ವಿಷಯಕ್ಕೆ ಹೋಗು

ಭಾಷ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾಚೀನ ಅಥವಾ ಮಧ್ಯಯುಗದ ಭಾರತೀಯ ಸಾಹಿತ್ಯದಲ್ಲಿ, ಭಾಷ್ಯ ಎಂದರೆ ಯಾವುದೇ ಪ್ರಧಾನ ಅಥವಾ ದ್ವಿತೀಯಕ ಪಠ್ಯದ "ವ್ಯಾಖ್ಯೆ" ಅಥವಾ "ನಿರೂಪಣೆ". ಸಂಸ್ಕೃತ ಸಾಹಿತ್ಯದಲ್ಲಿ ಸಾಮಾನ್ಯವಾದ ಭಾಷ್ಯವು ಇತರ ಭಾರತೀಯ ಭಾಷೆಗಳಲ್ಲೂ ಕಂಡುಬರುತ್ತದೆ. ಭಾಷ್ಯಗಳು ಉಪನಿಷತ್ತುಗಳಿಂದ ಹಿಡಿದು ಹಿಂದೂ ತತ್ತ್ವಶಾಸ್ತ್ರದ ಪರಂಪರೆಗಳವರೆಗೆ, ಪ್ರಾಚೀನ ವೈದ್ಯಶಾಸ್ತ್ರದಿಂದ ಹಿಡಿದು ಸಂಗೀತದವರೆಗೆ ವಿವಿಧ ಕ್ಷೇತ್ರಗಳಲ್ಲಿ ಕಂಡುಬರುತ್ತವೆ.[]

ಪರಿಚಿತವಾಗಿರುವ ಅತ್ಯಂತ ಮುಂಚಿನ ಭಾಷ್ಯಗಳಲ್ಲಿ ಕ್ರಿ.ಪೂ. ೨ನೇ ಶತಮಾನದ ಪತಂಜಲಿಯ ಮಹಾಭಾಷ್ಯ, ಪ್ರಾಯಶಃ ಕ್ರಿ.ಪೂ. ೧೦೦ ಮತ್ತು ಕ್ರಿ.ಶ. ೨೦೦ ರ ನಡುವೆ ಸಂಯೋಜಿಸಲ್ಪಟ್ಟದ್ದು, ಆದರೆ ೫ನೇ ಶತಮಾನದ ನಂತರ ಅಲ್ಲ ಎಂದು ಕಾಲನಿರ್ಣಯ ಮಾಡಲಾದ ಹಿಂದೂ ಧರ್ಮದ ಮೀಮಾಂಸ ಪರಂಪರೆಯ ಶಬರ ಭಾಷ್ಯ ಸೇರಿವೆ. ವಸುಬಂಧುವಿನ ಅಭಿಧರ್ಮಕೋಶ-ಭಾಷ್ಯವು ಬೌದ್ಧ ಸಾಹಿತ್ಯದ ಭಾಷ್ಯದ ಉದಾಹರಣೆಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Karin Preisendanz (2005), The Production of Philosophical Literature in South Asia during the Pre-Colonial Period (15th to 18th Centuries): The Case of the Nyāyasūtra Commentarial Tradition, Journal of Indian Philosophy, Volume 33, pages 55–94



"https://kn.wikipedia.org/w/index.php?title=ಭಾಷ್ಯ&oldid=1251786" ಇಂದ ಪಡೆಯಲ್ಪಟ್ಟಿದೆ