ಭಾರತದಲ್ಲಿ 2017 ರ ಕೂದಲು ಮತ್ತು ಜಡೆ ಕತ್ತರಿಸುವ ಘಟನೆಗಳು
ಭಾರತದಲ್ಲಿ ಕೂದಲು ಕತ್ತರಿಸುವ ನಿಗೂಢ ಘಟನೆಗಳು | |
---|---|
ಸ್ಥಿತಿ | ಕೊನೆಗೊಂಡಿದೆ |
ಪ್ರಕಾರ | ನಿಗೂಢತೆ, ವದಂತಿಗಳು, ಮಾನವ ಅಥವಾ ಪ್ರಾಣಿಗಳ ಚಟುವಟಿಕೆಗಳು |
ಪ್ರಾರಂಭ | ಜೂನ್ 2017 |
ಅಂತ್ಯ | ಅಕ್ಟೋಬರ್ 2017 |
ಆವರ್ತನ | ವಾರಕ್ಕೊಮ್ಮೆ, ಪರ್ಯಾಯವಾಗಿ, ಮಾಸಿಕವಾಗಿ |
ರಾಷ್ಟ್ರ | ಭಾರತ |
Activity | ಜಡೆ ಕತ್ತರಿಸುವುದು |
ಜೂನ್ ಮತ್ತು ಅಕ್ಟೋಬರ್ 2017 ರ ನಡುವೆ ಭಾರತದಾದ್ಯಂತ ಹಲವಾರು ವಿವರಿಸಲಾಗದ ಮತ್ತು ನಿಗೂಢ ಕೂದಲು ಮತ್ತು ಜಡೆ ಕತ್ತರಿಸುವ ಘಟನೆಗಳು ವರದಿಯಾಗಿತ್ತು. ಮೊದಲ ಘಟನೆ ಜೂನ್ 23, 2017 ರಂದು ವರದಿಯಾಗಿತ್ತು ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಮಹಿಳೆಯೊಬ್ಬಳು ರಾತ್ರಿ ಮಲಗಿದ್ದಾಗ ಮಾಟಗಾತಿ ಆಕೆಯ ಕೂದಲನ್ನು ಕತ್ತರಿಸಿದ್ದಾಳೆಂದು ಎಬಿಪಿ ನ್ಯೂಸ್ ವರದಿ ಮಾಡಿತು. ಇದೇ ರೀತಿಯ ಘಟನೆಗಳು ಭಾರತದಾದ್ಯಂತ, ವಿಶೇಷವಾಗಿ ದೆಹಲಿ, ಬಿಹಾರ, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಕಾಶ್ಮೀರದಲ್ಲಿ ವರದಿಯಾಗಿತ್ತು.
ವಿವಿಧ ರಾಜ್ಯಗಳಲ್ಲಿ ನಡೆದ ಘಟನೆಗಳು
[ಬದಲಾಯಿಸಿ]ರಾಜಸ್ಥಾನ
[ಬದಲಾಯಿಸಿ]ಜೂನ್ 23, 2017 ರಂದು ಎಬಿಪಿ ನ್ಯೂಸ್ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಮಹಿಳೆಯೊಬ್ಬರು ಮಲಗಿದ್ದಾಗ ಮಾಟಗಾತಿಯೊಬ್ಬರು ಆ ಮಹಿಳೆಯ ಕೂದಲನ್ನು ಕತ್ತರಿಸಿದ್ದಾರೆ ಎಂದು ವರದಿ ಮಾಡಿದೆ. ಈ ಘಟನೆಗಳು ರಾತ್ರಿಯಲ್ಲಿ ಮಾತ್ರವಲ್ಲದೆ ಹಗಲಿನಲ್ಲಿಯೂ ಸಂಭವಿಸಿದವು.[೧]
ಜೂನ್ 23 ರ ಘಟನೆಗೆ ಮೂರು ದಿನಗಳ ಮೊದಲು, ಜೋಧ್‌ಪುರ ಜಿಲ್ಲೆಯ ಪಿಪರ್ ನಗರದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು , ಅಲ್ಲಿ ಬೆಳಿಗ್ಗೆ ಎದ್ದಾಗ ಹುಡುಗಿಯ ಕೂದಲು ಕತ್ತರಿಸಲ್ಪಟ್ಟಿರುವುದು ಕಂಡುಬಂದಿತ್ತು. ಈ ಸುದ್ದಿಯನ್ನು ಮೊದಲು ದೈನಿಕ್ ಭಾಸ್ಕರ್ ನ್ಯೂಸ್ ವರದಿ ಮಾಡಿತ್ತು.[೨] ಕಾಣೆಯಾದ ಕೂದಲಿನ ಜೊತೆಗೆ, ಹುಡುಗಿಯ ದೇಹದ ಇತರ ಭಾಗಗಳಲ್ಲಿ ಗಾಯಗಳು ಕಂಡುಬಂದಿತ್ತು ಮತ್ತು ಕೂದಲನ್ನು ಬ್ಲೇಡ್ ನಿಂದ ಕಟ್ಟರಿಸಲಾಗಿದೆ ಎನ್ನಲಾಗಿತ್ತು.
ಜುಲೈ 6, 2017 ರಂದು, ಹಿಂದೂಸ್ತಾನ್ ಟೈಮ್ಸ್ ರಾಜಸ್ಥಾನದ 13 ಮತ್ತು 14 ವರ್ಷ ವಯಸ್ಸಿನ ಇಬ್ಬರು ಹುಡುಗಿಯರು ಈ ಘಟನೆಗಳಿಗೆ ಬಲಿಯಾಗಿದ್ದಾರೆ ಎಂದು ವರದಿ ಮಾಡಿತ್ತು.[೩]
ಜುಲೈ 8, 2017 ರಂದು , ಬಿಕಾನೆರ್ , ನಾಗೌರ್ , ಜೈಸಲ್ಮೇರ್ , ಬಾರ್ಮರ್ , ಜೋಧ್‌ಪುರ ಮತ್ತು ಜಲೋರ್ ಜಿಲ್ಲೆಗಳು ಈ ಘಟನೆಗಳಿಂದ ಪ್ರಭಾವಿತವಾಗಿವೆ ಎಂದು ಬಿಬಿಸಿ ವರದಿ ಮಾಡಿತ್ತು.[೪]
ಉತ್ತರ ಪ್ರದೇಶ
[ಬದಲಾಯಿಸಿ]ಆಗಸ್ಟ್ 2017 ರ ಆರಂಭದಲ್ಲಿ, ಅಲಿಗಢ ಮತ್ತು ಮೊರಾದಾಬಾದ್ ಜಿಲ್ಲೆಗಳಿಂದ ಎರಡು ಪ್ರಕರಣಗಳು ವರದಿಯಾಗಿವೆ. ಬುಲಂದ್‌ಶಹರ್ ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ.[೫] ಆದರೆ ನಂತರ ಉತ್ತರ ಪ್ರದೇಶ ಪೊಲೀಸರು ಮತ್ತು ದೆಹಲಿ ಪೊಲೀಸರು ಈ ಘಟನೆಗಳು ಕೇವಲ ವದಂತಿಗಳು ಎಂದು ಸ್ಪಷ್ಟಪಡಿಸಿದರು. ದಿ ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿ ವಾಹಿನಿಯ ಪ್ರಕಾರ, ಉತ್ತರ ಭಾರತದಾದ್ಯಂತ ಸುಮಾರು ಮೂವತ್ತು ಪ್ರಕರಣಗಳು ದಾಖಲಾಗಿವೆ.[೫][೬]
ಆಗಸ್ಟ್ 2 ರಂದು, ಆಗ್ರಾ ಜಿಲ್ಲೆಯಲ್ಲಿ 62 ವರ್ಷದ ಮಹಿಳೆಯನ್ನು ಹುಡುಗಿಯರ ಜಡೆ ಕತ್ತರಿಸುವ "ಮಾಟಗಾತಿ" ಎಂದು ಆರೋಪಿಸಿ ಕೋಪಗೊಂಡ ಗ್ರಾಮಸ್ಥರು ಆ ಮಹಿಳೆಯನ್ನು ಕೊಂದರು. ಎನ್‌ಡಿಟಿವಿ ಇಂಡಿಯಾ ಈ ಸುದ್ದಿಯನ್ನು ಆಗಸ್ಟ್ 3, 2017 ರಂದು ವರದಿ ಮಾಡಿದೆ. ನಗರದಿಂದ ಪರಾರಿಯಾಗಿದ್ದ ಮತ್ತು ಆ ಮಹಿಳೆಯ ನೆರೆಹೊರೆಯವರಾಗಿದ್ದ ಇಬ್ಬರು ಶಂಕಿತರ ಮೇಲೆ ಯುಪಿ ಪೊಲೀಸರು ಕೊಲೆ ಪ್ರಕರಣಗಳನ್ನು ದಾಖಲಿಸಿದ್ದಾರೆ.[೭]
ದೆಹಲಿ
[ಬದಲಾಯಿಸಿ]ಆಗಸ್ಟ್ 1, 2017 ರಂದು, ಕಂಗನ್ ಹೆರಿಯ 50 ರಿಂದ 60 ವರ್ಷ ವಯಸ್ಸಿನ ಪರಸ್ಪರ ಅಪರಿಚಿತ ಮೂವರು ಮಹಿಳೆಯರು ಒಂದೇ ದಿನ ಕೂದಲು ಕತ್ತರಿಸುವ ಘಟನೆಗಳಿಗೆ ಬಲಿಯಾದ ಬಗ್ಗೆ ದೂರು ನೀಡಿದರು. ಯಾವುದೇ ಮಹಿಳೆಯರು ತಮ್ಮ ಅಪರಾಧಿಯನ್ನು ನೋಡಿರಲಿಲ್ಲ, ಆದರೆ ಅವರು ಪ್ರಜ್ಞೆ ತಪ್ಪಿ ನಂತರ ಎಚ್ಚರವಾದಾಗ, ಅವರ ಕೂದಲು ಕತ್ತರಿಸಲ್ಪಟ್ಟಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ದಾಖಲಾಗಿತ್ತು.[೮]
ಹರಿಯಾಣ
[ಬದಲಾಯಿಸಿ]ಹರಿಯಾಣ ರಾಜ್ಯದಲ್ಲಿ ಹದಿನೈದು ಪ್ರಕರಣಗಳು ವರದಿಯಾಗಿವೆ. ಈ ರೀತಿಯ ಘಟನೆಗಳಿಗೆ ಬಲಿಯಾದ ಮಹಿಳೆಯರು ನಾವು "ದೇವಪುರುಷರು ", " ಮಾಟಗಾತಿಯರು ", " ದೆವ್ವಗಳು " ಮತ್ತು "ಬೆಕ್ಕಿನಂತಹ ಜೀವಿ" ಗಳನ್ನು ನೋಡಿದ್ದೇವೆ ಎಂದು ಹೇಳಿದರು. ಪೊಲೀಸರು ಈ ಮಾತುಗಳನ್ನು ತಿರಸ್ಕರಿಸಿದರು.
ಜುಲೈ 28 ರಂದು ಗುರ್ಗಾಂವ್‌ನಲ್ಲಿ ಅಂತಹ ಒಂದು ಘಟನೆ ಸಂಭವಿಸಿತು , 60 ವರ್ಷದ ಮಹಿಳೆಯೊಬ್ಬರು ಎಚ್ಚರವಾದಾಗ ಅವರ ಜಡೆ ಕತ್ತರಿಸಿದ್ದನ್ನು ಕಂಡುಕೊಂಡರು. ಒಬ್ಬ ತೆಳ್ಳಗಿನ ವ್ಯಕ್ತಿ ಕೈಯಲ್ಲಿ ತ್ರಿಶೂಲದೊಂದಿಗೆ ತನ್ನ ಮನೆ ಬಾಗಿಲಿಗೆ ಬಂದನೆಂದು ಅವರು ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿ ಡೈಲಿ ಡೈರಿಯಲ್ಲಿ ನಮೂದಿಸಿದರು.[೯]
ಜಮ್ಮು ಮತ್ತು ಕಾಶ್ಮೀರ
[ಬದಲಾಯಿಸಿ]ಬಾಲಾಕ್ಲಾವಾಸ್ ಧರಿಸಿದ ಪುರುಷರು ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಅವರನ್ನು ಪ್ರಜ್ಞೆ ತಪ್ಪಿಸಿದ 200 ಕ್ಕೂ ಹೆಚ್ಚು ಘಟನೆಗಳು ನಡೆದಿವೆ, ನಂತರ ಅವರು ಮಹಿಳೆಯರ ಕೂದಲಿನ ಜಡೆಗಳನ್ನು ಕತ್ತರಿಸುತ್ತಾರೆ. ಅಧಿಕಾರಿಗಳಿಗೆ ಯಾವುದೇ ಖಚಿತ ಸುಳಿವುಗಳು ಮತ್ತು ಶಂಕಿತರು ಸಹ ಇರಲಿಲ್ಲ.[೧೦][೧೧]
ಧಾರ್ಮಿಕ ಪ್ರತಿಕ್ರಿಯೆಗಳು
[ಬದಲಾಯಿಸಿ]ಹಿಂದೂ ಧರ್ಮ
[ಬದಲಾಯಿಸಿ]ಜೂನ್ 23 ರ ಪ್ರಕರಣದಲ್ಲಿ, ಬಲಿಪಶುವಿನ ಕಾಲುಗಳು ಮತ್ತು ಕೈಗಳು ತ್ರಿಶೂಲ (ತ್ರಿಶೂಲ) ಗುರುತನ್ನು ಹೊಂದಿದ್ದವು ಎಂದು ವರದಿಯಾಗಿತ್ತು, ಈ ಘಟನೆ ಹಿಂದೂ ಧರ್ಮಕ್ಕೆ ಸಂಬಂಧಪಟ್ಟಿದೆ. ಆದಾಗ್ಯೂ, ಯಾವುದೇ ಹಿಂದೂ ಧಾರ್ಮಿಕ ಮುಖಂಡರು ಈ ವಿವರಕ್ಕೆ ಪ್ರತಿಕ್ರಿಯಿಸಿಲ್ಲ.[೧]
ಇಸ್ಲಾಂ
[ಬದಲಾಯಿಸಿ]ಕೆಲವು ಭಾರತೀಯ ಮುಸ್ಲಿಮರು ಸಹ ಈ ರೀತಿಯ ಘಟನೆಗಳಿಗೆ ಬಲಿಯಾಗಿದ್ದಾರೆ. ಕೆಲವು ಇಸ್ಲಾಮಿಕ್ ವಿದ್ವಾಂಸರು ಈ ಘಟನೆಗಳನ್ನು ಸಮಾಜದಲ್ಲಿನ ಕಿಡಿಗೇಡಿ ಶಕ್ತಿಗಳು ನಡೆಸುತ್ತಿವೆ ಎಂದು ಹೇಳಿದ್ದಾರೆ.
ವದಂತಿಯಲ್ಲಿ ಬದಲಾವಣೆ
[ಬದಲಾಯಿಸಿ]ಆಗಸ್ಟ್ 19 ರಂದು, ದೈನಿಕ್ ಭಾಸ್ಕರ್‌ನ ವರದಿಯು ಈ ಘಟನೆಗಳ ಸುತ್ತಲಿನ ಚರ್ಚೆಯನ್ನು ಬದಲಾಯಿಸಿತು. ಮಾಟಗಾತಿ ಅಥವಾ ಪ್ರೇತವು ಇದಕ್ಕೆ ಕಾರಣ ಎಂಬುದಕ್ಕೆ ಅಂತಹ ಯಾವುದೇ ಪುರಾವೆಗಳಿಲ್ಲ ಎಂದು ವರದಿಯು ಸ್ಪಷ್ಟವಾಗಿ ಸಾಬೀತುಪಡಿಸಿತು.[೧೨]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "रात में लोगों की बाल काटने वाली 'चुड़ैल' का वायरल सच". ABP News (in ಅಮೆರಿಕನ್ ಇಂಗ್ಲಿಷ್). 2017-06-23. Archived from the original on August 21, 2017. Retrieved 2017-08-22.
- ↑ "रात में बाल काटने की अफवाह या सच्चाई, पुलिस के लिए पहेली". dainikbhaskar (in ಹಿಂದಿ). 2017-06-20. Retrieved 2017-08-23.
- ↑ "Rajasthan's scissorhands? Panic in villages after 'ghost' chops off women's hair". hindustantimes.com/ (in ಇಂಗ್ಲಿಷ್). 2017-07-06. Retrieved 2017-08-22.
- ↑ राठौड़, सुमेर सिंह (2017-07-08). "अफ़वाहों से परेशान हैं राजस्थान की महिलाएं". BBC हिंदी (in ಬ್ರಿಟಿಷ್ ಇಂಗ್ಲಿಷ್). Retrieved 2017-08-22.
- ↑ ೫.೦ ೫.೧ "Fresh cases of mysterious hair-chopping surface in Aligarh, Moradabad and Bulandshahr". The Indian Express (in ಅಮೆರಿಕನ್ ಇಂಗ್ಲಿಷ್). 2017-08-05. Retrieved 2017-08-22.
- ↑ "6 hair-chopping cases turn out to be false". The Hindu. August 5, 2017.
- ↑ "Woman Branded Witch, Killed In UP Amid 'Braid Cutting' Scare". m.ndtv.com (in ಇಂಗ್ಲಿಷ್). Retrieved 2017-08-24.
- ↑ "A mysterious "braid-chopper" is cutting off women's hair in northern India". Quartz (in ಅಮೆರಿಕನ್ ಇಂಗ್ಲಿಷ್). Retrieved 2017-08-23.
- ↑ "Mysterious Incidents Of Women's Braids Being Chopped Off Spreads Panic In Haryana Villages". Huffington Post India. 2017-07-31. Retrieved 2017-08-24.
- ↑ Hussain, Aijaz (2017-10-24). "Mysterious braid-chopping bandits have Kashmiris in panic". CTVNews (in ಕೆನೆಡಿಯನ್ ಇಂಗ್ಲಿಷ್). Retrieved 2018-03-17.
- ↑ "Mystery attacks chopping women's hair raise panic in Kashmir". AP News (in ಅಮೆರಿಕನ್ ಇಂಗ್ಲಿಷ್). Retrieved 2018-03-17.
- ↑ "चोटी काटने वाला समझ पकड़ ली ये अजीब चीज, फिर ये सच्चाई आई सामने". dainikbhaskar (in ಹಿಂದಿ). 2017-08-16. Retrieved 2017-08-22.