ಬ್ಯಾರಿ ಭಾಷೆ
ಬ್ಯಾರಿ ಭಾಷೆಯು ಮಂಗಳೂರು, ಪುತ್ತೂರುಹಾಗೂ ಸುತ್ತಮುತ್ತಲಿನ ಪ್ರದೇಶದ ಮುಸ್ಲಿಮರ ಆಡು ಭಾಷೆಯಾಗಿದೆ. ಬ್ಯಾರಿ ಭಾಷೆಯು ತುಳು, ಮಲಯಾಳಂ,ಕನ್ನಡ, ತಮಿಳು, ಅರಬ್ಬಿ ಹಾಗೂ ಹಿಂದಿ ಭಾಷೆಯ ಶಬ್ದಗಳನ್ನೊಳಗೊಂಡಿದೆ. ಬರವಣಿಗೆಗೆ ಬ್ಯಾರಿ ಭಾಷೆಯಲ್ಲಿ ಕನ್ನಡ ಲಿಪಿಯನ್ನು ಉಪಯೊಗಿಸಲಾಗಿದೆ ಹಾಗೂ ವ್ಯಾಕರಣದಲ್ಲಿ ತುಳು ಭಾಷೆಯನ್ನು ಹೋಲುತ್ತದೆ. ಬ್ಯಾರಿ ಎನ್ನುವುದು ಸಮುದಾಯ ಸೂಚಕ ಪದಕವಾಗಿದ್ದು ಮುಂದೆ ಅವರು ಮಾತನಾಡುವ ಭಾಷೆ ಬ್ಯಾರಿ ಭಾಷೆಯಾಗಿ ಕರೆಯಲ್ಪಟ್ಟಿತ್ತು. ಮಲಾಮೆ ಭಾಷೆಯೂ ಕೂಡ ಬ್ಯಾರಿ ಭಾಷೆಯ ಸೋದರ ಭಾಷೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಕಡೆಗಳಲ್ಲಿ ಮಾತನಾಡುತ್ತಾರೆ[೧]
ಬ್ಯಾರಿ ಸಮುದಾಯಕ್ಕೆ ತುಳುನಾಡಿನಲ್ಲಿ 1200 ವರ್ಷಗಳ ಇತಿಹಾಸವಿದೆ. 1891ರ ಜನಗಣತಿಯ ಪ್ರಕಾರ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ 90,345 ಬ್ಯಾರಿ ವ್ಯಾಪಾರಿಗಳಿದ್ದರೆಂದೂ ಹಾಗೂ 2011ರ ಜನಗಣತಿಯ ಅಂದಾಜು ಲೆಕ್ಕದಲ್ಲಿ 10ಲಕ್ಷ ಬ್ಯಾರಿ ಸಮುದಾಯದವರಿದ್ದಾರೆಂದು ದಾಖಲಾಗಿದೆ. ಮಂಗಳೂರಿನಲ್ಲಿ ಕರ್ನಾಟಕ ಬ್ಯಾರಿಭಾಷೆ ಸಾಹಿತ್ಯ ಅಕಾಡೆಮಿಯನ್ನು 2007ರಲ್ಲಿ ಸ್ಥಾಪಿಸಲಾಯಿತು.
ಬ್ಯಾರಿ ಪದ ನಿಷ್ಪತ್ತಿ
[ಬದಲಾಯಿಸಿ]ಸಂಸ್ಕೃತ ಭಾಷೆಯ ‘ವ್ಯವಹಾರಿನ್’ ಶಬ್ದದ ತದ್ಭವವೆ ‘ಬೇಹಾರಿ’. ‘ವ್ಯಾಪಾರ’ ಎಂಬ ಪದಕ್ಕೆ ತುಳುವಿನಲ್ಲಿ ‘ಬೇರ’ ಎಂಬ ಅರ್ಥವಿದೆ. ವ್ಯವಹಾರಿನ್>ಬೇಹಾರಿ>ಬೇರ>ಬ್ಯಾರಿ ಎಂಬ ರೂಪ ಪಡೆದಿರಬೇಕು. ಮಲಯಾಳಿ ಮಾತನಾಡುವ ಮುಸ್ಲಿಮರನ್ನು ಸುಳ್ಯದ ಕಡೆಯ ತುಳುವರು ‘ಮಾಪ್ಲೆ’ ಎಂದು ಕರೆಯುತ್ತಾರೆ.[೨]
ತುಳು,ಕನ್ನಡ ಭಾಷೆಯೊಂದಿಗೆ ಬ್ಯಾರಿ ಭಾಷೆಯ ಪದಗಳು
[ಬದಲಾಯಿಸಿ]ಬ್ಯಾರಿ ಭಾಷೆಯನ್ನು ತುಳುನಾಡಿನಲ್ಲಿ ಮಾತ್ರ ಆಡುತ್ತಾರೆ. ತೋರಿಕೆಗೆ ಬ್ಯಾರಿಭಾಷೆಯು ಮಲೆಯಾಳಿಯ ಉಪಭಾಷೆಯಂತಿದ್ದರೂ ಈ ಭಾಷೆಯಲ್ಲಿ ಶೇ.50ರಷ್ಟು ತುಳುವಿನ ಪದಗಳಿವೆ. ಆದುದರಿಂದ ಬ್ಯಾರಿಭಾಷೆಯನ್ನು ತುಳುಭಾಷೆಯ ಉಪಭಾಷೆಯೆಂದು ಕರೆಯುತ್ತಾರೆ. ಬ್ಯಾರಿ ತುಳು ಮತ್ತು ಕನ್ನಡ ಭಾಷೆಯ ಕೆಲವು ಸಮಾನಾರ್ಥ ಪದಗಳು ಹೀಗಿವೆ;
ಬ್ಯಾರಿ | ತುಳು | ಕನ್ನಡ |
---|---|---|
ಉಂಡು | ಉಂಡು | ಉಂಟು/ಇದೆ |
ಒಟ್ಟೆ | ಒಟ್ಟೆ | ತೂತು |
ಪುಂಡಿ | ಪುಂಡಿ | ಕಡುಬು |
ಪೊಡಿ | ಪೊಡಿ | ನಶ್ಯ |
ಬೀಲ | ಬೀಲ | ಬಾಲ |
ಬ್ಯಾರಿ ಭಾಷೆಯ ಸರ್ವನಾಮ, ಲಿಂಗ ಮತ್ತು ವಚನಗಳು
[ಬದಲಾಯಿಸಿ]ಪುರುಷವಾಚಕ | ಲಿಂಗ | ಏಕವಚನ | ಬಹುವಚನ |
---|---|---|---|
ಪ್ರಥಮಾ | ಪುಲ್ಲಿಂಗ | ಅಂವೊ/ಅವ್ನು >ಅವನು | ಅವೊರು/ಅಯ್ಯಲ್>ಅವರು |
ಸ್ತ್ರೀಲಿಂಗ | ಅವೊ/ಅವ್ಲು>ಅವಳು | ಅಯಿಮಾ>ಅವರು | |
ನಪುಂಸಕಲಿಂಗ | ಅದು>ಅದು | ಅದ್>ಅವು | |
ಮಧ್ಯಮ | ಪುಲ್ಲಿಂಗ | ನೀ/ನೀನ್>ನೀನು | ನಿಙಳ್/ನಿಙ>ನೀವು |
ಸ್ತ್ರೀಲಿಂಗ | ನೀ/ನೀನ್>ನೀನು | ನಿಙಳ್/ನಿಙ>ನೀವು | |
ಉತ್ತಮ | ಪುಲ್ಲಿಂಗ | ನಾಞ್/ನಾನ್>ನಾನು ನಙಳ್/ನಙ>ನಾ | |
ಸ್ತ್ರೀಲಿಂಗ | ನಾಞ್/ನಾನ್>ನಾನು ನಙಳ್/ನಙ>ನಾವು |
ಬ್ಯಾರಿ ಭಾಷೆಯ ವಾಕ್ಯರಚನೆಗಳು
[ಬದಲಾಯಿಸಿ]ಪುಲ್ಲಿಂಗ | ಅವನು ಹುಡುಗ > ಅವ್ನು ಆನ್ (ಏ.ವ.) – ಅವರು ಹುಡುಗರು > ಅಙ ಎಲ್ಲಾ ಆಣ್ ಮಕ್ಕ (ಬ.ವ.) ನೀನು ದೊಡ್ಡವನು > ನಾನ್ ಬೆಳಿಯವುನೆ; ಅವರೆಲ್ಲ ಗಂಡಸರು > ಅಙ ಎಲ್ಲಾ ಆಣಿಙ |
---|---|
ಸ್ತ್ರೀಲಿಂಗ | ಅವಳು ಹುಡುಗಿ > ಅವ್ಲು ಪೆಣ್ಣ್ (ಏ.ವ.) – ಅವರು ಹುಡುಗಿಯರು > ಅಙ ಎಲ್ಲಾ ಪೆಣ್ಣ್ ಮಕ್ಕ (ಬ.ವ.) ನೀನ್ ದೊಡ್ಡವಳು > ನೀನ್ ಬೆಳಿಯವುಳ್; ಅವರೆಲ್ಲ ಹೆಂಗಸರು > ಅಂಙ ಎಲ್ಲಾ ಪೆಣ್ಣ್‍ಙ |
ನಪುಸಂಕಲಿಂಗ | ಅದು ನಾಯಿ > ಅದ್ ನಾಯಿ (ಏ.ವ.) _ ಅವು ನಾಯಿ > ಅದೆಲ್ಲಾ ನಾಯಿ (ಬ.ವ.) |
ಬ್ಯಾರಿ ಭಾಷೆಯಲ್ಲಿ ಸಂಖ್ಯಾವಾಚಕ
[ಬದಲಾಯಿಸಿ]ಬ್ಯಾರಿ | ತುಳು | ಕನ್ನಡ |
---|---|---|
ಒನ್ನ್ | ಒಂಜಿ | ಒಂದು |
ಜಂಡ್ | ರಡ್ಡ್ | ಎರಡು |
ಮೂನ್ | ಮೂಜಿ | ಮೂರು |
ನಾಲ್ | ನಾಲ್ | ನಾಲ್ಕು |
ಅಂಜಿ | ಐನ್ | ಐದು |
ಆರ್ | ಆಜಿ | ಆರು |
ಏಳ್ | ಏಳ್ | ಏಳು |
ಎಟ್ಟ್ | ಎಡ್ಮೊ/ಎನ್ಮೊ | ಎಂಟು |
ಒಲಿಂಬೊ | ಒರುಂಬೊ | ಒಂಬತ್ತು |
ಪತ್ತ್ | ಪತ್ತ್ | ಹತ್ತು |
ಪೋನೊನ್ನು | ಪತ್ತೊಂಜಿ | ಹನ್ನೊಂದು |
ಪಂಞಂಡ್ | ಪದ್ರಾಡ್ | ಹನ್ನೆರಡು |
ಪಯಿಮೂನ್ | ಪದಿಮೂಜಿ | ಹದಿಮೂರು |
ಪೌನಾಲ್ | ಪದಿನಾಲ್ | ಹದಿನಾಲ್ಕು |
ಪೌನಂಜಿ | ಪದಿನೈನ್ | ಹದಿನೈದು |
ಪೌನಾರ್ | ಪದಿನಾಜಿ | ಹದಿನಾರು |
ಪೌನೇಳ್ | ಪದಿನೇಳ್ | ಹದಿನೇಳು |
ಪತ್ತೊಲಿಂಬೊ | ಪದ್‌ನೊರುಂಬೊ | ಹತ್ತೊಂಬತ್ತು |
ಇರಿಯೊ | ಇರುವೊ | ಇಪ್ಪತ್ತು |
ಇರಿಯತ್ತೊನ್ನು | ಇರ್‌ವತ್ತೊಂಜಿ | ಇಪ್ಪತ್ತೊಂದು |
ನುಪ್ಪೊ | ಮುಪ್ಪೊ | ಮೂವತ್ತು |
ನಾಪೊ | ನಲ್ಪೊ | ನಲುವತ್ತು |
ಐಂಬೊ | ಐವೊ | ಐವತ್ತು |
ಅರುವೊ | ಅಜಿಪ್ಪೊ | ಅರುವತ್ತು |
ಎಲ್ವೊ | ಎಲ್ಪೊ | ಎಪ್ಪತ್ತು |
ಎಂಬೊ ಎನ್ಪೊ | ಎಂಬತ್ತು | |
ತೊಂಬೊ | ಸೊನ್ಪೊ | ತೊಂಬತ್ತು |
ಇರ್ನೂರು | ಇರ್ನೂದು | ಇನ್ನೂರು |
ಮುನ್ನೂರು | ಮುನ್ನೂದು | ಮುನ್ನೂರು |
ನಾಲ್ನೂರು | ನಾನೂದು | ನಾಲ್ಕುನೂರು |
ಅಂಞೂರು | ಐನೂದು | ಐನೂರು |
ಆರ್‍ನೂರು | ಆಜಿನೂದು | ಆರುನೂರು |
ಏಳ್‍ನೂರು | ಏಳ್‍ನೂದು | ಏಳುನೂರು |
ಎಟ್ಟ್‌ನೂರು | ಎನ್ಮೊನೂದು | ಎಂಟುನೂರು |
ಒಲಿಂಬನೂರು | ಒರ್‍ಂಬೊನೂದು | ಒಂಬೈನೂರು |
ಆಯಿರ | ಸಾವಿರೊ | ಸಾವಿರ |
ಆಯಿರತ್ತಿ ಒನ್ನು | ಸಾವಿರತ್ತೊಂಜಿ | ಸಾವಿರದ ಒಂದು |
ಬ್ಯಾರಿ ಭಾಷೆಯಲ್ಲಿ ಸಂಬಂಧವಾಚಕ
[ಬದಲಾಯಿಸಿ]- ಅಪ್ಪ-ಅಬ್ಬ;
- ಅಮ್ಮ–ಉಮ್ಮಾ;
- ಅಜ್ಜ-ಬೊಬ;
- ಅಜ್ಜಿ-ಅಜ್ಜಿಉಮ್ಮಾ;
- ಚಿಕ್ಕಪ್ಪ-ಕುಂಞಬ್ಬ,
- ಚಿಕ್ಕಮ್ಮ-ಕುಞïಮಾ;
- ದೊಡ್ಡಪ್ಪ-ಮೂತಬ್ಬ;
- ದೊಡ್ಡಮ್ಮ-ಮೂತಮಾ;
- ಮಾವ-ಕಾಕ;
- ಅತ್ತೆ-ಮಾಮಿ;
- ಗಂಡ-ಮಾಪುಳೆ;
- ಹೆಂಡತಿ-ಪೆಞಯಿ;
- ಅಣ್ಣ-ಮೂತೋನು;
- ಅತ್ತಿಗೆ- ;
- ಅಕ್ಕ-ದಾದ;
- ಬಾವ-;
- ತಂಗಿ-ಎಲೆಲು;
- ತಮ್ಮ-ಎಲೆನು,
- ಮೈದುನ- ;
- ನಾದಿನಿ- ;
- ಮೊಮ್ಮಗ-;
- ಮುತ್ತಜ್ಜ-;