ಬ್ಯಾಚುಲರ್ ಆಫ್ ಇಂಜಿನಿಯರಿಂಗ್
{{Unreferenced|date=February
ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಸಾಮಾನ್ಯವಾಗಿ ಇದನ್ನು ಬಿಇ ಅಥವಾ ಬಿಇಂಜ್ ಎಂದು ಚಿಕ್ಕದಾಗಿ ಹೇಳುತ್ತಾರೆ) ಒಂದು ಪದವಿ ಶಿಕ್ಷಣವಾಗಿದ್ದು ವಿದ್ಯಾರ್ಥಿಗಳ ಐದು ವರ್ಷಗಳ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿದ ನಂತರ ಲಭ್ಯವಾಗುತ್ತದೆ, ಅರ್ಮೇನಿಯಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬಲ್ಗೇರಿಯಾ, ಕೆನಡಾ, ಚೈನಾ, ಡೆನ್ಮಾರ್ಕ್, ಈಜಿಪ್ಟ್, ಫಿನ್‌ಲ್ಯಾಂಡ್, ಜರ್ಮನಿ, ಹಾಂಗ್‌ಕಾಂಗ್, ಭಾರತ, ಇಂಡೋನೇಶಿಯಾ, ಐರ್‌ಲ್ಯಾಂಡ್, ಜೋರ್ಡನ್, ಕೊರಿಯಾ, ಲೆಬನನ್, ಮೆಸಿಡೋನಿಯಾ, ಮಲೇಷಿಯಾ, ನೇಪಾಳ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ನೈಜೀರಿಯಾ, ನಾರ್ವೇ, ಪಾಕಿಸ್ತಾನ, ಸಿಂಗಪುರ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಸ್ವೀಡನ್, ಯುನೈಟೆಡ್, ಯುನೈಟೆಡ್ ಸ್ಟೇಟ್ಸ್, ವಿಯೆಟ್ನಾಂ, ಝಾಂಬಿಯಾ ಮತ್ತು ಝಿಂಬಾವ್ವೆ ವಿಶ್ವವಿದ್ಯಾನಿಲಯಗಳಲ್ಲಿ ಈ ಪದವಿ ಲಭ್ಯವಿದೆ.[ಸೂಕ್ತ ಉಲ್ಲೇಖನ ಬೇಕು] ವಿಶ್ವದಾದ್ಯಂತ ವಿದ್ಯಾರ್ಹತೆಯ ಗುಣವು ಬದಲಾಗಬಹುದು, ಆದ್ದರಿಂದ ಅದು ವೃತ್ತಿಪರ ಪದವಿಯಾಗಿರಬಹುದು ಅಥವಾ ಅಲ್ಲದೆ ಇರಬಹುದು ಹಾಗೂ ಇಂಜಿನಿಯರಿಂಗ್ ಕೆಲಸ ಅದರಲ್ಲಿ ಒಳಗೊಂಡಿರಬಹುದು ಅಥವಾ ಇಲ್ಲದೆ ಇರಬಹುದು. ಇದು ರಾಷ್ಟ್ರೀಯ ವೃತ್ತಿಪರ ಸೊಸೈಟಿಯ ಅಧಿಕಾರಕ್ಕೆ ಒಳಪಟ್ಟಿರಬಹುದು ಅಥವಾ ಇಲ್ಲದೆ ಇರಬಹುದು.
ಕೆಲ ಶಿಕ್ಷಣ ಸಂಸ್ಥೆಗಳು ಬ್ಯಾಚುಲರ್ ಆಫ್ ಸೈನ್ಸ್ (ಬಿಎಸ್‌ಸಿ), ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಸೈನ್ಸ್ (ಬಿಇಎಸ್‌ಸಿ), ಬ್ಯಾಚುಲರ್ ಆಫ್ ಸೈನ್ಸ್ ಇನ್ ಇಂಜಿನಿಯರಿಂಗ್ (ಬಿಎಸ್‌ಇ), ಅಥವಾ ಬ್ಯಾಚುಲರ್ ಆಫ್ ಅಪ್ಲೈಡ್ ಸೈನ್ಸ್ (ಬಿಎಎಸ್‌ಸಿ) ಗಳಂತಹ ಪದವಿಗಳನ್ನು ಇಂಜಿನಿಯರಿಂಗ್ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನೀಡುತ್ತವೆ. ಉದಾಹರಣೆಗೆ, ಇಂಜಿನಿಯರಿಂಗ್ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಬಿಎಎಸ್‌ಸಿ ಪದವಿಯನ್ನು ಕೆನಡಾ ಮಾತ್ರ ನೀಡುತ್ತದೆ.
ವಿರಳವಾದ ಪದವಿಯೆಂದರೆ ಬ್ಯಾಸ್ಸಾಲೇರಿಯಸ್ ಇನ್ ಆರ್ಟೆ ಇಂಜಿನಿಯೇರಿಯಾ (ಬಿಎಐ), ಒಂದು ಲ್ಯಾಟಿನ್ ಹೆಸರು, ಇದರ ಅರ್ಥ ಇಂಜಿನಿಯರಿಂಗ್ ಕಲೆಯಲ್ಲಿ ಪದವಿ ಶಿಕ್ಷಣ [೧]. ಈ ಪದವಿಯನ್ನು ಐರ್‌ಲ್ಯಾಂಡ್ ಹಾಗೂ ಡಬ್ಲಿನ್ ವಿಶ್ವವಿದ್ಯಾನಿಲಯವು ನೀಡುತ್ತದೆ, ಇದನ್ನು ಸಾಮಾನ್ಯವಾಗಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಎಂದೇ ಪರಿಗಣಿಸಲಾಗುತ್ತದೆ; ಕೆಲವು ದಕ್ಷಿಣ ಆಫ್ರಿಕಾದ ವಿಶ್ವವಿದ್ಯಾನಿಲಯಗಳು ತಮ್ಮ ಇಂಜಿನಿಯರಿಂಗ್ ಪದವಿಯನ್ನು ಬಿ.ಇಂಜ್. ಎಂದು ಸೂಚಿಸುತ್ತಾರೆ (ಬ್ಯಾಸಾಲಾರಿಯಸ್ ಇಂಜಿನಿಯೇರಿಯಾ ).
ಕ್ಷೇತ್ರಗಳು
[ಬದಲಾಯಿಸಿ]ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ಸಾಮಾನ್ಯವಾಗಿ ಇಂಜಿನಿಯರಿಂಗ್‌ನ ಒಂದು ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತದೆ, ಕೆಲವುಸಲ ಇದನ್ನು ಪೋಸ್ಟ್‌ನೋಮಿನಲ್ಸ್ಗಳಲ್ಲಿ ಗುರುತಿಸಲಾಗುತ್ತದೆ, ಉದಾಹರಣೆಗೆ BE(Aero) ಅಥವಾ BEng(Elec) ನಲ್ಲಿ ಸೂಚಿಸಿದಂತೆ. ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿಯ ಸಾಮಾನ್ಯ ಕ್ಷೇತ್ರಗಳನ್ನು ಈ ಕೆಳಗೆ ಸೂಚಿಸಲಾಗಿದೆ:[ಸೂಕ್ತ ಉಲ್ಲೇಖನ ಬೇಕು]:
- ಏರೋಸ್ಪೇಸ್ ಎಂಜಿನಿಯರಿಂಗ್
- ಆಟೋಮೇಟಿವ್ ಎಂಜಿನಿಯರಿಂಗ್
- ಜೈವಿಕ/ರಾಸಾಯನಿಕ ಇಂಜಿನಿಯರಿಂಗ್: ಇದರಲ್ಲಿ ಬಯೋಕೆಮಿಕಲ್, ಬಯೋಮೆಡಿಕಲ್, ಬಯೋಸಿಸ್ಟಮ್ಸ್, ಬಯೋಮಾಲಿಕ್ಯುಲಾರ್, ಮತ್ತು ಕೆಮಿಕಲ್ ಇಂಜಿನಿಯರಿಂಗ್
- ಕೆಮಿಕಲ್ ಇಂಜಿನಿಯರಿಂಗ್: ಕಚ್ಛಾ ವಸ್ತುಗಳು ಅಥವಾ ರಾಸಾಯನಿಕಗಳನ್ನು ಉಪಯುಕ್ತ ಅಥವಾ ಅಮೂಲ್ಯ ವಸ್ತುಗಳನ್ನಾಗಿ ಬದಲಾಯಿಸುವ ವಿಧಾನಗಳನ್ನೊಳಗೊಂಡ ವಿಭಾಗ
- ಕಂಪ್ಯೂಟರ್ ಇಂಜಿನಿಯರಿಂಗ್
- ಸಿವಿಲ್ ಇಂಜಿನಿಯರಿಂಗ್: ಇದು ವಿಶಾಲ ಶ್ರೇಣಿಯ ಕ್ಷೇತ್ರವಾಗಿದ್ದು, ಬಿಲ್ಡಿಂಗ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಕನ್ಸ್‌ಟ್ರಕ್ಷನ್ ಇಂಜಿನಿಯರಿಂಗ್, ಇಂಡಸ್ಟ್ರಿಯಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಮೆಟೇರಿಯಲ್ಸ್ ಆಂಡ್ ಕಂಟ್ರೋಲ್ ಇಂಜಿನಿಯರಿಂಗ್‌ಗಳನ್ನು ಒಳಗೊಂಡಿದೆ.
- ಎಲೆಕ್ಟ್ರಿಕಲ್ ಅಂಡ್ ಕಂಪ್ಯೂಟರ್ ಇಂಜಿನಿಯರಿಂಗ್/ಎಲೆಕ್ಟ್ರಾನಿಕ್ ಇಂಜಿನಿಯರಿಂಗ್: ಕಂಪ್ಯೂಟರ್ ಇಂಜಿನಿಯರಿಂಗ್, ಕಮ್ಯುನಿಕೇಶನ್/ಕಮ್ಯುನಿಕೇಶನ್ ಸಿಸ್ಟಮ್ಸ್ ಇಂಜಿನಿಯರಿಂಗ್, ಇನ್‌ಫಾರ್ಮೇಶನ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಮೈಕ್ರೊಎಲೆಕ್ಟ್ರಾನಿಕ್ ಇಂಜಿನಿಯರಿಂಗ್, ಮೈಕ್ರೊಎಲೆಕ್ಟ್ರಾನಿಕ್ಸ್, ನ್ಯಾನೊಟೆಕ್ನಾಲಜಿ, ಮೆಕಾಟ್ರಾನಿಕ್ಸ್, ಸಾಫ್ಟ್‌ವೇರ್ ಇಂಜಿನಿಯರಿಂಗ್, ಸಿಸ್ಟಮ್ಸ್, ವೈರ್‌ಲೆಸ್ ಅಂಡ್ ಟೆಲಿಕಮ್ಯುನಿಕೇಷನ್ಸ್, ಫೋಟೋವೋಲ್ಟಾಯಿಕ್ ಮತ್ತು ಪವರ್ ಇಂಜಿನಿಯರಿಂಗ್‌ಗಳನ್ನು ಇದು ಒಳಗೊಂಡಿದೆ.
- ಎಲೆಕ್ಟ್ರಿಕಲ್ ಕಂಟ್ರೋಲ್ಸ್ ಇಂಜಿನಿಯರಿಂಗ್: ಇದು ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನ ಸಾಕ್ಷೇಪವಾಗಿ ಹೊಸದಾದ ಮತ್ತು ಅತ್ಯಂತ ಅಸಾಧಾರಣವಾದ ಉಪಾಧ್ಯಯನ ವಿಭಾಗವಾಗಿದ್ದು ಅದು ಇಂಟಿಗ್ರೇಟಿಂಗ್ ಎಲೆಕ್ಟ್ರಿಕಲ್ ಕಂಟ್ರೋಲ್ಸ್, ಮತ್ತು ಅವುಗಳ ಪ್ರೊಗ್ರಾಮಿಂಗ್ ಮೇಲೆ ಹೆಚ್ಚಿನ ಏಕಾಗ್ರತೆಯನ್ನು ಹೊಂದಿರುತ್ತದೆ.
- ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್: ಇದು ಕೈಗಾರಿಕಾ ಮತ್ತು ಉತ್ಪಾದನಾ ಕಾರ್ಯಗಳ ಯೋಜನೆ ಮತ್ತು ಕಾರ್ಯಕಾರಿ ನಿರ್ವಹಣೆಗೆ ಯಂತ್ರವಿದ್ಯಯ ತತ್ವಗಳಾಗಿ ಅನ್ವಯಿಸುತ್ತದೆ.
- ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್: ಇದು ವಾತಾವರಣದ, ಭೂ ವಿಜ್ಞಾನದ, ಜ್ಯಾಮಿತಿಯ, ಗಣಿಯ, ಕಡಲಿನ, ಮತ್ತು ಸಮುದ್ರದ ಇಂಜಿನಿಯರಿಂಗ್‌ಗಳಂತಹ ಕ್ಷೇತ್ರಗಳನ್ನು ಒಳಗೊಂಡಿದೆ.
- ಜ್ಯುಮಾಟಿಕ್ಸ್ ಇಂಜಿನಿಯರಿಂಗ್: ಸ್ಪಟಿಯಲ್ ಡಾಟದ (ಭೂಮಿಯ ಮೆಲಿನ ವಸ್ತುಗಳ ವಿತರಣೆಯನ್ನು ತಿಳಿಸುವ ದತ್ತಾಂಶಗಳ) ಸ್ವಾಧೀನತೆ, ನಮೂನತೆ, ವಿಶ್ಲೇಷಣೆ ಮತ್ತು ನಿರ್ವಹಣೆ. ಇದು ಉಪಗ್ರಹದ ಸ್ಥಾನ, ದೂರದಿಂದ ಸ್ಪರ್ಶಿಸುವಿಕೆ, ಭೂಮಿಯ ಸಮೀಕ್ಷಣೆ, ತಂತಿರಹಿತ ಜಾಗ ಮತ್ತು ಭೌಗೋಳಿಕ ಮಾಹಿತಿ ಪದ್ಧತಿ (GIS)ನ ಮೇಲೆ ಹೆಚ್ಚಿನ ಹೆಚ್ಚು ಕೇಂದ್ರೀಕರಿಸುತ್ತದೆ.[೨]
- ಇಂಡಸ್ಟ್ರಿಯಲ್ ಇಂಜಿನಿಯರಿಂಗ್: ಇದರಲ್ಲಿ ಸೌಲಭ್ಯಗಳ ಯೋಜನೆ, ಉತ್ಪಾದನೆ ನಿರ್ವಹಣೆ, ಅಂಕಿಅಂಶಗಳ ಗುಣಮಟ್ಟ ನಿಯಂತ್ರಣೆ, ಇತ್ಯಾದಿಗಳು ಒಳಗೊಂಡಿವೆ.
- ಮಾಹಿತಿ ತಂತ್ರಜ್ಞಾನ
- ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್: ಮಾಪನದ ವ್ಯವಹಾರನ್ನೊಳಗೊಂಡ ಇಂಜಿನಿಯರಿಂಗ್ ವಿಭಾಗ
- ಮ್ಯಾನುಫ್ಯಾಕ್ಚರಿಂಗ್ ಇಂಜಿನಿಯರಿಂಗ್: ಇದರಲ್ಲಿ ಕಾರ್ಯಾಚರಣೆ ನಿರ್ವಹಣೆ ಹಾಗೂ ತಯಾರಿಕೆಯ ನಿರ್ವಹಣೆ ಒಳಗೊಂಡಿದೆ
- ಮೆಟೀರಿಯಲ್ಸ್ ಇಂಜಿನಿಯರಿಂಗ್: ಇದರಲ್ಲಿ ಮೆಟಲರ್ಜಿ, ಪಾಲಿಮರ್ ಮತ್ತು ಸಿರಾಮಿಕ್ ಇಂಜಿನಿಯರಿಂಗ್ ಸೇರಿವೆ
- ಮೆಕಾನಿಕಲ್ ಇಂಜಿನಿಯರಿಂಗ್: ಇದರಲ್ಲಿ ಯಂತ್ರಗಳ ಮತ್ತು ಇಂಜಿನ್ನುಗಳ ಇಂಜಿನಿಯರಿಂಗ್ ಒಳಗೊಂಡಿದೆ
- ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್: ಇದು ಮೆಕಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ ಇಂಜಿನಿಯರಿಂಗ್, ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್‌ಗಳ ಸಂಯೋಗವಾಗಿದೆ.
- ನಾವಲ್ ಇಂಜಿನಿಯರಿಂಗ್: ಇದರಲ್ಲಿ ನಾವಲ್ ಆರ್ಕಿಟೆಕ್ಚರ್ ಮತ್ತು ಶಿಪ್ ನಿರ್ಮಾಣ ಒಳಗೊಂಡಿವೆ
- ನ್ಯೂಕ್ಲಿಯರ್ ಇಂಜಿನಿಯರಿಂಗ್: ಇದರಲ್ಲಿ ನ್ಯೂಕ್ಲಿಯರ್ ಮತ್ತು ರೇಡಿಯೋಲಾಜಿಕಲ್ ಇಂಜಿನಿಯರಿಂಗ್ ಒಳಗೊಂಡಿವೆ
ಅಂತಾರಾಷ್ಟ್ರೀಯ ವ್ಯತ್ಯಾಸಗಳು
[ಬದಲಾಯಿಸಿ]ಆಸ್ಟ್ರೇಲಿಯಾ
[ಬದಲಾಯಿಸಿ]ಆಸ್ಟ್ರೇಲಿಯಾದಲ್ಲಿ, ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಬಿಇ) ನಾಲ್ಕು ವರ್ಷಗಳ ಪದವಿಪೂರ್ವದ ಪದವಿ ಕೋರ್ಸ್ ಮತ್ತು ವೃತ್ತಿಪರ ವಿದ್ಯಾರ್ಹತೆಯಾಗಿದೆ. ಇದು ಆರುವರ್ಷಗಳ ಸ್ಯಾಂಡ್‌ವಿಚ್ (ನಡುವಣ) ಕೋರ್ಸ್ ಆಗಿಯು (ಇಲ್ಲಿ ಪದವಿಯ ಭಾಗವಾಗಿ ವಿದ್ಯಾರ್ಧಿಗಳು ನಿರ್ಧಿಷ್ಟ ಅವಧಿಯ ವೃತ್ತಿಯ ಕೈಕೊಳ್ಳುತ್ತಾರೆ) ಅಥವಾ ಕೆಲವು ವಿಶ್ವವಿದ್ಯಾನಿಲಯಗಳ ಮುಖಾಂತರ ಎಂಟು-ವರ್ಷಗಳ ಒಪ್ಪೊತ್ತಿನ ಕೋರ್ಸ್ ಆಗಿಯು ಲಭ್ಯವಿದೆ. ದಿ ಇನ್‌ಸ್ಟಿಟ್ಯೂಟ್ ಆಹ್ ಇಂಜಿನೀರ್ಸ್, ಆಸ್ಟ್ರೇಲಿಯಾ (ಇಂಜಿನೀರ್ಸ್ ಆಸ್ಟ್ರೇಲಿಯಾ) ಪದವಿ ಕೋರ್ಸ್‌ಗಳನ್ನು ಒದಗಿಸುತ್ತಿದೆ ಮತ್ತು ಇಂತಹ ಪದವಿಗಳನ್ನು ಪಡೆದ ಪದವೀಧರರು ಸಂಸ್ಥೆಯ ಸದಸ್ಯತ್ವವನ್ನು ಪಡೆಯಲು ಅರ್ಹರಾಗಿರುತ್ತಾರೆ. ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವೀಧರರು ಪದವಿಯನ್ನು ಪಡೆದ ನಂತರ ಪದವೀಧರ ವೃತ್ತಿಪರ ಇಂಜಿನಿಯರ್ ಆಗಿ ವೃತ್ತಿಯನ್ನು ಪ್ರಾರಂಭಿಸಬಹುದಾಗಿದೆ, ಅದಾಗ್ಯೂ ಕೆಲವರು, ಉನ್ನತ ಪದವಿ ಅಥವಾ ಡಾಕ್ಟರಲ್ ಪದವಿಗಳಂತಹ ಉನ್ನತ ವಿದ್ಯಾಭ್ಯಾಸ ಮಾಡುವುದನ್ನು ಆರಿಸಿಕೊಳ್ಳಬಹುದಾಗಿದೆ. ಚಾರ್ಟರ್ಡ್ ಪ್ರೊಫೆಷನಲ್ ಇಂಜಿನಿಯರ್ (CPEng) ಮಾನ್ಯತೆ ಅಥವಾ ವಿವಿಧ ಹಂತದ ದಾಖಲಾತಿ ಅವಶ್ಯಕತೆಗಳನ್ನು ಸಾಮಾನ್ಯವಾಗಿ ನಂತರದ ವರ್ಷಗಳಲ್ಲಿ ಪಡೆದುಕೊಳ್ಳಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಗ್ರಾಂಥಿಕ ಇಂಜಿನಿಯರಿಂಗ್ ಅರ್ಹತೆಯ ಪದವೀಧರರನ್ನು, ಇತರ ವೃತ್ತಿಪರರಿಂದ ಪ್ರತ್ಯೇಕವಾಗಿ ಗುರುತಿಸಲು ವೃತ್ತಿಪರ ಇಂಜಿನಿಯರ್ಸ್ ಎಂದು ಗುರುತಿಸಲಾಗುತ್ತದೆ.
ಕೆನಡಾ
[ಬದಲಾಯಿಸಿ]ಕೆನಡಾದಲ್ಲಿ, ಪದವಿಪೂರ್ವ ಇಂಜಿನಿಯರಿಂಗ್ ಅಭ್ಯಾಸಕ್ಕೆ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (B. Eng. ಅಥವಾ ಪ್ರೆಂಚ್‌ನಲ್ಲಿ B.Ing.), ಅಥವಾ ಸಮಾನವಾಗಿ, ಬ್ಯಾಚುಲರ್ ಆಫ್ ಅಪ್ಲೈಡ್ ಸೈನ್ಸ್ ಅಥವಾ ಬ್ಯಾಚುಲರ್ ಆಫ್ ಸೈನ್ಸ್ ಎಂದು ಹೆಸರಿಸಲಾಗುತ್ತದೆ. ನಿಯುಕ್ತ ಪ್ರೊಗ್ರಾಮ್‌ಗಳಿಂದ ನೀಡಲಾಗುವ ಪದವಿಯು ಸಾಮಾನ್ಯವಾಗಿ ನಾಲ್ಕು ವರ್ಷಗಳ ಅವಧಿಯ ಅಭ್ಯಾಸವನ್ನು ಒಳಗೊಂಡಿದ್ದು, ವೃತ್ತಿಪರ ಇಂಜಿನಿಯರ್ ಆಗಲು ಅತ್ಯಗತ್ಯವಾದ ಮೊದಲ ಹಂತವಾಗಿದೆ. ಸ್ವಯಂ-ಆಡಳಿತದ ಸಂಸ್ಥೆಗಳ (ಹೆಸರು ಪ್ರಾಂತದಿಂದ ಪ್ರಾಂತಕ್ಕೆ ವಿಭಿನ್ನವಾಗಿರುತ್ತದೆ) ಮುಖಾಂತರ ನಿಬಂಧನೆ ಮತ್ತು ನಿಯುಕ್ತತೆಗಳು ಪೂರ್ಣಗೊಳ್ಳುತ್ತವೆ, ಈ ಸಂಸ್ಥೆಯು ಕಾಯಿದೆಯಿಂದ ಇಂಜಿನಿಯರುಗಳನ್ನು ದಾಖಲಿಸುವ ಮತ್ತು ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರವನ್ನು, ಹಾಗು ಪ್ರತಿಯೊಂದು ಪ್ರಾಂತದಲ್ಲೂ ಇಂಜಿನಿಯರಿಂಗ್ ಕ್ಷೇತ್ರವನ್ನು ಹತೋಟಿಯಲ್ಲಿಡುವ ಅಧಿಕಾರವನ್ನು ಹೊಂದಿರುತ್ತದೆ.
ಜರ್ಮನಿ
[ಬದಲಾಯಿಸಿ]ಜರ್ಮನಿಯಲ್ಲಿ, ಬೊಲೊಗ್ನ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವುದರ ಭಾಗವಾಗಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್‌ನ್ನು ಪರಿಚಯಿಸಲಾಯಿತು. ಅದಾಗ್ಯೂ, ವಾಸ್ತವವಾಗಿ ಈ ಪದವಿಯನ್ನು ಹೆಚ್ಚಾಗಿ ಜರ್ಮನ್ Fachhochschule-ಇನ್‌ಸ್ಟಿಟ್ಯೂಷನ್ಸ್ ಯುನಿವರ್ಸಿಟೀಸ್ ಆಫ್ ಅಪ್ಲೈಡ್ ಸೈನ್ಸಸ್ ಇವರಿಂದ ಒದಗಿಸಲಾಗುತ್ತದೆ. ಜರ್ಮನಿಯ ತಾಂತ್ರಿಕ ವಿಶ್ವವಿದ್ಯಾನಿಲಯಗಳು BEng ಪದವಿಯ ಬದಲಾಗಿ ಬ್ಯಾಚುಲರ್ ಆಫ್ ಸೈನ್ಸ್ ಇನ್ ಇಂಜಿನಿಯರಿಂಗ್ ಎಂಬ ಪದವಿಯನ್ನು ನೀಡುತ್ತವೆ.
ಫಿನ್‌ಲ್ಯಾಂಡ್
[ಬದಲಾಯಿಸಿ]ಫಿನ್‌ಲ್ಯಾಂಡ್‌ನ ಪರಿಸ್ಥಿತಿಯು ಜರ್ಮನಿ ಮಾದರಿಯಲ್ಲೆ ಇರುತ್ತದೆ. ವೃತ್ತಿ ಸಂಬಂಧಿ ವಿಶ್ವವಿದ್ಯಾನಿಲಯಗಳು (ammattikorkeakoulu) ವೃತ್ತಿಪರ ಬ್ಯಾಚುಲರ್'ಸ್ ಪದವಿಗಳನ್ನು ನೀಡುತ್ತವೆ (insinööri (amk) ). ಪದವಿಯು ಮುಂದಿನ ವಿದ್ಯಾಭ್ಯಾಸಕ್ಕೆ ಸಾಂಪ್ರದಾಯಿಕವಾಗಿ ಸಿದ್ದಗೊಳಿಸುವುದಿಲ್ಲ, ಆದರೆ ಬೊಲೊಗ್ನ ಪ್ರಕ್ರಿಯೆಯ ಪ್ರಯುಕ್ತ ಸಂಪೂರ್ಣವಾಗಿ ಹೊಸಾ ಪದವಿಯಾದ ylempi insinööri (amk) ನ್ನು, ಸ್ವಲ್ಪ ಸಮಯದ ವೃತ್ತಿಯ ಅನುಭವದ ನಂತರ ವಿಧ್ಯಾಭ್ಯಾಸವನ್ನು ಮುಂದುವರೆಸಲು ಇಚ್ಚಿಸುವ ಇಂಜಿನಿಯರುಗಳಿಗಾಗಿ ಪರಿಚಯಿಸಲಾಗಿದೆ. 2005ರ ಮೊದಲು, ಶೈಕ್ಷಣಿಕ ವಿಶ್ವವಿದ್ಯಾನಿಲಯಗಳು (ಎಜ್ಯುಕೇಷನ್ ಇನ್ ಫಿನ್‌ಲ್ಯಾಂಡ್‌ನ್ನು ನೋಡಿ) ಬ್ಯಾಚುಲರ್'ಸ್ ಮತ್ತು ಮಾಸ್ಟರ್'ಸ್ ಹಂತಗಳ ನಡುವೆ ಯಾವುದೇ ಆಡಳಿತಾತ್ಮಕ ಭಿನ್ನತೆಯನ್ನು ಹೊಂದಿರಲಿಲ್ಲ, ಮತ್ತು ಮಾಸ್ಟರ್'ಸ್ ಹಂತದ diplomi-insinööri ಮೊದಲಬಾರಿಗೆ ಪಡೆದ ಪದವಿಯಾಗಿತ್ತು. ಬೊಲೊಗ್ನ ಪ್ರಕ್ರಿಯೆಯ ಪ್ರಯುಕ್ತ, ಮಧ್ಯಸ್ಥಾನದ "ಬ್ಯಾಚುಲರ್ ಆಫ್ ಸೈನ್ಸ್ ಇನ್ ಇಂಜಿನಿಯರಿಂಗ್" (tekniikan kandidaatti )ನ್ನು ಪರಿಚಯಿಸಲಾಯಿತು. ಅದಾಗ್ಯೂ, ಇವತ್ತಿಗೂ, ಸೈಕ್ಷಣಿಕ ವಿಶ್ವವಿದ್ಯಾನಿಲಯಗಳು ಎಎಮ್‌ಕೆ ಪದವಿಯನ್ನು ಶೈಕ್ಷಣಿಕ ಪ್ದವಿಗೆ ಸಮಾನವಾದುದು ಎಂದು ಪರಿಗಣಿಸುವುದಿಲ್ಲ, ಮತ್ತು ಅದಕ್ಕೆ ಅರ್ಧದಷ್ಟು ಗೌರವವನ್ನು ಮಾತ್ರ ನೀಡಲಾಗುತ್ತದೆ (180ಕ್ಕೆ 90 ಇಸಿಟಿಎಸ್).
ನೆದರ್ಲ್ಯಾಂಡ್ಸ್
[ಬದಲಾಯಿಸಿ]ನೆದರ್ಲ್ಯಾಂಡ್ಸ್ನಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್‌ನ್ನು ಜರ್ಮನಿಯ ಮಾದರಿಯಲ್ಲಿ ಬೊಲೊಗ್ನ ಪ್ರಕ್ರಿಯೆಯನ್ನು ಕಾರ್ಯರೂಪಕ್ಕೆ ತರುವುದರ ಭಾಗವಾಗಿ ಪರಿಚಯಿಸಲಾಯಿತು. ಪದವಿಯನ್ನು ಕೇವಲ ಡಟ್ಚ್ ಹೋಗೆಸ್ಕೂಲ್-ಸಂಸ್ಥೆಗಳಿಂದ ಮಾತ್ರ ಒದಗಿಸಲಾಗುತ್ತದೆ ಮತ್ತು ಇದು ಡಟ್ಚ್ ಇಂಜಿನಿಯರ'ರ ಪದವಿ "ingenieur" (ing.)ಗೆ ಸಮಾನವಾದುದಾಗಿದೆ. ಡಟ್ಚ್ BEng ನಾಲ್ಕು ವರ್ಷಗಳ ಕಟ್ಟುನಿಟ್ಟಿನ ಅಧ್ಯಯನಗಳನ್ನು ಒಳಗೊಂಡಿರುತ್ತದೆ ಮತ್ತು ಇದನ್ನು ಕೇವಲ ಏರೊನಾಟಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಸಾಫ್ಟ್‌ವೇರ್ ಇಂಜಿನಿಯರಿಂಗ್, ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಮಾತ್ರ ನೀಡಲಾಗುವುದು. ಅದಾಗ್ಯೂ, ಬ್ಯಾಚುಲರ್ ಆಫ್ ಅಪ್ಲೈಡ್ ಸೈನ್ಸ್ ಪದವಿಯೊಂದಿಗೆ, ಡಟ್ಚ್ ಇಂಜಿನಿಯರ'ರು ಬಯೊಕೆಮಿಕಲ್ ಇಂಜಿನಿಯರಿಂಗ್, ಬಯೊಮೆಡಿಕಲ್ ಇಂಜಿನಿಯರಿಂಗ್, ಕೆಮಿಕಲ್ ಇಂಜಿನಿಯರಿಂಗ್, ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್, ಮೆಟೇರಿಯಲ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಹ ಅಧ್ಯಯನವನ್ನು ಮುಕ್ತಾಯಗೊಳಿಸಿದ ಗೌರವವನ್ನು ನೀಡಲಾಗುವುದು. ಡಟ್ಚ್ ತಾಂತ್ರಿಕ ವಿಶ್ವವಿದ್ಯಾನಿಲಯಗಳು BEng ಪದವಿಯ ಬದಲಿಗೆ ಬ್ಯಾಚುಲರ್ ಆಫ್ ಸೈನ್ಸ್ ಇನ್ ಇಂಜಿನಿಯರಿಂಗ್ (BScEng) ಎಂಬ ಪದವಿಯನ್ನು ನೀಡುತ್ತವೆ.
ಭಾರತ
[ಬದಲಾಯಿಸಿ]ಭಾರತದಲ್ಲಿ, ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಬಿ.ಇ) ಅನ್ನುವುದು ಬಹುತೇಕ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಿಂದ ನೀಡಲಾಗುವ ಒಂದು ಪದವಿಯಾಗಿದೆ. ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ಇಂಜಿನಿಯರಿಂಗ್‌ನಲ್ಲಿ ನಾಲ್ಕು ವರ್ಷಗಳ ಕೋರ್ಸನ್ನು (ಎಂಟು ಸೆಮೆಸ್ಟೆರ್ಸ್ (ಆರು ತಿಂಗಳು ಕಾಲದ ಶಿಕ್ಷಣದ ಪದ್ಧತಿ)) ಪೂರ್ಣಗೊಳಿಸಿದ ವಿದ್ಯಾರ್ಧಿಗಳಿಗೆ ನೀಡಲಾಗುತ್ತದೆ. ಬಿ.ಇ ಯನ್ನು ಪ್ರವೇಶಿಸಲು 10+2 ವರ್ಷಗಳ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು ಅಥವಾ ಪ್ರೀ ಯುನಿವರ್ಸಿಟಿ ಕೋರ್ಸ್ ಅನ್ನು (ಪಿಯುಸಿ) ಪೂರ್ಣಗೊಳಿಸಿರಬೇಕು. ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ ಪಡೆದವರು ಸಹ ಬಿ.ಇ. ಪ್ರವೇಶಿಸಲು ಅರ್ಹರು, ಇಂಜಿನಿಯರಿಂಗ್ ಡಿಪ್ಲೊಮ ಪಡೆದವರು ಪದವಿ ಕೋರ್ಸನ್ನು, ವಿಷಯಗಳ ಅಧ್ಯಯನದಲ್ಲಿ ಸ್ವಲ್ಪ ಮಟ್ಟಿನ ರಿಯಾಯಿತಿಯನ್ನು ನೀಡುವ, ಪಾರ್ಶ್ವದ ಪ್ರವೇಶದ ಮೂಲಕ ಪ್ರವೇಶಿಸುತ್ತಾರೆ. ಭಾರತದಲ್ಲಿನ ಕೆಲವು ವಿಶ್ವವಿದ್ಯಾನಿಲಯಗಳು ಬಿ ಟೆಕ್ ಅನ್ನು ನೀಡುತ್ತವೆ; ಅದೇ ಇಂಜಿನಿಯರಿಂಗ್ ಕೋರ್ಸ್‌ಗೆ ಬಿ.ಇ ಬದಲಾಗಿ ಬ್ಯಾಚುಲರ್ ಆಫ್ ಟೆಕ್ನಾಲಜಿಯನ್ನು ನೀಡುತ್ತವೆ. ಏರೊನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಸಹ ಇದನ್ನು ನೀಡಲಾಗುತ್ತದೆ.ಭಾರತದಲ್ಲಿನ ಕೆಲವು ವಿಶ್ವವಿದ್ಯಾನಿಲಯಗಳು ಅದೇ ಕೋರ್ಸ್‌ಗೆ ಬಿಎಸ್‌ಸಿ(ಇಂಜಿನಿಯರಿಂಗ್)ನ್ನು ಸಹ ನೀಡುತ್ತವೆ ಇದು ಬಿಇ ಅಥವಾ ಬಿಟೆಕ್‌ಗೆ ಸಮಾನವಾದುದು, ಬಿ ಆರ್ ಅಂಬೇಡ್ಕರ್ ಬಿಹಾರ್ ಯುನಿವರ್ಸಿಟಿ, ವಿನೊಬಾ ಭಾವೆ ಯುನಿವರ್ಸಿಟಿ ಮತ್ತು ಮಗದ್ ಯುನಿವರ್ಸಿಟಿ ಮುಂತಾದವು್ ಇದಕ್ಕೆ ಉದಾಹರಣೆಗಳು.ಬಿ ಆರ್ ಅಂಬೇಡ್ಕರ್ ಬಿಹಾರ್ ಮತ್ತು ವಿನೊಬ ಭವೆ ಯುನಿವರ್ಸಿಟಿಗಳು ತಮ್ಮ ಪದವಿಯನ್ನು ಬಿಟೆಕ್‌ಗೆ ಬದಲಾಯಿಸಿವೆ, ಮಗದ್ ಯುನಿವರ್ಸಿಟಿ ಇನ್ನು ಸಹ ಬಿಎಸ್ಸಿ(ಇಂಜಿನಿಯರಿಂಗ್) ಪದವಿಯನ್ನೆ ನೀಡುತ್ತಿದೆ. B Sc.(ಇಂಜಿನಿಯರಿಂಗ್) ಬಿಇ ಅಥವಾ ಬಿಟೆಕ್‌ಗೆ ಸಮಾನವಾಗಿದೆ ಮತ್ತು ಎಮ್‌ಎಸ್‌ಸಿ.(ಇಂಜಿನಿಯರಿಂಗ್) ಎಮ್‌ಇ ಅಥವಾ ಎಮ್‌ಟೆಕ್‌ಗೆ ಸಮಾನವಾಗಿದೆ.
ಪಾಕಿಸ್ತಾನ
[ಬದಲಾಯಿಸಿ]ಪಾಕಿಸ್ತಾನದಲ್ಲಿ, ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ವಿವಿಧ ಹೆಸರುಗಳೊಂದಿಗೆ (B.Sc. Engg. / B.S. Engg. / ಬಿ.ಇ.) ವಿವಿಧ ಅಧ್ಯಯನ ವಿಭಾಗಗಳಲ್ಲಿ ಬಹುತೇಕ ವಿಶ್ವವಿದ್ಯಾನಿಲಯಗಳಿಂದ/ಸಂಸ್ಥೆಗಳಿಂದ ನೀಡಲಾಗುತ್ತದೆ. ಎಂಟು ಸೆಮೆಸ್ಟರುಗಳನ್ನು ಒಳಗೊಂಡಿದ್ದ, ನಾಲ್ಕು ವರ್ಷಗಳ ಇಂಜಿನಿಯರಿಂಗ್ ಕೋರ್ಸನ್ನು ಪೂರ್ಣಗೊಳಿಸಿದ ವಿದ್ಯಾರ್ಧಿಗೆ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ನೀಡಲಾಗುವುದು. ಇಂಜಿನಿಯರಿಂಗ್ ಪದವಿಗೆ ಪ್ರವೇಶವನ್ನು 12 ವರ್ಷಗಳ ಶಾಲಾಶಿಕ್ಷಣದ ನಂತರವಷ್ಟೆ ನೀಡಲಾಗುವುದು. ಮೊದಲು ವಿದ್ಯಾರ್ಧಿಗಳು ಪ್ರವೇಶ ಪರೀಕ್ಷೆಗೆ ಒಳಪಡಬೇಕಾಗುತ್ತದೆ ಮತ್ತು ಇಂಟರ್ಮೀಡಿಯೇಟ್ (HSSC / F.Sc. ಇಂಜಿನಿಯರಿಂಗ್ ಪೂರ್ವದ) ಅಂಕಗಳನ್ನು ಮತ್ತು ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವುದರಿಂದ ಅಂತಿಮ ಮೌಲ್ಯೀಕರಣವನ್ನು ಮಾಡಲಾಗುತ್ತದೆ. ಸಂಬಂಧಿಸಿದ ಇಂಜಿನಿಯರಿಂಗ್‌ನ (D.A.E.) ಮೂರು ವರ್ಷಗಳ ಡಿಪ್ಲೊಮ ಹೊಂದಿದ್ದ ವಿದ್ಯಾರ್ಧಿಗಳು ಸಹ ಪ್ರವೇಶ ಪರೀಕ್ಷೆಗೆ ಹಾಜರಾಗಬಹುದಾಗಿದೆ, ಮತ್ತು ಉಳಿದ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ದೇಶದ ಇತ್ತೀಚಿನ ಟೆಲಿಕಮ್ಯುನಿಕೇಷನ್ ಮಾರ್ಕಟ್ಟೆಯ ಬೆಳವಣಿಗೆಯ ಕಾರಣದಿಂದ, ವಿದ್ಯಾರ್ಧಿಗಳು ಟೆಲಿಕಮ್ಯುನಿಕೇಷನ್ ಇಂಜಿನಿಯರುಗಳಾಗಲು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಪಾಕಿಸ್ತಾನ್ ಇಂಜಿನಿಯರಿಂಗ್ ಕವ್‌ನ್ಸಿಲ್ (PEC), ಪಾಕಿಸ್ತಾನದಲ್ಲಿನ ಇಂಜಿನಿಯರಿಂಗ್ ವೃತ್ತಿಯ ವ್ಯವಸ್ತಿತವಾದ ಸಂಸ್ಥೆಯಾಗಿದ್ದು, ಇದು ದಾಖಲಿಸುತ್ತದೆ ಮತ್ತು ನಿಯುಕ್ತವಾದ ಇಂಜನಿಯರಿಂಗ್ ಪ್ರೋಗ್ರಾಮ್‌ಗಳನ್ನು ಒದಗಿಸುವ ವಿಶ್ವವಿದ್ಯಾನಿಲಯಗಳಲ್ಲಿ/ಸಂಸ್ಥೆಗಳಲ್ಲಿ ಇಂಜಿನಿಯರಿಂಗ ಅಭ್ಯಾಸವನ್ನು ಪುರ್ಣಗೊಳಿಸಿದ ವಿದ್ಯಾರ್ಧಿಗಳಿಗೆ ಮಾತ್ರ ಇದು ದಾಖಲಾತಿ ಪ್ರಮಾಣಪತ್ರಗಳನ್ನು ನೀಡುತ್ತದೆ, ಮತ್ತು ಇದರಿಂದ ಅವರನ್ನು ಪ್ರಾಮಾಣಿಕ ವೃತ್ತಪರ ಇಂಜಿನಿಯರುಗಳಾಗಿದ್ದು, ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಯಾವುದೇ ವೃತ್ತಿಪರ ಇಂಜಿನಿಯರಿಂಗ್ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಸಾಧಾರಣವಾಗಿ ತಮ್ಮ ಹೆಸರಿನೊಂದಿಗೆ ಉಪಸರ್ಗ (Engr.)ನ್ನು ಉಪಯೋಗಿಸುವ ಮತ್ತು (R.E. / P.E.) ನಾಮಧೇಯಗಳನ್ನು ವಿಶೇಷವಾಗಿ ದಾಖಲಾತಿಯ ಸಾಂಕೇತಿಕವಾಗಿ ಉಪಯೋಗಿಸುವ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ದೃಡಪಡಿಸುತ್ತದೆ. ಇಂಜಿನಿಯರುಗಳನ್ನು ಎರಡು ಪಂಗಡಗಳಲ್ಲಿ ದಾಖಲಿಸಲಾಗುತ್ತದೆ ಅರ್ಥಾತ್: ರೆಜಿಸ್ಟರ್ಡ್ ಇಂಜಿನಿಯರ್ (R.E.) & ಪ್ರೊಫೆಷನಲ್ ಇಂಜಿನಿಯರ್ (P.E.). ಪದವಿಯನ್ನು ಪಡೆದ ಇಂಜಿನಿಯರುಗಳನ್ನು ರೆಜಿಸ್ಟರ್ಡ್ ಇಂಜಿನಿಯರುಗಳಾಗಿ ದಾಖಲಿಸಲಾಗುವುದು ಮತ್ತು ಪದವಿಯ ನಂತರದ 5 ವರ್ಷಗಳ ಅವಧಿಯ ಅನುಭವವು ಅವರು PEC ದಾಖಲಾತಿಯಲ್ಲಿ ಪ್ರೊಫೆಷನಲ್ ಇಂಜಿನಿಯರ್ ಎಂದು ದಾಖಲಿಸುಕೊಳ್ಳುವಂತೆ ಮಾಡುತ್ತದೆ.
ಶ್ರೀಲಂಕಾ
[ಬದಲಾಯಿಸಿ]ಇವನ್ನೂ ನೋಡಿ
[ಬದಲಾಯಿಸಿ]- ಬ್ಯಾಚುಲರ್ ಪದವಿ
- ಬ್ಯಾಚುಲರ್ ಆಫ್ ಅಪ್ಲೈಡ್ ಸೈನ್ಸ್
- ಬ್ಯಾಚುಲರ್ ಆಫ್ ಸೈನ್ಸ್ ಇನ್ ಇನ್‌ಫಾರ್ಮೇಷನ್ ಟೆಕ್ನಾಲಜಿ
- ಇಂಜಿನಿಯರ್ಸ್ ಪದವಿ
- ಮಾಸ್ಟರ್ ಆಫ್ ಇಂಜಿನಿಯರಿಂಗ್ (ಎಮ್.ಇ. ಅಥವಾ ಎಮ್‌ಇಂಜ್)
- ವೃತ್ತಿಪರ ವಿಶ್ವವಿದ್ಯಾಲಯ
ಉಲ್ಲೇಖಗಳು
[ಬದಲಾಯಿಸಿ]- ↑ http://www.tcd.ie/Engineering/welcome/index.php
- ↑ "ಆರ್ಕೈವ್ ನಕಲು". Archived from the original on 2010-05-05. Retrieved 2010-11-08.