ವಿಷಯಕ್ಕೆ ಹೋಗು

ಭಾರತದಲ್ಲಿ ವಿದ್ಯುತ್ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
220kV ವಿದ್ಯುತ್ ಪ್ರಸರಣ
ವಿದ್ಯುತ್ ಕ್ಷೇತ್ರ
  • ದೇಶ = ಭಾರತ
  • ವ್ಯಾಪ್ತಿ = 82.53% (2018)
  • ಸಾಮರ್ಥ್ಯ = 340.53 ಗಿ.ವ್ಯಾ.
  • ಸಾಮರ್ಥ್ಯ ವರ್ಷ = 31 ಮಾರ್ಚ್ 2018
  • ಪಳೆಯುಳಿಕೆ/ಕಲ್ಲಿದ್ದಲು = 81.9%
  • renewableshare = 15.3%
  • ಹಸಿರುಮನೆ = 2066.01
  • ಹಸಿರುಮನೆ = 2015
  • ಬಳಕೆ = 1,122 -ಕಿಲೊವಾಟ್ ತಲಾ
  • ಉಪಯೋಗದ ವರ್ಷr = 2016-17
  • ವರ್ಗವಣೆ-ನಷ್ಟ = 21.81%
  • "ವರ್ಷದಲ್ಲಿ = 2015-16
  • ವಸತಿ = 24.32%
  • ವಸತಿಯಂತ್ರ = 2016-17
  • ಕೈಗಾರಿಕಾ = 40.01%
  • ಉದ್ಯಮಗಳು = 2016-17
  • ಕೃಷಿ = 18.33%
  • ಕೃಷಿ ವರ್ಷ = 2016-17
  • ವಾಣಿಜ್ಯ = 9.22%
  • ವ್ಯಾಪಾರಿಇಯರ್ = 2016-17
  • ಸಾರ್ವಜನಿಕ =
  • ಎಳೆತ = 1.61%
  • tractionyear = 2016-17
  • ಸ್ವಂತ ಉದ್ಯಮ = 44 > (ಜನವರಿ 2018)
.

ಭಾರತದ ವಿದ್ಯುತ್ ಉತ್ಪಾದಹನೆ

[ಬದಲಾಯಿಸಿ]
  • ಮಾರ್ಚ್ 31, 2018 ರಲ್ಲಿ ಇದ್ದಂತೆ,
  • ಭಾರತದಲ್ಲಿನ ಜನೋಪಯೋಗಿ ವಿದ್ಯುತ್ ಕ್ಷೇತ್ರವು ಮಾರ್ಚ್ 31, 2018 ರಂತೆ 3,40,526 ಮೆಗಾವಾಟ್ಸ್ ಸಾಮರ್ಥ್ಯದ ಒಂದು ರಾಷ್ಟ್ರೀಯ ಗ್ರಿಡ್ ಅನ್ನು (ಸಮಾನಾಂತರ ಸಂಪರ್ಕ ವಿದ್ಯುತ್ ತಂತಿಜಾಲ) ಹೊಂದಿದೆ. ಅದೇ 1947 ರಲ್ಲಿ 1,362 ಮೆ.ವ್ಯಾ. ಮಾತ್ರಾ ಉತ್ಪಾದನೆಯಾಗುತ್ತಿತ್ತು (ಕೆಳಗೆ ಟೇಬಲ್ ನೋಡಿ). [] ನವೀಕರಿಸಬಹುದಾದ ವಿದ್ಯುತ್ ಸ್ಥಾವರಗಳು ಒಟ್ಟು ಸ್ಥಾಪಿತವಾಗಿರುವ ಮೇಲೆ ತಿಳಿಸಿದ ಸಾಮರ್ಥ್ಯದ 32.2% ರಷ್ಟನ್ನು ಹೊಂದಿವೆ. 2016-17ರ ಹಣಕಾಸಿನ ವರ್ಷದಲ್ಲಿ, ಭಾರತದಲ್ಲಿ ಉಪಯುಕ್ತತೆಯಿಂದ ಉತ್ಪಾದಿಸಲ್ಪಟ್ಟ ಒಟ್ಟು ವಿದ್ಯುತ್ 1,236.39 ಟಿ.ಡಬ್ಲು ಹೆಚ್, ಆಗಿದ್ದು, ದೇಶದಲ್ಲಿ ಒಟ್ಟು ವಿದ್ಯುತ್ ಉತ್ಪಾದನೆ (ಉಪಯುಕ್ತತೆಗಳು ಮತ್ತು ಅನು ಪಯುಕ್ತತೆಗಳು) 1,433.4 ಟಿ.ಡಬ್ಲು ಹೆಚ್ ಆಗಿತ್ತು.[] [] 2016-17ರಲ್ಲಿ ಒಟ್ಟು ವಿದ್ಯುತ್ ಬಳಕೆ 1,122 ಕಿಲೋವ್ಯಾಟ್ ಪರ್,ಕ್ಯಾಪಿಟಾ/ ತಲಾ ಆಗಿತ್ತು.. [] ಭಾರತ ವಿಶ್ವದ ಮೂರನೇ ಅತಿದೊಡ್ಡ ಉತ್ಪಾದಕ ಮತ್ತು ಮೂರನೆಯ ಅತಿ ದೊಡ್ಡ ವಿದ್ಯುತ್ ಬಳಕೆಯ ದೇಶÀವಾಗಿದೆ. [] [] 2015-16ರಲ್ಲಿ ಎಲ್ಲಾ ರಾಷ್ಟ್ರಗಳ ಪೈಕಿ ಭಾರತದಲ್ಲಿ ಕೃಷಿಯಲ್ಲಿ ವಿದ್ಯುತ್ ಶಕ್ತಿ ಬಳಕೆಯು ಅತಿ ಹೆಚ್ಚು (17.89%) ದಾಖಲಾಗಿದೆ.[] ಭಾರತದಲ್ಲಿ ಅಗ್ಗದ ವಿದ್ಯುಚ್ಛಕ್ತಿ ದರದ ಹೊರತಾಗಿಯೂ ಅನೇಕ ದೇಶಗಳಿಗೆ ಹೋಲಿಸಿದರೆ ತಲಾ ವಿದ್ಯುತ್ ಬಳಕೆ ಕಡಿಮೆಯಾಗಿದೆ. []

ಕೊರತೆಗೆ ಪರಿಹಾರ

[ಬದಲಾಯಿಸಿ]
  • ಭಾರತವು ಹೆಚ್ಚುವರಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆದರೆ ಎಲ್ಲ ಅಗತ್ಯವಿರುವವರಿಗೆ ವಿದ್ಯುತ್ ಸರಬರಾಜು ಮಾಡಲು ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿರುವುದಿಲ್ಲ. ಮಾರ್ಚ್ 2019 ರ ಹೊತ್ತಿಗೆ ದೇಶದ ಎಲ್ಲಾ ಜನರಿಗೆ ಸಾಕಷ್ಟು ವಿದ್ಯುತ್ ಸರಬರಾಜಿನಲ್ಲಿ ಆಗಿರುವ ಕೊರತೆಯನ್ನು ಪರಿಹರಿಸಲು, ಭಾರತ ಸರ್ಕಾರವು "ಎಲ್ಲರಿಗೂ ವಿದ್ಯುತ್" ಎಂಬ ಯೋಜನೆಯನ್ನು ಪ್ರಾರಂಭಿಸಿತು. [] ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ರಚಿಸುವ ಮತ್ತು ಸುಧಾರಿಸುವ ಮೂಲಕ ಎಲ್ಲಾ ಮನೆಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ನಿರಂತರ ಮತ್ತು ನಿರಂತರ ವಿದ್ಯುತ್ ಪೂರೈಕೆಯನ್ನು ಈ ಯೋಜನೆಯು ಖಚಿತಪಡಿಸುತ್ತದೆ. ಭಾರತ ಸರ್ಕಾರವು ಹಣಕಾಸಿನ ನೆರವು ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ರಾಜ್ಯಗಳೊಂದಿಗೆ ಜಂಟಿ ಸಹಯೋಗಹೊಂದಿದೆ. [] [೧೦]

ಹೆಚ್ಚಿದ ಹೂಡಿಕೆ

[ಬದಲಾಯಿಸಿ]
  • ಭಾರತದ ವಿದ್ಯುಚ್ಛಕ್ತಿ ವಲಯವು ಪಳಿಯುಳಿಕೆ (ಕಲ್ಲಿದ್ದಲು)ಇಂಧನಗಳಿಂದ, ಮತ್ತು ಪ್ರಮುಖವಾಗಿ ಕಲ್ಲಿದ್ದಲು ಹೇರಳ ಒದಗುವಿಕೆಯಿಂದ 2016 ರಲ್ಲಿ ಎಲ್ಲ ವಿದ್ಯುಚ್ಛಕ್ತಿಗಳ ಪೈಕಿ ಮುಕ್ಕಾಲು ಭಾಗ ಉತ್ಪಾದಿಸುತ್ತದೆ. ಹಾಗಾದರೂ, ನವೀಕರಿಸಬಹುದಾದ ಶಕ್ತಿಗಾಗಿ ಹೆಚ್ಚಿದ ಹೂಡಿಕೆಯನ್ನು ಸರ್ಕಾರವು ಹೆಚ್ಚಿಸುತ್ತಿದೆ. 2018 ರ ರಾಷ್ಟ್ರೀಯ ವಿದ್ಯುಚ್ಛಕ್ತಿ ಯೋಜನೆಯು, ಭಾರತ ಸರಕಾರ ಸಿದ್ಧಪಡಿಸಿದ ಪ್ರಕಾರ, 2027 ರವರೆಗೂ ಉಪಯುಕ್ತತೆಗಾಗಿ/ ಬಳಕೆಗಾಗಿ ‘ನವೀಕರಿಸಲಾಗದ’ ವಿದ್ಯುತ್ ಸ್ಥಾವರಗಳು ದೇಶಕ್ಕೆ ಅಗತ್ಯವಿಲ್ಲ ಎಂದು ಹೇಳಿದೆ, ಕಾರಣ ನಿರ್ಮಾಣ ಹಂತದಲ್ಲಿ 50,025 ಮೆವ್ಯಾ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ನಿರ್ಮಾಣ ಹಂತದಲ್ಲಿವೆ, ಮತ್ತು ಸ್ಥಾಪಿತವಾಗಿರುವ ನವೀಕರಿಸಬಹುದಾದ ವಿದ್ಯುತ್ - ಅದರಿಂದ ಸಾಧಿಸಬಹುದಾದ ಸಾಮರ್ಥ್ಯ .275,000 ಮೆವ್ಯಾಗಳನ್ನು ಹೊಂದಿದೆ[೧೧]

ಭಾರತದ ಗ್ರಾಮಾಂತರದಲ್ಲಿ ವಿದ್ಯುತ್

[ಬದಲಾಯಿಸಿ]
  • 1947 ರಲ್ಲಿ ಸುಮಾರು 1500 ಹಳ್ಳಿಗಳನ್ನು ಭಾರತದಲ್ಲಿ ವಿದ್ಯುನ್ಮಾನಗೊಳಿಸಲಾಯಿತು. 1991 ರ ತನಕ ಭಾರತವು ಸಿಇಎ ಪ್ರಕಾರ, 481124 ಗ್ರಾಮಗಳು ವಿದ್ಯುನ್ಮಾನಗೊಳಿಸಲ್ಪಟ್ಟವು. ಭಾರತದಲ್ಲಿ ಒಟ್ಟು 5,97,464 ಗ್ರಾಮಗಳಲ್ಲಿ (ಜನಗಣತಿ, 2011) 31 ಮಾರ್ಚ್, 2015 ರ ಹೊತ್ತಿಗೆ, 5,79,012 ಗ್ರಾಮಗಳು (97%) ವಿದ್ಯುನ್ಮಾನಗೊಳಿಸಲ್ಪಟ್ಟವು. 1000 ದಿನಗಳಲ್ಲಿ ಎಲ್ಲಾ ಹಳ್ಳಿಗಳನ್ನು ವಿದ್ಯುನ್ಮಾನಗೊಳಿಸಲು ಗೌರವಾನ್ವಿತ ಪ್ರಧಾನಮಂತ್ರಿ ಮಾಡಿದ ಇತ್ತೀಚಿನ ಪ್ರಕಟಣೆಯ ಪ್ರಕಾರ, ಸಮತೋಲನದ ವಿದ್ಯುನ್ಮಾನೀಕರಣಕ್ಕೆ ಮಾರ್ಗಸೂಚಿ ನಕ್ಷೆ 18,452 ಆಯ್ಕೆ ಮಾಡದೆ. 2015-16, 8360 ರಲ್ಲಿ 5686 ಹಳ್ಳಿಗಳನ್ನು ವಿದ್ಯುಜ್ಜನಕಗೊಳಿಸಲು ಯೋಜಿಸಲಾಗಿದೆ ಅಲ್ಲಿ ಗ್ರಾಮಗಳನ್ನು ಸಿದ್ಧಪಡಿಸಲಾಗಿದೆ. 2016-17ರಲ್ಲಿ ಹಳ್ಳಿಗಳು ಮತ್ತು 2017-18ರಲ್ಲಿ 4406 ಗ್ರಾಮಗಳು ವಿದ್ಯುಜ್ಜನಕಗೊಳಿಸಲು ಯೋಜಿಸಲಾಗಿತ್ತು. [೧೨]
  • ದಿ ವೈರ್ ಸುದ್ದಿ ತಾಣ ಕಲೆ ಹಾಕಿರುವ ಮಾಹಿತಿ ಪ್ರಕಾರ ಭಾರತ ಸ್ವಾತಂತ್ರ್ಯ ಪಡೆದಾಗ ಅಂದರೆ 1947 ರಲ್ಲಿ 1500 ಗ್ರಾಮಗಳು ಮಾತ್ರ ವಿದ್ಯುದೀಕರಣಗೊಂಡಿದ್ದವು. ಯುಪಿಎ (ಯುಪಿಎ1, ಯುಪಿಎ2) ಸರ್ಕಾರದ ಅವಧಿಯಲ್ಲಿ 1,082,280 ಹಳ್ಳಿಗಳಿಗೆ ವಿದ್ಯುತ್‌ ಪೂರೈಕೆ ಮಾಡಲಾಗಿತ್ತು. ದಿನಾಂಕ ೩೦-೪-೨೦೧೮ ರಂದು ಶೇ 100ರಷ್ಟು ಹಳ್ಳಿಗಳನ್ನು ವಿದ್ಯುದೀಕರಣಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಪ್ರಸ್ತುತ ಅಂಕಿ ಅಂಶಗಳ ಪ್ರಕಾರ 3.1 ಕೋಟಿ ಮನೆಗಳು ಇನ್ನೂ ಕೂಡ ವಿದ್ಯುತ್‌ ಸಂಪರ್ಕವನ್ನು ಪಡೆದಿಲ್ಲ.ಉತ್ತರ ಪ್ರದೇಶ, ಜಾರ್ಖಂಡ್‌, ಆಸ್ಸಾಂ ರಾಜ್ಯಗಳಲ್ಲಿ ಶೇ 60 ಗ್ರಾಮಗಳು ವಿದ್ಯುದೀಕರಣಗೊಂಡಿವೆ. ಕಳೆದ ನಾಲ್ಕು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶದ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿತ್ತು. ಆದರೆ 30 ರಾಜ್ಯಗಳ ಪೈಕಿ 12 ರಾಜ್ಯಗಳಲ್ಲಿ ಶೇ 80ರಷ್ಟು ಹಳ್ಳಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.[೧೩][೧೪]
  • ಪ್ರತಿವರ್ಷ 12,030 ಗ್ರಾಮಗಳಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ವಿದ್ಯುತ್ ನೀಡಲಾಗಿದೆ. ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಪ್ರತಿವರ್ಷ 4,842 ಗ್ರಾಮಗಳಿಗೆ ವಿದ್ಯುತ್ ನೀಡಲಾಗಿದೆ. ಎಲ್ಲಾ ಗ್ರಾಮಗಳಿಗೆ ತ್ವರಿತಗತಿಯಲ್ಲಿ ಎನ್‍ಡಿಎ ಸರ್ಕಾರ ವಿದ್ಯುತ್ ಸೌಲಭ್ಯ ಕಲ್ಪಿಸಿದೆ ಎಂದಿದೆ!.ಆದರೆ ಇನ್ನೂ ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮಗಳ ಸಂಖ್ಯೆ 18,452 ಇತ್ತು. ಆ ನಂತರ ಮತ್ತೆ ವಿದ್ಯುತ್ ಸಂಪರ್ಕ ಇಲ್ಲದ 1,275 ಗ್ರಾಮಗಳು ಹೆಚ್ಚುವರಿಯಾಗಿ ಪತ್ತೆಯಾಗಿದ್ದವು.[೧೫]

ಇತಿಹಾಸ

[ಬದಲಾಯಿಸಿ]

ಕಲ್ಕತ್ತಾದಲ್ಲಿ (ಈಗ ಕೊಲ್ಕತ್ತಾ) ವಿದ್ಯುಚ್ಛಕ್ತಿ ಬೆಳಕಿನ ಮೊದಲ ಪ್ರದರ್ಶನವನ್ನು 24 ಜುಲೈ 1879 ರಂದು ಪಿ.ಡಬ್ಳು ಪ್ಲೆಯೂರಿ&ಕೋ ಮಾಡಿದರು. 1897 ರ ಜನವರಿ 7 ರಂದು ಕಿಲ್ಬರ್ನ್ & ಕೋ (ಕಂಪನಿ) ಕೊಲ್ಕತ್ತಾ ವಿದ್ಯುತ್ ಬೆಳಕಿನ ವ್ಯವಸ್ಥೆಯ ಪರವಾನಗಿಯನ್ನು ಇಂಡಿಯನ್ ಎಲೆಕ್ಟ್ರಿಕ್ ಕಂ.ಯ ಏಜೆಂಟ್ಗಳಾಗಿ ಪಡೆದರು, ಅದು 1897 ರ ಜನವರಿ 15 ರಂದು ಲಂಡನ್ನಲ್ಲಿ ನೋಂದಾಯಿಸಲ್ಪಟ್ಟಿತು. ಒಂದು ತಿಂಗಳ ನಂತರ ಕಂಪೆನಿಯನ್ನು ಕಲ್ಕತ್ತಾದ ಎಲೆಕ್ಟ್ರಿಕ್ ಸಪ್ಲೈ ಕಾರ್ಪೊರೇಶನ್ ಎಂದು ಮರುನಾಮಕರಣ ಮಾಡಲಾಯಿತು. ಕಂಪೆನಿಯ ನಿಯಂತ್ರಣವನ್ನು ಲಂಡನ್ನಿಂದ 1970 ರಲ್ಲಿ ಮಾತ್ರ ಕಲ್ಕತ್ತಾಗೆ ವರ್ಗಾಯಿಸಲಾಯಿತು. ಕಲ್ಕತ್ತಾದಲ್ಲಿ ವಿದ್ಯುಚ್ಛಕ್ತಿಯ ಯಶಸ್ಸಿಗೆ ಉತ್ಸಾಹಹೊಂದಿ, ನಂತರದಲ್ಲಿ ಬಾಂಬೆ (ಈಗ ಮುಂಬೈ) ಯಲ್ಲಿ ವಿದ್ಯುತ್ ಪರಿಚಯಿಸಲಾಯಿತು. [೧೬] 1882 ರಲ್ಲಿ ಮೊದಲ ಬಾರಿಗೆ ಕ್ರಾಫ್ಟ್ಫೋರ್ಡ್ ಮಾರ್ಕೆಟ್ನಲ್ಲಿ ಮತ್ತು ಮುಂಬೈ ಎಲೆಕ್ಟ್ರಿಕ್ ಸರಬರಾಜು ಮತ್ತು ಟ್ರಾಮ್ವೇಸ್ ಕಂಪೆನಿ (ಬೆಸ್ಟ್) 1905 ರಲ್ಲಿ ಮುಂಬರುವ ಟ್ರಾಮ್ ವೇಗೆ- ದಾರಿಗೆ ವಿದ್ಯುಚ್ಛಕ್ತಿಯನ್ನು ಒದಗಿಸಲು ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿತು.[೧೭]

1897 ರಲ್ಲಿ ಡಾರ್ಜಿಲಿಂಗ್ ಪುರಸಭೆಗಾಗಿ ಸಿಡ್ರಾಪೊಂಗ್ನಲ್ಲಿ ಚಹಾ ಎಸ್ಟೇಟ್ ಬಳಿ ಭಾರತದಲ್ಲಿ ಮೊದಲ ಜಲವಿದ್ಯುತ್ ಸ್ಥಾಪನೆ ಸ್ಥಾಪಿಸಲಾಯಿತು.[೧೮] ಏಷ್ಯಾದಲ್ಲಿ ಮೊದಲ ವಿದ್ಯುತ್ ಬೀದಿ ಬೆಳಕು, 5 ಆಗಸ್ಟ್ 1905 ರಂದು ಬೆಂಗಳೂರಿನಲ್ಲಿ ಬೆಳಕು ಚೆಲ್ಲಿತು.. [೧೯] ದೇಶದಲ್ಲಿ ಮೊದಲ ವಿದ್ಯುತ್ ರೈಲು 1929 ರ ಫೆಬ್ರುವರಿ 3 ರಂದು ಬಾಂಬೆಯ ವಿಕ್ಟೋರಿಯಾ ಟರ್ಮಿನಸ್ ಮತ್ತು ಕುರ್ಲಾ ನಡುವೆ ಬಂದರು ಮಾರ್ಗದಲ್ಲಿ ನಡೆಯಿತು.[೨೦] ರಂದು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದಾದ್ಯಂತ ಮೊದಲ ಸೌರಶಕ್ತಿಚಾಲಿತ ವಿಮಾನನಿಲ್ದಾಣವಾಯಿತು, ಇದಕ್ಕೆ ಮೀಸಲಾದ ಸೌರ ಸ್ಥಾವರವನ್ನು ಉದ್ಘಾಟಿಸಲಾಗಿತ್ತು.[೨೧]

ಉತ್ಪಾದನೆ ವಿವರ

[ಬದಲಾಯಿಸಿ]
ಭಾರತದ ಉಪಗ್ರಹ ಚಿತ್ರಗಳು: ಭಾರತ ಮತ್ತು ಇತರೆ ಏಷ್ಯಾದ ದೇಶಗಳಿಗಿಂತ ದಪ್ಪನೆಯ ಮಬ್ಬು ಮತ್ತು ಕಪ್ಪು ಇಂಗಾಲದ ಹೊಗೆಯನ್ನು ತೋರಿಸುತ್ತವೆ. ಈ ಸಮಸ್ಯೆಯು ಉತ್ತರ ಭಾರತದಲ್ಲಿನ ಗಂಗಾ ಬೇಸಿನ್ ಬಳಿ ನಿರ್ದಿಷ್ಟವಾಗಿ ತೀವ್ರವಾಗಿದೆ. ಭಾರತದ ಗ್ರಾಮೀಣ ಭಾಗಗಳಲ್ಲಿ ಕಲ್ಲಿದ್ದಲು ಜೈವಿಕ ಇಂದನ -ಸೌದೆ ಇತರೆ, ಉರಿಯುವಿಕೆಯಿಂದ ಧೂಮ ಮತ್ತು ವಾಯುಮಂಡಲದ ಪ್ರಮುಖ ಮೂಲಗಳು ಉತ್ತರ ಭಾರತದಲ್ಲಿನ ದೊಡ್ಡ ನಗರಗಳಿಂದ ವಾಯು ಮಾಲಿನ್ಯ.
ವಿದ್ಯುತ್ತಿನಿಂದ ರಾತ್ರಿ ಬೆಳಗಿಸಿದ ಭಾರತ. (ಈ ಮಾಧ್ಯಮವು ನಾಸಾ ದ ಸೌಜನ್ಯ) ಎಕ್ಸ್ಪೆಡಿಶನ್ 29 ರ ಸಿಬ್ಬಂದಿ 21 ಅಕ್ಟೋಬರ್ 2011 ರಂದು ಫೋಟೊ ತೆಗೆದುಕೊಂಡದ್ದು. ಇದು ತುರ್ಕಮೆನಿಸ್ತಾನ್ ಮೇಲೆ ಪೂರ್ವಕ್ಕೆ ಚಲಿಸುತ್ತದೆ. ಭಾರತ-ಪಾಕಿಸ್ತಾನಗಳಲ್ಲಿ ರಾತ್ರಿ ದೀಪಗಳನ್ನು ಗುರುತಿಸುವ ಮೂಲಕ ಭಾರತವು ದೀರ್ಘ ಅಲೆಗಳುಳ್ಳ ಘನ ಕಿತ್ತಳೆ ಬಣ್ಣದ ರೇಖೆಯನ್ನು ಮೊದಲಿಂದ ಪ್ರಾರಂಭಿಸುತ್ತದೆ. ನವದೆಹಲಿ, ಭಾರತದ ರಾಜಧಾನಿ ಮತ್ತು ಕತಿಯಾವರ್ ಪರಿಯಾಯದವು ಬೆಳಕಿಗೆ ಬರುತ್ತವೆ. ಮುಂಬೈ, ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಮಧ್ಯ ಮತ್ತು ದಕ್ಷಿಣ ಭಾರತದ ಅನೇಕ ಸಣ್ಣ ನಗರಗಳು ಕಾಣುವುವು. ಈ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವಿಡಿಯೋವು ದಕ್ಷಿಣ ಭಾರತದ ಮೂಲಕ ಬಂಗಾಳ ಕೊಲ್ಲಿಗೆ ದಕ್ಷಿಣದ ಕಡೆಗೆ ತಿರುಗುತ್ತದೆ. ಮಿಂಚಿನ ಬಿರುಗಾಳಿಗಳು ಸಹ ಇರುತ್ತವೆ, ವೀಡಿಯೊದುದ್ದಕ್ಕೂ ಮಿನುಗುವ ದೀಪಗಳಿಂದ ಪ್ರತಿನಿಧಿಸಲಾಗುತ್ತದೆ. ಪಾಶ್ಚಿಮಾತ್ಯ ಇಂಡೋನೇಷ್ಯಾದ ಮೇಲೆ ಹಾದು ಅಂತ್ಯಗೊಳ್ಳುತ್ತದೆ.
ಭಾರತದಲ್ಲಿ ಮಾರ್ಚ್ 31, 2018 ರಂತೆ ಭಾರತದ ಈ ಮೂಲಗಳಿಂದ ಸ್ಥಾಪಿತ ಸಾಮರ್ಥ್ಯ ವಿದ್ಯುಚ್ಛಕ್ತಿ ಉತ್ಪಾದನೆ ಸಾಮರ್ಥ್ಯ
ಯೋಜನೆಗಳು ಪೂರ್ನಗೊಂಡಿದ್ದು ಉತ್ಪಾದೆನೆ ಪೂರ್ಣಗೊಳ್ಳಬೇಕಿದೆ [೨೨]
ಕ್ರ.ಸಂ. ಮೂಲ ಉತ್ಪಾದನೆ ಶೇ.
1 ಕಲ್ಲಿದ್ದಲು 197,171.5 MW (57.9%)
2 ದೊಡ್ಡ ಹೈಡ್ರೋ (ಜಲ) 45,293.42 ಮೆ.ವ್ಯಾ (13.3%)
3 ಸಣ್ಣ ಹೈಡ್ರೋ(ಜಲ) 4,476.66 MW (13.3%)
4 ಪವನವಿದ್ಯುತ್ 32,957.46 ಮೆವ್ಯಾ (9.7%)
5 ಸೌರ ವಿದ್ಯುತ್ 19,584.18 ಮೆವ್ಯಾ (5.8%)
6 ಜೈವಿಕ 8,527.88 ಮೆ.ವ್ಯಾ (9.7%)
7 ಪರಮಾಣು: 6,780 ಮೆವ್ಯಾ (2.0%)
8 ಗ್ಯಾಸ್ 24,897.46 ಮೆವ್ಯಾ (7.3%)
9 ಡೀಸೆಲ್: 837.63 ಮೆವ್ಯಾ (0.2%)

ಪ್ರಸ್ತುತ ಉತ್ಪಾದನೆ

[ಬದಲಾಯಿಸಿ]

(ಪಕ್ಕದಲ್ಲಿ- ೧.ಜೈವಿಕ ಇಂಧನದ ಉರಿಯುವಿಕೆಯಿಂದ ಭಾರತದ ಮೇಲೆ ಮಾಲಿನ್ಯದ ದಟ್ಟ ಹೊಗೆಯ ಚಿತ್ರ.-- ಕೆಳಗೆ ಚಿತ್ರ ೨ -ವೀಡಿಯೊ - ರಾತ್ರಿ ಭಾರತ ಮತ್ತು ಪಾಕಿಸ್ತಾನ ವಿದ್ಯುತ್ ದೀಪದಿಂದ ಬೆಳಗುವುದು)

ಕ್ರ.ಸಂ. ಮೂಲ ಉತ್ಪಾದನೆ ಶೇ.
1 ಕಲ್ಲಿದ್ದಲು 944,861 GWh (76.5%)
2 ದೊಡ್ಡ ಹೈಡ್ರೋ (ಜಲ) 122,313 GWh (9.9%)
3 ಸಣ್ಣ ಹೈಡ್ರೋ(ಜಲ) 7,673 GWh (0.6%)
4 ಪವನವಿದ್ಯುತ್ 46,011 GWh (3.7%)
5 ಸೌರ ವಿದ್ಯುತ್ 12,086 ಜಿಡಬ್ಲ್ಯುಎಚ್ (1.0%)
6 ಜೈವಿಕ 14,159 GWh (1.1%)
7 ಪರಮಾಣು: 37,916 ಜಿಡಬ್ಲ್ಯೂಎಚ್ಎಚ್ ((3.1%)
8 ಅನಿಲ 49,094 GWh (4.0%)
9 ಡೀಸೆಲ್: 275 GWh (0.0%)

 

ಭಾರತದ ಸ್ಥಾಪಿತ ವಿದ್ಯತ್ ಸ್ಥಾವರ ಸಾಮರ್ಥ್ಯದ ಬೆಳವಣಿಗೆ

[ಬದಲಾಯಿಸಿ]
  • ೧೯೪೭ ರಿಂದ ೨೦೧೮ ರ ವರೆಗೆ-[೨೩]
ಅನುಸ್ಥಾಪಿತ ಸಾಮರ್ಥ್ಯ ಥರ್ಮಲ್ (MW) ಥರ್ಮಲ್(MW) ಥರ್ಮಲ್r(MW) ಥರ್ಮಲ್(MW) Renewable (MW) Renew Total (MW) % Growth
as on Coal/ಕಲ್ಲಿದ್ದಲು. Gas/ಗ್ಯಾಸ್ Diesel/ ಡೀಸಲ್ Sub-TotalThermal/ಥರ್ಮಲ್ ಅಣು/ Nuclear(MW) ಜಲ/ Hydro ಇತರೆ/ OtherRenewable ಒಟ್ಟು/ Total(MW) (ವಾರ್ಷಿಕ/ on yearly basis)
31-Dec-47 756 - 98 854 - 508 - 508 1,362 -
31-Dec-50 1,004 - 149 1,153 - 560 - 560 1,713 8.59%
31-Mar-56 1,597 - 228 1,825 - 1,061 - 1,061 2,886 13.04%
31-Mar-61 2,436 - 300 2,736 - 1,917 - 1,917 4,653 12.25%
31-Mar-66 4,417 137 352 4,903 - 4,124 - 4,124 9,027 18.80%
31-Mar-74 8,652 165 241 9,058 640 6,966 - 6,966 16,664 10.58%
31-Mar-79 14,875 168 164 15,207 640 10,833 - 10,833 26,680 12.02%
31-Mar-85 26,311 542 177 27,030 1,095 14,460 - 14,460 42,585 9.94%
31-Mar-90 41,236 2,343 165 43,764 1,565 18,307 - 18,307 63,636 9.89%
31-Mar-97 54,154 6,562 294 61,010 2,225 21,658 902 22,560 85,795 4.94%
31-Mar-02 62,131 11,163 1,135 74,429 2,720 26,269 1,628 27,897 105,046 4.49%
31-Mar-07 71,121 13,692 1,202 86,015 3,900 34,654 7,760 42,414 132,329 5.19%
31-Mar-12 112,022 18,381 1,200 131,603 4,780 38,990 24,503 63,493 199,877 9.00%
31-Mar-17 192,163 25,329 838 218,330 6,780 44,478 57,260 101,138 326,841 10.31%
31 Mar 2018[35] 197,171 24,897 838 222,906 6,780 45,293 65,546 110,839 340,526 4.19%
  • 2009 ರ ವರ್ಷದಲ್ಲಿ ಭಾರತದಲ್ಲಿ ತಲಾ ವಾರ್ಷಿಕ ದೇಶೀಯ ವಿದ್ಯುತ್ ಬಳಕೆಯು ಗ್ರಾಮೀಣ ಪ್ರದೇಶಗಳಲ್ಲಿ 96 ಕಿಲೋವ್ಯಾಟ್ ಮತ್ತು ನಗರ ಪ್ರದೇಶಗಳಲ್ಲಿ 288 ಕಿ.ವ್ಯಾ.ಆಗಿದ್ದು, ಯೂರೋಪ್ ಒಕ್ಕೂಟದಲ್ಲಿ ತಲಾ 2,600 ಕಿಲೋವ್ಯಾಟ್ ಮತ್ತು 6,200 ಕಿ.ವ್ಯಾ.ಹೆಚ್.(kWh).[೨೪]

ಪೂರಕ ಮಾಹಿತಿ

[ಬದಲಾಯಿಸಿ]

ಉಷ್ಣವಿದ್ಯುತ್ ಸ್ಥಾವರ - ಹೊಸನೀತಿ

[ಬದಲಾಯಿಸಿ]
  • 2020 ಮೇಯಲ್ಲಿ ಆರ್ಥಿಕತೆಯ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರವು ರೂ. 20 ಲಕ್ಷ ಕೋಟಿ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದೆ. ಹಲವು ಉಪಕ್ರಮಗಳನ್ನು ಪ್ರಕಟಿಸಿದೆ. ಇದರಲ್ಲಿ, ಕಲ್ಲಿದ್ದಲು ಗಣಿಗಾರಿಕೆಯ ಖಾಸಗೀಕರಣವೂ ಸೇರಿದೆ. 1975ರಲ್ಲಿ ಅಸ್ತಿತ್ವಕ್ಕೆ ಬಂದು ಭಾರತದ ಸುಮಾರು ಶೇ 92ರಷ್ಟು ಕಲ್ಲಿದ್ದಲು ಉತ್ಪಾದನೆ ಮಾಡುತ್ತಿದ್ದ ಕೋಲ್ ಇಂಡಿಯಾ ಕಂಪನಿ, ಸಿಂಗರೇಣಿ ಕಂಪನಿಗೆ ಇದ್ದ ಏಕಸ್ವಾಮ್ಯವು ಇದರಿಂದ ಕಳಚಿ ಬೀಳಲಿದೆ.
  • ಈಗ ಖಾಸಗಿ ಗಣಿಗಾರಿಕೆ ಸಂಸ್ಥೆಗಳೂ ಕಲ್ಲಿದ್ದಲು ಬ್ಲಾಕ್‍ನ ಹರಾಜಿನಲ್ಲಿ ಪಾಲ್ಗೊಳ್ಳಬಹುದು, ಉತ್ಪಾದನೆಯಲ್ಲೂ ತೊಡಗಬಹುದು, ವಿದೇಶಕ್ಕೂ ಮಾರಾಟ ಮಾಡಬಹುದು, ಹಾಗೆಯೇ ವಿದೇಶಿ ಕಂಪನಿ ಗಳಿಗೂ ಇದೇ ಹಕ್ಕು ದೊರೆತಿದೆ- ನೇರ ಹಣ ಹೂಡಿಕೆಗೆ ಅವಕಾಶವಿದೆ.ಕಲ್ಲಿದ್ದಲು ಉರಿಸಲು ಆತುರವೇಕೆ?;ಟಿ.ಆರ್.ಅನಂತರಾಮು ;ed: 03 ಜೂನ್ 2020

ಉಲ್ಲೇಖ

[ಬದಲಾಯಿಸಿ]
  1. http://www.cea.nic.in/reports/monthly/installedcapacity/2018/installed_capacity-03.pdf
  2. ೨.೦ ೨.೧ "ಆರ್ಕೈವ್ ನಕಲು" (PDF). Archived from the original (PDF) on 2017-08-05. Retrieved 2018-05-02.
  3. "ಆರ್ಕೈವ್ ನಕಲು" (PDF). Archived from the original (PDF) on 2012-07-05. Retrieved 2018-05-02.
  4. "ಆರ್ಕೈವ್ ನಕಲು". Archived from the original on 2017-12-01. Retrieved 2018-05-02.
  5. "ಆರ್ಕೈವ್ ನಕಲು" (PDF). Archived from the original (PDF) on 2016-11-30. Retrieved 2018-05-02.
  6. http://www.business standard.com/article/economy-policy/now-india-is-the-third-largest-electricity-producer-ahead-of-russia-japan-118032600086_1.html
  7. https://www.slideshare.net/ashishverma061/tariff-and-duty-of-electricity-supply-in-various-state-of-indiaa-review-by-cea
  8. https://economictimes.indiatimes.com/industry/energy/power/india-can-achieve-1-65-billion-units-of-electricity-next-year-piyush-goyal/articleshow/53103685.cms]
  9. https://economictimes.indiatimes.com/industry/energy/power/states-resolve-to-provide-24x7-power-to-everyone-by-march-2019/articleshow/52802534.cms
  10. https://economictimes.indiatimes.com/industry/energy/power/government-decides-to-electrify-5-98-crore-un-electrified-households-by-december-2018/articleshow/52825361.cms
  11. "ಆರ್ಕೈವ್ ನಕಲು" (PDF). Archived from the original (PDF) on 2018-05-17. Retrieved 2018-05-02.
  12. http://indiaenergy.gov.in/wp-content/uploads/2017/09/Rural-Electrification-in-India-1.pdf Archived 2018-06-19 ವೇಬ್ಯಾಕ್ ಮೆಷಿನ್ ನಲ್ಲಿ. Rural Electrification in India
  13. In 2 years, BJP govt electrified 13523 villages; only 8% were completely electrified
  14. "ಇಡೀ ದೇಶದಲ್ಲಿ ವಿದ್ಯುತ್ ಮಾರ್ಗ ಅಂತಾರೆ ಮೋದಿ: ಅದರರ್ಥ ಎಲ್ಲರ ಮನೆಗೂ ವಿದ್ಯುತ್ ಬರುತ್ತೆ ಅಂತ ಅಲ್ಲ! 30 Apr, 2018". Archived from the original on 2018-05-02. Retrieved 2018-05-02.
  15. http://www.prajavani.net/news/article/2018/05/04/570466.htmlಗ್ರಾಮಭಾರತದ ವಿದ್ಯುದೀಕರಣ ಸಾಗಬೇಕಾದ ಹಾದಿ ಇನ್ನೂ ಇದೆ4 May, 2018
  16. https://www.telegraphindia.com/1090426/jsp/calcutta/story_10866828.jsp Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. Let there be light Sunday , April 26 , 2009
  17. http://www.bestundertaking.com/mumbai.asp Archived 2013-02-02 ವೇಬ್ಯಾಕ್ ಮೆಷಿನ್ ನಲ್ಲಿ. Electricity arrives in Mumbai
  18. rchives Darjeeling Hydro Power System - IET history - The IET" Retrieved 29 July 2015.
  19. "ಆರ್ಕೈವ್ ನಕಲು". Archived from the original on 2016-03-04. Retrieved 2018-05-02.
  20. Daily News & Analysis (20 November 2011). "Relic of India's first electric railway to be dismantled". dna. Retrieved 29 July 2015. ಆಗಸ್ಟ್ 18, 2015
  21. Cochin International Airport set to become worlds's first fully solar powered major airport". LiveMint. Kochi, India. 18 August 2015
  22. ವಿದ್ಯುಚ್ಛಕ್ತಿ ಉತ್ಪಾದನೆ ಸಾಮರ್ಥ್ಯ
  23. "ಭಾರತದ ಸ್ಥಾಪಿತ ವಿದ್ಯತ್ ಸ್ಥಾವರ ಸಾಮರ್ಥ್ಯದ ಬೆಳವಣಿಗೆ" (PDF). Archived from the original (PDF) on 2017-08-05. Retrieved 2018-05-02.
  24. [Evaluation of Operation And Maintenance Of Sewage Treatment Plants in India-2007" (PDF). Central Pollution Control Board,]