ವಿಷಯಕ್ಕೆ ಹೋಗು

ಭೂಮಿ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Earth Day - ಭೂಮಿಯ ದಿನ
ಜಾನ್ ಮೆಕ್‌ಕಾನ್ನೆಲ್‍ರ ಭೂಮಿಯ ಧ್ವಜ - "ಭೂಮಿಯ ದಿನ" ಜಾನ್ ಮೆಕ್‌ಕಾನ್ನೆಲ್ (ಶಾಂತಿ ಕಾರ್ಯಕರ್ತ). ಪರಿಸರ ವಿಜ್ಞಾನ ಧ್ವಜವನ್ನು ಸಹ ಬಳಸಲಾಯಿತು.
ಮಹತ್ವಪರಿಸರ ರಕ್ಷಣೆಗಾಗಿ ಬೆಂಬಲ
ಆರಂಭ1970
ದಿನಾಂಕಏಪ್ರಿಲ್ 22
ಆವರ್ತನವಾರ್ಷಿಕ

ಭೂಮಿ ದಿನ ಏಪ್ರಿಲ್ 22 ರಂದು ವಿಶ್ವಾದ್ಯಂತ ಆಚರಿಸಲಾಗುವ ವಾರ್ಷಿಕ ಘಟನೆಯಾಗಿದೆ, ಪರಿಸರ ರಕ್ಷಣೆ ಬೆಂಬಲವನ್ನು ವಿವಿಧ ಪ್ರದರ್ಶನಗಳ ಮೂಲಕ ನಡೆಸಲಾಗುತ್ತದೆ. 1970 ರಲ್ಲಿ ಮೊದಲ ಭೂಮಿ ದಿನ ಆಚರಿಸಲಾಯಿತು. 193 ರಾಷ್ಟ್ರಗಳಲ್ಲಿ ಈ ದಿನ ಆಚರಿಸಲಾಗುತ್ತದೆ. ಇದನ್ನು ಭೂಮಿ ದಿನ ನೆಟ್ವರ್ಕ್ ಜಾಗತಿಕವಾಗಿ ಸಂಬಂಧ ಹೊಂದಿವೆ.[]

ಹಿನ್ನೆಲೆ

[ಬದಲಾಯಿಸಿ]
ಯು.ಎಸ್. ಸ್ಟೇಟ್ ಸೆಕ್ರೆಟರಿ ಜಾನ್ ಕೆರ್ರಿ ಮಾಜಿ ಯು.ಎಸ್. ಯುನೈಟೆಡ್ ಸ್ಟೇಟ್ಸ್ ಹವಾಮಾನ ಬದಲಾವಣೆಗಾಗಿ ವಿಶೇಷ ರಾಯಭಾರಿ ಟಾಡ್ ಸ್ಟರ್ನ್ ಮತ್ತು ಯು.ಎಸ್. ಮಿಷನ್ ಟು ಯುನೈಟೆಡ್ ನೇಷನ್ಸ್ ಚಾರ್ಜ್ ಡಿ ಅಫೈರ್ಸ್ ಮಿಚೆಲ್ ಸೀಸನ್ ಅವರೊಂದಿಗೆ ಸಿಒಪಿ 21 ಹವಾಮಾನ ಬದಲಾವಣೆ ಒಪ್ಪಂದಕ್ಕಾಗಿ ವಿಶ್ವಸಂಸ್ಥೆಯ ಸಹಿ ಕಾರ್ಯಕ್ರಮದ ಪ್ರಾರಂಭದ ಸಂದರ್ಭದಲ್ಲಿ ಮಾತನಾಡುತ್ತಾರೆ.
  • ಕೈಗಾರಿಕೆಗಳ ಮಾಲಿನ್ಯದಿಂದ ವಾತಾವರಣ ಕೆಡುತ್ತಿದ್ದು, ಮಾಲಿನ್ಯಯುಕ್ತವಾಗುತ್ತಿದೆ ಎಂದು ಅಮೆರಿಕದಲ್ಲಿ 1970ರಲ್ಲಿ ಪರಿಸರಪ್ರೇಮಿಗಳ ಚಳವಳಿ ನಡೆಯಿತು. ಇದು ಕೆಲವೇ ದಿನಗಳಲ್ಲಿ ಬೃಹತ್ ಸ್ವರೂಪವನ್ನೂ ಪಡೆಯಿತು. ಪರಿಸರ ಪ್ರೇಮಿಗಳು ಅಷ್ಟೇ ಅಲ್ಲ, ನಾಗರಿಕರೆಲ್ಲ ಎಚ್ಚೆತ್ತುಕೊಂಡು ಈ ಮಾಲಿನ್ಯ ಹೋಗದಿದ್ದರೆ ಉಳಿಗಾಲವಿಲ್ಲ ಎಂದರಿತುಕೊಂಡರು.
  • ಆಗ ಸರ್ಕಾರ ಮಾಲಿನ್ಯ ತಡೆಗೆ ನಿಯಮಗಳನ್ನು ರೂಪಿಸಿ, ಜಾರಿಗೂ ತಂದಿತು. ಈ ಹೋರಾಟದ ಫಲವೇ ಭೂಮಿ ದಿನ.ಈ ಚಳವಳಿಗೆ ಸರ್ಕಾರ ಮನ್ನಣೆ ನೀಡಿ ಪರಿಸರ ರಕ್ಷಣೆ, ಭೂಮಿ ಸಂರಕ್ಷಣೆಗೆ ಒತ್ತು ನೀಡುವ ಭರವಸೆ ನೀಡಿದ ಸೂಚಕವಾಗಿ ಪ್ರತಿವರ್ಷ ಏಪ್ರಿಲ್ 22ರಂದು ವಿಶ್ವಭೂಮಿ ದಿನ.

ವಿಶ್ವದಾದ್ಯಂತ

[ಬದಲಾಯಿಸಿ]
  • ಈ ಭೂಮಿ ದಿನ ನಂತರದ ದಿನಗಳಲ್ಲಿ, ವರ್ಷಗಳಲ್ಲಿ ವಿಶ್ವದಾದ್ಯಂತ ವಿಸ್ತಾರವಾಯಿತು. ಭೂಮಿ ಸಂರಕ್ಷಣೆಯಲ್ಲಿ ಮಾನವನ ಪಾತ್ರದ ಬಗ್ಗೆ ಅರಿವು ಮೂಡಿಸುವ ವೇದಿಕೆಗಳು ಸೃಷ್ಟಿಯಾದವು. ಪರಿಸರ ಕಾಳಜಿಯುಳ್ಳ ಸಂಸ್ಥೆಗಳು ಕೈಜೋಡಿಸಿದವು. ಕೆಲವು ಕಂಪನಿಗಳು ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯ (ಸಿಎಸ್‌ಆರ್) ಮೂಲಕವೂ ಕಾರ್ಯಕ್ರಮಗಳನ್ನು ಆಯೋಜಿಸಿದವು.
  • ಪ್ರತಿಯೊಂದು ವರ್ಷಕ್ಕೂ ಒಂದು ಥೀಮ್ ನೀಡಲಾಯಿತು. ಅದರಂತೆ ಭೂಮಿ ರಕ್ಷಣೆಯಲ್ಲಿ, ಭೂಮಿಯನ್ನು ಮಾಲಿನ್ಯ ಮುಕ್ತಗೊಳಿಸಲು, ಪರಿಸರ ಕಾಪಾಡಲು, ಹಸಿರು ಉಳಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಕಾಳಜಿ

[ಬದಲಾಯಿಸಿ]
  • ಜನಸಾಮಾನ್ಯರಿಗೆ ಇದರ ಬಗ್ಗೆ ಅರಿವೂ ಇರುವುದಿಲ್ಲ. ಇಂತಹ ದಿನಗಳು ವಾಣಿಜ್ಯೀಕರಣಗೊಂಡಿಲ್ಲ. ವ್ಯಾಲೆಂಟೈನ್ಸ್ ಡೇ, ಫಾದರ್ಸ್ ಡೇ, ಮದರ್ಸ್ ಡೇಗಳೆಂದರೆ ಗ್ರೀಟಿಂಗ್ಸ್, ಗಿಫ್ಟ್ ಹಾಗೂ ಆ ದಿನದಲ್ಲಿ ಇದು ಮಾಡಿ, ಅದು ಮಾಡಿ ಎಂಬ ಜಾಹೀರಾತುಗಳ ಸುರಿಮಳೆ ತಿಂಗಳ ಹಿಂದಿನಿಂದಲೇ ಶುರುವಾಗುತ್ತದೆ.
  • ವ್ಯಾಪಾರ ದೃಷ್ಟಿಯಲ್ಲಿ ಅವರು ಮಾಡುವುದು ಸರಿಯೇ ಇರಬಹುದು. ಆದರೆ, ಅಂತಹದ್ದೇ ಕಾಳಜಿಯನ್ನು ನಮ್ಮ ಪರಿಸರ, ನಾವು ಬದುಕುತ್ತಿರುವ ಭೂಮಿ ಮೇಲೂ ತೋರುವ ಆವಶ್ಯಕತೆ ಇದೆ.

2014 ಥೀಮ್

[ಬದಲಾಯಿಸಿ]
  • ವರ್ಷದ ಥೀಮ್- ಗ್ರೀನ್ ಸಿಟೀಸ್.

ಪರಿಸರ ಕಾಪಾಡದಿದ್ದರೆ ದುಷ್ಪರಿಣಾಮಗಳು

[ಬದಲಾಯಿಸಿ]
  1. ಮಳೆ ಕಡಿಮೆಯಾಗುತ್ತದೆ.
  2. ತಾಪಮಾನ ಊಹಿಸಲೂ ಸಾಧ್ಯವಾಗದಷ್ಟು ಹೆಚ್ಚಾಗುತ್ತದೆ.
  3. ಅರಣ್ಯ ನಾಶ.[]

ಸಮಸ್ಯೆಯ ತೀವ್ರತೆ

[ಬದಲಾಯಿಸಿ]
ಅರ್ಥ್-ಗ್ಲೋಬಲ್ ಏರ್‌ಕ್ವಾಲಿಟಿ -2014 ನೈಟ್ರೋಜನ್ ಡೈಆಕ್ಸೈಡ್ ಲೆವೆಲ್ಸ್ -2015; ಡಿಸೆಂಬರ್ 14, 2015- ನಾಸಾ ವಿಜ್ಞಾನಿಗಳು ಕಳೆದ ಒಂದು ದಶಕದಲ್ಲಿ ವಿವಿಧ ಪ್ರದೇಶಗಳಲ್ಲಿ ಮತ್ತು ಜಗತ್ತಿನ 195 ನಗರಗಳಲ್ಲಿ ವಾಯುಮಾಲಿನ್ಯದ ಪ್ರವೃತ್ತಿಯನ್ನು ಪತ್ತೆಹಚ್ಚಿದ್ದಾರೆ. ಯುನೈಟೆಡ್ ಸ್ಟೇಟ್ಸ್, ಯುರೋಪ್ ಮತ್ತು ಜಪಾನ್ ಹೊರಸೂಸುವಿಕೆ ನಿಯಂತ್ರಣ ನಿಯಮಗಳಿಗೆ ಧನ್ಯವಾದಗಳು, ಆದರೆ ಚೀನಾ, ಭಾರತ ಮತ್ತು ಮಧ್ಯಪ್ರಾಚ್ಯವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ವಿಸ್ತರಿಸುವ ಉದ್ಯಮದೊಂದಿಗೆ ಹೆಚ್ಚಿನ ವಾಯುಮಾಲಿನ್ಯವನ್ನು ಕಂಡಿದೆ. ಕ್ರೆಡಿಟ್ಸ್: ನಾಸಾ ಇಮೇಜ್: ಯುನೈಟೆಡ್ ಸ್ಟೇಟ್ಸ್ನ ಟ್ರೆಂಡ್ ಮ್ಯಾಪ್ 2005 ರಿಂದ 2014 ರವರೆಗೆ ಪರಿಸರ ನಿಯಮಗಳಿಗೆ ಸಂಬಂಧಿಸಿರುವ ಸಾರಜನಕ ಡೈಆಕ್ಸೈಡ್ ಸಾಂದ್ರತೆಯ ದೊಡ್ಡ ಇಳಿಕೆಗಳನ್ನು ತೋರಿಸುತ್ತದೆ.[]
  • ಜಗತ್ತಿನ ತಾಪಮಾನದ ಏರಿಕೆ, ಹವಾಮಾನ ಏರುಪೇರು ಭವಿಷ್ಯದ ಬೂಮಿಯ ಜೀವ ಸಂಕುಲದ ಅಳಿವಿಗೆ ಕಾರಣವಾಗಬಹುದು ಎಂಬ ಭಯ ಹವಾಮಾನ ತಜ್ಞರನ್ನು ಕಾಡುತ್ತಿದೆ. ಈ ತಾಪಮಾನದ ಏರಿಕೆಗೆ,'ಭೂಮಿ ಕುದಿಯುತ್ತಿದೆ" ಎಂಬ ಸಂದೇಶ ಹರಿಬಿಟ್ಟಿದ್ದಾರೆ, ಇದೇ ಸಂದರ್ಭದಲ್ಲಿ 2010–2020 ದಶಕವು ಇತಿಹಾಸದಲ್ಲೇ ಗರಿಷ್ಠ ತಾಪಮಾನ ದಾಖಲೆಯಾದ ದಶಕ ಎಂಬ ಆತಂಕಕಾರಿ ಮಾಹಿತಿಯನ್ನು ವಿಶ್ವ ಹವಾಮಾನ ಸಂಸ್ಥೆಯು (ಡಬ್ಲ್ಯೂ.ಎಂ.ಒ-World Meteorological Organization - WMO) ನೀಡಿದೆ. ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಹವಾಮಾನ ಸಮ್ಮೇಳನದಲ್ಲಿ ಭೂಮಿಯ ವಾತಾವರಣದ ಬಗ್ಗೆ ವರದಿಯನ್ನು ಡಬ್ಲ್ಯೂ.ಎಂ.ಒ. ಬಿಡುಗಡೆಗೊಳಿಸಿತು.
ಅಂಕಿ ಅಂಶಗಳ ವಿವರ:-
  • 2019-2020 ವರ್ಷದಲ್ಲಿ ಏರಿದ ಜಾಗತಿಕ ತಾಪಮಾನ: 1.1 ಡಿಗ್ರಿ ಸೆಲ್ಸಿಯಸ್‌(ಕೈಗಾರಿಕಾ ಯುಗದ ಹಿಂದಿನ ಸರಾಸರಿಗಿಂತ ಅಧಿಕ)
  • 2 ಡಿಗ್ರಿ ಸೆಲ್ಸಿಯಸ್‌: ಪ್ಯಾರಿಸ್‌ ಒಪ್ಪಂದದ ಪ್ರಕಾರ ಜಾಗತಿಕ ತಾಪಮಾನದ ಮಿತಿ.
  • ಶೇ 90: ಹಸಿರು ಮನೆ ಅನಿಲದಿಂದ, ಕಾಡು -ಸಸ್ಯಗಳಿಂದ ಉತ್ಪತ್ತಿಯಾದ ಬಿಸಿಯನ್ನು ಸಮುದ್ರ ಹೀರಿಕೊಳ್ಳುವ ಪ್ರಮಾಣ. ಆದರೆ ಈಗ ಸಮುದ್ರವೂ ತನ್ನ ಗರಿಷ್ಠ ತಾಪಮಾನವನ್ನು ತಲುಪಿರುವುದರಿಂದ, ಯಾತಾವರನದ ತಾಪಮಾನ ಇನ್ನೂ ಏರುವ ಸಾಧ್ಯತೆ.
  • ಶೇ 26:ಆಮ್ಲದ ಹೆಚ್ಚಳ; ಕೈಗಾರಿಕಾ ಯುಗ ಆರಂಭದ ಕಾಲಕ್ಕೆ ಹೋಲಿಸಿದರೆ ಸಮುದ್ರದ ನೀರಿನಲ್ಲಿ ಹೆಚ್ಚಾಗಿರುವ ಆಮ್ಲದ ಅಂಶ.
  • 32,900 ಕೋಟಿ ಟನ್‌: ವಾತಾವರಣದ ಬಿಸಿ ಹೆಚ್ಚಳದಿಂದ ಕಳೆದ 12 ತಿಂಗಳಲ್ಲಿ ಗ್ರೀನ್‌ಲ್ಯಾಂಡ್‌ನಲ್ಲಿ ಕರಗಿದ ಹಿಮಗಡ್ಡೆಯ ಪ್ರಮಾಣ.
  • 70 ಲಕ್ಷ :ಜಗತ್ತಿನಲ್ಲಿ ಬರ, ನೆರೆ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪದಿಂದ ನಿರಾಶ್ರಿತರಾದವರ ಒಟ್ಟು ಸಂಖ್ಯೆ.
  • 100 ಜನ: 2019 ಜುಲೈ– ಆಗಸ್ಟ್‌ನಲ್ಲಿ ಜಪಾನ್‌ನಲ್ಲಿ ಬಿಸಿಗಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ.

ಪಿಪಿಎಮ್

[ಬದಲಾಯಿಸಿ]
  • ಪಿಪಿಎಂ(Parts Per Million (ppm))(Parts per Million by Volume (or mole) in Air[]
  • Air pollutant concentrations
  • ಪ್ರಸ್ತುತದ ಗಾಳಿಯಲ್ಲಿ ಅಥವಾ ಸುತ್ತುವರಿದ ಗಾಳಿಗೆ ಅನಿಲ ಹೊರಸೂಸುವಿಕೆಯಲ್ಲಿನ ಮಾಲಿನ್ಯಕಾರಕಗಳ ಸಾಂದ್ರತೆಯನ್ನು ವ್ಯಾಖ್ಯಾನಿಸುವ ಮತ್ತು ಸೀಮಿತಗೊಳಿಸುವ ನಿಯಮಗಳನ್ನು, ವಿವಿಧ ರಾಷ್ಟ್ರೀಯ ಮತ್ತು ರಾಜ್ಯ (ಅಥವಾ ಪ್ರಾಂತೀಯ) ಪರಿಸರ ಸಂರಕ್ಷಣೆ ಮತ್ತು ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಸಂಸ್ಥೆಗಳು ನೀಡುತ್ತವೆ.
  • ಅಂತಹ ನಿಯಮಗಳು ಸಾಂದ್ರತೆಯ ಹಲವಾರು ವಿಭಿನ್ನ ಅಭಿವ್ಯಕ್ತಿಗಳನ್ನು ಒಳಗೊಂಡಿರುತ್ತವೆ. ಕೆಲವರು ಸಾಂದ್ರತೆಗಳನ್ನು ಪಿಪಿಎಂವಿ (ಪರಿಮಾಣದ ಪ್ರಕಾರ ಮಿಲಿಯನ್‌ಗೆ ಭಾಗಗಳು) ಮತ್ತು ಕೆಲವರು ಸಾಂದ್ರತೆಯನ್ನು ಮಿಗ್ರಾಂ / ಮೀ 3 (ಘನ ಮೀಟರ್‌ಗೆ/ ಮಿಲಿಗ್ರಾಂ) ಎಂದು ವ್ಯಕ್ತಪಡಿಸುತ್ತಾರೆ.[]
  • ವಾತಾವರಣದಲ್ಲಿರುವ 10 ಲಕ್ಷ ಕಣಗಳಲ್ಲಿ(ಪಿಪಿಎಂ) ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ 407.8ರಷ್ಟಿದೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ಪಿಪಿಎಂ ಪ್ರಮಾಣ ಏರಿಕೆಯಾಗಿದೆ. ಪಿಪಿಎಂ ಪ್ರಮಾಣ 1,000 ಮೀರಿದರೆ ಗಾಳಿಯ ಗುಣಮಟ್ಟ ಉಸಿರಾಡಲು ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ. ತಾಪಮಾನ ಏರಿಕೆಗೆ ಪರಮುಖ ಕಾರಣಗಳು, ನವೀಕರಿಸಲಾಗದ ಇಂಧನಗಳ ಬಳಕೆಗಳು, ನಗರೀಕರಣ, ಕೃಷಿ ತ್ಯಾಜ್ಯ ಸುಡುವುದು, ಸರಕು ಸಾಗಣೆ ವಾಹನಗಳ ಸಂಖ್ಯೆ ಏರಿಕೆ, ವಿದ್ಯತ್ ಉತ್ಪಾದನೆ ಮತ್ತು ಕೈಗಾರಿಕೆಗಾಗಿ ಕಲ್ಲಿದ್ದಲು ಸುಡುವುದು ಇತ್ಯಾದಿ.[]

ಪರಿಹಾರ

[ಬದಲಾಯಿಸಿ]
  • ಭೂಮಿಯಲ್ಲಿ ಹೆಚ್ಚುತ್ತಿರುವ ಶಾಖಕ್ಕೆ ಪರಿಹಾರ ಕಂಡುಹಿಡಿಯಲು 25ನೇ ವಾರ್ಷಿಕ ಜಾಗತಿಕ ಹವಾಮಾನ ಸಮಾವೇಶ (World Climate Conference) ಸ್ಪೇನಿನ ರಾಜಧಾನಿ ಮಾಡ್ರಿಡ್‍ನಲ್ಲಿ ನಡೆಯಿತು. ಅಲ್ಲಿ 177 ದೇಶಗಳ ವಿಜ್ಞಾನಿಗಳು, ರಾಜತಾಂತ್ರಿಕ ಪರಿಣತರು, ರಾಜಕೀಯ ಮುತ್ಸದ್ದಿಗಳು ಸೇರಿದ್ದರು. ಈ ಸಮಾವೇಶ ಡಿಸೆಂಬರ್ 2ರಂದು ಆರಂಭವಾಗಿದ್ದು 13-12-2019 ಮುಕ್ತಾಯವಾಯಿತು.
  • ಅಲ್ಲಿ ಹಾಕಿದ ವಿವಿಧ ದೇಶಗಳ ಪ್ರದರ್ಶನ ಮಳಿಗೆಗಳಲ್ಲಿ ಭಾರತದ್ದು ವಿಶಿಷ್ಠವಾದುದು. ಅಲ್ಲಿ ಗಾಂಧೀಜಿಯವರ ಅನೇಕ ಬಟ್ಟೆಚಿತ್ರಗಳನ್ನು ತೂಗುಹಾಕಿ, ನಡುವೆ ಗಾಂಧೀಜಿಯ ಸರಳ ಜೀವನದ ಸಂಕೇತಗಳನ್ನೂ ತೋರಿಸಲಾಗಿದೆ. ವರ್ಧಾ ಆಶ್ರಮದ ದೃಶ್ಯವನ್ನು ಹೋಲುವ ಚರಕ, ಚಾಪೆ, ಚೊಂಬು, ದಿಂಬುಗಳನ್ನು ಇಡಲಾಗಿದೆ.
  • ಸಂದೇಶ:ಅದರ ಸಂದೇಶವೆಂದರೆ ಸರಳಜೀವನ ಮುಂದಿನ ಬಿಸಿಯುಗಕ್ಕೆ ಪರಿಹಾರವಾಗಿದೆ. ವಿಜ್ಞಾನಿಗಳು ಹೇಳುವ ವರದಿಯಂತೆ ವರದಿಗಳಂತೆ ಮುಂದೆ ಬರುವ ಬಿಸಿಪ್ರಳಯಕ್ಕೆ ಭಾರತೀಯರೇ ಹೆಚ್ಚು ಬಲಿಯಾಗಯಾಗಬಹುದು. ಈ ಪ್ರಳಯವನ್ನು ಯಶಸ್ವಿಯಾಗಿ ಎದುರಿಸಲು ಪರಿಹಾರಗಳು ಭಾರತದಲ್ಲೇ ಇವೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಗಾಂಧೀಜಿ ತೋರಿದ ಸರಳ ಬದುಕಿನ ಮಾದರಿಯೇ ಈ ಮುಂದೆ ಬರಬಹುದಾದ ಬಿಸಿಯುಗದ ಸಮಸ್ಯೆಗಳಿಗೆ ಪರಿಹಾರ. ಗಾಂಧೀಜಿಯವರ ಜೀವನ ಸಂದೇಶ ಅದು.
  • ಆಮ್ಲಜನಕದ ಕೊರತೆ ಅನೆಕ ಕಡೆ ಅದೂ ನಗರಗಳಲ್ಲಿ ಹೆಚ್ಚು ಆಗುತ್ತಿದೆ. ಅದನ್ನು ‘ಕಾರ್ಬನ್ ಹೆಜ್ಜೆಗುರುತು’ (ಕಾರ್ಬನ್ ಫೂಟ್‍ಪ್ರಿಂಟ್) ಎಂಬ ಮಾಪನದಲ್ಲಿ ಅಳತೆಮಾಡುತ್ತಾರೆ.ಜಗತ್ತಿನ ಒಬ್ಬೊಬ್ಬರೂ ಪ್ರತಿವರ್ಷ ಎಷ್ಟು ಫಾಸಿಲ್ ಇಂಧನಗಳನ್ನು ಸುಟ್ಟು ಗಾಳಿಗೆ ಸೇರಿಸುತ್ತಿದ್ದೇವೆ ಎಂಬ ಅಳತೆಗೋಲು ಇದು. ಈ ಅಳತೆಯಮತೆ ಜಗತ್ತಿನ ಸರಾಸರಿ ಪ್ರತಿವ್ಯಕ್ತಿಯ ಇಂಗಾಲದ ಹೆಜ್ಜೆಗುರುತಿನ ತೂಕ ವಾರ್ಷಿಕ 4.5 ಟನ್‍ಗಳಷ್ಟಿದೆ ಎಂಬುದು ವಿಜ್ಞಾನಿಗಳ ಲೆಕ್ಕ. ಅಮೆರಿಕದ ಜನರ ಹೆಜ್ಜೆಗುರುತಿನ ತೂಕ 16 ಟನ್; ಅದೇ ಭಾರತದ ಪ್ರಜೆಯ ಸರಾಸರಿ ಕೇವಲ 1.8 ಟನ್ ಇದೆ. ಆದರೆ ಅಮೆರಿಕ ತನ್ನ ಜಗತ್ತಿಗೆ ಇಂಗಾಲ ಕೊಡಿಗೆಯನ್ನು ಕಡಿಮೆ ಮಾಡಲು ಒಪ್ಪುತ್ತಿಲ್ಲ. ಭಾರತ ಚೀನಾಗಳಿಗೆ ಇಂಗಾಲವನ್ನು ಹೆಚ್ಚುಮಾಡುವ ಯೊಜನೆ ಕೈಗೊಳ್ಳದಂತೆ ಒತ್ತಡ ಹಾಕುತ್ತಿದೆ. ಒಟ್ಟಿನಲ್ಲಿ ಈ ಬಿಸಿ ಇಂಗಾಲದ ಪ್ರಳಯವನ್ನು ತಡೆದು ಮುಂದಿನ ಪೀಳಿಗೆಗೆ ಸುಖ ಜೀವನಕ್ಕೆ ಅವಕಾಶಮಾಡಲು ಗಾಂಧೀಜಿಯವರ ಸರಳ ಬದುಕು ಎಲ್ಲರಿಗೆ ಆದರ್ಶಪ್ರಾಯವಾಗಿದೆ ಎಂಬುದನ್ನು ಮಾಡ್ರಿಡ್‍ ಹವಾಮಾನ ಸಮ್ಮೇಳನದಲ್ಲಿ ಸಂಕೇತಿಸಲಾಗಿದೆ.[]

ಚೀನಾದ ಘೋಷಣೆ

[ಬದಲಾಯಿಸಿ]
  • ಚೀನೀ ಅಧ್ಯಕ್ಷ ಷೀ ಝಿನ್‌ಪಿಂಗ್‌ 2020 ರಲ್ಲಿ (ಸೆಪ್ಟಂಬರ?) ವಿಶ್ವಸಂಸ್ಥೆಯ ಆನ್‌ಲೈನ್‌ ಸಮಾವೇಶದಲ್ಲಿ ಒಂದು ಮಾತನ್ನು ಹೇಳಿ ಇಡೀ ಪ್ರಪಂಚಕ್ಕೆ ಸಂಚಲನ ಮೂಡಿಸಿದರು: ‘ಕ್ರಿ.ಶ. 2060ರೊಳಗೆ ನಾವು ಝೀರೋ ಕಾರ್ಬನ್‌ ದೇಶವಾಗಲಿದ್ದೇವೆ’ ಅಂತ. ಅಂದರೆ ಇನ್ನು 40 ವರ್ಷಗಳಲ್ಲಿ ಚೀನಾದ ಎಲ್ಲ ಕಲ್ಲಿದ್ದಲ ಸ್ಥಾವರಗಳೂ ಹೊಗೆ ಮುಕ್ತ ಆಗಲಿವೆ. ಎಲ್ಲ ಪೆಟ್ರೋಲ್‌, ಡೀಸೆಲ್‌ ವಾಹನಗಳೂ ಗುಜರಿಗೆ ಸೇರಲಿವೆ. ಸಿಮೆಂಟ್‌, ಉಕ್ಕು, ಪ್ಲಾಸ್ಟಿಕ್‌ ಮುಂತಾದ ಎಲ್ಲ ಕಾರ್ಖಾನೆಗಳೂ ಫಾಸಿಲ್‌ ಇಂಧನಗಳಿಗೆ ವಿದಾಯ ಹೇಳಲಿವೆ. ಪೃಥ್ವಿಯ ಬಹುದೊಡ್ಡ ಭೂಭಾಗವೊಂದು ಬಿಸಿಪ್ರಳಯಕ್ಕೆ ಶೂನ್ಯ ಕೊಡುಗೆ ನೀಡಲಿದೆ.
  • ಅವರು ಅಷ್ಟು ಹೇಳಿದನಂತರ, ಎಲ್ಲ ಶಕ್ತ ರಾಷ್ಟ್ರಗಳು, ಎಲ್ಲ ಬಹುರಾಷ್ಟ್ರೀಯ ಸಶಕ್ತ ಕಂಪನಿಗಳು ಮೈಕೈ ಕೊಡವಿ ನಿಲ್ಲುತ್ತಿರುವುದು ಈಗ ಸ್ಪಷ್ಟ ಗೊತ್ತಾಗತೊಡಗಿದೆ. ಬಿಸಿಪ್ರಳಯವನ್ನು ತಡೆಗಟ್ಟಲು ತಾವೆಲ್ಲ ಏನೇನು ಪ್ಲಾನ್‌ ಹಾಕಿಕೊಳ್ಳುತ್ತಿದ್ದೇವೆ ಎಂಬುದನ್ನು ಅವು ದೊಡ್ಡದಾಗಿ ಹೇಳತೊಡಗಿವೆ.
  • ನಮ್ಮ ಬೆಂಗಳೂರಲ್ಲೂ ಸದ್ದಿಲ್ಲದೆ ಓಡಬಲ್ಲ ವಿದ್ಯುತ್‌ ವಾಹನಗಳು ಭಾರೀ ಸುದ್ದಿ ಮಾಡುತ್ತಿವೆ. ಬ್ಯಾಟರಿಚಾಲಿತ ‘ಟೆಸ್ಲಾ’ ಕಾರುಗಳ ದೊರೆ ಎನ್ನಿಸಿದ ಈಲಾನ್‌ ಮಸ್ಕ್‌ ಬೆಂಗಳೂರಿನಲ್ಲಿ ತನ್ನ ಕಂಪನಿಯ ಪುಟ್ಟ ಶಾಖಾ ಕಚೇರಿಯನ್ನು ತೆರೆದಿದ್ದೇ ತಡ, ಇನ್ನೇನು ಆತನ ಕಾರ್‌ ಕಾರ್ಖಾನೆ ಇಲ್ಲಿ ಆರಂಭ ವಾಗೇಬಿಟ್ಟಿತು ಎಂಬಂತೆ ಸಂಭ್ರಮದ ಸುದ್ದಿಗಳು ಹೊರಬಿದ್ದಿವೆ.
  • ಪೆಟ್ರೋಲಿಯಂ ಮತ್ತು ಕಲ್ಲಿದ್ದಲನ್ನೇ ಚಿನ್ನದ ನಿಕ್ಷೇಪವೆಂಬಂತೆ ಪರಿಗಣಿಸುತ್ತಿದ್ದ ಭಾರತೀಯ ಕಂಪನಿಗಳು ಸಹ ಬದಲೀ ಶಕ್ತಿಯ ಉತ್ಪಾದನೆಗೆ ತಾವೂ ಸಿದ್ಧ ಎಂಬುದನ್ನು ವಾರ್ತಾಗೋಷ್ಠಿಯ ಮೂಲಕ, ಜಾಹೀರಾತುಗಳ ಮೂಲಕ ಹೇಳತೊಡಗಿವೆ. ಅವರಿವರು ಹಾಗಿರಲಿ, ಜಗತ್ತಿನ ಅತಿ ಪ್ರಸಿದ್ಧ ಕಲ್ಲಿದ್ದಲ ಗಣಿಗಳನ್ನೆಲ್ಲ ಬಾಚಿಕೊಳ್ಳುವ ಹವಣಿಕೆಯಲ್ಲಿರುವ ಅದಾನಿ ಕಂಪನಿ ಕೂಡ ರಾಜಸ್ತಾನದ ತನ್ನ ಗಾಳಿ ವಿದ್ಯುತ್‌ ಸ್ಥಾವರ ತನ್ನ ನಿಗದಿತ ಸಮಯಕ್ಕಿಂತ ಐದು ತಿಂಗಳ ಮೊದಲೇ 100 ಮೆಗಾವಾಟ್‌ ತಲುಪಿದೆ ಎಂಬ ಸುದ್ದಿಯನ್ನೂ ಹೊಮ್ಮಿಸಿದೆ. ವಿಶ್ವವ್ಯಾಪಿ ತೈಲ ಕಂಪನಿಗಳಾದ ಶೆಲ್‌, ಆರ್ಮಾಕೊ, ಬಿಪಿ, ಎಕ್ಸನ್‌ ಮೊಬಿಲ್‌ ಎಲ್ಲವೂ ಕಡಲಂಚಿಗೆ ಗಾಳಿಕಂಬಗಳನ್ನು ನೆಡಲು, ಬಿಸಿಲನ್ನು ಬಾಚಿಕೊಳ್ಳಲು ಆರಂಭಿಸಿವೆ.[]

ಇವನ್ನು ನೋಡಿ

[ಬದಲಾಯಿಸಿ]
ಸಂಸತ್ತಿನಲ್ಲಿ ಗ್ರೇಟಾ ಥನ್‌ಬರ್ಗ್- (46705842745) (cropped)

ಹೆಚ್ಚಿನ ಓದಿಗೆ

[ಬದಲಾಯಿಸಿ]
ಭೂಮಿಯ ಆರೋಗ್ಯಕ್ಕಾಗಿ ಹೋರಾಡಿದಳು:-
  • ಅವಳೇ ಗ್ರೇಟಾ ಥನ್‍ಬರ್ಗ್:ಗ್ರೇತಾಳ ಜೀವನಗಾಥೆ ಅವಳು ಹುಟ್ಟುಹಾಕಿದ ಹೋರಾಟದ ಕಥೆ (ನಾಗೇಶ ಹೆಗಡೆ)ಮೂಕ ಪೃಥ್ವಿಗೆ ಮಾತುಕೊಟ್ಟ ಕಿಶೋರಿ;: "ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ." ಹದಿನೈದು ವರ್ಷದ ಹುಡುಗಿ ಒಬ್ಬಂಟಿಯಾಗಿ ಧರಣಿ ಕುಳಿತಳು. ಅವಳ ಮುಷ್ಕರವನ್ನು ಬೆಂಬಲಿಸಿ 130 ರಾಷ್ಟ್ರಗಳಲ್ಲಿ ಎಳೆಯರು ಬೀದಿಗೆ ಬಂದರು. ಬಹುತೇಕ ಮಾತನಾಡದ ಇವಳು ಬ್ರಿಟನ್‌, ಫ್ರಾನ್ಸ್‌ ಸಂಸತ್ತಿನಲ್ಲಿ ಮಾತನಾಡಿದಳು. ಟೈಮ್‌ ಪತ್ರಿಕೆಯ ಮುಖಪುಟಕ್ಕೆ ಬಂದಳು. ಮಕ್ಕಳ ಕ್ಲೈಮೇಟ್‌ ಪ್ರಶಸ್ತಿ ಪಡೆದಳು. ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಳು. ಗೌರವ ಡಾಕ್ಟರೇಟ್‌ ಪಡೆದಳು. ಕೊನೆಗೆ ನೊಬೆಲ್‌ ಪ್ರಶಸ್ತಿಗೆ ನಾಮಾಂಕಿತಗೊಂಡಳು. ಈಗ ಬದಲೀ ನೊಬೆಲ್‌ ಪ್ರಶಸ್ತಿ ಪಡೆಯುತ್ತಿದ್ದಾಳೆ.

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Each year, Earth Day—April 22 ,www.earthday.org
  2. "EARTH DAY – APRIL 22- What is Earth Day, and what is it meant to accomplish?". Archived from the original on 2019-11-26. Retrieved 2019-12-04.
  3. NASA. Retrieved 14 December 2015. global-air-quality NASA.
  4. Read more:
  5. M.R. Beychok (2005). Fundamentals of Stack Gas Dispersion (4th ed.). Self-published
  6. ಕುದಿಯುತ್ತಿದೆ ಭೂಮಿ! 2010–2020 ಗರಿಷ್ಠ ತಾಪಮಾನದ ದಶಕ d: 04 ಡಿಸೆಂಬರ್ 2019,
  7. ಹಿಂದಿರುಗುವುದೇ ಮುಂದಿನ ದಾರಿ!;ನಾ. ಹೆಗಡೆ : 12 ಡಿಸೆಂಬರ್ 2019
  8. ನಾಗೇಶ ಹೆಗಡೆ ಲೇಖನ: ಚೀನಾ ಹೊತ್ತಿಸಿದ ಕೂಲ್‌ ಕಿಡಿನಾಗೇಶ ಹೆಗಡೆ Updated: 11 ಮಾರ್ಚ್ 2021