ವಿಷಯಕ್ಕೆ ಹೋಗು

ಮಂಗಳೂರು ದಸರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುದ್ರೋಳಿ ದೇವಸ್ಥಾನದ ನವರಾತ್ರಿ ಅಲಂಕಾರ
ದಸರಾ ಸಂದರ್ಭದಲ್ಲಿ ಮಂಗಳೂರಿನ ಸಿಟಿಸೆಂಟರ್ ಅಲಂಕಾರ

ಮಂಗಳೂರು ದಸರಾ : 'ಮಂಗಳೂರು ದಸರಾ'ವನ್ನು ಮಂಗಳೂರಿನ ಕುದ್ರೋಳಿ ಶ್ರೀ ಗೋಖರ್ಣನಾತೇಶ್ವರ ದೇವಸ್ಥಾನದವರು ಆಯೋಜಿಸುತ್ತಾರೆ.ಇದನ್ನು 'ಮಾರ್ನೇಮಿ', 'ವಿಜಯದಶಮಿ', 'ನವರಾತ್ರಿ ಹಬ್ಬ' ಎಂಬ ವಿವಿಧ ಹೆಸರುಗಳಿಂದ ಕರೆಯುತ್ತಾರೆ. 'ಹುಲಿವೇಷ','ಕರಡಿ ವೇಷ'ಗಳಂತಹ ಸಾಂಸ್ಕೃತಿಕ ಕುಣಿತಗಳು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.ಈ ಹಬ್ಬದ ವೇಳೆಯಲ್ಲಿ ಊರಿನ ರಸ್ತೆಗಳು ೧೦ ದಿನಗಳ ಕಾಲ ದೀಪಗಳಿಂದ ಅಲಂಕರಿಸ್ಪಡುತ್ತದೆ.[]

ಜನರು ತಮ್ಮ-ತಮ್ಮ ಮನೆಗಳನ್ನು ಮತ್ತು ಅಂಗಡಿಗಳನ್ನು ಅಲಂಕರಿಸುತ್ತಾರೆ.ಮಂಗಳೂರಿನ ಪ್ರಮುಖ ರಸ್ತೆಗಳಾಗಿರುವ ಎಂ.ಜಿ. ರಸ್ತೆ, ಕೆ.ಯಸ್.ರಾವ್ ರಸ್ತೆಗಳು ಮೆರವಣಿಗೆಗೆ ಅಲಂಕರಿಸ್ಪಡುತ್ತವೆ.ಮಂಗಳೂರು ದಸರಾವನ್ನು ಬಿ.ರ್. ಕರ್ಕೇರರವರು ಪ್ರಾರಂಭಿಸಿದರು.

ಹುಲಿವೇಶ

[ಬದಲಾಯಿಸಿ]

ಹುಲಿವೇಶ ಎಂಬ ಜನಪದ ಕುಣಿತವು 'ದಸರಾ'ದ ಸಮಯದಲ್ಲಿ ನಡೆಯುತ್ತದೆ. ಈ ಕುಣಿತದಲ್ಲಿ ಯುವಕರು ಕುಣಿಯುತ್ತಾರೆ.ಅವರು ಹುಲಿಗಳಂತೆ ವೇಶ ಧರಿಸುತ್ತಾರೆ.ಈ ಕುಣಿತಕ್ಕೆ ಡೋಲುಗಳನ್ನು ಉಪಯೋಗಿಸುತ್ತಾರೆ.ಈ ವೇಶ ಧರಿಸಿ ಅವರು ಮನೆ-ಮನೆಗಳಿಗೆ ಹೋಗುತ್ತಾರೆ. ಹುಲಿಯೂ ಶಾರದ ದೇವಿಯ ಒಲವಿನ ಪ್ರಾಣಿಯಾದ್ದರಿಂದ, ಈ ಕುಣಿತವನ್ನು ಶಾರದ ದೇವಿಯನ್ನು ಗೌರವಿಸುವುದಕ್ಕೆ ಏರ್ಪಡಿಸಲಾಗುತ್ತದೆ.

ಗೋಕರ್ಣನಾಥೇಶ್ವರ ದೇವಸ್ಥಾನದ ದಾಸರ ವಿಗ್ರಹಗಳು

[ಬದಲಾಯಿಸಿ]

ನವರಾತ್ರಿ ಸಮಯದಲ್ಲಿ, ಪುರೋಹಿತರು ವೈದಿಕ ಆಚರಣೆಗಳನ್ನು ಮಾಡಿ, ಮಂತ್ರಗಳನ್ನು ಪಟಿಸಿ, ಶಾರದಾ ದೇವಿಯೊಂದಿಗೆ ಹಲವಾರು ವಿಗ್ರಹಗಳನ್ನು ಸ್ವರ್ಣ ಕಲಾಮಂಟಪದಲ್ಲಿ ಸ್ಥಾಪಿಸುತ್ತಾರೆ. ಈ ೯ ದಿನಗಳ ಆಚರಣೆಯಲ್ಲಿ ಅಲಂಕರಿಸಲ್ಪಟ್ಟ ಶಾರಧ ದೇವಿಯ ವಿಗ್ರಹ, ಮಹಾಗಣಪತಿ ಮತ್ತು ನವದುರ್ಗಗಳನ್ನು (ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ,ಕುಶ್ಮಾಂಡಿನಿ, ಸ್ಕಂದಮಾತಾ, , ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ) ಪೂಜಿಸಲಾಗುತ್ತದೆ. ನವರಾತ್ರಿಯ ಸಲುವಾಗಿ ಕುದ್ರೋಳಿ ದೇವಸ್ಥಾನದ ಟ್ರಸ್ಟಿಯವರು ೯ ದಿನಗಳ ಕಾಲ 'ಗಂಗಾವತರಣ'ವನ್ನು ಆಯೋಜಿಸುತ್ತಾರೆ.ಈ ಚಿತ್ರಣದಲ್ಲಿ 13 ಅಡಿ ಎತ್ತರದ ಶಿವನ 4 ವರ್ಣರಂಜಿತ ವಿಗ್ರಹಗಳು ಇರುತ್ತದೆ.[]

ಸಂಭ್ರಮದ ಮೆರವಣಿಗೆ

[ಬದಲಾಯಿಸಿ]

ಈ ಮೆರವಣಿಗೆಯು ವಿಜಯದಶಮಿ ಹಬ್ಬದಂದು 'ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ'ದೆದುರು ಪ್ರಾರಂಭವಾಗಿ, ಮರುದಿನ ಇದೇ ಸ್ಥಳದಲ್ಲಿ 'ಪುಷ್ಕರಿಣಿ'ಕೊಳದಲ್ಲಿ ವಿಗ್ರಹಗಳ ವಿಸ್ರಜನೆಯ ಮೂಲಕ ಅಂತ್ಯಗೊಳ್ಳುತ್ತದೆ. 'ನವದುರ್ಗ' , ಮಹಾಗಣಪತಿ ಮತ್ತು ಶಾರದಾ ದೇವಿಯ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯತ್ತಾರೆ. ಈ ವಿಗ್ರಹಗಳು ಹೂವುಗಳು, ಛತ್ರಿಗಳಿಂದ ಅಲಂಕರಿಸಲ್ಪಡುತ್ತವೆ. ಜೊತೆಯಲ್ಲಿ ಡೋಲು, ಚೆಂಡೆ, ಜಾನಪದ ನೃತ್ಯಗಳು, ಯಕ್ಷಗಾನ ಪಾತ್ರಗಳು, ಹುಲಿವೇಶ್, ಡೊಲ್ಲು ಕುಣಿತ ಮತ್ತು ಸಾಂಪ್ರದಾಯಿಕ ನೃತ್ಯಗಳು ಈ ಮೆರವಣಿಗೆಯ ವಿಶೇಷತೆ. ಮೆರವಣಿಗೆಯು ಕುದ್ರೋಳಿ, ಮಣ್ಣಗುಡ್ಡ, ಲೇಡಿಹಿಲ್, ಲಾಲ್ಬಾಗ್, ಕೆ ಎಸ್ ರಾವ್ ರಸ್ತೆ, ಹಂಪನಕಟ್ಟಾ, ಕಾರ್ ಸ್ಟ್ರೀಟ್ ಮತ್ತು ನಗರದ ಪ್ರಮುಖ ರಸ್ತೆಗಳ ಮೂಲಕ ಹಾದುಹೋಗುತ್ತದೆ.



ಇತರೆ ಸ್ಥಳಗಳು

[ಬದಲಾಯಿಸಿ]

ಮಂಗಳೂರು ದಸರಾದ ಪ್ರಾಥಮಿಕ ಸ್ಥಳ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಮಂಗಳಾದೇವಿ, ಶ್ರೀ ವೆಂಕಟರಮಣ ದೇವಾಲಯ ಮುಂತಾದ ದೇವಾಲಯಗಳಲ್ಲಿ ಈ ದಸರಾ ಆಯೋಜಿಸಲ್ಪಟ್ಟಿರುತ್ತದೆ.

ಉಲ್ಲೇಖ

[ಬದಲಾಯಿಸಿ]
  1. https://kannada.oneindia.com/topic/ಮಂಗಳೂರು-ದಸರಾ
  2. http://www.prajavani.net/news/article/2017/09/24/521933.html