ವಿಷಯಕ್ಕೆ ಹೋಗು

ಮಂಜುಳಾ ಗುರುರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂಜುಳಾ ಗುರುರಾಜ್
Bornಜೂನ್ ೧೦
Occupationಗಾಯಕಿ

ಮಂಜುಳಾ ಗುರುರಾಜ್ (ಜೂನ್ ೧೦) ಕನ್ನಡದ ಪ್ರಮುಖ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರು.

ಮಂಜುಳಾ ಗುರುರಾಜ್ ಅವರು ಹುಟ್ಟಿದ ದಿನ ಜೂನ್ 10. ತಂದೆ ಡಾ. ಎಂ. ಎನ್. ರಮಣ ಮತ್ತು ತಾಯಿ ಜಿ. ಸೀತಾಲಕ್ಷ್ಮಿ ಅವರು. ವಿಜ್ಞಾನ ಪದವೀಧರೆಯಾದ ಮಂಜುಳಾ ಅವರು ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಶೈಲಿಗಳೆರಡನ್ನೂ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ.

ಹಂಸಲೇಖ ಅವರ ಅಣ್ಣ ಬಾಲರಾಜ್ ಅವರು ನಡೆಸುತ್ತಿದ್ದ, ಗಾನಶಾರದ ಆರ್ಕೆಸ್ಟ್ರಾ ತಂಡದಿಂದ ಪ್ರಾರಂಭವಾದ ಮಂಜುಳಾ ಅವರ ಸಂಗೀತ ವೃತ್ತಿಯು ಮೂರು ದಶಕಗಳನ್ನು ಮೀರಿದೆ. ಬೆಂಗಳೂರಿನ ಹಲವೆಡೆ ಅವರ ಸಾಧನಾ ಸಂಗೀತ ಶಾಲೆಯ ಶಾಖೆಗಳಿದ್ದು, ಸಂಗೀತ ಶಿಕ್ಷಣಕ್ಕೆ ಹೆಸರಾಗಿದೆ.

ಸೌಂಡ್ ಆಫ್ ಮ್ಯೂಸಿಕ್ ತಂಡದ ಗುರುರಾಜ್ ಅವರನ್ನು ಮದುವೆಯಾದ ಮಂಜುಳಾ ಅವರಿಗೆ ಸಂಗೀತ ಮತ್ತು ಸಾಗರ್ ಎಂಬ ಮಕ್ಕಳಿದ್ದು, ಅವರೂ ಸಹ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಲೋಕದಲ್ಲಿ

[ಬದಲಾಯಿಸಿ]

ರೌಡಿ ರಾಜ ಎಂಬ ೧೯೮೩ರಲ್ಲಿ ಬಿಡುಗಡೆಯಾದ ಚಿತ್ರ, ಮಂಜುಳಾ ಹಾಡಿದ ಮೊದಲ ಕನ್ನಡ ಚಲನಚಿತ್ರ. ಇಲ್ಲಿಂದ ಮುಂದಿನ ಎರಡು ದಶಕಗಳ ಕಾಲ ಮಂಜುಳಾ, ಕನ್ನಡ ಚಿತ್ರರಂಗದ ಪ್ರಮುಖ ಗಾಯಕಿಯರಲ್ಲಿ ಒಬ್ಬರಾದರು.

ನಂಜುಂಡಿ ಕಲ್ಯಾಣ ಚಿತ್ರದ 'ಒಳಗೆ ಸೇರಿದರೆ ಗುಂಡು' ಹಾಡು ಜನಪ್ರಿಯವಾಗಿ, ಹಲವಾರು ಅವಕಾಶಗಳನ್ನು ತಂದಿತು. ಮುಂದೆ ಅವರು ಹಾಡಿದ ಚಿತ್ರಗಳು ನೂರಾರು.

ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ.ಜೆ.ಯೇಸುದಾಸ್ ಮುಂತಾದ ಗಾಯಕರೊಂದಿಗೆ ಅವರು ಹಾಡಿದ್ದಾರೆ. ಉಪೇಂದ್ರಕುಮಾರ್, ರಾಜನ್-ನಾಗೇಂದ್ರ, ಇಳಯರಾಜ, ಹಂಸಲೇಖ ಮುಂತಾದ ಸಂಯೋಜಕರ ಹಾಡುಗಳನ್ನು ಹಾಡಿರುವ ಮಂಜುಳಾ, ಸಾವಿರಾರು ಭಕ್ತಿಗೀತೆ, ಭಾವಗೀತೆ ಮತ್ತು ಜನಪದ ಗೀತೆಗಳನ್ನು ಹಾಡಿದ್ದಾರೆ.

ಕೆಲವು ಜನಪ್ರಿಯ ಹಾಡುಗಳು

[ಬದಲಾಯಿಸಿ]
  • ಒಳಗೆ ಸೇರಿದರೆ ಗುಂಡು (ನಂಜುಂಡಿ ಕಲ್ಯಾಣ)
  • ಮಧುವಾದೆ ನೀನು ನನ್ನ ಬಾಳಿಗೆ (ಪುರುಷೋತ್ತಮ)
  • ಒಂದೇ ಜೀವ ಒಂದೇ ಭಾವ (ನಾಗಿಣಿ)
  • ಪ್ರೀತಿಯಲ್ಲಿ ಇರೋ ಸುಖ (ಅಂಜದ ಗಂಡು)
  • ಚೆಲುವೆ ನೀನು ನಕ್ಕರೆ (ನೀನು ನಕ್ಕರೆ ಹಾಲು ಸಕ್ಕರೆ)
  • ಒಂದು ಮುತ್ತಿನಂಥ ಮುತ್ತು (ಸಾಂಗ್ಲಿಯಾನ)
  • ಗಿರಿನವಿಲು ಎಲ್ಲೋ (ಹೃದಯ ಹಾಡಿತು)
  • ಕಣ್ಣಲ್ಲಿ ಜ್ಯೋತಿ ತಂದೋನು ನೀನೇ (ಹೃದಯ ಹಾಡಿತು)
  • ದೀಪಾವಳಿ ದೀಪಾವಳಿ (ಮುದ್ದಿನ ಮಾವ)
  • ಅನುರಾಗದ ಹೊಸ ಆನಂದವು (ಅದೇ ರಾಗ ಅದೇ ಹಾಡು)
  • ಆಗುಂಬೆಯ ಪ್ರೇಮಸಂಜೆಯ (ಆಕಸ್ಮಿಕ)
  • ಹೃದಯದಲಿ ಇದೇನಿದು ನದಿಯೊಂದು ಓಡಿದೆ (ದೇವತಾ ಮನುಷ್ಯ)
  • ಯಾರಮ್ಮ ಇವನು ನಶೆಯ ಹುಡುಗ (ಮೋಜುಗಾರ ಸೊಗಸುಗಾರ)
  • ಇವನ್ಯಾರ ಮಗನೋ ಹಿಂಗವ್ನಲ್ಲ (ಜನುಮದ ಜೋಡಿ)
  • ತುಂಟಕಣ್ಣಲಿ ಏನೋ ತಳಮಳ (ಇನ್ಸ್ಪೆಕ್ಟರ್ ವಿಕ್ರಂ)
  • ನನ್ನ ನಿನ್ನ ಆಸೆ (ಮಿಡಿದ ಶೃತಿ)
  • ಮನದಾಸೆ ಹಕ್ಕಿಯಾಗಿ (ನಮ್ಮೂರ ಮಂದಾರ ಹೂವೆ)
  • ಅಯ್ಯೋ ಸುಮ್ಮನಿರ್ರಿ ಸುಮ್ಮನಿರ್ರಿ (ಶಬ್ದವೇದಿ)

ಮುಂತಾದವು