ವಿಷಯಕ್ಕೆ ಹೋಗು

ಬ್ರಹ್ಮ ಮಂದಿರ, ಪುಷ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಷ್ಕರ್‌ನಲ್ಲಿರುವ ಬ್ರಹ್ಮ ಮಂದಿರ

ಜಗತ್‍ಪಿತಾ ಬ್ರಹ್ಮ ಮಂದಿರ ಭಾರತದ ರಾಜಸ್ಥಾನ ರಾಜ್ಯದ ಪುಷ್ಕರ್‌ನಲ್ಲಿ ಸ್ಥಿತವಾಗಿರುವ ಒಂದು ಹಿಂದೂ ದೇವಾಲಯವಾಗಿದೆ. ಇದು ಪವಿತ್ರ ಪುಷ್ಕರ್ ಸರೋವರದ ಹತ್ತಿರವಿದೆ. ಇದರ ದಂತಕಥೆಯು ಈ ಸರೋವರದೊಂದಿಗೆ ಅಚ್ಚಳಿಯದ ಸಂಪರ್ಕವನ್ನು ಹೊಂದಿದೆ. ಈ ದೇವಾಲಯವು ಭಾರತದಲ್ಲಿ ಹಿಂದೂ ಸೃಷ್ಟಿಕರ್ತ-ದೇವರಾದ ಬ್ರಹ್ಮನಿಗೆ ಸಮರ್ಪಿತವಾದ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಅವುಗಳಲ್ಲಿ ಪ್ರಮುಖವಾದದ್ದು.

ದೇವಾಲಯದ ರಚನೆಯು 14 ನೇ ಶತಮಾನಕ್ಕೆ ಸೇರಿದ್ದೆಂದು ಕಾಲನಿರ್ಧಾರ ಮಾಡಲಾಗಿದೆ. ಭಾಗಶಃ ನಂತರ ಮರುನಿರ್ಮಿಸಲಾಗಿದೆ. ದೇವಾಲಯವು ಅಮೃತಶಿಲೆ ಮತ್ತು ಕಲ್ಲಿನ ಚಪ್ಪಡಿಗಳಿಂದ ರಚಿಸಲ್ಪಟ್ಟಿದೆ. ಇದು ವಿಶಿಷ್ಟವಾದ ಕೆಂಪು ಶಿಖರ ಮತ್ತು ಹಂಸ ಪಕ್ಷಿಯ ಅಲಂಕಾರಿಕ ಸಂಕೇತವನ್ನು ಹೊಂದಿದೆ. ದೇವಾಲಯದ ಗರ್ಭಗೃಹವು ನಾಲ್ಕು ತಲೆಯ ಬ್ರಹ್ಮ ಮತ್ತು ಅವನ ಪತ್ನಿ ಗಾಯತ್ರಿ (ವೇದಗಳ ದೇವತೆ) ಯ ವಿಗ್ರಹವನ್ನು ಹೊಂದಿದೆ. ಈ ದೇವಾಲಯದ ಆಡಳಿತವನ್ನು ಸನ್ಯಾಸಿ (ತಪಸ್ವಿ) ಪಂಥದ ಪುರೋಹಿತಶಾಹಿಯು ನಿರ್ವಹಿಸುತ್ತದೆ.[] ಕಾರ್ತಿಕ ಪೂರ್ಣಿಮೆಯಂದು ಬ್ರಹ್ಮನಿಗೆ ಸಮರ್ಪಿತವಾದ ಹಬ್ಬವನ್ನು ಆಚರಿಸಲಾಗುತ್ತದೆ. ಆಗ ಹೆಚ್ಚಿನ ಸಂಖ್ಯೆಯ ಯಾತ್ರಿಕರು ಪವಿತ್ರ ಸರೋವರದಲ್ಲಿ ಸ್ನಾನ ಮಾಡಿದ ನಂತರ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಬ್ರಹ್ಮ ದೇವಾಲಯದ ಮಂಟಪ
ಎಡಕ್ಕೆ: ಪುಷ್ಕರ್‌ನ ಬ್ರಹ್ಮ ಮಂದಿರದ ಮುಂಭಾಗ. ಬಲಕ್ಕೆ: ಪುಷ್ಕರ್‌ನ ಬ್ರಹ್ಮ ಮಂದಿರದೊಳಗೆ ಬ್ರಹ್ಮನ ವಿಗ್ರಹ
ಪುಷ್ಕರ್ ಸರೋವರದಲ್ಲಿ ಸ್ನಾನ ಮಾಡುತ್ತಿರುವ ಯಾತ್ರಿಕರು. ಹಿನ್ನೆಲೆಯಲ್ಲಿ ಸಾವಿತ್ರಿ ದೇವಾಲಯವಿದೆ

ಉಲ್ಲೇಖಗಳು

[ಬದಲಾಯಿಸಿ]
  1. "Temple Profile: Mandir Shri Brahma Ji". Devasthan Department, Govt of Rajasthan. 2001–2002. Archived from the original on 13 February 2011. Retrieved 31 January 2010.


ಹೊರಗಿನ ಕೊಂಡಿಗಳು

[ಬದಲಾಯಿಸಿ]