಬ್ರಹ್ಮಾನಂದ ಹೆಸರಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ.
ಪ್ರಸಸ್ತಿಗಳು
[ಬದಲಾಯಿಸಿ]- 1999- ದೇಶ ಯಾವುದಾದರೇನು ಯುರೋಪು ಪ್ರವಾಸ ಕಥನಕ್ಕೆ ಗೊರೂರು ಪ್ರಶಸ್ತಿ.
- 2003-ಸುಳ್ಯದಲ್ಲಿ ಶಿಶಿಲರಿಗೆ ಸಾರ್ವಜನಿಕ ಅಭಿನಂದನೆ ಮತ್ತು ಹೆಜ್ಜೆ ಸಂಸ್ಮರಣಾ ಗ್ರಂಥ ಅರ್ಪಣೆ.
- 2004- ಕಪಿಲಳ್ಳಿಯ ಕಥೆಗಳು ಸಂಕಲನಕ್ಕೆ ದಾವಣಗೆರೆಯ ಪಂಪ ಪ್ರತಿಷ್ಠಾನದ ಸಾಹಿತ್ಯಶ್ರೀ ಪ್ರಶಸ್ತಿ.
- 2005- ಶಾರ್ಜಾ ಧ್ವನಿ ಪ್ರತಿಷ್ಟಾನದ ವಿಶ್ವಗನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಪ್ರಶಶ್ತಿ.
- 2006- ಬೆಂಗಳೂರಿನ ಬುಕ್ ಪ್ರಾರಡೈಸ್ ಸಂಸ್ಥೆಯಿಂದ ಸುವರ್ಣ ಕರ್ನಾಟಕ ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ.
- 2007- ಪುಂಸ್ತ್ರೀಗೆಶಿವಮೊಗ್ಗ ಕರ್ನಾಟಕ ಸಂಘದಿಂದ ಕುವೆಂಪು ಕಾದಂಬರಿ ಪ್ರಶಸ್ತಿ.
- 2008- ಪುಂಸ್ತ್ರೀಗೆ ಗದಗದ ಪುಟ್ಟರಾಜ ಗವಾಯಿ ಕಾದಂಬರಿ ಪ್ರಶಸ್ತಿ.
- 2009- ನದಿ ಎರಡರ ನಡುವೆ ಕೃತಿಗೆ ಮಾಸ್ತಿ ಕಾದಂಬರಿ ಪ್ರಶಸ್ತಿ.
- 2009- ಸುಳ್ಯ ತಾಲೂಕು ಹದಿನಾಲ್ಕನೇ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
- 2011- ಮತ್ಸ್ಯಗಂಧಿ ಕಾದಂಬರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ.
ವಿದೇಶ ಪ್ರವಾಸ
[ಬದಲಾಯಿಸಿ]- 1997 ಭಾರತದ ರೋಟರಿ ಸಾಂಸ್ಕøತಿಕ ರಾಯಭಾರಿಯಾಗಿ ವಿಶ್ವ ರೋಟರಿ ಸಂಸ್ಥೆಯಿಂದ 5 ವಾರಗಳ ಫ್ರಾನ್ಸ್ ಅಧ್ಯಯನ ಪ್ರವಾಸ.
- 1997 ಸ್ವತಂತ್ರ ಪ್ರವಾಸಿಯಾಗಿ ಇಂಗ್ಲೆಂಡ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಜರ್ಮನಿ, ಆಸ್ಟ್ರಿಯಾ, ಇಟಲಿ ಮತ್ತು ಸ್ವಿಜಲ್ರ್ಯಾಂಡ್ ಪ್ರವಾಸ.
ಉಲ್ಲೇಖ
[ಬದಲಾಯಿಸಿ]- ↑ http://kanaja.in/?tribe_events=%E0%B2%A1%E0%B2%BE-%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%95%E0%B2%B0-%E0%B2%B6%E0%B2%BF%E0%B2%B6%E0%B2%BF%E0%B2%B2[ಶಾಶ್ವತವಾಗಿ ಮಡಿದ ಕೊಂಡಿ]
- ↑ https://play.google.com/store/books/author?id=Dr.+B.+Prabhakara+Shishila[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.prajavani.net/stories/stateregional/punstri-novel-604487.html
- ↑ https://nirantharanews.com/tag/nammakadaba-news/page/18/[ಶಾಶ್ವತವಾಗಿ ಮಡಿದ ಕೊಂಡಿ]
ವರ್ಗಗಳು:
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಜನವರಿ 2023
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Wikify from ವೃತ್ತಿ ಅನುಭವವನ್ನೊಳಗೊಂಡ ಪರಿಚಯ ಪತ್ರದ ತರಹ ಬರೆಯಲಾಗಿದೆ
- Articles with unsourced statements
- ಲೇಖಕರು
- ಅರ್ಥಶಾಸ್ತ್ರಜ್ಞರು