ಬ್ರಿಟಿಷ್ ಭಾರತೀಯ ಸೇನೆ
This article includes a list of references, but its sources remain unclear because it has insufficient inline citations. (August 2009) |
- ಸ್ವಾತಂತ್ರ್ಯಾನಂತರದ (ಮತ್ತು ವಿಭಜನಾ ನಂತರದ) ಭಾರತ ಗಣರಾಜ್ಯದ ಸೇನೆಯ ಬಗ್ಗೆ ಭಾರತೀಯ ಸೇನೆಯನ್ನು ಮತ್ತು ಸ್ವಾತಂತ್ರ್ಯಾನಂತರದ ಪಾಕಿಸ್ತಾನದ ಸೇನೆಯ ಬಗ್ಗೆ ಪಾಕಿಸ್ತಾನ ಸೇನೆಯನ್ನು ನೋಡಿ
೧೯೪೭ರಲ್ಲಿ ಭಾರತದ ವಿಭಜನೆಯಾಗುವುದಕ್ಕಿಂತ ಮುನ್ನ ಬ್ರಿಟಿಷ್ ಭಾರತೀಯ ಸೇನೆ ಯು ಭಾರತದಲ್ಲಿನ ಬ್ರಿಟಿಷ್ ರಾಜ್ನ/ಆಡಳಿತದ ಪ್ರಧಾನ ಸೇನೆಯಾಗಿತ್ತು. ಇದನ್ನು ಬ್ರಿಟಿಷ್ ಭಾರತೀಯ ಸೇನೆ ಎಂಬ ಅಂಕಿತದಿಂದ ನಿಯುಕ್ತಗೊಳಿಸಿರಲಿಲ್ಲ ಬದಲಿಗೆ ಭಾರತೀಯ ಸೇನೆ ಎಂದೇ ಅಂಕಿತಗೊಳಿಸಲಾಗಿತ್ತು ಹಾಗೂ ಸ್ಪಷ್ಟ ಐತಿಹಾಸಿಕ ಸಂದರ್ಭವನ್ನು ಹೊಂದಿದ್ದ ಯಾವುದಾದರೂ ಲೇಖನ ಇಲ್ಲವೇ ಗ್ರಂಥದಲ್ಲಿ ಇದನ್ನು ಭಾರತೀಯ ಸೇನೆ ಎಂದೇ ಉಲ್ಲೇಖಿಸಲಾಗುತ್ತದೆ. ಭಾರತೀಯ ಸೇನೆಯು ಬ್ರಿಟಿಷ್ ಸೇನಾಪಡೆಗೆ ಅತ್ಯಗತ್ಯವಾದ ಅಧೀನ ಸೇನೆಯೆಂದು ಕೇವಲ ಭಾರತದಲ್ಲಿ ಮಾತ್ರವಲ್ಲದೇ ಇತರೆ ರಾಷ್ಟ್ರಗಳಲ್ಲಿ ಕೂಡಾ, ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಪ್ರಥಮ ಹಾಗೂ ದ್ವಿತೀಯ ವಿಶ್ವ ಸಮರಗಳ ಅವಧಿಯಲ್ಲಿ ಸಾಬೀತುಪಡಿಸಿತು.
ಭಾರತದಲ್ಲಿ, ಈ ಸೇನೆಯು ನೇರ ಬ್ರಿಟಿಷ್ ಆಡಳಿತ/ಅಧಿಪತ್ಯಕ್ಕೆ (ಭಾರತದ ಅಧೀನ ಸಂಸ್ಥಾನಗಳು, ಅಥವಾ ಸಂಗ್ರಹವಾಗಿ, ಬ್ರಿಟಿಷ್ ಭಾರತ) ಒಳಪಟ್ಟಿದ್ದ ಪ್ರದೇಶಗಳು ಮಾತ್ರವಲ್ಲದೇ ಬ್ರಿಟಿಷ್ ಸಾರ್ವಭೌಮತ್ವಕ್ಕೆ (ರಾಜಾಡಳಿತಕ್ಕೆ ಒಳಪಟ್ಟ ಸಂಸ್ಥಾನಗಳು) ಒಳಪಟ್ಟ ಪ್ರದೇಶಗಳ ರಕ್ಷಣೆಯ ಜವಾಬ್ದಾರಿಯನ್ನು ಕೂಡಾ ಹೊತ್ತಿತ್ತು.[೧]
"ಭಾರತೀಯ ಸೇನೆ" ಎಂದು ಅಧಿಕೃತವಾಗಿ ಕರೆಯಲ್ಪಟ್ಟ ಮೊದಲ ಸೇನಾಪಡೆಯನ್ನು ಭಾರತದ ಸರ್ಕಾರವು ೧೮೯೫ರಲ್ಲಿ, (ಬಂಗಾಳ ಸೇನೆ, ಮದ್ರಾಸು ಸೇನೆ ಮತ್ತು ಬಾಂಬೆ ಸೇನೆ) ದೀರ್ಘ ಕಾಲದ ಹಿಂದೆಯೇ ಸ್ಥಾಪಿಸಲ್ಪಟ್ಟಿದ್ದ ಬ್ರಿಟಿಷ್ ಭಾರತದ ಅಧೀನ ಪ್ರಾಂತ್ಯಗಳ ಮೂರು ಪ್ರಾಂತೀಯ ಸೇನಾಪಡೆಗಳ ಜೊತೆಜೊತೆಗೆ ಸ್ಥಾಪಿಸಿತು. ಆದಾಗ್ಯೂ, ೧೯೦೩ರಲ್ಲಿ ಭಾರತೀಯ ಸೇನೆಯು ಈ ಮೂರೂ ಸೇನಾಪಡೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿತು.
"ಭಾರತೀಯ ಸೇನೆ" ಎಂಬ ಪದಪುಂಜವನ್ನು ಕೆಲವೊಮ್ಮೆ ಹಿಂದಿನ ಅಧೀನ ಪ್ರಾಂತ್ಯಗಳೆಲ್ಲದರ ಸೇನಾಪಡೆಗಳನ್ನು ಸಮಗ್ರವಾಗಿ ಹೆಸರಿಸಲು ಕೂಡಾ ಅದರಲ್ಲೂ ನಿರ್ದಿಷ್ಟವಾಗಿ ಭಾರತೀಯ ಸೈನಿಕ ದಂಗೆ/ಸ್ವಾತಂತ್ರ್ಯ ಸಂಗ್ರಾಮದ ನಂತರ ಬಳಸಲಾಗುತ್ತಿತ್ತು. ಭಾರತೀಯ ಸೇನೆ ಎಂಬುದನ್ನು ಭಾರತದ ಸೇನೆ ಯೆಂದು ಗೊಂದಲ ಮಾಡಿಕೊಳ್ಳಬಾರದು. ೧೯೦೩ರಿಂದ ೧೯೪೭ರ ನಡುವೆ ಈ ಸೇನಾಪಡೆಯು ಎರಡು ಪ್ರತ್ಯೇಕ ಪಡೆಗಳನ್ನು ಒಳಗೊಂಡಿತ್ತು: ಸ್ವತಃ ಭಾರತೀಯ ಸೇನೆ (ಭಾರತ ಮೂಲದವರನ್ನೇ ಹೊಂದಿದ್ದ ಭಾರತೀಯ ತುಕಡಿಗಳನ್ನು ಒಳಗೊಂಡಿದ್ದು), ಜೊತೆಗೆ (ಯುನೈಟೆಡ್ ಕಿಂಗ್ಡಮ್ ಮೂಲದವರನ್ನು ಒಳಗೊಂಡಿದ್ದ) ಭಾರತದಲ್ಲಿ ಕರ್ತವ್ಯದ ಮೇಲೆ ಪ್ರವಾಸ ಬಂದಿದ್ದ ಬ್ರಿಟಿಷ್ ಸೇನೆಯ ಘಟಕಗಳನ್ನೊಳಗೊಂಡಿದ್ದ ಭಾರತದಲ್ಲಿನ ಬ್ರಿಟಿಷ್ ಸೇನೆ .
ಸೇನಾ ಸಂಘಟನೆ
[ಬದಲಾಯಿಸಿ]ಭಾರತೀಯ ಸೇನೆಯ ಮೂಲವು ೧೮೫೭ರ ಭಾರತೀಯ ಸೈನಿಕ ದಂಗೆ/ಸ್ವಾತಂತ್ರ್ಯ ಸಂಗ್ರಾಮದ ನಂತರದ ವರ್ಷಗಳಲ್ಲಿ, ೧೮೫೮ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ರಾಜಮನೆತನವು ಬ್ರಿಟಿಷ್ ಭಾರತದ ಯಜಮಾನ್ಯವನ್ನು ತಾನು ವಹಿಸಿಕೊಂಡು ನೇರ ಆಡಳಿತವನ್ನು ಹೇರಿದ ಅವಧಿಯಲ್ಲಿದೆ. ೧೮೫೮ಕ್ಕೆ ಮುಂಚೆ, ಭಾರತೀಯ ಸೇನೆಯ ಪೂರ್ವವರ್ತಿ ಘಟಕಗಳು ಕಂಪೆನಿಯಿಂದ ನಿಯಂತ್ರಿಸಲ್ಪಡುತ್ತಿದ್ದವಲ್ಲದೇ ಅವರ ವೆಚ್ಚಗಳನ್ನು ಕಂಪೆನಿಯು ಪಡೆದ ಲಾಭಗಳಿಕೆಯಿಂದ ಭರಿಸಲಾಗುತ್ತಿತ್ತು. ಈ ಸೇನಾಪಡೆಗಳು ಬ್ರಿಟಿಷ್ ಸೇನೆಯ ಘಟಕಗಳ ಜೊತೆಗೆಯೇ ಕಾರ್ಯಾಚರಿಸುತ್ತಿದ್ದವಲ್ಲದೇ, ಲಂಡನ್ನಲ್ಲಿನ ಬ್ರಿಟಿಷ್ ಸರ್ಕಾರವು ಇವುಗಳ ವೆಚ್ಚವನ್ನು ಭರಿಸುತ್ತಿತ್ತು.
ಈಸ್ಟ್ ಇಂಡಿಯಾ ಕಂಪೆನಿಯ ಸೇನಾಪಡೆಗಳನ್ನು ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶಗಳನ್ನು ಒಳಗೊಂಡಿದ್ದ ಬಂಗಾಳ ಅಧೀನ ಪ್ರಾಂತ್ಯದ ಮುಸ್ಲಿಮರು ನೇಮಿಸಿಕೊಂಡಿದ್ದರು ಹಾಗೂ ಹಿಂದೂಗಳಲ್ಲಿ ಗ್ರಾಮೀಣ ಔಧ್/ಅವಧ್ ಪ್ರಾಂತ್ಯದ ಬಯಲು ಪ್ರದೇಶ ಉನ್ನತ ಜಾತಿಗೆ ಸೇರಿದ ಹಿಂದೂಗಳು ಪ್ರಧಾನವಾಗಿ ನೇಮಿಸಿಕೊಂಡಿದ್ದರು. ತಮ್ಮ ಭಾವನೆಗಳ ಬಗ್ಗೆ ತಮ್ಮ ಬ್ರಿಟಿಷ್ ಮೇಲಧಿಕಾರಿಗಳು ತೋರುತ್ತಿದ್ದ ನಿಷ್ಣುರ ಅನಾದರವು ಭಾಗಶಃ ಕಾರಣವಾಗಿ ಮೊಘಲ್ ಚಕ್ರವರ್ತಿ ಬಹಾದ್ದೂರ್ ಷಾ IIನನ್ನು ದೆಹಲಿಯ ಸಿಂಹಾಸನದಲ್ಲಿ ಮರುಸ್ಥಾಪನೆಗೊಳಿಸುವ ಉದ್ದೇಶವನ್ನು ಹೊಂದಿ ಈ ತುಕಡಿಗಳಲ್ಲಿ ಅನೇಕವು ಭಾರತೀಯ ಸೈನಿಕ ದಂಗೆ/ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದವು.
ಸೈನಿಕ ದಂಗೆ/ಸ್ವಾತಂತ್ರ್ಯ ಸಂಗ್ರಾಮದ ನಂತರ, ಸೇನಾಪಡೆಗಳಿಗೆ ನೇಮಕಾತಿಯು "ಕ್ಷತ್ರಿಯ ಜಾತಿಗಳು" ಎಂದು ಬ್ರಿಟಿಷರು ಕರೆಯುತ್ತಿದ್ದ ಅದರಲ್ಲೂ ನಿರ್ದಿಷ್ಟವಾಗಿ ರಜಪೂತರು, ಸಿಖ್ಖರು, ಗೂರ್ಖಾಗಳು, ಪಾಷ್ಟುಣರು/ಪಠಾಣರು, ಘಢ್ವಾಲಿಗಳು, ಮೊಹ್ಯಾಲಿಗಳು, ಡೋಗ್ರಾಗಳು, ಜಾಟರು ಮತ್ತು ಬಲೂಚಿಗಳಿಗೆ ಸೀಮಿತವಾಯಿತು.
"ಭಾರತೀಯ ಸೇನೆ" ಎಂಬ ಪದಪುಂಜದ ಅರ್ಥವು ಕಾಲಾಂತರದ ಘಟ್ಟಗಳಲ್ಲಿ ಬದಲಾಗುತ್ತಾ ಬಂದಿದೆ:
೧೮೫೮–೧೮೯೪ | ಭಾರತೀಯ ಸೇನೆ ಎಂಬುದು ಬಂಗಾಳ ಸೇನೆ, ಮದ್ರಾಸು ಸೇನೆ ಮತ್ತು ಬಾಂಬೆ ಸೇನೆ ಎಂಬ ಮೂರು ಅಧೀನ ಪ್ರಾಂತ್ಯಗಳ ಸೇನಾಪಡೆಗಳನ್ನು ಹೆಸರಿಸಲು ಬಳಸಲಾಗುತ್ತಿದ್ದ ಅನೌಪಚಾರಿಕ ಪದವಾಗಿತ್ತು. |
೧೮೯೫–೧೯೦೨ | ಭಾರತೀಯ ಸೇನೆ ಯು ತನ್ನದೇ ಆದ ಒಂದು ಅಧಿಕೃತ ಅಸ್ತಿತ್ವವನ್ನು ಗಳಿಸಿಕೊಂಡಿತ್ತು ಹಾಗೂ ಅದು ಬ್ರಿಟಿಷ್ ಮತ್ತು ಭಾರತೀಯ (ಸಿಪಾಯಿ) ಘಟಕಗಳನ್ನು ಒಳಗೊಂಡ "ಭಾರತ ಸರ್ಕಾರದ ಸೇನಾಪಡೆಯಾಗಿತ್ತು". |
೧೯೦೩–೧೯೪೭ | ೧೯೦೨ರಿಂದ ೧೯೦೯ರ ಅವಧಿಯಲ್ಲಿ ಲಾರ್ಡ್ ಕಿಚ್ನರ್ ಎಂಬುವವನು ಭಾರತದ ರಕ್ಷಣಾ ಪಡೆಯ ಪ್ರಧಾನ ದಂಡನಾಯಕನಾಗಿದ್ದನು. ಆತನು ಅನೇಕ ಬೃಹತ್ ಪ್ರಮಾಣದ ಸುಧಾರಣೆಗಳನ್ನು ಕೈಗೊಂಡನು, ಅವುಗಳಲ್ಲಿ ಅತ್ಯಂತ ದೊಡ್ಡದಾದ ಸುಧಾರಣೆಯೆಂದರೆ ಅಧೀನ ಪ್ರಾಂತ್ಯಗಳ ಮೂರು ಸೇನಾಪಡೆಗಳನ್ನು ಸಂಘಟಿತವಾದ ಹೊಸ ಪಡೆಯನ್ನಾಗಿ ವಿಲೀನಗೊಳಿಸುವುದಾಗಿತ್ತು. ಆತನು ಉನ್ನತ ಮಟ್ಟದ ದಳಗಳನ್ನು ಸಂಘಟಿಸಿದನು, ಎಂಟು ಸೇನಾ ವಿಭಾಗಗಳನ್ನು, ಹಾಗೂ ಭಾರತೀಯ ಮತ್ತು ಬ್ರಿಟಿಷ್ ಘಟಕಗಳನ್ನು ಒಳಗೊಂಡ ಪದಾತಿದಳವನ್ನು ರಚಿಸಿದನು. ಕಿಚ್ನರ್ನ ಸುಧಾರಣೆಗಳು ಜಾರಿಯಾದ ನಂತರದಲ್ಲಿ:
|
ಸೇನಾಧಿಪತ್ಯ
[ಬದಲಾಯಿಸಿ]ಭಾರತದ ಸೇನೆಯ ಅಧಿಪತ್ಯವನ್ನು ಹೊಂದಿದ್ದ ಅಧಿಕಾರಿಯೆಂದರೆ ಭಾರತದ ಪೌರ ಮಹಾಮಂಡಲಾಧಿಪತಿ/ಗವರ್ನರ್ ಜನರಲ್ರ ಅಧೀನನಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದಲ್ಲಿನ ಪ್ರಧಾನ ದಂಡನಾಯಕರಾಗಿದ್ದರು. ಅವರು ಮತ್ತು ಅವರ ಸಿಬ್ಬಂದಿವರ್ಗವು ಭಾರತದಲ್ಲಿನ GHQವನ್ನು ತಮ್ಮ ಪ್ರಧಾನ ನೆಲೆಯನ್ನಾಗಿ ಹೊಂದಿದ್ದರು. ಭಾರತೀಯ ಸೇನೆಯಲ್ಲಿನ ಹುದ್ದೆಗಳು ಬ್ರಿಟಿಷ್ ಸೇನೆಯ ಹುದ್ದೆಗಳಿಗಿಂತಲೂ ಕಡಿಮೆ ಘನತೆಯದ್ದಾಗಿದ್ದರೂ, ಅವರಿಗೆ ನೀಡಲಾಗುತ್ತಿದ್ದ ವೇತನಗಳು ಅಧಿಕಾರಿಗಳು ಖಾಸಗಿ ವರಮಾನವನ್ನು ಹೊಂದಬೇಕಾದ ಅಗತ್ಯಬರದ ಮಟ್ಟಿಗೆ ತಮ್ಮ ವೇತನದಿಂದಲೇ ಜೀವನವನ್ನು ಅನುಕೂಲವಾಗಿ ನಡೆಸುವ ಮಟ್ಟಿಗೆ ಗಮನಾರ್ಹ ಹೆಚ್ಚಳಗಳನ್ನು ಹೊಂದಿರುತ್ತಿದ್ದವು. ಭಾರತೀಯ ಸೇನೆಯಲ್ಲಿನ ಬ್ರಿಟಿಷ್ ಅಧಿಕಾರಿಗಳು ತಮ್ಮ ಕೈಕೆಳಗಿನ ಸಿಬ್ಬಂದಿಗಳ ಮಾತೃಭಾಷೆಗಳಾದ ಭಾರತೀಯ ಭಾಷೆಗಳನ್ನು ಕಲಿಯಬೇಕಾಗಿರುತ್ತಿತ್ತು, ಈ ಸಿಬ್ಬಂದಿ ವರ್ಗವು ಹೆಚ್ಚಿನ ಮಟ್ಟಿಗೆ ಹಿಂದಿ ಭಾಷಿಕ ಪ್ರದೇಶಗಳಿಂದ ನಿಯುಕ್ತಗೊಂಡಿರುವವರಾಗಿರುತ್ತಿದ್ದರು. ಪ್ರಮುಖ ಬ್ರಿಟಿಷ್ ಭಾರತೀಯ ಸೇನಾಪಡೆಯ ಅಧಿಕಾರಿಗಳಲ್ಲಿ ೧st ಅರ್ಲ್ ರಾಬರ್ಟ್ಸ್ ಆದ ಫ್ರೆಡೆರಿಕ್ ರಾಬರ್ಟ್ಸ್, ೧st ಬಾ/ಬ್ಯಾರನ್ ಬರ್ಡ್ವುಡ್ ಆದ ವಿಲಿಯಂ ಬರ್ಡ್ವುಡ್, ಕ್ಲಾಡೆ ಆಚಿನ್ಲೆಕ್ ಮತ್ತು ೧st ವಿಸ್ಕೌಂಟ್ ಸ್ಲಿಮ್ ಆದ ವಿಲಿಯಂ ಸ್ಲಿಮ್ರವರುಗಳು ಸೇರಿದ್ದರು.
ಭಾರತೀಯ ಸೇನೆಯ ಪ್ರಧಾನ ಜವಾಬ್ದಾರಿ ಎಂದರೆ ಆಫ್ಘಾನಿಸ್ತಾನದ ಮೂಲಕ ಆಗಬಹುದಾದ ರಷ್ಯನ್ನರ ಆಕ್ರಮಣಗಳ ವಿರುದ್ಧ ವಾಯುವ್ಯ ಸರಹದ್ದಿನ ಪ್ರಾಂತ್ಯಗಳ ರಕ್ಷಣೆ, ಆಂತರಿಕ ಸಂರಕ್ಷಣೆ, ಮತ್ತು ಹಿಂದೂ ಮಹಾಸಾಗರ ವಲಯದಲ್ಲಿ ನಡೆಯಬಹುದಾಗಿದ್ದ ದಂಡಯಾತ್ರೆಗಳ ಯುದ್ಧಗಳಲ್ಲಿ ಭಾಗವಹಿಸುವುದಾಗಿತ್ತು.
ಸಿಬ್ಬಂದಿ ವರ್ಗ
[ಬದಲಾಯಿಸಿ]ಬ್ರಿಟಿಷ್ ಮತ್ತು ಭಾರತೀಯ ಸೇನಾಪಡೆಗಳಿಗೆ ನಿಯುಕ್ತಗೊಂಡ ಅಧಿಕಾರಿಗಳು ಬ್ರಿಟಿಷ್ ಸೇನೆಗೆ ನಿಯುಕ್ತಗೊಂಡ ಅಧಿಕಾರಿಗಳಿಗೆ ಸಮಾನವಾದ ಸ್ಥಾನಮಾನಗಳನ್ನು ಹೊಂದಿರುತ್ತಿದ್ದರು. ೧೯೨೦ರ ದಶಕದಲ್ಲಿ ರಚಿಸಲಾದ ಬ್ರಿಟಿಷ್ ಮಹಾರಾಜನಿಂದ ನಿಯುಕ್ತಗೊಂಡ ಭಾರತೀಯ ಅಧಿಕಾರಿಗಳ ಹುದ್ದೆಗಳಿಗೆ (KCIOಗಳು), ಬ್ರಿಟಿಷ್ ಅಧಿಕಾರಿಗಳಿಗೆ ಸಮನಾದ ಅಧಿಕಾರಗಳನ್ನು ನೀಡಲಾಗಿತ್ತು. ವೈಸ್ರಾಯ್ರ ಸೇವೆಗೆ ನಿಯುಕ್ತಗೊಂಡ ಅಧಿಕಾರಿಗಳು ಸೇನಾಧಿಕಾರಿಗಳ ಸ್ಥಾನಮಾನವನ್ನು ಹೊಂದಿದ್ದ ಭಾರತೀಯರಾಗಿರುತ್ತಿದ್ದರು. ಇವರುಗಳಿಗೆ ನಿಯುಕ್ತಗೊಂಡ ಅಧಿಕಾರಿಗಳಿಗೆ ನೀಡಲ್ಪಡುವ ಎಲ್ಲ ರೀತಿಯ ಅಧಿಕಾರಗಳನ್ನು ನೀಡಲಾಗಿತ್ತು, ಆದರೆ ಇವರು ಕೇವಲ ಭಾರತೀಯ ಸೇನಾತುಕಡಿಗಳ ನಿಯಂತ್ರಣವನ್ನು ಮಾತ್ರ ಹೊಂದಿದ್ದು ಬ್ರಿಟಿಷ್ ಮಹಾರಾಜರುಗಳ (ಮತ್ತು ಮಹಾರಾಣಿಯರ) ಸೇವೆಗೆ ನಿಯುಕ್ತಗೊಂಡ ಅಧಿಕಾರಿಗಳು ಮತ್ತು KCIOಗಳೆಲ್ಲರಿಗೂ ಅಧೀನ ಅಧಿಕಾರಿಗಳಾಗಿರುತ್ತಿದ್ದರು. ಈ ಅಧಿಕಾರಿಗಳ ಹುದ್ದೆಗಳಲ್ಲಿ ಬ್ರಿಟಿಷ್ ಮೇಜರ್ ಹುದ್ದೆಗೆ ಸಮನಾದ ಸುಬೇದಾರ್ ಮೇಜರ್ ಅಥವಾ ರಿಸಲ್ದಾರ್ ಮೇಜರ್ (ಅಶ್ವಬಲ/ಅಶ್ವಸೇನಾಪಡೆ), ಕ್ಯಾಪ್ಟನ್/ಮುಖ್ಯಾಧಿಕಾರಿ ಹುದ್ದೆಗೆ ಸಮಾನವಾದ ಸುಬೇದಾರ್ ಅಥವಾ ರಿಸಲ್ದಾರ್ (ಅಶ್ವಬಲ/ಅಶ್ವಸೇನಾಪಡೆ); ಮತ್ತು ಲೆಫ್ಟಿನೆಂಟ್ ಹುದ್ದೆಗೆ ಸಮಾನವಾದ ಜಮೆ/ಮಾದಾರ್ ಹುದ್ದೆಗಳು ಸೇರಿವೆ.
ನೇಮಕಾತಿಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರುತ್ತಿತ್ತು ; ಸರಿಸುಮಾರು ೧.೩ ದಶಲಕ್ಷ ಮಂದಿ ಪ್ರಥಮ ವಿಶ್ವ ಸಮರದಲ್ಲಿ ಭಾಗವಹಿಸಿದ್ದರು, ಅವರಲ್ಲಿ ಬಹುತೇಕರು ಪಾಶ್ಚಿಮಾತ್ಯ ರಂಗದ ಪರವಾಗಿ ಕಾರ್ಯನಿರ್ವಹಿಸಿದ್ದವರಾಗಿದ್ದರೆ ಸರಿ ಸುಮಾರು ೨.೫ ದಶಲಕ್ಷ ಮಂದಿ ದ್ವಿತೀಯ ವಿಶ್ವಸಮರದಲ್ಲಿ ಭಾಗವಹಿಸಿದ್ದರು. ನಿಯುಕ್ತಗೊಂಡ ಸ್ಥಾನಮಾನರಹಿತ ಅಧಿಕಾರಿಗಳಲ್ಲಿ ಕಂಪೆನಿ ಸಾರ್ಜೆಂಟ್ ಮೇಜರ್ಗಳಿಗೆ ಸಮಾನ ಸ್ಥಾನಮಾನ ಹೊಂದಿದ್ದ ಕಂಪೆನಿಯ ಹವಾಲ್ದಾರ್ ಮೇಜರ್ಗಳು;, ಕಂಪೆನಿ ಕ್ವಾರ್ಟರ್ಮಾಸ್ಟರ್ ಸಾರ್ಜೆಂಟ್ಗಳಿಗೆ ಸಮಾನರಾದ ಕಂಪೆನಿ ಕ್ವಾರ್ಟರ್ಮಾಸ್ಟರ್ ಹವಾಲ್ದಾರ್ಗಳು; ಸಾರ್ಜೆಂಟ್ಗೆ ಸಮಾನವಾದ ಹವಾಲ್ದಾರ್ಗಳು ಅಥವಾ ದಫೇದಾರ್ಗಳು (ಅಶ್ವಬಲ/ಅಶ್ವಸೇನಾಪಡೆ); ಬ್ರಿಟಿಷ್ ಕಾರ್ಪೋರಲ್ಗಳಿಗೆ ಸಮಾನರಾದ ನಾಯಕ್ ಅಥವಾ ಲಾ/ಲ್ಯಾನ್ಸ್ -ದಫೇದಾರ್ಗಳು (ಅಶ್ವಬಲ/ಅಶ್ವಸೇನಾಪಡೆ); ಮತ್ತು ಲ್ಯಾನ್ಸ್-ನಾಯಕ್ ಅಥವಾ ಲಾ/ಲ್ಯಾನ್ಸ್-ಕಾರ್ಪೋರಲ್ಗಳಿಗೆ ಸಮಾನರಾದ ಕಾರ್ಯಕಾರಿ ಲಾ/ಲ್ಯಾನ್ಸ್-ದಫೇದಾರ್ಗಳು (ಅಶ್ವಬಲ/ಅಶ್ವಸೇನಾಪಡೆ) ಸೇರಿದ್ದಾರೆ.
ಸೈನಿಕ ಸ್ಥಾನಮಾನಗಳಲ್ಲಿ ಬ್ರಿಟಿಷ್ ಪ್ರೈವೇಟ್ ಹುದ್ದೆಗೆ ಸಮಾನವಾದ ಸಿಪಾಯಿಗಳು ಅಥವಾ ಸೋವಾರ್ಗಳ (ಅಶ್ವಬಲ/ಅಶ್ವಸೇನಾಪಡೆ) ಹುದ್ದೆಗಳು ಸೇರಿದ್ದವು. ಗನ್ನರ್ ಮತ್ತು ಸ್ಯಾಪ್ಪರ್ಗಳಂತಹಾ ಬ್ರಿಟಿಷ್ ಸೇನಾ ದರ್ಜೆಯ ಸೈನಿಕರನ್ನು ಇತರೆ ಸೇನಾ ಘಟಕದವರುಗಳು ಬಳಸಿಕೊಳ್ಳುತ್ತಿದ್ದರು.
ಅಧೀನ ರಾಜ್ಯಗಳ ಸೇನಾಪಡೆಗಳ ಕಾರ್ಯಾಚರಣೆಯ ಇತಿಹಾಸ
[ಬದಲಾಯಿಸಿ]ಬರ್ಮನ್ನರ ಮೇಲಿನ ಯುದ್ಧಗಳು
[ಬದಲಾಯಿಸಿ]- ಪ್ರಥಮ ಆಂಗ್ಲೋ-ಬರ್ಮನ್ನರ ಯುದ್ಧ (೧೮೨೩ರಿಂದ ೧೮೨೬)
- ದ್ವಿತೀಯ ಆಂಗ್ಲೋ-ಬರ್ಮನ್ನರ ಯುದ್ಧ (೧೮೫೨ರಿಂದ ೧೮೫೩)
- ತೃತೀಯ ಆಂಗ್ಲೋ-ಬರ್ಮನ್ನರ ಯುದ್ಧ (೧೮೮೫ರಿಂದ ೧೮೮೬)
ಸಿಖ್ಖರ ಮೇಲಿನ ಯುದ್ಧಗಳು
[ಬದಲಾಯಿಸಿ]- ಪ್ರಥಮ ಆಂಗ್ಲೋ-ಸಿಖ್ಖರ ಯುದ್ಧ - ೧೮೪೫ರಿಂದ ೧೮೪೬
- ದ್ವಿತೀಯ ಆಂಗ್ಲೋ-ಸಿಖ್ಖರ ಯುದ್ಧ - ೧೮೪೮ರಿಂದ ೧೮೪೯
ಆಫ್ಘನ್ನರ ಮೇಲಿನ ಯುದ್ಧಗಳು
[ಬದಲಾಯಿಸಿ]- ಪ್ರಥಮ ಆಂಗ್ಲೋ-ಆಫ್ಘನ್ನರ ಯುದ್ಧ - ೧೮೩೯ರಿಂದ ೧೮೪೨
- ದ್ವಿತೀಯ ಆಂಗ್ಲೋ-ಆಫ್ಘನ್ನರ ಯುದ್ಧ -೧೮೭೮ರಿಂದ ೧೮೮೧
ಇದನ್ನೂ ನೋಡಿ : ಮಹಾ ಬೇಹು-ಯುದ್ಧ ಮತ್ತು ಆಫ್ಘಾನಿಸ್ತಾನದಲ್ಲಿನ ಐರೋಪ್ಯ ಪ್ರಭಾವ ಲೇಖನವನ್ನು ಮತ್ತಷ್ಟು ವಿವರಗಳಿಂದ ಕೂಡಿದ ವರ್ಣನೆಗಾಗಿ ನೋಡಿ.
ಅಫೀಮು ಯುದ್ಧಗಳು
[ಬದಲಾಯಿಸಿ]- ಪ್ರಥಮ ಅಫೀಮು ಯುದ್ಧ - ೧೮೩೯ರಿಂದ ೧೮೪೩
- ದ್ವಿತೀಯ ಅಫೀಮು ಯುದ್ಧ -೧೮೫೬ರಿಂದ ೧೮೬೦
ಅಬಿಸ್ಸಿನಿಯಾ
[ಬದಲಾಯಿಸಿ]- ಅಬಿಸ್ಸಿನಿಯಾ ಮೇಲೆ ನಡೆಸಿದ ದಂಡಯಾತ್ರೆ - ೧೮೬೭ರಿಂದ ೧೮೬೮
ಭಾರತೀಯ ಸೇನಾಪಡೆಯ ಕಾರ್ಯಾಚರಣೆಯ ಇತಿಹಾಸ
[ಬದಲಾಯಿಸಿ]ಅಧೀನ ರಾಜ್ಯಗಳ ಸೇನಾಪಡೆಗಳನ್ನು ೧ ಏಪ್ರಿಲ್ ೧೮೯೫ರಿಂದ ಜಾರಿಗೆ ಬರುವ ಹಾಗೆ ೨೬ ಅಕ್ಟೋಬರ್ ೧೮೯೪ರಂದು ಹೊರಡಿಸಲಾದ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಆದೇಶ ಸಂಖ್ಯೆ ೯೮೧ರ ಮೂಲಕ ಪ್ರಕಟಣೆ ಹೊರಡಿಸಿ ರದ್ದುಗೊಳಿಸಲಾಯಿತಲ್ಲದೇ ಮೂರು ಅಧೀನ ರಾಜ್ಯಗಳ ಸೇನಾಪಡೆಗಳನ್ನು ಏಕೈಕ ಭಾರತೀಯ ಸೇನೆಯನ್ನಾಗಿ ಒಗ್ಗೂಡಿಸಲಾಯಿತು.[೩] ಈ ಸೇನಾಪಡೆಗಳನ್ನು ಉತ್ತರ ಭಾರತದ, ದಕ್ಷಿಣ ಭಾರತದ, ಪೂರ್ವ ಭಾರತದ ಮತ್ತು ಪಶ್ಚಿಮ ಭಾರತದ ಸೇನಾಪಡೆಗಳೆಂದು ನಾಲ್ಕು ಸೇನಾಧಿಪತ್ಯಗಳಾಗಿ ಸಂಯೋಜಿಸಲಾಗಿತ್ತು}. ಅನೇಕ ಅಶ್ವಬಲ/ಅಶ್ವಸೇನಾಪಡೆ ಪದಾತಿದಳಗಳು ಮತ್ತು ಈ ಸೇನಾಧಿಪತ್ಯಗಳಿಗೆ ಹೆಚ್ಚುವರಿಯಾಗಿ ೧೯೦೩ರಲ್ಲಿ ಎಂಟು ವಿಭಾಗಗಳನ್ನು ಕೂಡಾ ರೂಪಿಸಲಾಯಿತು: ಅವುಗಳೆಂದರೆ ೧st (ಪೇಷಾವರ್/ರ) ವಿಭಾಗ, ೨nd (ರಾವಲ್ಪಿಂಡಿ) ವಿಭಾಗ, ೩rd (ಲಾಹೋರ್) ವಿಭಾಗ, ೪th (ಕ್ವೆಟ್ಟಾ) ವಿಭಾಗ, ೫th (ಮ್ಹೋ/ಮ್ಹೌ) ವಿಭಾಗ, ೬th (ಪೂನಾ/ಪುಣೆ) ವಿಭಾಗ, ೭th (ಮೀರತ್) ವಿಭಾಗ, ಮತ್ತು ೮th ಲಕ್ನೌ ವಿಭಾಗ. ಭಾರತೀಯ ಸೇನಾಪಡೆಯು, ಅಧೀನ ರಾಜ್ಯಗಳ ಸೇನಾಪಡೆಗಳಂತೆಯೇ, ಡಕಾಯಿತರುಗಳ ವಿರುದ್ಧದ ಹೋರಾಟದ ಹಾಗೂ ಗಲಭೆಗಳು ಹಾಗೂ ದೊಂಬಿಗಳ ಸಂದರ್ಭಗಳಲ್ಲಿ ಪೌರ ಸಂಸ್ಥೆಗಳಿಗೆ ಸೈನಿಕ ಪಡೆಯ ಬೆಂಬಲವನ್ನು ನೀಡುವುದನ್ನು ಮುಂದುವರೆಸಿತು. ಒಗ್ಗೂಡಿಸಲ್ಪಟ್ಟ ನವೀನ ಸೇನಾಪಡೆಯು ಎದುರಿಸಿದ ಮೊತ್ತ ಮೊದಲ ಹೊರದೇಶದ ಕಾರ್ಯಾಚರಣೆ ಎಂದರೆ ಚೀನಾದಲ್ಲಿ ೧೮೯೯ರಿಂದ ೧೯೦೧ರವರೆಗೆ ನಡೆದ ಬಾಕ್ಸರ್ ದಂಗೆಯನ್ನು ಎದುರಿಸಿದ್ದು.
ಭಾರತೀಯ ಸೇನಾಪಡೆಯ ಪ್ರಮುಖ "ಸಾಂಪ್ರದಾಯಿಕ" ಯುದ್ಧಕಾಲೀನ ಕೆಲಸವೆಂದರೆ ಆಫ್ಘಾನಿಸ್ತಾನದ ಹಾಗೂ ವಾಯುವ್ಯ ಸರಹದ್ದಿನ ಮೂಲಕ ಭಾರತದ ಮೇಲೆ ಆಗಬಹುದಾದ ಆಕ್ರಮಣಗಳನ್ನು ತಡೆಯುವುದು. ಯುದ್ಧೋತ್ಸಾಹದ ಸ್ಥಳೀಯ ಜನರನ್ನು ಸಾಂತ್ವನಗೊಳಿಸುವುದು ಹಾಗೂ ಡಕಾಯಿತ ಚಟುವಟಿಕೆಗಳಿಗೆ ತಡೆ ಹಾಕುವ ಅಗತ್ಯಗಳೂ ಇದ್ದವು. ಇಂತಹಾ ಕೆಲಸಗಳು ಸಣ್ಣ ಪ್ರಮಾಣದ ಅನೇಕ ಸೈನಿಕ ಕಾರ್ಯಾಚರಣೆಗಳನ್ನು ಒಳಗೊಂಡಿರುತ್ತಿದ್ದವು. ಭಾರತೀಯ ಸೇನಾಪಡೆಯು ೧೯೦೭ರಲ್ಲಿ ಪ್ರಸ್ತುತ ದಿನಮಾನದ ಪಾಕಿಸ್ತಾನದಲ್ಲಿರುವ ಕ್ವೆಟ್ಟಾದಲ್ಲಿ ಸೇನಾಧಿಪತ್ಯ ಹಾಗೂ ಸಿಬ್ಬಂದಿ/ಕಮ್ಯಾಂಡ್ ಮತ್ತು ಸ್ಟಾಫ್ ಮಹಾವಿದ್ಯಾಲಯವನ್ನು ಸ್ಥಳೀಯ ಭಾರತೀಯ ಸನ್ನಿವೇಶಗಳ ತಿಳುವಳಿಕೆ ಹೊಂದಿರುವ ಅಧಿಕಾರಿ ಸಿಬ್ಬಂದಿವರ್ಗದವರನ್ನು ತಯಾರು ಮಾಡಿ ಸೇನಾಪಡೆಗೆ ಒದಗಿಸಲು ಸ್ಥಾಪಿಸಿತು.
ಮೊದಲ ವಿಶ್ವ ಸಮರ
[ಬದಲಾಯಿಸಿ]ಮಹಾ ಸಮರವು ಆರಂಭವಾಗುವ ಮುನ್ನ ಬ್ರಿಟಿಷ್ ಭಾರತೀಯ ಸೇನೆಯ ಸೇನಾಬಲವು ೧೫೫,೦೦೦ರಷ್ಟಿತ್ತು. ೧೯೧೪ರಲ್ಲಿ ಅಥವಾ ಅದಕ್ಕೂ ಮುಂಚೆ, ೯th (ಸಿಕಂದರಾಬಾದ್) ವಿಭಾಗ ಎಂಬ ಒಂಬತ್ತನೆಯ ವಿಭಾಗವೊಂದನ್ನು ಸ್ಥಾಪಿಸಲಾಯಿತು.[೪] ೧೯೧೮ರ ನವೆಂಬರ್ ವೇಳೆಗೆ ಭಾರತೀಯ ಸೇನಾಪಡೆಯ ಸಂಖ್ಯಾ ಬಲವು ೫೭೩,೦೦೦ರಷ್ಟಕ್ಕೆ ಏರಿತ್ತು.[೫] ೧೯೦೨-೧೯೦೯ ಅವಧಿಯ ಕಿಚ್ನರ್'ರ ಸುಧಾರಣೆಗಳ ನಂತರ ಯುದ್ಧೋಪಕರಣಗಳಿಗೆ ಸಂಬಂಧಪಟ್ಟಂತೆ ಯಾವಾಗಲೂ ಹಿಂದೆಯೇ ಇದ್ದರೂ ಭಾರತೀಯ ಸೇನಾಪಡೆಯನ್ನು ಬ್ರಿಟಿಷ್ ಸೇನಾಪದ್ಧತಿಗೆ ಅನುಸಾರವಾಗಿ ಸಂಘಟಿಸಲಾಯಿತು. ಭಾರತೀಯ ಸೇನಾ ವಿಭಾಗವು ನಾಲ್ಕು ತುಕಡಿಗಳನ್ನು ಹೊಂದಿದ್ದ ಮೂರು ಪದಾತಿ ದಳಗಳನ್ನು ಹೊಂದಿರುತ್ತಿತ್ತು. ಈ ತುಕಡಿಗಳಲ್ಲಿ ಮೂರು ಭಾರತೀಯ ಸೇನಾಪಡೆಯದ್ದಾಗಿದ್ದರೆ ಒಂದು ಬ್ರಿಟಿಷರದ್ದಾಗಿರುತ್ತಿತ್ತು. ಭಾರತೀಯ ತುಕಡಿಗಳನ್ನು ಆಗ್ಗಾಗ್ಗೆ ವಿವಿಧ ಜನಾಂಗದವರು, ಜಾತಿಯವರು ಅಥವಾ ಧರ್ಮದವರ ತಂಡಗಳನ್ನಾಗಿ ಪ್ರತ್ಯೇಕಿಸಲಾಗುತ್ತಿತ್ತು. ಭಾರತೀಯ ಉಪಖಂಡದಲ್ಲಿನ ಅಂದಾಜು ೩೧೫ ದಶಲಕ್ಷ ಜನಸಂಖ್ಯೆಯಲ್ಲಿ ಒಂದೂವರೆ ದಶಲಕ್ಷ ಜನರು ಸ್ವಯಂಇಚ್ಛೆಯಿಂದ ಸೇನಾಪಡೆಗಳಿಗೆ ಸೇರಲು ಮುಂದೆ ಬಂದಿದ್ದರು
ಭಾರತೀಯ ಸೇನಾಪಡೆಯು ತೀರ ಅಲ್ಪ ಪ್ರಮಾಣದ ಫಿರಂಗಿದಳವನ್ನು (ಪರ್ವತ ಫಿರಂಗಿದಳದಲ್ಲಿ ಕೇವಲ ೧೨ ತೋಫುಖಾನೆಗಳಿದ್ದವು), ಹೊಂದಿದ್ದರೆ ಬ್ರಿಟಿಷ್ ರಾಜವಂಶದ ಫಿರಂಗಿದಳದ (ಬ್ರಿಟಿಷ್ ರಾಜವಂಶದ ಭಾರತೀಯ ಫಿರಂಗಿದಳ) ತೋಫುಖಾನೆಗಳನ್ನು ವಿಭಾಗಗಳಿಗೆ ವಹಿಸಲಾಗಿತ್ತು. ಹೆಚ್ಚುವರಿ ವಿಶೇಷಜ್ಞ ತರಬೇತಿಗೆ ಒಳಪಟ್ಟ ಇಡೀ ಕಾಲಾಳು ತುಕಡಿಯನ್ನೇ ಕೆಲ ವಿಭಾಗಗಳಿಗೆ ನೀಡಲಾಗಿದ್ದರೂ ಪಯೋನೀರ್/ಅಗ್ರಗಾಮಿಗಳು ಅಥವಾ 'ಸ್ಯಾಪರ್ಸ್ ಮತ್ತು ಮೈನರ್ಸ್' ಎಂಬ ಸ್ಥಾನಮಾನಗಳನ್ನು ಹೊಂದಿದ ತುಕಡಿಗಳು ಇದ್ದರೂ ಬ್ರಿಟಿಷ್ ರಾಜವಂಶದ ಶಿಲ್ಪಶಾಸ್ತ್ರಜ್ಞರ ಹುದ್ದೆಗೆ ಸಮಾನವಾದ ಶಿಲ್ಪಶಾಸ್ತ್ರಜ್ಞ ಸೈನಿಕ ತುಕಡಿಯೂ ಕೂಡಾ ಇರಲಿಲ್ಲ.
ಯುದ್ಧಕ್ಕಿಂತ ಮುಂಚೆ, ಭಾರತದ ಸರ್ಕಾರವು ಐರೋಪ್ಯ ಯುದ್ಧವೇನಾದರೂ ಘಟಿಸಿದರೆ ಎರಡು ಕಾಲಾಳು ವಿಭಾಗಗಳು ಮತ್ತು ಒಂದು ಅಶ್ವಬಲ/ಅಶ್ವಸೇನಾಪಡೆ ಪದಾತಿದಳವನ್ನು ನೀಡುವ ಸಾಮರ್ಥ್ಯವನ್ನು ಭಾರತವು ಹೊಂದಿದೆ ಎಂದು ನಿರ್ಧರಿಸಿತ್ತು. ಪಾಶ್ಚಿಮಾತ್ಯ/ಪಶ್ಚಿಮ ರಾಷ್ಟ್ರ ರಂಗದ ಪರವಾಗಿ ಫ್ರಾನ್ಸ್ ಮತ್ತು ಬೆಲ್ಜಿಯಮ್ಗಳಲ್ಲಿ ನಡೆದ ಯುದ್ಧದಲ್ಲಿ ೧೪೦,೦೦೦ ಸೈನಿಕರು ಕಾರ್ಯಪ್ರವೃತ್ತರಾಗಿ ಸೇವೆ ಸಲ್ಲಿಸಿದ್ದರು - ಮುಂದಾಳು ಹಂತದಲ್ಲಿನ ಭಾರತೀಯ ಸೇನಾಘಟಕಗಳಲ್ಲಿ ೯೦,೦೦೦ ಮಂದಿ ಹಾಗೂ ಬೆಂಬಲ ತುಕಡಿಗಳಲ್ಲಿ ೫೦,೦೦೦ ಮಂದಿಯನ್ನು ನಿಯುಕ್ತಗೊಳಿಸಲಾಗಿತ್ತು. ಇದಕ್ಕಿಂತ ಹೆಚ್ಚಿನ ಪ್ರಮಾಣದ ಸೇನಾಪಡೆಯನ್ನು ಕಳಿಸಿದ್ದೇ ಆದರೆ ರಾಷ್ಟ್ರದ ಸುರಕ್ಷತೆಗೆ ಗಂಡಾಂತರವನ್ನು ತರಬಲ್ಲದು ಎಂದು ಅವರುಗಳು ಭಾವಿಸಿದ್ದರು. ನಾಲ್ಕಕ್ಕೂ ಹೆಚ್ಚಿನ ವಿಭಾಗಗಳನ್ನು ಅಂತಿಮವಾಗಿ ಭಾರತೀಯ ವಿಶೇಷ ದಂಡಯಾತ್ರೆಯ ದಳವನ್ನಾಗಿ[೬] ರೂಪಿಸಿ ಭಾರತೀಯ ಸೇನಾಘಟಕ ಮತ್ತು ಭಾರತೀಯ ಅಶ್ವಬಲ/ಅಶ್ವಸೇನಾಪಡೆಯ ಸೇನಾಘಟಕವನ್ನಾಗಿ ೧೯೧೪ರಲ್ಲಿ ಪಾಶ್ಚಿಮಾತ್ಯ/ಪಶ್ಚಿಮ ರಾಷ್ಟ್ರ ರಂಗಕ್ಕೆ ಕಳುಹಿಸಲಾಯಿತು. ಈ ಸೇನಾಘಟಕಗಳು ಆರಂಭದಲ್ಲಿಯೇ ಅನುಭವಿಸಿದ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳ ಸಾವುನೋವುಗಳು ಪಡೆಯ ನಂತರದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದವು. ತಮ್ಮ ಸಿಬ್ಬಂದಿಯ ಭಾಷೆಗಳನ್ನು, ಪದ್ಧತಿಗಳನ್ನು ಹಾಗೂ ಮಾನಸಿಕ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಬ್ರಿಟಿಷ್ ಅಧಿಕಾರಿಗಳನ್ನು ಅಷ್ಟು ತ್ವರಿತವಾಗಿ ಅಲ್ಲಿಗೆ ಭರ್ತಿ ಮಾಡಿಸಲು ಆಗುತ್ತಿರಲಿಲ್ಲವಾದುದು ಹಾಗೂ ಪಾಶ್ಚಿಮಾತ್ಯ/ಪಶ್ಚಿಮ ರಾಷ್ಟ್ರ ರಂಗದಲ್ಲಿನ ಪರಕೀಯ ವಾತಾವರಣವು ಸೈನಿಕರುಗಳ ಮೇಲೆ ಸ್ವಲ್ಪ ಪ್ರಭಾವವನ್ನು ಬೀರಿತ್ತು. ಅದೇನೇ ಆದರೂ, ಭಾರತದಲ್ಲಿ ಆಗಬಹುದಾಗಿತ್ತೆಂದು ಭಾವಿಸಲಾಗಿದ್ದ ವಿಪ್ಲವವೂ ಆಗಲೇ ಇಲ್ಲ, ಹಾಗೂ ೧೯೧೫ರಲ್ಲಿ ಭಾರತೀಯ ಸೇನಾಘಟಕಗಳನ್ನು ಮಧ್ಯ ಪ್ರಾಚ್ಯಕ್ಕೆ ಸ್ಥಳಾಂತರಿಸಲಾಯಿತು ಮಾತ್ರವಲ್ಲದೇ ಯುದ್ಧದ ಅವಧಿಯಲ್ಲಿ ಭಾರತವು ಇನ್ನೂ ಅನೇಕ ಹೆಚ್ಚುವರಿ ವಿಭಾಗಗಳನ್ನು ಸಕ್ರಿಯ ಕಾರ್ಯಾಚರಣೆಗೆ ಕಳಿಸಿಕೊಟ್ಟಿತು.[೭] ಯುದ್ಧವು ಆರಂಭವಾದ ಒಂದು ತಿಂಗಳಿನ ಅವಧಿಯಲ್ಲಿಯೇ ಪಾಶ್ಚಿಮಾತ್ಯ/ಪಶ್ಚಿಮ ರಾಷ್ಟ್ರ ರಂಗದಲ್ಲಿ ಭಾರತೀಯರ ಮೊದಲ ಕದನವು ವೈಪ್ರೆಸ್ದ ಪ್ರಥಮ ಸಂಗ್ರಾಮದಲ್ಲಿ ನಡೆಯಿತು. ಇಲ್ಲಿ ಗಢ್ವಾಲ್ ರೈಫಲ್ಸ್ ಪಡೆಯು ಪ್ರಥಮ ಕಂದಕ ದಾಳಿಯಲ್ಲಿ ೯–೧೦ ನವೆಂಬರ್ ೧೯೧೪ರ ಅವಧಿಯಲ್ಲಿ ಭಾಗವಹಿಸಿದ್ದರು ಹಾಗೂ ಖುದಾದಾದ್ ಖಾನ್ ವಿಕ್ಟೋರಿಯಾ ಕ್ರಾಸ್ ಪದಕವನ್ನು ಪಡೆದುಕೊಂಡ ಮೊದಲ ಭಾರತೀಯರೆನಿಸಿಕೊಂಡರು. ಒಂದು ವರ್ಷಕಾಲದ ಮುಂಚೂಣಿ ನೆಲೆಯಲ್ಲಿನ ಸೇವೆಯ ನಂತರ, ಅನಾರೋಗ್ಯ ಹಾಗೂ ಸಾವುನೋವುಗಳು ಭಾರತೀಯ ಸೈನಿಕ ಘಟಕಗಳು ತಮ್ಮನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾದ ಪರಿಸ್ಥಿತಿಗೆ ತಲುಪಿದವು.
ಮೆಸೊಪಟೋಮಿಯಾದ ಕಾರ್ಯಾಚರಣೆಯಲ್ಲಿ ಟರ್ಕರ/ತುರ್ಕರ ವಿರುದ್ಧ ಹೋರಾಡುತ್ತಾ ಸರಿಸುಮಾರು ೭೦೦,೦೦೦ಕ್ಕೆ ಸನಿಹದ ಸಂಖ್ಯೆಯ ಸೈನಿಕರು ಆಗ ಮಧ್ಯ ಪ್ರಾಚ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು.[೮] ಅವರು ಆಗ ವಸ್ತುಗಳ ಮರು-ಸರಬರಾಜುಗಳಿಗೆ ಸಾರಿಗೆ ವ್ಯವಸ್ಥೆಯ ಕೊರತೆಯನ್ನು ಅನುಭವಿಸುತ್ತಿದ್ದರಲ್ಲದೇ ವಿಪರೀತವಾದ ಬಿಸಿಲಿನ ಝಳದ ಹಾಗೂ ಧೂಳಿನಿಂದ ಕೂಡಿದ ಪರಿಸ್ಥಿತಿಗಳಲ್ಲಿ ಕಾದಾಡುತ್ತಿದ್ದರು. ಮೇಜರ್ ಜನರಲ್ ಸರ್ ಚಾರ್ಲ್ಸ್ ಟೌನ್ಷೆಂಡ್ರ ನಾಯಕತ್ವದಲ್ಲಿ ಮುನ್ನುಗ್ಗುತ್ತಾ, ಬಾಗ್ದಾದ್ಅನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಮುನ್ನುಗ್ಗುತ್ತಿರಲು ತುರ್ಕದೇಶದ ಸೇನಾಪಡೆಗಳಿಂದ ಹಿಮ್ಮೆಟ್ಟಿಸಲ್ಪಟ್ಟರು.
ಪ್ರಥಮ ವಿಶ್ವ ಸಮರದಲ್ಲಿ ಭಾರತೀಯ ಸೇನಾ ಪಡೆಯು ಕೆಳಕಂಡಂತೆ ವ್ಯಾಪಕವಾದ ಸೇವಾ ಕಾರ್ಯಾಚರಣೆಗಳನ್ನು ನಡೆಸಿತ್ತು:
- ಪಾಶ್ಚಿಮಾತ್ಯ/ಪಶ್ಚಿಮ ರಾಷ್ಟ್ರ ರಂಗ
- ಗಾಲ್ಲಿಪೊಲಿ ಕದನ
- ಸಿನಾಯ್ ಹಾಗೂ ಪ್ಯಾಲೆಸ್ತೈನ್ ದಂಡಯಾತ್ರೆಗಳು
- ಮೆಸೊಪಟೋಮಿಯಾದ ಕಾರ್ಯಾಚರಣೆ, ಕಟ್/ಕುಟ್ದ ಮುತ್ತಿಗೆ
- ತಂಗಾ/ಟಂಗಾ ಕದನವೂ ಸೇರಿದಂತೆ ಪೂರ್ವ ಆಫ್ರಿಕಾದಲ್ಲಿ ನಡೆಸಿದ ಕಾರ್ಯಾಚರಣೆ
ಭಾರತೀಯ ಉಪಖಂಡದಿಂದ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರು ೧೨ ವಿಕ್ಟೋರಿಯಾ ಕ್ರಾಸ್ ಪದಕಗಳೂ ಸೇರಿದಂತೆ ೧೩,೦೦೦ ಪದಕಗಳನ್ನು ಪಡೆದುಕೊಂಡಿದ್ದರು. ಯುದ್ಧದ ಕೊನೆಯ ಹೊತ್ತಿಗೆ ಒಟ್ಟಾರೆ ೪೭,೭೪೬ ಭಾರತೀಯರು ಮರಣಿಸಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ಹಾಗೂ ; ೬೫,೧೨೬ ಜನರು ಗಾಯಗೊಂಡಿದ್ದಾರೆಂದು ತಿಳಿದುಬಂದಿತ್ತು.[೮]
ಪ್ರಥಮ ವಿಶ್ವ ಸಮರದಲ್ಲಿ ಕಾರ್ಯನಿರ್ವಹಿಸಿದ ಇತರೆ ಪಡೆಗಳೆಂದರೆ "ರಾಜವಂಶೀಯರ ಸೇವಾನಿರತ ಸೈನಿಕಪಡೆ " ಎಂದು ಕರೆಯಲ್ಪಡುತ್ತಿದ್ದ ಭಾಗಶಃ ಸ್ವಾಯತ್ತವಾಗಿ ರಾಜಾಡಳಿತಕ್ಕೆ ಒಳಪಟ್ಟ ಸಂಸ್ಥಾನಗಳಿಂದ ಕಳುಹಿಸಲ್ಪಟ್ಟ ಸೈನಿಕಪಡೆಗಳು. ಪ್ರಧಾನವಾಗಿ ಪಂಜಾಬ್ನ ಸಿಖ್ಖರು ಮತ್ತು ರಜಪುಟಾಣದ ರಜಪೂತರು (ಬಿಕನೇರ್ನ ಒಂಟೆ ಪಡೆಗಳು ಮತ್ತು ಜೋಧ್ಪುರದ ಭಲ್ಲೆ ಅಶ್ವಾರೋಹಿ ಪಡೆಗಳಂತಹಾ)ಗಳನ್ನೊಳಗೊಂಡಿದ್ದ ಈ ಪಡೆಗಳಿಂದ ಸುಮಾರು ೨೧,೦೦೦ ಮಂದಿಯನ್ನು ಪ್ರಥಮ ವಿಶ್ವ ಸಮರಕ್ಕೆ ಕಳುಹಿಸಲಾಗಿತ್ತು. ಈ ಪಡೆಗಳು ಸಿನಾಯ್ ಮತ್ತು ಪ್ಯಾಲೆಸ್ತೈನ್ ದಂಡಯಾತ್ರೆಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದವು.
ವಿಶ್ವಸಮರಗಳ ನಡುವಿನ ಅವಧಿ
[ಬದಲಾಯಿಸಿ]ಸೇನಾಪಡೆಯ ಕೆಲ ತುಕಡಿಗಳು ಟರ್ಕ್ಮೇನಿಸ್ತಾನ್ದ ಮೇರಿ ಎಂಬಲ್ಲಿ ೧೯೧೮-೧೯ರ ಅವಧಿಯಲ್ಲಿ ಕಾರ್ಯಾಚರಿಸುತ್ತಿದ್ದವು. ರಷ್ಯಾದ ಅಂತಃಕಲಹದ ಸಂದರ್ಭದಲ್ಲಿ ಮಿತ್ರಕೂಟ ರಾಷ್ಟ್ರಗಳ ಮಧ್ಯಪ್ರವೇಶ ಲೇಖನವನ್ನು ನೋಡಿ. ಈ ಸೇನಾಪಡೆಯು ನಂತರ ೧೯೧೯ರ ತೃತೀಯ ಆಂಗ್ಲೋ ಆಫ್ಘನ್ ಯುದ್ಧದಲ್ಲಿ ಭಾಗವಹಿಸಿತು.
ಪ್ರಥಮ ವಿಶ್ವ ಸಮರದ ನಂತರದ ಪರಿಣಾಮಗಳಲ್ಲಿ, ೧೯೨೦ರ ದಶಕದಲ್ಲಿ ಭಾರತೀಯ ಪ್ರಾಂತೀಯ ಸೇನಾಪಡೆ ಮತ್ತು ಸಹಾಯಕ/ಬೆಂಬಲ ಸೇನಾಪಡೆಗಳನ್ನು (ಭಾರತ) ರಚಿಸಲಾಯಿತು. ಭಾರತೀಯ ಪ್ರಾಂತೀಯ ಸೇನಾಪಡೆಯು ಸೇನಾಪಡೆಯೊಳಗಿನ ಅರೆ-ಕಾಲಿಕ, ವೇತನ ನಿಗದಿಪಡಿಸಿದ, ಸಂಪೂರ್ಣವಾಗಿ ಸ್ವಯಂ-ಇಚ್ಛೆಯಿಂದ ಸೇವೆ ಸಲ್ಲಿಸುತ್ತಿರುವವರ ಸಂಘಟನೆಯಾಗಿತ್ತು. ಇದರ ಘಟಕಗಳಲ್ಲಿ ಸಾಮಾನ್ಯವಾಗಿ ಐರೋಪ್ಯ ಅಧಿಕಾರಿಗಳು ಮತ್ತು ಇತರೆ ದರ್ಜೆಗಳಲ್ಲಿ ಭಾರತೀಯರು ನೇಮಕಗೊಂಡಿದ್ದರು. ITF ಪಡೆಯನ್ನು ೧೯೨೦ರ[೯] ಭಾರತೀಯ ಪ್ರಾಂತೀಯ ಸೇನಾಪಡೆಯ ಕಾಯಿದೆಯ ಮುಖಾಂತರ ಭಾರತೀಯ ರಕ್ಷಣಾ ಪಡೆಯ ಭಾರತೀಯ ವಿಭಾಗವನ್ನು ಬದಲಾಯಿಸುವ/ಸ್ಥಳಾಂತರಿಸುವ ಉದ್ದೇಶದಿಂದ ರಚಿಸಲಾಗಿತ್ತು. ಇದು ಬ್ರಿಟಿಷ್ ಪ್ರಾಂತೀಯ ಸೇನೆಯನ್ನು ಹೋಲುವಂತೆ ರಚಿಸಲ್ಪಟ್ಟ ಸಂಪೂರ್ಣವಾಗಿ ಸ್ವಯಂ-ಇಚ್ಛೆಯಿಂದ ಸೇವೆ ಸಲ್ಲಿಸುತ್ತಿರುವವರ ಪಡೆಯಾಗಿತ್ತು. ITFಗೆ ಸಮಾಂತರವೆನಿಸುವ ಐರೋಪ್ಯ ಪಡೆಯೆಂದರೆ ಸಹಾಯಕ/ಬೆಂಬಲ ಸೇನಾಪಡೆಯಾಗಿತ್ತು (ಭಾರತ).
ವಿಶ್ವ ಸಮರ Iರ ನಂತರ ಬ್ರಿಟಿಷರು ಭಾರತೀಯರನ್ನು ಉನ್ನತ ದರ್ಜೆಯ ಸ್ಥಾನಗಳಿಗೆ ಬಡ್ತಿ ಕೊಡುವ ಮೂಲಕ ಭಾರತೀಕರಣಗೊಳಿಸುವ ಪ್ರಕ್ರಿಯೆಗಳನ್ನು ಆರಂಭಿಸಿದರು. ಭಾರತೀಯ ಸೇನಾ ವಿದ್ಯಾರ್ಥಿಗಳನ್ನು ಸ್ಯಾಂಡ್ಹರ್ಸ್ಟ್ ಎಂಬಲ್ಲಿಯ ಬ್ರಿಟಿಷ್ ರಾಜವಂಶದ ಸೈನಿಕ ಶಿಕ್ಷಣ ಶಾಲೆಯಲ್ಲಿ ಅಧ್ಯಯನ ನಡೆಸಲು/ತರಬೇತುಗೊಳ್ಳಲು ಕಳುಹಿಸಲಾಗುತ್ತಿತ್ತಲ್ಲದೇ ಬ್ರಿಟಿಷ್ ಮಹಾರಾಜರ ಸೇವೆಗೆ ನಿಯುಕ್ತಗೊಂಡ ಭಾರತೀಯ ಅಧಿಕಾರಿಗಳ ದರ್ಜೆಯ ಸೇವೆಗಳನ್ನು ನೀಡಲು ಸಂಪೂರ್ಣವಾಗಿ ಸಿದ್ಧಗೊಳಿಸಿರುತ್ತಿದ್ದರು. KCIOಗಳು ಎಲ್ಲ ರೀತಿಗಳಲ್ಲಿಯೂ ಬ್ರಿಟಿಷ್ ನಿಯುಕ್ತಗೊಂಡ ಅಧಿಕಾರಿಗಳಿಗೆ ಸರಿಸಮರಾಗಿರುತ್ತಿದ್ದರು ಹಾಗೂ ಬ್ರಿಟಿಷ್ ತುಕಡಿಗಳ (VCOಗಳ ಹಾಗಲ್ಲದೇ) ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಿದ್ದರು. ಕೆಲ KCIO ಅಧಿಕಾರಿಗಳನ್ನು ಅವರ ವೃತ್ತಿಜೀವನದ ಭಾಗವಾಗಿ ಬ್ರಿಟಿಷ್ ಸೇನಾ ಘಟಕಗಳಿಗೆ ನೇಮಿಸಲಾಗುತ್ತಿತ್ತು.
೧೯೨೨ರಲ್ಲಿ ಏಕ ತುಕಡಿ ಕಾಲಾಳುಪಡೆಗಳ ದೊಡ್ಡ ಗುಂಪುಗಳು ನಿರ್ವಹಿಸಲು ಕಷ್ಟಸಾಧ್ಯವಾಗಿರುತ್ತದೆ ಎಂದು ಅನುಭವದಿಂದ ಮನಗಂಡ ನಂತರ ಅನೇಕ ದೊಡ್ಡ ಕಾಲಾಳು ಪಡೆಗಳನ್ನು ರಚಿಸಲಾಗಿತ್ತು, ಮತ್ತು ಹಲವು ಅಶ್ವಬಲ/ಅಶ್ವಸೇನಾ ದಳಗಳನ್ನು ಸಂಯೋಜಿಸಲಾಯಿತು. ಭಾರತೀಯ ಸೇನಾಪಡೆಯ (೧೯೨೨) ದಳಗಳ ಪಟ್ಟಿಯು ದೊಡ್ಡ ದಳಗಳ ಸಂಖ್ಯೆಯು ಕಡಿಮೆಗೊಂಡಿರುವುದನ್ನು ತೋರಿಸುತ್ತದೆ. ೧೯೩೨ರವರೆಗೆ ಬಹುತೇಕ ಬ್ರಿಟಿಷ್ ಭಾರತೀಯ ಸೇನಾಧಿಕಾರಿಗಳು, ಬ್ರಿಟಿಷ್ ಹಾಗೂ ಭಾರತೀಯ ಪಡೆಗಳೆರಡೂ ಸೇರಿದಂತೆ ಸ್ಯಾಂಡ್ಹರ್ಸ್ಟ್ ಎಂಬಲ್ಲಿಯ ಬ್ರಿಟಿಷ್ ರಾಜವಂಶದ ಸೈನಿಕ ಶಿಕ್ಷಣ ಶಾಲೆಯಲ್ಲಿ ತರಬೇತಿಯನ್ನು ಪಡೆದಿರುತ್ತಿದ್ದರು, ಅದಾದ ನಂತರ ಭಾರತೀಯ ಅಧಿಕಾರಿಗಳು ಅದೇ ವರ್ಷವೇ ಡೆಹ್ರಾಡೂನ್ನಲ್ಲಿ ಸ್ಥಾಪಿತವಾದ ಭಾರತೀಯ ಸೈನಿಕ ಶಿಕ್ಷಣ ಶಾಲೆಯಲ್ಲಿ ತರಬೇತಿಯನ್ನು ಪಡೆಯುವುದು ಹೆಚ್ಚಾಗುತ್ತಾ ಹೋಯಿತು.
ದ್ವಿತೀಯ ಜಾಗತಿಕ ಸಮರ
[ಬದಲಾಯಿಸಿ]ದ್ವಿತೀಯ ವಿಶ್ವ ಸಮರವು ಆರಂಭವಾದ ಸಮಯದಲ್ಲಿ, ಭಾರತೀಯ ಸೇನೆಯು ೨೦೫,೦೦೦ ಮಂದಿ ಸೈನಿಕರನ್ನು ಹೊಂದಿತ್ತು. ಈ ಸಂಖ್ಯೆಯು ನಂತರ ಹೆಚ್ಚಾಗಿ ದ್ವಿತೀಯ ವಿಶ್ವ ಸಮರವು ನಡೆಯುತ್ತಿದ್ದ ಅವಧಿಯಲ್ಲಿ ಭಾರತೀಯ ಸೇನಾಪಡೆಯು ೨.೫ ದಶಲಕ್ಷಕ್ಕೂ ಮೀರಿದಾಗ ಇತಿಹಾಸದಲ್ಲಿ ದಾಖಲಾದ ಸಂಪೂರ್ಣವಾಗಿ ಸ್ವಯಂ-ಇಚ್ಛೆಯಿಂದ ಸೇವೆ ಸಲ್ಲಿಸುತ್ತಿರುವವರ ಅತಿದೊಡ್ಡ/ಬೃಹತ್ ಸೇನಾಪಡೆಯೆನಿಸಿಕೊಂಡಿತು. ಹಾಗೆ ಮಾಡುವಾಗ ಭಾರತೀಯ III ಘಟಕಗಳು, ಭಾರತೀಯ IV ಘಟಕಗಳು, ಭಾರತೀಯ XV ಘಟಕಗಳು, ಭಾರತೀಯ XXXIII ಘಟಕಗಳು, ಭಾರತೀಯ XXXIV ಘಟಕಗಳು, ೪th, ೫th, ೬th, ೭th, ೮th, ೯th, ೧೦th, ೧೧th, ೧೨th, ೧೪th, ೧೭th, ೧೯th, ೨೦th, ೨೧st, ಮತ್ತು ೨೩rd ಭಾರತೀಯ ಸೇನಾ ವಿಭಾಗಗಳನ್ನೂ ಹಾಗೂ ಇನ್ನಿತರ ಪಡೆಗಳನ್ನೂ ರಚಿಸಲಾಯಿತು. ಹೆಚ್ಚುವರಿಯಾಗಿ ಎರಡು ಶಸ್ತ್ರಸಜ್ಜಿತ ವಿಭಾಗಗಳನ್ನು ಹಾಗೂ ಒಂದು ವಾಯುಗಾಮಿ ವಿಭಾಗವನ್ನು ರಚಿಸಲಾಯಿತು. ಆಡಳಿತ, ಶಸ್ತ್ರಾಗಾರ/ಶಸ್ತ್ರಗಳು, ತರಬೇತಿ ಮತ್ತು ಉಪಕರಣಗಳ ವಿಚಾರದಲ್ಲಿ, ಭಾರತೀಯ ಸೇನೆಯು ಗಮನಾರ್ಹ ಮಟ್ಟದ ಸ್ವಾತಂತ್ರ್ಯವನ್ನು ಹೊಂದಿತ್ತು; ಉದಾಹರಣೆಗೆ ಯುದ್ಧಕ್ಕೆ ಮುಂಚೆ ಭಾರತೀಯ ಸೇನಾಪಡೆಯು ಬ್ರಿಟಿಷ್ ಸೇನೆಯ ಆಯ್ಕೆಯಾಗಿದ್ದ ಬ್ರೆನ್ ಬಂದೂಕಿನ ಬದಲು ವಿಕರ್ಸ್-ಬರ್ತೀಯರ್ (VB) ಹಗುರ ಮೆಷೀನ್ ಬಂದೂಕನ್ನು ಅಳವಡಿಸಿಕೊಂಡಿತ್ತು ಹಳೆಯ SMLE No. ೧ Mk III ಬಂದೂಕು/ಕೋವಿ/ರೈಫಲನ್ನು ನಿರ್ಮಿಸಿ ವಿತರಿಸುವುದನ್ನು ಮುಂದುವರೆಸಿದ್ದರೂ ದ್ವಿತೀಯ ವಿಶ್ವ ಸಮರದ ಅವಧಿಯಲ್ಲಿ, ಲೀ-ಎನ್ಫೀಲ್ಡ್ No.೪ರ ಬದಲಿಗೆ Mk I ಬಂದೂಕನ್ನು ಬ್ರಿಟಿಷ್ ಸೇನೆಗೆ ಯುದ್ಧದ ಮಧ್ಯಂತರ ಅವಧಿಯಿಂದ ನೀಡಲಾಗುತ್ತಿತ್ತು.[೧೦]
ನಿರ್ದಿಷ್ಟವಾಗಿ ಈ ಹೋರಾಟದ ಅವಧಿಯಲ್ಲಿ ಭಾರತೀಯ ಸೇನೆಯು ನೀಡಿದ ಗಮನಾರ್ಹ ಕೊಡುಗೆಗಳೆಂದರೆ:
- ಮೆಡಿಟರೇನಿಯನ್, ಮಧ್ಯ ಪ್ರಾಚ್ಯ ಮತ್ತು ಆಫ್ರಿಕನ್/ಆಫ್ರಿಕಾದ ವಿಶ್ವ ಸಮರ IIರ ಯುದ್ಧಕ್ಷೇತ್ರಗಳು
- ಪೂರ್ವ ಆಫ್ರಿಕನ್/ಆಫ್ರಿಕಾದ ದಂಡಯಾತ್ರೆ
- ಉತ್ತರ ಆಫ್ರಿಕನ್/ಆಫ್ರಿಕಾದ ದಂಡಯಾತ್ರೆ
- ಕಂಪಾಸ್ ಕಾರ್ಯಾಚರಣೆ
- ಬ್ಯಾಟಲ್ಏಕ್ಸ್ ಕಾರ್ಯಾಚರಣೆ
- ಕ್ರುಸೇಡರ್ ಕಾರ್ಯಾಚರಣೆ
- ಎಲ್ ಅಲಾಮೇನ್ನ ಪ್ರಥಮ ಕದನ
- ಎಲ್ ಅಲಾಮೇನ್ನ ದ್ವಿತೀಯ ಕದನ
- ಆಂಗ್ಲೋ-ಇರಾಕಿ ಯುದ್ಧ
- ಸಿರಿಯಾ - ಲೆಬನಾನ್ ದಂಡಯಾತ್ರೆ
- ಇರಾನ್ನ ಆಂಗ್ಲೋ-ಸೋವಿಯತ್ ಆಕ್ರಮಣ
- ಇಟಲಿಯ ದಂಡಯಾತ್ರೆ
- ಮಾಂಟೆ ಕ್ಯಾಸ್ಸಿನೋದ ಕದನ
- ಹಾಂಗ್ಕಾಂಗ್ ಕದನ
- ಮಲಯ ಕದನ
- ಸಿಂಗಾಪುರದ ಕದನ
- ಬರ್ಮಾದ ದಂಡಯಾತ್ರೆ
- ಕೊಹಿಮಾ ಕದನ
- ಇಂಫಾಲದ ಕದನ
ಸರಿಸುಮಾರು ೮೭,೦೦೦ ಭಾರತೀಯ ಸೈನಿಕರು ಈ ಹೋರಾಟದಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡರು. ಭಾರತೀಯ ಸೈನಿಕರು ೩೦ ವಿಕ್ಟೋರಿಯಾ ಕ್ರಾಸ್ ಪದಕಗಳನ್ನು ದ್ವಿತೀಯ ವಿಶ್ವ ಸಮರದ ಸಂದರ್ಭದಲ್ಲಿ ಪಡೆದುಕೊಂಡಿದ್ದರು. (ನೋಡಿ: ಭಾರತೀಯ ವಿಕ್ಟೋರಿಯಾ ಕ್ರಾಸ್ ಪದಕ ವಿಜೇತರು.)
ಜರ್ಮನ್ನರು ಮತ್ತು ಜಪಾನೀಯರು ಭಾರತೀಯ ಯುದ್ಧ ಕೈದಿಗಳನ್ನು ಬಳಸಿಕೊಂಡು ಹೋರಾಟಗಳಿಗೆ ಸೇನಾಪಡೆಗಳನ್ನು ನೇಮಿಸಿಕೊಳ್ಳುವಲ್ಲಿ ತುಲನಾತ್ಮಕವಾಗಿ ಯಶಸ್ವಿಯಾಗಿದ್ದರು. ಟೈಗರ್ ಲೆಜಿಯನ್/ಹುಲಿ ಲೆಜಿಯನ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆ (INA) ಎಂದು ಈ ಪಡೆಗಳನ್ನು ಕರೆಯಲಾಗುತ್ತಿತ್ತು. ಭಾರತೀಯ ರಾಷ್ಟ್ರೀಯವಾದಿ ನಾಯಕರಾದ ಸುಭಾಷ್ ಚಂದ್ರ ಬೋಸ್ರವರು ೪೦,೦೦೦-ಸೈನಿಕರಿಂದ ಕೂಡಿದ್ದ INA ಪಡೆಯನ್ನು ಮುನ್ನಡೆಸುತ್ತಿದ್ದರು. ಮಲಯ ಮತ್ತು ಸಿಂಗಾಪುರ್ಗಳಲ್ಲಿ ಫೆಬ್ರವರಿ ೧೯೪೨ರಲ್ಲಿ ಸೆರೆ ಹಿಡಿಯಲಾಗಿದ್ದ ಒಟ್ಟು ಸರಿಸುಮಾರು ೫೫,೦೦೦ ಭಾರತೀಯರಲ್ಲಿ ಸುಮಾರು ೩೦,೦೦೦ ಮಂದಿ ಸೈನಿಕರು INA,[೧೧]ಗೆ ಸೇರಿಕೊಂಡರು, ಈ ತಂಡವು ಬರ್ಮಾ ದಂಡಯಾತ್ರೆ ಕದನದಲ್ಲಿ ಮಿತ್ರ ಪಡೆಗಳೊಂದಿಗೆ ಕಾದಾಡಿತು. ಇತರರು ಜಪಾನೀಯರ POW ಶಿಬಿರಗಳಲ್ಲಿ ಅಂಗರಕ್ಷಕ ಪಡೆಯವರಾದರು. ಈ ನೇಮಕಾತಿಯ ಯೋಜನೆಯು ಮೇಜರ್ ಫ್ಯೂಜಿವರಾ ಇವಾಯ್ಚಿರವರ ಚಿಂತನೆಯ ಫಲ/ಮಿದುಳಕೂಸಾಗಿತ್ತು, ಅವರು ತಮ್ಮ ಆತ್ಮಕಥೆಯಲ್ಲಿ ಜಿಟ್ರಾ/ತ್ರಾದ ಪರಾಜಯದ ನಂತರ ಶರಣಾದ ಕ್ಯಾಪ್ಟನ್ ಮೋಹನ್ ಸಿಂಗ್ ದೇವ್/ಬ್ರನ್ನು ಪ್ರಸ್ತಾಪಿಸಿ ಅವರು ನಂತರ INAಯ ಸ್ಥಾಪಕರಾಗುತ್ತಾರೆ ಎಂದು ಬರೆದಿರುತ್ತಾರೆ.
ಆದಾಗ್ಯೂ, ಬಹುತೇಕ ಭಾರತೀಯ ಸೇನಾಪಡೆಯ ಸಿಬ್ಬಂದಿಗಳು ಈ ನೇಮಕಾತಿಯನ್ನು ವಿರೋಧಿಸಿ POWಗಳಲ್ಲಿ ಉಳಿದರು.[ಸೂಕ್ತ ಉಲ್ಲೇಖನ ಬೇಕು] ಮಲಯ ಮತ್ತು ಸಿಂಗಾಪುರ್ಗಳಲ್ಲಿ ಸೆರೆಯಾದ ಅಜ್ಞಾತ ಸಂಖ್ಯೆಯ ಜನರನ್ನು ನ್ಯೂಗಿನಿಯಾದ ಜಪಾನೀಯರಿಂದ-ಆಕ್ರಮಿತ ಪ್ರದೇಶಗಳಿಗೆ ಬಲಾತ್ಕಾರಪೂರ್ವಕವಾಗಿ ಕೂಲಿಯಾಳುಗಳಾಗಿ ಕರೆದೊಯ್ಯಲಾಗಿತ್ತು. ಹೀಗೆ ಕರೆದೊಯ್ಯಲಾದ ಸೈನಿಕರಲ್ಲಿ ಅನೇಕ ಮಂದಿ ದ್ವಿತೀಯ ವಿಶ್ವ ಸಮರದ ಸಂದರ್ಭದಲ್ಲಿ ಜಪಾನ್ನ ಇತರೆ ಯುದ್ಧಕೈದಿಗಳು ಅನುಭವಿಸಿದಂತಹಾ ತೀವ್ರತರವಾದ ಯಾತನೆಗಳಿಗೆ ಹಾಗೂ ಕ್ರೌರ್ಯಗಳಿಗೆ ಸಾಕ್ಷಿಯಾದರು. ಆಸ್ಟ್ರೇಲಿಯಾದ ಅಥವಾ U.S. ಸೇನಾಪಡೆಗಳಿಂದ ೧೯೪೩-೪೫ರ ಅವಧಿಯಲ್ಲಿ ತಮ್ಮನ್ನು ವಿಮುಕ್ತಿಗೊಳಿಸುವ ಹೊತ್ತಿಗೆ ಅವರಲ್ಲಿ ಸರಿಸುಮಾರು ೬,೦೦೦ ಮಂದಿ ಮಾತ್ರ ಉಳಿದುಕೊಂಡಿದ್ದರು.[೧೧]
ವಿಶ್ವ ಸಮರ IIರ ಅವಧಿಯಲ್ಲಿ, ಸಿಂಗಪೂರ್ ಸೋಲನ್ನೊಪ್ಪಿದ ನಂತರ ಹಾಗೂ ೧೯೪೨ರ ಆರಂಭದಲ್ಲಿ ABDACOMನ ಕೊನೆಯಾದ ನಂತರ, ಆಗಸ್ಟ್ ೧೯೪೩ರಲ್ಲಿ ಆಗ್ನೇಯ ಏಷ್ಯಾ ಕಮ್ಯಾಂಡ್/ಸೇನಾಧಿಪತ್ಯವು (SEAC) ಸ್ಥಾಪನೆಯಾಗುವವರೆಗೆ ಕೆಲ ಅಮೇರಿಕನ್ ಮತ್ತು ಚೀನೀಯರ ಸೇನಾಘಟಕಗಳನ್ನು ಬ್ರಿಟಿಷ್ ಸೇನೆಯ ಸೇನಾಧಿಪತ್ಯದಡಿಯಲ್ಲಿ ನಿಯುಕ್ತಗೊಳಿಸಲಾಗಿತ್ತು.
ದ್ವಿತೀಯ ವಿಶ್ವ ಸಮರಾನಂತರದ ಅವಧಿ
[ಬದಲಾಯಿಸಿ]೧೯೪೭ರಲ್ಲಿ ಭಾರತದ ವಿಭಜನೆಯಾದ ಪರಿಣಾಮವಾಗಿ ಸೇನಾವ್ಯೂಹಗಳು, ಘಟಕಗಳು, ಆಸ್ತಿಗಳು ಮತ್ತು ಭಾರತೀಯ ಸೇನೆಯ ಸ್ಥಳೀಯ ಸಿಬ್ಬಂದಿಗಳನ್ನು ವಿಭಜಿಸಿದಾಗ ಭಾರತೀಯ ಒಕ್ಕೂಟವು ಆಸ್ತಿಗಳಲ್ಲಿ ಮೂರರಲ್ಲಿ ಎರಡು ಭಾಗಗಳನ್ನು ಉಳಿಸಿಕೊಂಡು ಮೂರನೇ ಒಂದು ಭಾಗವನ್ನು ಪಾಕಿಸ್ತಾನವೆಂಬ ಹೊಸ ರಾಷ್ಟಕ್ಕೆ ಬಿಟ್ಟುಕೊಟ್ಟಿತು.[೧೨] ನಾಲ್ಕು ಗೂರ್ಖಾ ತುಕಡಿಗಳನ್ನು (ಅವುಗಳಲ್ಲಿ ಬಹುತೇಕವನ್ನು ಭಾರತದ ಹೊರಗಿದ್ದ ನೇಪಾಳದಲ್ಲಿ ನೇಮಕಗೊಳಿಸಲಾಗಿತ್ತು), ಮಾಜಿ ಭಾರತೀಯ ಸೇನೆಯಿಂದ ಬ್ರಿಟಿಷ್ ಸೇನೆಗೆ ವರ್ಗಾಯಿಸಲಾಯಿತಲ್ಲದೇ ಅದರ ಗೂರ್ಖಾಗಳ ಪದಾತಿದಳವನ್ನಾಗಿ ರೂಪಿಸಿ ಮಲಯದಲ್ಲಿನ ಹೊಸ ಸ್ಥಳಕ್ಕೆ ರವಾನಿಸಲಾಯಿತು. ಭಾರತದಲ್ಲಿದ್ದ ಬ್ರಿಟಿಷ್ ಸೇನಾ ಘಟಕಗಳು ಯುನೈಟೆಡ್ ಕಿಂಗ್ಡಮ್ಗೆ ಮರಳಿದವು ಇಲ್ಲವೇ ಭಾರತ ಮತ್ತು ಪಾಕಿಸ್ತಾನಗಳ ಹೊರಗಿರುವ ಇತರೆ ಸ್ಥಳಗಳಲ್ಲಿ ಅವರನ್ನು ನಿಯುಕ್ತಗೊಳಿಸಲಾಯಿತು. ವಿಭಜನಾ ನಂತರದ ಸಂಕ್ರಮಣ ಕಾಲದಲ್ಲಿ ಭಾರತದಲ್ಲಿದ್ದ ಪ್ರಧಾನ ಕಛೇರಿಯಲ್ಲಿದ್ದ ಆಗಿನ ಮೇಜರ್ ಜನರಲ್ ಲಷ್ಮೇರ್ ವ್ಹಿಸ್ಲರ್ರವರಿಗೆ ಅಧೀನರಾಗಿದ್ದ ಬ್ರಿಟಿಷ್ ತುಕಡಿಗಳು, ಹೊರಹೊರಡುತ್ತಿದ್ದ ಬ್ರಿಟಿಷ್ ಸೇನಾಘಟಕಗಳ ಮೇಲೆ ನಿಯಂತ್ರಣವನ್ನು ಹೊಂದಿದ್ದವು. ಕೊನೆಯ ಬ್ರಿಟಿಷ್ ಸೇನಾ ಘಟಕ, ೧st ತುಕಡಿ, ಸೋಮರ್ಸೆಟ್ ಲಘು ಪದಾತಿ ದಳವು ೧೯೪೮ರ ಫೆಬ್ರವರಿ ೨೮ರಂದು ಭಾರತವನ್ನು ತೊರೆಯಿತು.[೧೩] ೭th ಭಾರತೀಯ ಪದಾತಿದಳ ವಿಭಾಗವು ಮಾತ್ರ ವಿಭಜನೆಗೆ ಮುನ್ನ ಪಾಕಿಸ್ತಾನದಲ್ಲಿ ನೆಲೆಸಿದ್ದುದರಿಂದ ಬಹುತೇಕ ಬ್ರಿಟಿಷ್ ಸೇನಾ ಘಟಕಗಳಲ್ಲಿದ್ದ ಉಪಕರಣಗಳನ್ನು ಭಾರತೀಯ ಸೇನೆಯೇ ಉಳಿಸಿಕೊಂಡಿತ್ತು.
ಭಾರತೀಯ ಸೇನೆಯಲ್ಲಿ ಉಳಿದುಕೊಂಡವರಲ್ಲಿ ಬಹುತೇಕ ಮುಸಲ್ಮಾನ ಸಿಬ್ಬಂದಿಗಳು ಹೊಸದಾಗಿ ರಚಿಸಲಾಗಿದ್ದ ಪಾಕಿಸ್ತಾನ ಸೇನೆಗೆ ಸೇರಲು ತೆರಳಿದರು. ಅನುಭವ ಹೊಂದಿದ ಅಧಿಕಾರಿಗಳ ಕೊರತೆಯಿದ್ದ ಕಾರಣದಿಂದ, ಅನೇಕ ನೂರು ಮಂದಿ ಬ್ರಿಟಿಷ್ ಅಧಿಕಾರಿಗಳು ೧೯೫೦ರ ದಶಕದ ಆದಿಯವರೆಗೆ ಪಾಕಿಸ್ತಾನದಲ್ಲಿಯೇ ಗುತ್ತಿಗೆಯ ಸೇವೆಯ ಮೇರೆಗೆ ಉಳಿದು ಸೇವೆ ಸಲ್ಲಿಸಿದ್ದರು. ೧೯೪೭ರಿಂದ ೧೯೪೮ರವರೆಗೆ ಭಾರತದ ಹಾಗೂ ಭಾರತೀಯ ಸೇನೆಗಳ ವಿಭಜನೆಗಳ ಕೆಲವೇ ಕಾಲದ ನಂತರ, ಈ ಎರಡು ಹೊಸ ಸೇನಾಪಡೆಗಳು ಪರಸ್ಪರರೊಂದಿಗೆ ಪ್ರಥಮ ಕಾಶ್ಮೀರ ಯುದ್ಧದಲ್ಲಿ ಹೋರಾಡುತ್ತಾ ೨೧ನೆಯ ಶತಮಾನದಲ್ಲಿಯೂ ಮುಂದುವರೆಯುತ್ತಿರುವ ತೀವ್ರ ಹಗೆತನವನ್ನು ಆರಂಭಿಸಿದ್ದವು.
ಆದ್ದರಿಂದ ಪ್ರಸ್ತುತ ಕಾಲದ ಭಾರತೀಯ ಸೇನೆ ಮತ್ತು ಪಾಕಿಸ್ತಾನ ಸೇನೆಗಳು ವಿಭಜನ-ಪೂರ್ವ ಭಾರತೀಯ ಸೇನೆಯ ಘಟಕಗಳಿಂದ ರೂಪುಗೊಂಡವಾಗಿವೆ. ಇವೆರಡೂ ಪಡೆಗಳು ಹಾಗೂ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಪಡೆದುಕೊಂಡ ನಂತರ ರೂಪುಗೊಂಡ ಬಾಂಗ್ಲಾದೇಶ ಸೇನೆಯು ಭಾರತೀಯ ಸೇನಾಪಡೆಯ ಸಂಪ್ರದಾಯಗಳನ್ನು ಉಳಿಸಿಕೊಳ್ಳುತ್ತಾ ಬಂದಿವೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಭಾರತೀಯ ಸೇನಾಪಡೆಯ ಪದಾತಿದಳಗಳ ಪಟ್ಟಿ (೧೯೦೩)
- ವಿಕ್ಟೋರಿಯಾ ಕ್ರಾಸ್ ಪದಕ ವಿಜೇತ ಭಾರತೀಯರು
- ಜೊಹಾನ್ನೆಸ್ಬರ್ಗ್ನಲ್ಲಿರುವ ಸ್ಮಾರಕ ದಿಬ್ಬಗಳ ಸಾಲು ಬ್ರಿಟಿಷ್ ಭಾರತೀಯ ಸೇನೆಯ ಸ್ಮರಣೆಗಾಗಿ ನಿರ್ಮಿಸಿರುವ ಸ್ಮಾರಕ ಸ್ಥಳ
- ಬ್ರಿಟಿಷ್ ರಾಜವಂಶದ ಭಾರತೀಯ ನೌಕಾಪಡೆ
ಉಲ್ಲೇಖಗಳು
[ಬದಲಾಯಿಸಿ]- ↑ Imperial Gazetteer of India, Volume IV 1908, p. 85 ಹೇಳಿಕೆ/ಉಲ್ಲೇಖ: "ಬ್ರಿಟಿಷ್ ಸರ್ಕಾರವು ಸ್ಥಳೀಯ ರಾಜರುಗಳ ಮೇಲೆ ಆಗಬಹುದಾದ ಆಕ್ರಮಣಗಳಿಂದ ಹಾಗೂ ಆಂತರಿಕ ಬಂಡಾಯಗಳಿಂದ ಕೂಡಾ ರಕ್ಷಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ : ಅದರ ಸೇನೆಯನ್ನು ಕೇವಲ ಬ್ರಿಟಿಷ್ ಭಾರತದ ರಕ್ಷಣೆಗೆ ಮಾತ್ರವಲ್ಲದೇ, ಚಕ್ರವರ್ತಿಗಳ ಮಹಾ ಸಾರ್ವಭೌಮತ್ವದಡಿಯಲ್ಲಿ ಬರುವ ಎಲ್ಲಾ ಸಂಸ್ಥಾನಗಳ ರಕ್ಷಣೆಗೆಂದು ಸಂಘಟಿಸಲಾಗಿದೆ."
- ↑ ಬ್ರಿಟಿಷ್ ಸೇನಾಪಡೆಯ ಆಕ್ಸ್ಫರ್ಡ್ ಇತಿಹಾಸ
- ↑ "Southern Command History". Retrieved 4 January 2010.
- ↑ ೧೯೧೪ರ ಸಾಲಿನ ಕದನಗಳ ಪಟ್ಟಿ, ನೋಡಿ ಗ್ರಹಾಂ ವ್ಯಾಟ್ಸನ್, 1914ರ ಸಾಲಿನ ಭಾರತೀಯ ಸೇನಾಪಡೆಯು ನಡೆಸಿದ ಕದನಗಳ ವ್ಯವಸ್ಥಿತ ಪಟ್ಟಿ Archived 2009-09-09 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ದ ನ್ಯಾಷನಲ್ ಆರ್ಚೀವ್ಸ್, http://www.nationalarchives.gov.uk/pathways/firstworldwar/service_records/sr_soldiers.htm
- ↑ Barua, Pradeep (2003). The Gentlemen of the Raj. Praeger Publishing.
{{cite book}}
: Unknown parameter|city=
ignored (help) - ↑ ಹೇಥಾರ್ನ್ ಥ್ವೈಟ್ P.J. (೧೯೯೨). ದ ವರ್ಲ್ಡ್ ವಾರ್ ಒನ್ ಸೋರ್ಸ್ಬುಕ್ , ಆರ್ಮ್ಸ್ ಅಂಡ್ ಆರ್ಮರ್ ಪ್ರೆಸ್.
- ↑ ೮.೦ ೮.೧ Participants from the Indian subcontinent in the First World War, Memorial Gates Trust, retrieved 2009-09-12
- ↑ "ಭಾರತೀಯ ಸಹಾಯಕ/ಬೆಂಬಲ ಸೇನಾಪಡೆಗಳು: A ಪ್ರಾಂತೀಯ ಸ್ಥೂಲನಕ್ಷೆ ", ದ ಟೈಮ್ಸ್ , ೧ ಅಕ್ಟೋಬರ್ ೧೯೨೦
- ↑ ವೀಕ್ಸ್, ಜಾನ್, ವರ್ಲ್ಡ್ ವಾರ್ II ಸ್ಮಾಲ್ ಆರ್ಮ್ಸ್ , ನ್ಯೂಯಾರ್ಕ್ : ಗಲಾಹಾಡ್ ಬುಕ್ಸ್ (೧೯೭೯), ISBN ೦೮೮೩೬೫೪೦೩೨, p. ೮೯
- ↑ ೧೧.೦ ೧೧.೧ ಪೀಟರ್ ಸ್ಟ್ಯಾನ್ಲಿ "ಗ್ರೇಟ್ ಇನ್ ಅಡ್ವರ್ಸಿಟಿ": ನ್ಯೂಗಿನಿಯಾದಲ್ಲಿನ ಭಾರತೀಯ ಯುದ್ಧ ಕೈದಿಗಳು Archived 2008-01-14 ವೇಬ್ಯಾಕ್ ಮೆಷಿನ್ ನಲ್ಲಿ. ಆಸ್ಟ್ರೇಲಿಯಾದ ಯುದ್ಧ ಸ್ಮಾರಕ ಜಾಲತಾಣದಲ್ಲಿ
- ↑ ಬ್ರಿಯಾನ್ ಲ್ಯಾಪ್ಪಿಂಗ್, 'ಎಂಡ್ ಆಫ್ ಎಂಪೈರ್,' ಗಿಲ್ಡ್ ಪಬ್ಲಿಷಿಂಗ್, ಲಂಡನ್, ೧೯೮೫, p.೭೫-೬, p.೮೨: 'ಎರಡು ಬೃಹತ್ ಪ್ರಾಂತ್ಯಗಳನ್ನು ಗಮನದಲ್ಲಿಟ್ಟುಕೊಂಡು [ಪಂಜಾಬ್ & ಸಿಂಧ್] ಸೇನಾಪಡೆ ಹಾಗೂ ನಾಗರಿಕ ಸೇವಾಸಂಸ್ಥೆಗಳ ವಿಭಜನೆಯನ್ನು ಮಾಡುವುದು ಸುಲಭವಾಗಿತ್ತು, ಆದರೆ ಇತರೆ ಯಾವುದೇ ಮಾನಕದ ಅನುಸಾರವಾಗಿ ಮಾಡಿದ್ದರೆ, ಇದು ಕಷ್ಟಸಾಧ್ಯ, ವ್ಯರ್ಥಪ್ರಯತ್ನ ಹಾಗೂ ಮಾರಕವಾಗುತ್ತಿತ್ತು . ... ಸಿಬ್ಬಂದಿಗಳನ್ನು ತಮ್ಮ ಘಟಕಗಳ ಭಾಗವಾಗಿ ವರ್ಗಾಯಿಸಲಾಗುತ್ತಿತ್ತು. ಪಾಕಿಸ್ತಾನವಾಗಿ ಮಾರ್ಪಟ್ಟ ಪ್ರದೇಶದಿಂದ ಹೊರಬರಲು ವಾಯುವ್ಯ ಸರಹದ್ದಿನ ಸೈನಿಕದಳಗಳ ಸಿಖ್ ಮತ್ತು ಹಿಂದೂ ಸೈನಿಕರು ಮುಸಲ್ಮಾನರ ಪ್ರಾಂತ್ಯಗಳ ಮೂಲಕವೇ ಹಾದು ಹೋಗಬೇಕಿತ್ತು.'
- ↑ Smyth, Sir John (1967). Bolo Whistler: the life of General Sir Lashmer Whistler: a study in leadership. London: Muller. pp. 170–184. OCLC 59031387.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- Corrigan, Gordon (2006). Sepoys in the Trenches: The Indian Corps on the Western Front 1914-15. Tempus Publishing Ltd. Pp. 296. ISBN 1862273545.
- Duckers, Peter (2003). The British Indian Army 1860-1914. Shire Books. ISBN 9780747805502.
- Guy, Alan J.; Boyden, Peter B. (1997). Soldiers of the Raj, The Indian Army 1600-1947. National Army Museum Chelsea.
- Imperial Gazetteer of India, Volume IV (1908). Indian Empire: Administrative. Oxford: Clarendon Press. Pp. 552.
- ಹೋಮ್ಸ್, ರಿಚಾರ್ಡ್. ಸಾಹಿಬ್ ದ ಬ್ರಿಟಿಷ್ ಸೋಲ್ಜರ್ ಇನ್ ಇಂಡಿಯಾ, ೧೭೫೦-೧೯೧೪
- ಲ್ಯಾಟಿಮರ್, ಜಾನ್/ಜೋನ್. (೨೦೦೪) ಬರ್ಮಾ : ದ ಫಾರ್ಗಾಟನ್ ವಾರ್ , ಲಂಡನ್ : ಜಾನ್ ಮುರ್ರೆ.
- ಮೇಸನ್, ಫಿಲಿಪ್, A ಮ್ಯಾಟರ್ ಆಫ್ ಆನರ್ : ಆನ್ ಅಕೌಂಟ್ ಆಫ್ ದ ಇಂಡಿಯನ್ ಆರ್ಮಿ, ಇಟ್ಸ್ ಆಫೀಸರ್ಸ್ ಅಂಡ್ ಮೆನ್ , ಮೆಕ್ಮಿಲನ್ ೧೯೭೪
- ಮಾಸ್ಟರ್ಸ್, ಜಾನ್. (೧೯೫೬). ಬ್ಯೂಗಲ್ಸ್ ಅಂಡ್ ಎ ಟೈಗರ್ : ವೈಕಿಂಗ್. (ವಿಶ್ವ ಸಮರ IIರವರೆಗಿನ ಅವಧಿಯಲ್ಲಿ ಗೂರ್ಖಾ ಪದಾತಿದಳದಲ್ಲಿ ಕಿರಿಯ ಬ್ರಿಟಿಷ್ ಸೇನಾಧಿಕಾರಿಯಾಗಿ ತಾವು ಸಲ್ಲಿಸಿದ ಸೇವೆಯ ಬಗ್ಗೆ ಆತ್ಮಕಥಾ ರೂಪದ ವರ್ಣನೆ)
- ಆಂಥನಿ ಫಾರ್ರಿಂಗ್ಟನ್, ಗೈಡ್ ಟು ದ ರೆಕಾರ್ಡ್ಸ್ ಆಫ್ ದ ಇಂಡಿಯಾ ಆಫೀಸ್ ಮಿಲಿಟರಿ ಡಿಪಾರ್ಟ್ಮೆಂಟ್, ಭಾರತ ಕಛೇರಿಗಳ ಗ್ರಂಥಾಲಯ ಹಾಗೂ ದಾಖಲೆಗಳು, ೧೯೮೨, ISBN ೦೯೦೩೩೫೯೩೦೮, ೯೭೮೦೯೦೩೩೫೯೩೦೬ (Google Booksನ ಮೂಲಕ)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಡೇವಿಡ್ ಸ್ಟೇನ್ಬರ್ಗ್, ಬ್ರಿಟಿಷ್ ರೂಲ್ಡ್ ಇಂಡಿಯಾ 1757-1947: ಗ್ರಂಥಗಳು ಲೇಖನಗಳು ಮತ್ತು ಪ್ರೌಢ ಪ್ರಬಂಧಗಳ ಗ್ರಂಥಸೂಚಿ, ಪಡೆದಿದ್ದು ಆಗಸ್ಟ್ ೨೦೧೦
- ಭಾರತೀಯ ಸೇನೆ : ಹಿಸ್ಟರಿ: ಬ್ರಿಟಿಷ್ ಎರಾ ಭಾರತೀಯ ಸೇನಾಪಡೆಯ ಜಾಲತಾಣದಲ್ಲಿ
- http://www.king-emperor.com Archived 2019-07-05 ವೇಬ್ಯಾಕ್ ಮೆಷಿನ್ ನಲ್ಲಿ. ಮಹಾ ಸಮರದಲ್ಲಿ ಭಾರತೀಯ ಸೇನೆ ೧೯೧೪-೧೯೧೮
- ಸ್ಟ್ಯಾಂಡ್ ಅಟ್ ಈಸ್ಟ್/ಪೂರ್ವರಾಷ್ಟ್ರಗಳ ನಿಲುವು - ಮಾರ್ಕ್ ಟುಲ್ಲಿ ಸ್ವಾತಂತ್ರ್ಯ ಪೂರ್ವ ಭಾರತೀಯ ಸೇನಾಪಡೆಯ ಬಗೆಗಿನ BBC ಶ್ರಾವ್ಯ ಕಾರ್ಯಕ್ರಮಗಳ ಸರಣಿಯಲ್ಲಿ
- ವಿಶ್ವ ಸಮರ-IIರಲ್ಲಿ ಭಾಗವಹಿಸಿದ್ದ ಬ್ರಿಟಿಷ್ -ಭಾರತೀಯ ಸೇನೆಯಲ್ಲಿ ಇಂದಿನ ದಿನಮಾನದ ಪಾಕಿಸ್ತಾನದ ಮುಸಲ್ಮಾನರ ಕ್ಷತ್ರಿಯ ಜಾತಿಗಳ ಪಾತ್ರ Archived 2005-09-01 ವೇಬ್ಯಾಕ್ ಮೆಷಿನ್ ನಲ್ಲಿ.
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unsupported parameter
- Articles lacking in-text citations from August 2009
- Articles with invalid date parameter in template
- All articles lacking in-text citations
- Articles with hatnote templates targeting a nonexistent page
- Articles with unsourced statements from January 2009
- Commons link is locally defined
- ಭಾರತದಲ್ಲಿನ ಬ್ರಿಟಿಷ್ ಆಡಳಿತ
- ಬ್ರಿಟಿಷ್ ಭಾರತದ ಸೇನಾಪಡೆ
- 1857ರಲ್ಲಿ ಸ್ಥಾಪಿತವಾದ ಸೇನಾ ಘಟಕಗಳು ಮತ್ತು ಸೇನಾವ್ಯೂಹಗಳ ವಿವರ
- 1947ರಲ್ಲಿ ಅನುಸ್ಥಾಪಿತಗೊಂಡ ಸೇನಾಪಡೆಗಳ ಘಟಕಗಳು ಮತ್ತು ಸೇನಾವ್ಯೂಹಗಳು
- ಭಾರತದ ಇತಿಹಾಸ