ವಿಷಯಕ್ಕೆ ಹೋಗು

ಬ್ರಹ್ಮಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಈ ಪುಟದಲ್ಲಿರುವ ಲೇಖನವು ಯುದ್ಧಕಾಲದ ಅಸ್ತ್ರಗಳಲ್ಲೊಂದಾದ 'ಬ್ರಹ್ಮಾಸ್ತ್ರ'ದ ಬಗ್ಗೆ ಕುರಿತದ್ದು.

ನೀವು ಇದೇ ಹೆಸರಿನ ಚಲನಚಿತ್ರದ ಬಗ್ಗೆ ವಿವರಣೆ ಬಯಸಿದ್ದರೆ ಬ್ರಹ್ಮಾಸ್ತ್ರ (ಚಲನಚಿತ್ರ) ನೋಡಿರಿ.


ಬ್ರಹ್ಮಾಸ್ತ್ರವು ಭಾರತೀಯ ಪುರಾಣಗಳಲ್ಲಿ ಪದೇ ಪದೇ ಕೇಳಿಬರುವ ಅಸ್ತ್ರದ ಹೆಸರಾಗಿದೆ.

ಸೃಷ್ಟಿಕರ್ತನಾದ ಬ್ರಹ್ಮನಿಂದ ಆವಿಷ್ಕರಿಸಲ್ಪಟ್ಟ ಬ್ರಹ್ಮಾಸ್ತ್ರವು ಅಸ್ತ್ರಸಂಕುಲದಲ್ಲಿಯೇ ಅತ್ಯಂತ ಬಲಿಷ್ಟ ಮತ್ತು ಕೊನೆಯ ಅಸ್ತ್ರವಾಗಿದೆಯೆಂದು ಭಾವಿಸಲಾಗುತ್ತದೆ. ಆದರೆ ಕೇವಲ ಧರ್ಮ ಮತ್ತು ಸತ್ಯವನ್ನು ಹಿಡಿದೆತ್ತುವದಕ್ಕಾಗಿ ಮತ್ತು ಅತ್ಯಂತ ಕ್ಲಿಷ್ಟ ಸಂದರ್ಭಗಳಲ್ಲಿ ಮಾತ್ರ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಬೇಕೆಂಬ ನೀತಿಸಂಹಿತೆಯಿದೆ. ರಾಮಾಯಣದಲ್ಲಿ ರಾಮ ರಾಕ್ಷಸನಾದ ರಾವಣನ ಮೇಲೆ ಮತ್ತು ಮಹಾಭಾರತದಲ್ಲಿ ಅರ್ಜುನ ಕೌರವ ಸೈನ್ಯದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದನ್ನು ಓದಬಹುದಾಗಿದೆ.