ಭತಿಜಿ

ಭತಿಜಿ ಅಥವಾ ಪ್ಯಾಟಿಜಿ ಮಹಾರಾಜ್ ಗುಜರಾತ್ ನ ಜಾನಪದ ದೇವತೆ. ಅವರು ಗುಜರಾತ್ ಪ್ರದೇಶದ ಪ್ರಸಿದ್ಧ ಯೋಧ ಮತ್ತು ನಾಯಕ.
ಪುರಾಣ
[ಬದಲಾಯಿಸಿ]ಜಾನಪದದ ಪ್ರಕಾರ, ಭತಿಜಿ ರಜಪೂತ ಕುಲದ ಉಪ-ಶಾಖೆಯಾದ ರಾಥೋಡ್ ಕುಲದಲ್ಲಿ ಟ್ಯಾಗೋರ್ ಟಕ್ಕಟ್ಸಿಂಗ್ಜಿ ಅವರಿಗೆ ಜನಿಸಿದರು. ಇವರ ಮದುವೆಯ ಸಂಧರ್ಭದಲ್ಲಿ, ಕಪಡ್ವಾಂಜ್ ನ ಮಹಮ್ಮದೀಯ ರಾಜನು ತನ್ನ ಹಳ್ಳಿಯ ಹಸುಗಳನ್ನು ಸೆರೆಹಿಡಿದಿದ್ದಾನೆ ಎಂದು ಅವನಿಗೆ ತಿಳಿಯಿತು. ತಕ್ಷಣ, ತನ್ನ ಮದುವೆಯನ್ನು ಸಹ ಯೋಚಿಸದೆ, ಅವನು ತನ್ನ ಖಡ್ಗದೊಂದಿಗೆ ಕುದುರೆಯ ಮೇಲೆ ಹೊರಟನು. ಅವನು ಎಲ್ಲಾಹಸುಗಳನ್ನು ವಶಪಡಿಸಿಕೊಂಡು ಸೈನ್ಯವನ್ನು ಸೋಲಿಸಿದನು. ಆದರೂ, ಯುಧ‍್ಧದಲ್ಲಿ ಅವನ ಶಿರಚ್ಛೇದ ಮಾಡಲಾಯಿತು ಮತ್ತು ಯುದ್ಧದಲ್ಲಿ ಆತನು ಹುತಾತ್ಮನಾದನು. ಹಸುಗಳನ್ನು ಬಿಡುಗಡೆ ಮಾಡಿದ ನಂತರವೇ ಅವರ ಹುತಾತ್ಮತೆ ನಡೆಯಿತು.[೧] ಮುಸ್ಲಿಮ್ ಸೈನ್ಯದ ವಿರುದ್ಧ ನಿರಂತರವಾಗಿ ಹೋರಾಡಿ ಅವರನ್ನು ನಾಶಪಡಿಸಿದ ಭತಿಜಿಯ ತಲೆಯಿಲ್ಲದ ದೇಹದ ಬಗ್ಗೆ ಅನೇಕ ಜಾನಪದ ಹಾಡುಗಳಿವೆ.[೨]
ಪರಂಪರೆ
[ಬದಲಾಯಿಸಿ]ಭತಿಜಿಅವರನ್ನು ಗೋವುಗಳನ್ನು ಮತ್ತು ಅವನನ್ನು ನಂಬುವ ಜನರನ್ನು ರಕ್ಷಿಸುವ ಜಾನಪದ ದೇವತೆಯಾಗಿ ಪೂಜಿಸಲಾಗುತ್ತದೆ. ರಾಥೋಡ್ ರಾಜಪೂತ್, ಸೌರಾಷ್ಟ್ರ ಮತ್ತು ಕುಲತ್ವೇದಿಕ್ ಆರಾಧಕರ ನಂಬಿಕೆಯೆಂದರೆ ಹಾವುಗಳು ಅವನ ಆರಾಧಕರನ್ನು ಮುಟ್ಟುವುದಿಲ್ಲ.[೧][೩]
ಬುವಾ ಪಂಥವು ಜಾತಿಯನ್ನು ಲೆಕ್ಕಿಸದೆ ಪಾಟಿಜಿಯನ್ನು ಪೂಜಿಸುತ್ತಾರೆ. ದುಷ್ಟಶಕ್ತಿಗಳನ್ನು ದೂರವಿಡಲು ಕೆಲಸ ಮಾಡುವ ಬುವಾಗಳು, ಪಾಟಿಜಿಯಂತಹ ಒಳ್ಳೆಯ ಆತ್ಮಗಳಿಂದ ಅದ್ಭುತ ಶಕ್ತಿಗಳನ್ನು ಹೊಂದಿದ್ದಾರೆಂದು ನಂಬುತ್ತಾರೆ.[೪]
ಕುಟುಂಬ ಸದಸ್ಯರ ಅನಾರೋಗ್ಯವನ್ನು ಗುಣಪಡಿಸುವ ಸಲುವಾಗಿ ಭತಿಜಿ ಅವರನ್ನು ಹಿಂದೂ ಜನರು ಪೂಜಿಸುತ್ತಾರೆ. ಬುವಾಗಳು ಅವನನ್ನು ಮನುಷ್ಯರಿಗಾಗಿ ಮಾತ್ರವಲ್ಲದೆ ಪ್ರಾಣಿಗಳ ರೋಗಗಳನ್ನು ಗುಣಪಡಿಸಲು ಸಹ ಪೂಜಿಸುತ್ತಾರೆ. ಹಸು, ಎಮ್ಮೆ ಅಥವಾ ಕುಟುಂಬದ ಸದಸ್ಯರು ರೋಗದಿಂದ ಬಾಧಿತರಾದರೆ, ಇದು ದುಷ್ಟಶಕ್ತಿಯ ಕೆಲಸವಾಗಿರಬಹುದು ಅಥವಾ ಪೂರ್ವಜರ ಶಾಪವಾಗಿರಬಹುದು ಎಂದು ಈ ಜನರು ನಂಬುತ್ತಾರೆ. ಈ ಶಕ್ತಿಶಾಲಿ ದೇವತೆಯಿಂದ ದುಷ್ಟ ಶಕ್ತಿಗಳು ಶಿಕ್ಷಿಸಲ್ಪಡುತ್ತವೆ ಎಂದು ಬುವಾ ಭೂತಶಾಸ್ತ್ರಜ್ಞರು ನಂಬುತ್ತಾರೆ.[೪]
ಭತಿಜಿಯ ಭಾವಚಿತ್ರವು ಕುದುರೆಯ ಮೇಲೆ ಕುಳಿತಿರುವ ಯೋಧನು ತನ್ನ ಬಲಗೈಯಲ್ಲಿ ಖಡ್ಗವನ್ನು ಹಿಡಿದಿರುವುದನ್ನು ತೋರಿಸುತ್ತದೆ.[೪]
2002ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಅವರು ಬಾಗುವೆಲ್ನ ಫಾತಿಹ್ ದೇವಸ್ಥಾನದಿಂದ ಗೌರವ್ ಯಾತ್ರೆಗೆ ಚಾಲನೆ ನೀಡಿದ್ದರು.[೧][೫]
ಪಟ್ಟಿಜಿ ಸೇನಾ ಎಂಬ ಹೆಸರಿನ ಪಟ್ಟಿಜಿಯ ಅನುಯಾಯಿಗಳ ಸಂಘಟನೆಯೂ ಇದೆ.[೬]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ Fernando Franco; Jyotsna Macwan; Suguna Ramanathan (2004). Journeys to Freedom: Dalit Narratives. Popular Prakashan. pp. 295–96. ISBN 978-81-85604-65-7. Retrieved 25 April 2016.
- ↑ India Today. Thomson Living Media India Limited. 2002. p. 194. Retrieved 25 April 2016.
- ↑ Journal of Indian History. Department of Modern Indian History. 1983. p. 208. Retrieved 25 April 2016.
- ↑ ೪.೦ ೪.೧ ೪.೨ Man & Development. Centre for Research in Rural and Industrial Development. 2004. pp. 18, 19. Retrieved 25 April 2016.
- ↑ Andy Marino (8 April 2014). Narendra Modi: A Political Biography: A Political Biography. HarperCollins Publishers India. p. 122. ISBN 978-93-5136-218-0. Retrieved 25 April 2016.
- ↑ Outlook. Hathway Investments Pvt Ltd. 2002. p. 42. Retrieved 25 April 2016.