ವಿಷಯಕ್ಕೆ ಹೋಗು

ಬೂಷ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಕ್ಲೆಮಂಟೈನ್ ಮೇಲೆ ಬೆಳೆಯುತ್ತಿರುವ ಬೂಷ್ಟು

ಬೂಷ್ಟು (ಬೂಸು, ಬೂಜು) ಹೈಫ಼ಾಗಳು ಎಂದು ಕರೆಯಲ್ಪಡುವ ಬಹುಕೋಶೀಯ ಎಳೆಗಳ ರೂಪದಲ್ಲಿ ಬೆಳೆಯುವ ಒಂದು ಶಿಲೀಂಧ್ರ.[] ಇದಕ್ಕೆ ವಿರುದ್ಧವಾಗಿ, ಏಕಕೋಶೀಯ ಬೆಳವಣಿಗೆ ಅಭ್ಯಾಸವನ್ನು ಅಳವಡಿಸಿಕೊಳ್ಳಬಲ್ಲ ಶಿಲೀಂಧ್ರಗಳನ್ನು ಮಂಡಗಳು ಎಂದು ಕರೆಯಲಾಗುತ್ತದೆ.

ಬೂಷ್ಟುಗಳು ದೊಡ್ಡ ಮತ್ತು ಜೀವವರ್ಗೀಕರಣ ರೀತ್ಯ ವೈವಿಧ್ಯಮಯ ಸಂಖ್ಯೆಯ ಶಿಲೀಂಧ್ರ ಪ್ರಜಾತಿಗಳಾಗಿವೆ. ಇವುಗಳಲ್ಲಿ ಹೈಫ಼ಾಗಳ ಬೆಳವಣಿಗೆಯು ವಿವರ್ಣನ ಮತ್ತು ಜಾಳುಜಾಳಾದ ನೋಟವನ್ನು ಉಂಟುಮಾಡುತ್ತದೆ, ವಿಶೇಷವಾಗಿ ಆಹಾರದ ಮೇಲೆ. ಹೈಫ಼ಾಗಳು ಸಾಮಾನ್ಯವಾಗಿ ಪಾರದರ್ಶಕವಾಗಿರುವುದರಿಂದ ಮೇಲ್ಮೈ ಮೇಲೆ ಕವಕಜಾಲವು ಬಹಳ ನವಿರಾದ, ಮೆದುವಾದ ಬಿಳಿ ದಾರಗಳಂತೆ ಕಾಣಿಸುತ್ತದೆ. ಅನೇಕ ಬೂಷ್ಟುಗಳ ದೂಳಿನಂಥ ರಚನೆಯು ಹೈಫ಼ಾಗಳ ತುದಿಗಳಲ್ಲಿ ವಿಭೇದೀಕರಣದಿಂದ ರೂಪಗೊಂಡ ಅಲೈಂಗಿಕ ಬೀಜಕಗಳ ಸಮೃದ್ಧ ಉತ್ಪತ್ತಿಯಿಂದ ಉಂಟಾಗುತ್ತದೆ. ಸಾಂಪ್ರದಾಯಿಕವಾಗಿ, ಈ ಬಿಜಕಗಳ ರಚನೆಯ ರೀತಿ ಮತ್ತು ಆಕಾರಗಳನ್ನು ಬೂಷ್ಟುಗಳನ್ನು ವರ್ಗೀಕರಿಸಲು ಬಳಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Moore D, Robson GD, Trinci AP, eds. (2011). 21st Century Guidebook to Fungi (1st ed.). Cambridge University Press. ISBN 978-0521186957.
"https://kn.wikipedia.org/w/index.php?title=ಬೂಷ್ಟು&oldid=914216" ಇಂದ ಪಡೆಯಲ್ಪಟ್ಟಿದೆ