ಭಾರತದಲ್ಲಿ ಹುಲಿ
Appearance
ಭಾರತದಲ್ಲಿ ಹುಲಿಗಳ ಸಂತತಿಯಲ್ಲಿ ಏರಿಕೆ[ಬದಲಾಯಿಸಿ]
![](http://upload.wikimedia.org/wikipedia/commons/thumb/2/2e/Tigerramki.jpg/220px-Tigerramki.jpg)
.
- ವೈಜ್ಞಾನಿಕ ವಿವರಣೆ
-
- Kingdom: ಅನಿಮೇಲಿಯಾ
- Phylum: ಕಾರ್ಡೇಟಾ
- Class: ಸಸ್ತನಿ
- Order: ಕಾರ್ನಿವೋರಾ
- Family: ಫೆಲಿಡೇ
- Genus: ಪ್ಯಾಂಥೆರಾ
- Species: ಪ್ಯಾಂಥೆರಾ ಟೈಗ್ರಿಸ್
- ವಿಶ್ವದ ಹುಲಿಗಳ ಪೈಕಿ ಶೇ 70 ರಷ್ಟು ಭಾರತದಲ್ಲಿವೆ. ವಿಶೇಷ ಎಂದರೆ ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಕರ್ನಾಟಕ. 2014ರ ಗಣತಿ ಪ್ರಕಾರ ದೇಶದಲ್ಲಿನ ಹುಲಿಗಳ ಸಂಖ್ಯೆ 2,226. ಈ ಹಿಂದೆ 2010ರಲ್ಲಿ ನಡೆಸಿದ ಗಣತಿಯಲ್ಲಿ 1,706 ಹುಲಿಗಳು ಪತ್ತೆಯಾಗಿದ್ದವು. ಅಂದರೆ ಇದು ಶೇ 30 ರಷ್ಟು ಹೆಚ್ಚಳ.2014ರಲ್ಲಿ ದೇಶದಾದ್ಯಂತ ನಡೆಸಲಾದ ಗಣತಿ ವರದಿ 20/1/2015 ರಂದು ಬಿಡುಗಡೆಯಾಯಿತು. ವಿಶ್ವದಾದ್ಯಂತ ಹುಲಿಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ.
- 2006ರಲ್ಲಿ 1,411ರಷ್ಟಿದ್ದ ಹುಲಿಗಳ ಸಂಖ್ಯೆ 2010ರಲ್ಲಿ 1,706ಕ್ಕೆ ಏರಿತ್ತು. 18 ರಾಜ್ಯಗಳ 3.78 ಲಕ್ಷ ಚದರ ಕಿ.ಮೀ.ಗಳಲ್ಲಿ ಹುಲಿಗಣತಿ ನಡೆಸಲಾಯಿತು. ಒಟ್ಟು 1,540 ಹುಲಿಗಳ ವಿಶೇಷ ಚಿತ್ರಗಳನ್ನು ತೆಗೆಯಲಾಯಿತು. ಭಾರತದ ಶೇ 80 ರಷ್ಟು ಹುಲಿಗಳ ಚಿತ್ರಗಳನ್ನು ತೆಗೆಯಲಾಯಿತು. ಇದಕ್ಕಾಗಿ 9,735 ಕ್ಯಾಮೆರಾಗಳನ್ನು ಬಳಸಲಾಯಿತು. ವಿಶ್ವದ ಯಾವುದೇ ದೇಶದಲ್ಲಿ ಇಷ್ಟೊಂದು ಸಂಖ್ಯೆಯ ಚಿತ್ರಗಳನ್ನು ಸೆರೆಹಿಡಿಯಲಾಗಿಲ್ಲ.
ಏರಿಕೆ ಕಾರಣ[ಬದಲಾಯಿಸಿ]
- ಬೇಟೆ ನಿಯಂತ್ರಣ, ಮಾನವ –ಪ್ರಾಣಿ ಸಂಘರ್ಷ ಕಡಿಮೆಯಾಗಿರುವುದರಿಂದ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು -ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
- ಪಶ್ಚಿಮ ಘಟ್ಟ
- ವಿಶ್ವದ ಹುಲಿ ಕೇಂದ್ರ
- ಜೀವ ವೈವಿಧ್ಯ ಸಮೃದ್ಧ ಪಶ್ಚಿಮ ಘಟ್ಟ ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಪಶ್ಚಿಮ ಘಟ್ಟಗಳಲ್ಲಿನ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂಬುದನ್ನು ಈ ಗಣತಿ ದೃಢಪಡಿಸಿದೆ.
- ಮುದುಮಲೈ, ಬಂಡೀಪುರ, ನಾಗರಹೊಳೆ, ವಯನಾಡು, ಗೋವಾ ಸೇರಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ವಿಶ್ವದಲ್ಲೇ ಅತ್ಯಧಿಕ ಹುಲಿಗಳು ಪತ್ತೆಯಾಗಿವೆ. 2014 ರ ಗಣತಿ ಪ್ರಕಾರ ಇಲ್ಲಿ 776 ಹುಲಿಗಳಿವೆ. ಇದರಲ್ಲಿ ಕರ್ನಾಟಕ ಭಾಗದಲ್ಲಿ 406, ಕೇರಳದಲ್ಲಿ 136 ಮತ್ತು ತಮಿಳುನಾಡಿನಲ್ಲಿ 229 ಹುಲಿಗಳಿವೆ. ಕಳೆದ ಬಾರಿಯ ಗಣತಿಯಲ್ಲಿ ಗೋವಾದಲ್ಲಿ ಒಂದೂ ಹುಲಿ ಸಿಕ್ಕಿರಲಿಲ್ಲ. ಈ ಬಾರಿ 5 ಪತ್ತೆಯಾಗಿವೆ.
ಭಾರತದಲ್ಲಿ ಹುಲಿಗಣತಿ ವಿವರ[ಬದಲಾಯಿಸಿ]
ರಾಜ್ಯ | ಇಸವಿ | ಇಸವಿ | ರಾಜ್ಯ | ಇಸವಿ | ಇಸವಿ |
---|---|---|---|---|---|
ಪಶ್ಚಿಮಘಟ್ಟ | 2010 | 2014 | .. | 2010 | 2014 |
ಪಶ್ಚಿಮಘಟ್ಟ | ಹುಲಿ ಸಂಖ್ಯೆ | ಹುಲಿಸಂಖ್ಯೆ | ಶಿವಾಲಿಕ್ ಗಂಗಾನದಿ ಪ್ರದೇಶ | ಹುಲಿ ಸಂಖ್ಯೆ | ಹುಲಿ ಸಂಖ್ಯೆ |
ಕರ್ನಾಟಕ | 300 | 406 | ಉತ್ತರಾಖಂಡ | 227 | 347 |
ಕೇರಳ | 71 | 136 | ಉತ್ತರ ಪ್ರದೇಶ | 118 | 117 |
ತಮಿಳುನಾಡು | 163 | 229 | ಬಿಹಾರ | 7 | 28 |
ಗೋವಾ | .. | 5 | .. | .. | |
ಮಧ್ಯ ಭಾರತ ಪೂರ್ವಘಟ್ಟ | .. | .. | ಈಶಾನ್ಯ ಪ್ರದೇಶ | .. | |
ಆಂಧ್ರ ಪ್ರದೇಶ | 72 | 68 | ಅಸ್ಸಾಂ | 143 | 167 |
ಛತ್ತೀಸಗಡ | 26 | 46 | ಅರಣಾಚಲ ಪ್ರದೇಶ | 0 | 28 |
ಮಧ್ಯಪ್ರದೇಶ | 257 | 308 | ಮಿಜೋರಾಂ | 5 | 3 |
ಮಹಾರಾಷ್ಟ್ರ | 169 | 190 | ಪಶ್ಚಿಮ ಬಂಗಾಳ(ಉ) | 0 | 3 |
ಒಡಿಶಾ | 32 | 28 | ಈಶಾನ್ಯ ಬೆಟ್ಟ-ಬ್ರಹ ಪುತ್ರ | 148 | 201 |
ರಾಜಸ್ಥಾನ | 36 | 45 | ಸುಂದರಬನ್ | 69 | 76 |
ಝಾರ್ಕಂಡ್ | 10 | 3 | .. | .. | |
ಇಸವಿ:ಸಂಖ್ಯೆ> 2006>> | 1411 | 2010>> | 1706 | 2014>> | 2226 |
ಭಾರತದ ಹುಲಿಗಳು[ಬದಲಾಯಿಸಿ]
-
ಜಿಮ್ -ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿರುವ ಬಂಗಾಳ ಹುಲಿ - ಚಿನ್ನದ ಬಣ್ಣದ ಹುಲಿ
-
ಕರ್ನಾಟಕದ ಪಾಂಥೇರಾ (ಪಟ್ಟೆ ಹುಲಿ) ಹೆಣ್ಣು ಹುಲಿ
-
ಕಬಿನಿ ನದಿ ದಡದಲ್ಲಿರುವ ಕನಾಟಕದ ಹುಲಿ
-
ದೆಹಲಿ ರಾಷ್ಟ್ರೀಯ ಉದ್ಯಾನದಲ್ಲಿರುವ ಬಿಳಿ ಹುಲಿ
ನೋಡಿ:[ಬದಲಾಯಿಸಿ]
ಹೊರ ಸಂಪರ್ಕ[ಬದಲಾಯಿಸಿ]
- ಹುಲಿ ಸಂರಕ್ಷಣೆ:[೧]ಕೆಲವು ಫೋಟೊಗಳು.
ಉಲ್ಲೇಖ[ಬದಲಾಯಿಸಿ]
- ೧).21/1/2015/prajavani