ವಿಷಯಕ್ಕೆ ಹೋಗು

ಬೃಂದಾವನ ಉದ್ಯಾನ

ನಿರ್ದೇಶಾಂಕಗಳು: 12°25′34″N 76°34′34″E / 12.42611°N 76.57611°E / 12.42611; 76.57611
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೃಂದಾವನ ಉದ್ಯಾನ Brindavana Gardens (pronounced as 'vrindawan')
ಬೃಂದಾವನ ಉದ್ಯಾನ
Brindavan Gardens
ಬಗೆGarden
ಸ್ಥಳಕೃಷ್ಣ ರಾಜ ಸಾಗರಾ ಅಣೆಕಟ್ಟು, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ, ಕರ್ನಾಟಕ
ನಿರ್ದೇಶಾಂಕಗಳು12°25′34″N 76°34′34″E / 12.42611°N 76.57611°E / 12.42611; 76.57611
ವಿಸ್ತರಣೆ60 acres (24 ha)
Created1932 (1932)
ನಿರ್ವಹಣೆCauvery Niravari Nigama
Visitors2 million
OpenYear round
Fountains at Brindavan Gardens at night
Brindavan Garden Fountains at Night
Krishnarajasagara Dam and the adjoining Brindavan Gardens

ಬೃಂದಾವನ ಉದ್ಯಾನ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಉದ್ಯಾನವನ. ಇದು ಕಾವೇರಿ ನದಿಯುದ್ದಕ್ಕೂ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟಿನ ಪಕ್ಕದಲ್ಲಿದೆ.ಈ ಉದ್ಯಾನವನದ ಕೆಲಸ 1927 ರಲ್ಲಿ ಪ್ರಾರಂಭವಾಯಿತು ಮತ್ತು 1932 ರಲ್ಲಿ ಪೂರ್ಣಗೊಂಡಿತು. ವರ್ಷಕ್ಕೆ ಸುಮಾರು 2 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ, ಈ ಉದ್ಯಾನವು ಶ್ರೀರಂಗಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ನಗರದಿಂದ ಕೇವಲ 20 ಕಿಮೀ ದೂರದಲ್ಲಿರುವ ಬೃಂದಾವನ ಹೂದೋಟವನ್ನು ಹೋಗಿ ನೋಡಲೇಬೇಕಾದ ಸ್ಥಳವಾಗಿದೆ. . ಹಿಂದೆ ಕೃಷ್ಣರಾಜೇಂದ್ರ ಟೆರೇಸ್ ಗಾರ್ಡನ್ ಎಂದು ಕರೆಯಲ್ಪಡುತ್ತಿದ್ದ ಬೃಂದಾವನವೂ ಕೃಷ್ಣರಾಜಸಾಗರ ಆಣೆಕಟ್ಟಿನ ಕೆಳಭಾಗದಲ್ಲೇ ಇದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ರಿಂದ ಅದರ ಹೆಸರನ್ನು ಪಡೆದುಕೊಂಡಿದೆ. ಇದನ್ನು 1924 –1932ರ ಅವಧಿಯಲ್ಲಿ ಸರ್ ಎಮ್ ವಿಶ್ವೇಶ್ವರಯ್ಯನವರು ನಿರ್ಮಿಸಿದರು.ಕಾಶ್ಮೀರದ ಶಾಲಿಮಾರ್ ಗಾರ್ಡನ್ ನ ಮೂಲ ಹೊಂದಿದ ಬೃಂದಾವನವೂ ಅರವತ್ತು ಎಕರೆಗಳ ಜಾಗದಲ್ಲಿ ಚಾಚಿಕೊಂಡಿದೆ. ಇಲ್ಲಿ ಸುಂದರವಾದ ಹೂ ಹಾಸಿಗೆ, ಹುಲ್ಲು ಹಾಸು,ಮರಗಳು, ಸಣ್ಣ ಕೊಳಗಳು ಮತ್ತು ಚಿಲುಮೆಗಳನ್ನು ಕಾಣಬಹುದು. ಪ್ರವಾಸಿಗರು ಉದ್ಯಾನವನದ ಮಧ್ಯಭಾಗದಲ್ಲಿರುವ ಕೆರೆಯಲ್ಲಿ ಕಾವೇರಿಯ ಪ್ರತಿಮೆಯ ಸುತ್ತ ದೋಣಿ ವಿಹಾರದಲ್ಲಿ ತೆರಳಬಹುದು. ಸಂದರ್ಶಕರು ಹೂದೋಟದ ಉತ್ತರಭಾಗದಲ್ಲಿ ಪ್ರದರ್ಶನ ಕೇಂದ್ರದ ಸಮೀಪ ಇರುವ ಸಂಗೀತದ ತಾಳಕ್ಕೆ ತಕ್ಕಂತೆ ಕುಣಿಯುವ ಬಣ್ಣದ ನೀರಿನಚಿಲುಮೆಯನ್ನು ನೋಡಲೇಬೇಕು .ಹೂದೋಟದಲ್ಲಿ ಮನವೊಲಿಸುವಂತಹ ಬೆಳಕಿನ ಆಯೋಜನವನ್ನು ಸೋಮವಾರ –ಶುಕ್ರವಾರವರೆಗೆ ಸುಮಾರು ಸಂಜೆ 7-8ರ ವರೆಗೆ ಗಂಟೆಗಳ ಕಾಲ ಮತ್ತು ಶನಿವಾರ ಹಾಗೂ ಭಾನುವಾರ ಸಂಜೆ 7- 9 ಗಂಟೆಗಳವರೆಗೆ ಕಾಣಬಹುದು.

.[]

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Brindavan Gardens to be reopened from April 30". The Hindu. 28 April 2007. Archived from the original on 5 ಡಿಸೆಂಬರ್ 2008. Retrieved 28 February 2008.

Brindavan Garden Officials Website