ವಿಷಯಕ್ಕೆ ಹೋಗು

ಬೆಳ್ಳಿ ಲಲಿತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳ್ಳಿ ಲಲಿತಾ (೨೯ ಏಪ್ರಿಲ್ ೧೯೭೪ - ೨೬ ಮೇ ೧೯೯೯) ಒಬ್ಬ ಭಾರತೀಯ ಜಾನಪದ ಗಾಯಕಿ ಮತ್ತು ತೆಲಂಗಾಣ ಕಲಾ ಸಮಿತಿಯ ಸಂಸ್ಥಾಪಕಿಯಾಗಿದ್ದು ೧೯೯೯ ರಲ್ಲಿ ಕೊಲೆಯಾದರು.

ಅವರು ನಲ್ಗೊಂಡ ಜಿಲ್ಲೆಯ ಆತ್ಮಕೂರ್ ಮಂಡಲಿಯ ನಂಚಾರ್‌ಪೇಟೆಯಲ್ಲಿ ತೆಲುಗು ಮಾತನಾಡುವ ಕುರುಮ ಕುಟುಂಬದಲ್ಲಿ ಜನಿಸಿದರು. ಆಕೆಗೆ ಒಬ್ಬ ಸಹೋದರ, ಬೆಳ್ಳಿ ಕೃಷ್ಣ ಕಾರ್ಯಕರ್ತ ಮತ್ತು ಸರ್ಕಾರಿ ಉದ್ಯೋಗಿಯಾಗಿದ್ದರು, ಹಾಗೂ ಆಕೆಗೆ ೫ ಸಹೋದರಿಯರಿದ್ದರು. ಅವರು ನಾಗರಿಕ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಮತ್ತು ೧೯೯೦ ರ ದಶಕದ ಉತ್ತರಾರ್ಧದಲ್ಲಿ ತೆಲಂಗಾಣ ಪ್ರದೇಶದ ರಾಜ್ಯತ್ವಕ್ಕಾಗಿ ಕಾರ್ಯಕರ್ತರಾಗಿದ್ದರು. ಆಕೆಯ ತಂದೆ ಒಗ್ಗು ಕಥಾ ಗಾಯಕ ಮತ್ತು ಕಾರ್ಮಿಕ. ಅವರು ತೆಲಂಗಾಣ ರಾಜ್ಯದ ಕಾರಣಕ್ಕಾಗಿ ಹೋರಾಡುತ್ತಿದ್ದರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದರು. ೧೯೯೯ ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಆಕೆಯ ಕೊಲೆಯಾಗುವ ಮೊದಲು ಭೋಂಗಿರ್ ಕ್ಷೇತ್ರದಿಂದ ಒಂದು ಸ್ಥಾನವನ್ನು ನೀಡಿತು. 

೧೯೯೯ ರಲ್ಲಿ, ಆಕೆಯನ್ನು ಅಪಹರಿಸಿ, ಹಲ್ಲೆ ನಡೆಸಿ, ಕೊಡಲಿಯಿಂದ ಛಿದ್ರಗೊಳಿಸಿ ಆಕೆಯ ದೇಹದ ಭಾಗಗಳನ್ನು ೧೭ ತುಂಡುಗಳಾಗಿ ಕತ್ತರಿಸಲಾಯಿತು. [] ನಂತರ ಆಕೆಯ ಛಿದ್ರಗೊಂಡ ದೇಹದ ಭಾಗಗಳನ್ನು ದುಷ್ಕರ್ಮಿಗಳು ಚೌಟುಪೋಲ್ ಪೊಲೀಸ್ ಠಾಣೆಯ ಮುಂದೆ ಎಸೆದಿದ್ದರು. ಆರಂಭದಲ್ಲಿ, ಅಂದಿನ ಟಿಡಿಪಿ ಸರ್ಕಾರದ ಗೃಹ ಸಚಿವ ಅಲಿಮಿನೆಟಿ ಮಾಧವ ರೆಡ್ಡಿ ಕೊಲೆಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿಯಿತ್ತು ಆದರೆ ನಂತರ ಈ ಆರೋಪವನ್ನು ತೆರವುಗೊಳಿಸಲಾಯಿತು.  ಹೆಚ್ಚಿನ ಪುರಾವೆಗಳ ನಂತರ ಸ್ಥಳೀಯ ನಕ್ಸಲೀಯ ಗಾಡ್‌ಫಾದರ್ ಮತ್ತು ಕಿಂಗ್‌ಪಿನ್ ಮೊಹಮ್ಮದ್ ನಯೀಮುದ್ದೀನ್‌ ಅವರು ಕೊಲೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದೆ. [] [] [] ಇದಲ್ಲದೆ ಆಕೆಯ ಮೂವರು ಸಹೋದರರು ಸಹ ಕೊಲ್ಲಲ್ಪಟ್ಟರು, ಉಳಿದ ಸಹೋದರ ಕೃಷ್ಣ ೨೦೦೦ ರಿಂದ ೨೦೧೭ ರವರೆಗೆ [] ಅಡಗಿಕೊ೦ಡಿದ್ದನು.

ಉಲ್ಲೇಖಗಳು

[ಬದಲಾಯಿಸಿ]
  1. Face To Face With Belli Lalitha’s Sister Archived 2020-02-16 ವೇಬ್ಯಾಕ್ ಮೆಷಿನ್ ನಲ್ಲಿ. - AP7AM.com Reporting
  2. "From Maoist to police informer to gangster: The rise and fall of Nayeem". Hindustan Times. 15 August 2016. Retrieved 2020-06-30.
  3. "Brutality involved in Sambasivudu murder indicates Nayeem's role". The Hindu. 29 March 2011. Retrieved 2020-06-30.
  4. "From Revolutionary To Underworld Don - The Journey Of A Gangster". Sakshi. 9 August 2016. Archived from the original on 16 February 2020.
  5. "Nayeem victim's brother returns after 17-yr exile". The Times of India. Retrieved 2020-06-30.