ಮದರ್ ಆಫ್ ಆಲ್ ಬಾಂಬ್ಸ್ (MOAB-GBU-43/B)
ಗೋಚರ
GBU-43/B Massive Ordnance Air Burst | |
---|---|
ನಮೂನೆ | Conventional bomb |
ಮೂಲ ಸ್ಥಳ | United States |
ಕಾರ್ಯನಿರ್ವಹಣಾ ಇತಿಹಾಸ | |
ಸೇವೆಯಲ್ಲಿ | Since 2003 |
ಬಳಕೆದಾರ | United States Air Force |
ನಿರ್ಮಾಣ ಇತಿಹಾಸ | |
ವಿನ್ಯಾಸ | Air Force Research Laboratory |
Designed | 2002 |
ನಿರ್ಮಾರ್ತೃ | McAlester Army Ammunition Plant |
ಉತ್ಪಾದಿತ | 2003 |
ಎಲ್ಲಾ ಬಾಂಬುಗಳ ತಾಯಿ
[ಬದಲಾಯಿಸಿ]- ಬೃಹತ್ ಶಸ್ತ್ರ ಏರ್ ಬ್ಲಾಸ್ಟ್ (MOAB) (Massive Ordnance Air Blast GBU -43 / B ಮೊಅಬ್ ಎಂದು ಉಚ್ಚರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಎಲ್ಲಾ ಬಾಂಬ್ ಗಳ ತಾಯಿ ಎಂದು ಕರೆಯಲಾಗುತ್ತದೆ. ಒಂದು ದೊಡ್ಡ ಫಲಪ್ರದ ಸಾಂಪ್ರದಾಯಿಕ (ಬೇ-ಪರಮಾಣು) ಬಾಂಬ್ . ಯುನೈಟೆಡ್ ಸ್ಟೇಟ್ಸ್ ಮಿಲಿಟರಿಯ ಆಲ್ಬರ್ಟ್ ಎಲ್ ವಿಮೊರ್ಟಸ್ ಜೂ ಅವರಿಂದ ವಾಯುಪಡೆಯ ಸಂಶೋಧನಾ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಭಿವೃದ್ಧಿಯ ವಿನ್ಯಾಸ ಸಮಯದಲ್ಲಿ, ಇದು ಬೇ-ಪರಮಾಣು ಶಸ್ತ್ರಾಸ್ತ್ರ ಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂದು ಹೆಸರಾಗಿದೆ. ಬಾಂಬ್ ನ್ನು ಒಂದು ಸಿ 130 ಹರ್ಕ್ಯುಲಸ್ ಮೂಲಕ ಎಂಸಿ 130 ಇ ಯುದ್ಧ ಟ್ಯಾಲನ್ 1 ಮೂಲಕ ಯೋಜಿಸಲಾಗಿತ್ತು.; ಅಥವಾ ಎಂಸಿ 130ಎಚ್ ಯುದ್ಧ ಟ್ಯಾಲನ್ 2 ಉಪಕರಣದ ಮೂಲಕ ಪ್ರಾಥಮಿಕವಾಗಿ ಪ್ರಯೋಗಿಸಲು ವಿನ್ಯಾಸಗೊಳಿಸಲಾಗಿತ್ತು.
- ಜಾರ್ಜ್ W. ಬುಷ್ ಆಡಳಿತದಲ್ಲಿ ಸೇವೆ ಸಲ್ಲಿಸಿದ ಅಮೇರಿಕಾದ ಮಾಜಿ ಮಿಲಿಟರಿ ಅಧಿಕೃತ ಮಾರ್ಕ್ ಗಾರ್ಲಸ್ಕೊ, ಅಮೇರಿಕಾವು ಅಧಿಕ ಹಾನಿ ಕಾಳಜಿ ಕಾರಣದಿಂದ ಎಂದಿಗೂ ಉಪಯೋಗಿಸಿಲ್ಲ. ಅದರಿಂದಲೇ ಇರಾಕ್ ನಲ್ಲಿ ಉಪಯೋಗಿಸುವುದನ್ನು ಕೈಬಿಡಲಾಯಿತು ಎಂದು ಹೇಳಿದರು. [೧]
ಆಫ್ಘಾನಿಸ್ತಾನದ ಮೇಲೆ ಅಮೆರಿಕ ಧಾಳಿ
[ಬದಲಾಯಿಸಿ]- ಅಮೆರಿಕವು ದಿ.13 Apr, 2017 ರಂದು ಆಫ್ಘಾನಿಸ್ತಾನದ ನಂಗರ್‌ಹಾರ್ ಮೇಲೆ ಈ ವರೆಗಿನ ಅತ್ಯಂತ ದೊಡ್ಡ ಸಾಂಪ್ರದಾಯಿಕ ಬಾಂಬ್ ಎಸೆದಿದೆ. ನಂಗರ್‌ಹಾರ್‌ನಲ್ಲಿ ಈಚೆಗೆ, ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕದ ‘ಗ್ರೀನ್ ಬೆರೆಟ್’ ಪಡೆಯ ಸೈನಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
- ಈ ಬಾಂಬ್ ಅನ್ನು ‘ಮ್ಯಾಸಿವ್ ಆರ್ಡಿನೆನ್ಸ್ ಏರ್ ಬ್ಲ್ಯಾಸ್ಟ್–ಎಂಒಎಬಿ’ ಎಂದು ಕರೆಯಲಾಗುತ್ತದೆ. 10.3 ಟನ್ ತೂಕದ ಈ ಬಾಂಬ್ ಭಾರಿ ಗಾತ್ರದಾದ್ದರಿಂದ, ‘ಮದರ್ ಆಫ್ ಆಲ್ ಬಾಂಬ್ಸ್’ ಎಂದೂ ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ. ಅಮೆರಿಕ 2003ರಲ್ಲಿ ಈ ಬಾಂಬ್‌ನ ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಆದರೆ ಇದೇ ಮೊದಲ ಬಾರಿ ಪ್ರಯೋಗಿಸಿದೆ. ಗುರುವಾರ ಸಂಜೆ 7 ಗಂಟೆಗೆ ದಾಳಿ ನಡೆದಿದೆ.[೨]
36 ಉಗ್ರರ ಬಲಿ
[ಬದಲಾಯಿಸಿ]- 15 Apr, 2017;
- ಆಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತದ ಅಚಿನ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಅಡಗುದಾಣದ ಮೇಲೆ ಗುರುವಾರ ನಡೆಸಿದ್ದ ಬಾಂಬ್ ದಾಳಿಯಲ್ಲಿ 36 ಐಎಸ್ ಉಗ್ರರು ಬಲಿಯಾಗಿದ್ದಾರೆ. ಜತೆಗೆ ಉಗ್ರರು ನೆಲೆಸಿದ್ದ ಹಲವು ಸುರಂಗಗಳು ನಾಶವಾಗಿವೆ’ ವಿಶ್ವದ ಎರಡನೇ ದೊಡ್ಡ ಸಾಂಪ್ರದಾಯಿಕ ಬಾಂಬ್ ಆಗಿರುವ ‘ಮ್ಯಾಸಿವ್ ಆರ್ಡಿನೆನ್ಸ್ ಏರ್ ಬ್ಲಾಸ್ಟ್– ಎಂಒಎಬಿ’ ಯನ್ನು ಈ ದಾಳಿಗೆ ಅಮೆರಿಕ ಬಳಸಿತ್ತು. ಭಾರಿ ತೂಕ ಮತ್ತು ಭಾರಿ ಪರಿಣಾಮ ಬೀರುವ ಕಾರಣ ಇದನ್ನು ಬಾಂಬುಗಳ ಮಹಾತಾಯಿ (ಮದರ್ ಆಫ್ ಆಲ್ ಬಾಂಬ್ಸ್) ಎಂದೂ ಕರೆಯಲಾಗುತ್ತದೆ.
- ‘ನಂಗರ್‌ಹಾರ್ ಪ್ರಾಂತದ ಗುಡ್ಡಗಾಡುಗಳಲ್ಲಿ ಇದ್ದ ನಾಗರಿಕರನ್ನು ತೆರವು ಮಾಡಿ ಐಎಸ್ ಉಗ್ರರು ಅಡಗುದಾಣಗಳನ್ನು ನಿರ್ಮಿಸಿಕೊಂಡಿದ್ದಾರೆ. ಸುರಂಗಗಳಲ್ಲಿ ನೆಲೆಸಿರುವ ಉಗ್ರರನ್ನು ಪತ್ತೆ ಮಾಡುವುದು ಕಷ್ಟ. ಆದರೆ, ಉಗ್ರರು ಅಮೆರಿಕ ಮತ್ತು ಆಫ್ಘನ್ ಸೈನಿಕರ ಮೇಲೆ ಸುಲಭವಾಗಿ ದಾಳಿ ಮಾಡಲು ಸಾಧ್ಯವಿದೆ. ಹೀಗಾಗಿ ಈ ಸುರಂಗಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ಅಮೆರಿಕ ತಿಳಿಸಿದೆ.
- ‘‘ಇದು ಭಾರಿ ಬಾಂಬ್ ಆದರೂ, ಸ್ಫೋಟದ ಸಂದರ್ಭದಲ್ಲಷ್ಟೇ ಹಾನಿ ಮಾಡುತ್ತದೆ. ನೆಲಮಟ್ಟದಿಂದ ಭಾರಿ ಆಳದಲ್ಲಿರುವ ಸುರಂಗಗಳನ್ನು ಬೇರೆ ಸಾಂಪ್ರದಾಯಿಕ ಬಾಂಬ್‌ಗಳಿಂದ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಆಳದ ಸುರಂಗಗಳನ್ನೂ ನಾಶ ಮಾಡುವ ರೀತಿಯಲ್ಲಿ ಎಂಒಎಬಿ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಈ ಬಾಂಬ್ ಬಳಸಿದ್ದೇವೆ. ಈ ಅಡಗುದಾಣಗಳಲ್ಲಿ ಸುಮಾರು 900 ಜನ ಉಗ್ರರು ನೆಲೆಸಿದ್ದರು ಎಂದು ನಮ್ಮ ಮೂಲಗಳು ಖಚಿತಪಡಿಸಿದ್ದವು. ಈ ದಾಳಿಯಲ್ಲಿ ಇನ್ನೂ ಹಲವು ಉಗ್ರರು ಮೃತಪಟ್ಟಿರಬಹುದು. ಆಸ್ತಿ–ಪಾಸ್ತಿಗೆ ಆಗಿರುವ ಹಾನಿಯ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ’ ಎಂದು ಅಮೆರಿಕ ಹೇಳಿದೆ.[೩]
ಬಾಂಬಿನ ವಿವರಗಳು
[ಬದಲಾಯಿಸಿ]ದೈಹಿಕ ವಿವರ
[ಬದಲಾಯಿಸಿ]- ನಿರ್ದಿಷ್ಟ ವಿವರಗಳು:
- ತೂಕ 9,800 ಕೆಜಿ (21.600 ಪೌಂಡು)
- ಉದ್ದ :9,1885 ಮೀಟರ್ (30 ಅಡಿ 1.75 ಇಂಚುಗಳು)
- ವ್ಯಾಸ :103 ಸೆಂ (40.5 ಇಂಚುಗಳು)
- ತುಂಬುವ ಸ್ಪೋಟಕ: ಹೆಚ್ 6 (44.0% ಗಳಷ್ಟು RDX; 29.5% ಟಿಎನ್ಟಿ; 21.0% ಪುಡಿ ಅಲ್ಯುಮಿನಿಯಮ್; ಒಂದು phlegmatizing ಪ್ರತಿನಿಧಿಯಾಗಿ 5.0% ಪ್ಯಾರಾಫಿನ್ ಮೇಣ .; 0.5% ಕ್ಯಾಲ್ಸಿಯಂ ಕ್ಲೋರೈಡ್)
- ತುಂಬುವ ಸ್ಪೋಟಕದ ತೂಕ: 8,500 ಕೆಜಿ (18,700 ಪೌಂಡು)
- ಬ್ಲಾಸ್ಟ್ (ಸ್ಪೋಟದ ಒಟ್ಟು ಪರಿಣಾಮಫಲ) ಇಳುವರಿ: 11 ಟನ್ ಟಿಎನ್ಟಿ (46 ಜಿಜೆ
ಬಾಂಬಿನ ಧಾಳಿಯ ಕ್ರಮ
[ಬದಲಾಯಿಸಿ]- ಇದು ಭಾರಿ ಗಾತ್ರದ ಬಾಂಬ್ ಆದ ಕಾರಣ ಅದನ್ನು ಅಮೇರಕಾ ವಾಯು ಪಡೆಯ ಸಿ-130 ಸರಕು ಸಾಗಣೆ ವಿಮಾದ ಮೂಲಕ ಉಗ್ರರ ಅಡಗುದಾಣದ ಮೇಲೆ ಹಾಕಲಾಗಿದೆ.
- ವಿಮಾನದ ಹಿಂಬದಿಯ ಬಾಗಿಲು ಮೂಲಕ ಬಾಂಬನ್ನು ಹೊರಕ್ಕೆ ತಳ್ಳಲಾಗುತ್ತದೆ.
- ಬಾಂಬನ್ನು ಹೊತ್ತು ನಿಂತಿದ್ದ ಅಡಿಪಟ್ಟಿಗಳು ಬೇರ್ಪಡುತ್ತವೆ.
- ಬಾಂಬಿಗೆ ಜೋಡಿಸಿರುವ ಪ್ರಾಚೂಟ್ ತೆರೆದುಕೊಂಡು ಭೂಮಿಯತ್ತ ಬರುತ್ತಿರಯವ ಅದರ ವೇಗ ಕಡಿಮೆಯಾಗುತ್ತದೆ, ಪ್ಯಾರಾಚೂಟ್ ಬೇರ್ಪಡುತ್ತದೆ. ಬಾಂಬಿನಲ್ಲಿರುವ ಜಿಪಿಎಸ್ ಸಾಧನದ ಸೂಚನೆ ಮೇರೆಗೆ ಬಾಂಬನ ರೆಕ್ಕೆಗಳು ಬಾಗುವ ಮೂಲಕ ಅದರ ದಿಕ್ಕು ಬದಲಾಗುತ್ತದೆ. ನೆಲದಿಂದ ಆರು ಅಡಿ ಮೇಲೆ ಇದ್ದಾಗಲೇ ಬಾಂಬ್ ಸ್ಪೋಟಗೊಳ್ಳುತ್ತದೆ.
ಸ್ಫೋಟದ ಪರಿಣಾಮಗಳು
[ಬದಲಾಯಿಸಿ]- ಬಾಂಬ್ ಸ್ಪೋಟದಿಂದ ಭಾರಿ ಶಾಖ ಉತ್ಪತ್ತಿಯಾಗುತ್ತದೆ.
- ಭಾರಿ ಶಾಖದ ಪರಿಣಾಮ ಆ ಸ್ಥಳದಿಂದ 30 ಅಡಿ ಅಂತರದಲ್ಲಿರುವ ಎಲ್ಲಾ ವಸ್ತುಗಳೂ ಸುಟ್ಟು ಹೋಗುತ್ತವೆ. ನೀರು ಸಂಪೂರ್ಣ ಆವಿಯಾಗುತ್ತದೆ.
- ಗಾಳಿ ಬಿಸಿಯಾಗಿ ನಿರ್ವಾತ (ವ್ಯಾಕೂಮ್) ಉಂಟಾಗುತ್ತದೆ. ನಿರ್ವಾತದ ವೇಗ ಆ ಸೈದಲ್ಲಿರುವ (ಹತ್ತಿರ ಇರುವ ಜೀವಿಗಳ ಶ್ವಾಸ ಕೋಸಗಲ ಗಾಳಿಯನ್ನೂ ಅದು ಹೀರಿಬಿಡುತ್ತದೆ. ಹೀಗಾಗಿ ಜೀವಿಗಳು ತ್ಕ್ಷಣ ಸಾಯುತ್ತವೆ.
ಇತರ ಪರಿಣಾಮಗಳು
[ಬದಲಾಯಿಸಿ]- ಸ್ಪೋಟದ ನಂತರ ಭಾರೀ ಪ್ರಮಾಣದಲ್ಲಿ ತರಂಗಗಳು ಸ್ಪೋಟದ ಕೇಂದ್ರದಿಂದ 15 ಕಿ.ಮೀ. ದೂರದ ವರೆಗೂ ಭಾರೀ ವೇಗದಲ್ಲಿ ಸಾಗುತ್ತವೆ.
- ಈ ಅಂತರದಲ್ಲಿರುವ ಕಟ್ಟಡಗಳುಮರಗಳು ನೆಲಕ್ಕೆ ಉರುಳುತ್ತವೆ. ಈ ಅಂತರದಲ್ಲಿ ಇರುವ ವ್ಯಕ್ತಿಗಳು ತರಂಗಗಳಿಗೆ ನೇರವಾಗಿ ಸಿಲುಕಿದಲ್ಲಿ ಸಾಯುತ್ತಾರೆ. 15 ಕಿ.ಮೀ.ಗಿಂತಲೂ ದೂರ ಇರುವವರ ಕಿವಿಯು ಒಡೆದು ರಕ್ತ ಒಸರುತ್ತದೆ. ಮತ್ತು ಅವರು ಶಾಶ್ವತ ಕಿವುಡರಾಗುತ್ತಾರೆ.
- ಎಂಒಎಬಿ ಬಾಂಬಿನ ಸ್ಪೋಟವನ್ನು ಹತ್ತಿರದಿಂದ ನೋಡಿದವರು, ಶಬ್ದವನ್ನು ಹತ್ತಿರದಿಂದ ಕೇಳಿದವರ ಮನಸ್ಸಿನ ಮೇಲೂ ಪರಿಣಾಮ ಮಾಡುತ್ತದೆ. ಜೀವಮನ ಪರ್ಯಂತ ಭಯದಲ್ಲಿ ಇರಬೇಕಾಗುತ್ತದೆ. ಬಾಂಬಿನ ಪರೀಕ್ಷವೇಲೆ ಇತರ ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದಿಂದ ಇದು ಗೊತ್ತಾಗಿದೆ.
- ಇದು ನೆದಿಂದ ಮೇಲೆಯೇ ಸ್ಪೋಟಗೊಳ್ಳುವುದರಿಂದ, ಸ್ಪೋಟದಿಂದ ಉಂಟಾದ ಶಕ್ತಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
- ಇದು ಭಾರೀ ಬಾಂಬ್ ಆಗಿದ್ದರೂ ಕೂಡಾ ಕೇವಲ 300 ಅಡಿ ವ್ಯಾಸದ ಕಂದಕ ಉಂಟಾಗುವುದು.
- ಅದರ ತರಂಗಗಲ ಹೊಡೆತಕ್ಕೆ ನೆಲಮಟ್ಟದಿಂದ ಭಾರೀ ಆಳದಲ್ಲಿರುವ ಸುರಂಗಗಳೂ ಕುಸಿಯುವುವು.
ಎಲ್ಲಾ ಬಾಂಬ್‍ಗಳ ಅಪ್ಪ
[ಬದಲಾಯಿಸಿ]- ಇನ್ನೂ ಹೆಚ್ಚು ಭಾರವಾದ ಮತ್ತು ಹೆಚ್ಚು ಅತ್ಯಾಧುನಿಕ ಬೃಹತ್ ಶಸ್ತ್ರ , ಆದರೆ ಚಿಕ್ಕ ಪೇಲೋಡ್ ಒಯ್ಯುವಂತದು, ಮೊದಲ 20 ಘಟಕಗಳಿಗೆ ಸುಮಾರು $314 ಮಿಲಿಯನ್ (ಸುಮಾರು 2198 ಕೊಟಿ ರೂ.:ಒಂದು ಘಟಕಕ್ಕೆ ೧೧೦ ಕೋಟಿ ರೂ.) ವೆಚ್ಚ ಹೊಂದಿತ್ತು.
- ರಷ್ಯಾ:
- ರಷ್ಯಾ 2007 ರಲ್ಲಿ, 'ರಷ್ಯಾದ ಸೇನಾ ವಿಭಾಗದವರು " ಎಲ್ಲಾ ಬಾಂಬ್‍ಗಳ ಅಪ್ಪ" ಎಂಬ ಒಂದು ಥೆರ್ಮೊಬೇರಿಕ್ ಶಸ್ತ್ರಾಸ್ತ್ರ ತಯಾರಿಸಿ ಪರೀಕ್ಷಿಸಿದ್ದಾರೆ' ಎಂದು ಘೋಷಿಸಿತು; ಆ ಬಾಂಬು (ಶಸ್ತ್ರಾಸ್ತ್ರ) MOAB ಯ ನಾಲ್ಕು ಪಟ್ಟು ಪ್ರಬಲವಾಗಿವೆ ಎಂದು ಹೇಳಲಾಗಿದೆ. ಆದರೆ ಅಮೇರಿಕಾ ಅದು ಅನುಮಾನಾಸ್ಪದ ಮತ್ತು ಒಂದು ಬರಿ ಬುರುಡೆ (ಸುಳ್ಳು) ಎಂದಿದೆ. [೫][೬]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ [""Mother of All Bombs" Never Used Before Due to Civilian Casualty Concerns". The Intercept. Retrieved 2017-04-14. Mother of All Bombs]
- ↑ ಅಮೆರಿಕದಿಂದ ಆಫ್ಘಾನಿಸ್ತಾನದ ಮೇಲೆ ದೊಡ್ಡ ಬಾಂಬ್;13 Apr, 2017
- ↑ ಬಾಂಬುಗಳ ಮಹಾತಾಯಿಗೆ 36 ಉಗ್ರರ ಬಲಿ;ಪಿಟಿಐ;15 Apr, 2017
- ↑ ಬಾಂಬುಗಳ ಮಹಾತಾಯಿಗೆ 36 ಉಗ್ರರ ಬಲಿ;ಪಿಟಿಐ;15 Apr, 2017
- ↑ [Luke Harding (12 September 2007). "Russia unveils the 'father of all bombs'". The Guardian. Retrieved 12 September 2007]
- ↑ Five things to know about GBU-43, ;5. Soon, Russia developed its "Father of All Bombs", touted to be four times as powerful as the MOAB.