ವಿಷಯಕ್ಕೆ ಹೋಗು

ಬೆತ್ವಾ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಟ್ವಾ ( ಸಂಸ್ಕೃತ : वेत्रावती) ಮಧ್ಯ ಮತ್ತು ಉತ್ತರ ಭಾರತದಲ್ಲಿನ ಒಂದು ನದಿ ಮತ್ತು ಯಮುನೆಯ ಉಪನದಿಯಾಗಿದೆ. ಇದು ಮಧ್ಯಪ್ರದೇಶದ ಹೋಶಂಗಾಬಾದ್ (ನರ್ಮದಾಪುರಂ) ನ ಉತ್ತರಕ್ಕೆ ವಿಂಧ್ಯ ಪರ್ವತಗಳಲ್ಲಿಹುಟ್ಟುತ್ತದೆ. ಮಧ್ಯಪ್ರದೇಶ ಮತ್ತು ಓರ್ಚಾ ಮೂಲಕ ಉತ್ತರ ಪ್ರದೇಶದಿಂದ ಈಶಾನ್ಯಕ್ಕೆ ಹರಿಯುತ್ತದೆ. [೧] ಇದು ಹರಿಯುವ ಅರ್ಧದಷ್ಟು ಭಾಗ ಮಾಲ್ವಾ ಪ್ರಸ್ಥಭೂಮಿಯಲ್ಲಿ ಸಾಗುತ್ತದೆ, ಈ ಪ್ರದೇಶ ಸಂಚಾರಕ್ಕೆ ಯೊಗ್ಯವಲ್ಲ. ಬೆಟ್ವಾ ಮತ್ತು ಯಮುನಾ ನದಿಗಳ ಸಂಗಮವು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿದೆ. [೧]

ಭಾರತೀಯ ನೌಕಾಪಡೆಯು ನದಿಯ ಗೌರವಾರ್ಥವಾಗಿ ತನ್ನ ಒಂದು ಯುದ್ದನೌಕೆಗೆ ಐಎನ್‌ಎಸ್ <i id="mwJA">ಬೆಟ್ವಾ</i> ಎಂದು ಹೆಸರಿಟ್ಟಿದೆ. [೨]

ಇತಿಹಾಸ[ಬದಲಾಯಿಸಿ]

ಬೆಟ್ವಾ ನದಿಯು ಮಧ್ಯಪ್ರದೇಶದ ಭೋಜ್‌ಪುರದಲ್ಲಿರುವ 11 ನೇ ಶತಮಾನದ ಭೋಜೇಶ್ವರ ದೇವಾಲಯಕ್ಕೆ ಸಮೀಪದಲ್ಲಿದೆ

 

ಬೆಟ್ವಾ ನದಿಯ ದಡದಲ್ಲಿರುವ ಛತ್ರಗಳು

ಸಂಸ್ಕೃತದ "ಬೇಟ್ವಾ" ವೆತ್ರಾವತಿ ಯಾಗುತ್ತದೆ . ಈ ನದಿಯನ್ನು ಮಹಾಭಾರತ ಮಹಾಕಾವ್ಯದಲ್ಲಿ ಚರ್ಮವತಿ ನದಿಯೊಂದಿಗೆ ಉಲ್ಲೇಖಿಸಲಾಗಿದೆ. ಇವೆರಡೂ ಯಮುನೆಯ ಉಪನದಿಗಳು. ವೇತ್ರಾವತಿಯನ್ನು ಶುಕ್ತಿಮತಿ ಎಂದೂ ಕರೆಯುತ್ತಿದ್ದರು. ಚೇದಿ ಸಾಮ್ರಾಜ್ಯದ ರಾಜಧಾನಿ ಈ ನದಿಯ ದಡದಲ್ಲಿತ್ತು. ನದಿಯ ಉದ್ದವು ಅದರ ಉಗಮಸ್ಥಾನದಿಂದ ಯಮುನಾದ ಜೊತೆ ಸಂಗಮವಾಗುವವರೆಗೆ 590 kilometres (370 mi), ಅದರಲ್ಲಿ 232 kilometres (144 mi) ಮಧ್ಯಪ್ರದೇಶದಲ್ಲಿದೆ ಮತ್ತು 358 kilometres (222 mi) ಉತ್ತರ ಪ್ರದೇಶದಲ್ಲಿದೆ. 1973 ರಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ನಡುವಿನ ಅಂತರ-ರಾಜ್ಯ ಒಪ್ಪಂದದ ಮೂಲಕ, ಬೆಟ್ವಾ ರಿವರ್ ಬೋರ್ಡ್ (ಬಿ.ಅರ್.ಬಿ) ಅನ್ನು ಬೆಟ್ವಾ ರಿವರ್ ಬೋರ್ಡ್ ಆಕ್ಟ್, 1976 ರ ಅಡಿಯಲ್ಲಿ ರಚಿಸಲಾಯಿತು. ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಸಚಿವರು, ಮಂಡಳಿಯ ಅಧ್ಯಕ್ಷರು, ಕೇಂದ್ರ ವಿದ್ಯುತ್ ಸಚಿವರು, ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವರು ಮತ್ತು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಣಕಾಸು, ನೀರಾವರಿ ಮತ್ತು ವಿದ್ಯುತ್ ಉಸ್ತುವಾರಿ ಮುಖ್ಯಮಂತ್ರಿಗಳು ಮತ್ತು ಸಚಿವರು ಇದರ ಸದಸ್ಯರಾಗಿದ್ದಾರೆ.

ಭವಿಷ್ಯ[ಬದಲಾಯಿಸಿ]

ಮಧ್ಯಪ್ರದೇಶದಲ್ಲಿ ನದಿ ಜೋಡಣೆ ಯೋಜನೆಯ ಭಾಗವಾಗಿ ಬೆಟ್ವಾ ನದಿಯನ್ನು ಕೆನ್ ನದಿಯೊಂದಿಗೆ ಜೋಡಿಸಲಾಗುತ್ತಿದೆ. ನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್.ಬಿ.ಡಬ್ಲು.ಎಲ್) ನದಿಗಳ ಕೆನ್-ಬೆಟ್ವಾ ಇಂಟರ್-ಲಿಂಕಿಂಗ್ (ಐ.ಎಲ್.ಅರ್) ಯೋಜನೆಗೆ ತನ್ನ ಅನುಮತಿಯನ್ನು ನೀಡಿದೆ. ಬೆಟ್ವಾ ನದಿಯ ಮೇಲಿನ ಮತ್ತೊಂದು ಗಮನಾರ್ಹ ಯೋಜನೆ ಎಂದರೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ನಡುವಿನ ಕಾಮಗಾರಿಯಾದ ಮಟಟಿಲಾ ಅಣೆಕಟ್ಟು ನಿರ್ಮಾಣವಾಗಿದೆ. ಈ ಪ್ರದೇಶವು ವಲಸೆ ಬರುವ ಜಲಪಕ್ಷಿಗಳಿಗೆ ತಾಣವಾಗಿದೆ[೩]. ಕೆನ್ ಮತ್ತು ಬೆಟ್ವಾ ನದಿಗಳನ್ನು ಜೋಡಿಸುವ ಮಹತ್ವಾಕಾಂಕ್ಷೆಯ ಯೋಜನೆಯು ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ. ಕೇಂದ್ರ ಜಲ ಸಚಿವಾಲಯದ ನೇತೃತ್ವದ ಯೋಜನೆಯ ಪ್ರತಿಪಾದಕರು, ಪ್ರಸ್ತಾವಿತ ದೌಧನ್ ಅಣೆಕಟ್ಟು ಮತ್ತು 230 km (140 mi) ಕಾಲುವೆ-ಯೋಜನೆಯ ಪ್ರಮುಖ ರಚನೆಗಳು ಉತ್ತರ ಪ್ರದೇಶದ ಕೆನ್‌ನ ಹೆಚ್ಚುವರಿ ನೀರನ್ನು ಮಧ್ಯಪ್ರದೇಶದ ಬೆಟ್ವಾಗೆ ವರ್ಗಾಯಿಸುತ್ತದೆ, ಇದು ಸುಮಾರು 700,000 ha (1,700,000 acres) ನೀರಾವರಿಗೆ ನಿರ್ಣಾಯಕವಾಗಿದೆಬರಪೀಡಿತ ಬುಂದೇಲ್‌ಖಂಡದಲ್ಲಿ

ಅಣೆಕಟ್ಟುಗಳು[ಬದಲಾಯಿಸಿ]

  • ರಾಜ್‌ಘಾಟ್ ಅಣೆಕಟ್ಟು
  • ಮಟಟಿಲ ಅಣೆಕಟ್ಟು
  • ಪರಿಚ್ಚಾ ಅಣೆಕಟ್ಟು
  • ಧುರವಾರ ಅಣೆಕಟ್ಟು
  • ಹಲಾಲಿ ಅಣೆಕಟ್ಟು

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Hydrography of Madhya Pradeshಟೆಂಪ್ಲೇಟು:Hydrography of Uttar Pradesh

  1. ೧.೦ ೧.೧ "Betwa River". www.india9.com. 7 June 2005. Archived from the original on 24 August 2016.
  2. "Indian Navy Frigate Tips Over in Graving Dock". The Maritime Executive. 6 December 2016. Retrieved 7 December 2016.
  3. Shukla, D.C. (1994). "Habitat characteristics of wetlands of the Betwa Basin, India, and wintering populations of endangered waterfowl species". Global wetlands, pp. 863–68