ಮಕಾಲು
ಗೋಚರ
ಮಕಾಲು ವಿಶ್ವದ ೫ನೆಯ ಅತ್ಯುನ್ನತ ಪರ್ವತಶಿಖರವಾಗಿದೆ. ನೇಪಾಳ ಮತ್ತು ಟಿಬೆಟ್‍ಗಳ ಗಡಿಯಲ್ಲಿ ಎವರೆಸ್ಟ್ ಪರ್ವತದಿಂದ ೨೨ ಕಿ.ಮೀ. ಪೂರ್ವಕ್ಕಿರುವ ೮೪೬೨ ಮೀಟರ್(೨೭,೭೬೨ ಅಡಿ) ಎತ್ತರವುಳ್ಳ ಮಕಾಲು ಪರ್ವತವು ನಾಲ್ಕು ಮುಖಗಳ ಪಿರಮಿಡ್ ಆಕಾರದಲ್ಲಿದೆ. ಮಕಾಲು ಗಣನೀಯ ಎತ್ತರವುಳ್ಳ ಎರಡು ಉಪಶಿಖರಗಳನ್ನು ಹೊಂದಿದೆ. ಮುಖ್ಯ ಶಿಖರದ ೩ ಕಿ.ಮೀ. ವಾಯವ್ಯದಲ್ಲಿರುವ ಮಕಾಲು - ೨ ಅಥವಾ ಕಾಂಗ್ ಚುಂಗ್ ಟ್ಸೆ ೭೬೭೮ ಮೀ. ಎತ್ತರವಿದ್ದರೆ ಇನ್ನೊಂದು ಉಪಶಿಖರ ಚೋಮೋ ಲೊಂಜೋ ೭೮೦೪ ಮೀ. ಔನ್ನತ್ಯ ಹೊಂದಿದೆ.
ಜಗತ್ತಿನಲ್ಲಿ ೮೦೦೦ ಮೀ. ಗಳಿಗೂ ಹೆಚ್ಚು ಎತ್ತರವುಳ್ಳ ಪರ್ವತಗಳ ಪೈಕಿ ಮಕಾಲುವಿನ ಆರೋಹಣ ಅತಿ ಕಠಿಣವೆಂದು ಪರಿಗಣಿಸಲ್ಪಟ್ಟಿದೆ. ತೀವ್ರ ಚಳಿಗಾಲದಲ್ಲಿ ಈ ಪರ್ವತವನ್ನು ಏರಲು ಇದುವರೆವಿಗೆ ಸಾಧ್ಯವಾಗಿಲ್ಲ.
೧೯೫೫ರಲ್ಲಿ ಫ್ರೆಂಚ್ ತಂಡದ ಲಯೊನೆಲ್ ಟೆರ್ರಿ ಮತ್ತು ಜಾನ್ ಕೌಜಿ ಮಕಾಲುವಿನ ಶಿಖರವನ್ನು ತಲುಪಿದ ಮೊದಲ ಪರ್ವತಾರೋಹಿಗಳಾದರು.

ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Makalu on SummitPost
- Makalu on Peakware Archived 2011-10-25 ವೇಬ್ಯಾಕ್ ಮೆಷಿನ್ ನಲ್ಲಿ.
- The British Services Makalu Expedition 2004 Archived 2009-04-07 ವೇಬ್ಯಾಕ್ ಮೆಷಿನ್ ನಲ್ಲಿ.