ಮನೋರೋಗ ಚಿಕಿತ್ಸಕ
Occupation | |
---|---|
Names | Psychiatrist, Alienist (archaic) |
Activity sectors | Medicine > Psychiatry |
Description | |
Competencies | Analytical mind, patience |
Education required | Doctor of Medicine |
ಮನೋರೋಗ ಚಿಕಿತ್ಸಕ ರು ಮಾನಸಿಕ ಖಿನ್ನತೆಗಳಿಗೆ ನೀಡುವ ಚಿಕಿತ್ಸೆಯಲ್ಲಿ ದೃಢೀಕರಣ ಹೊಂದಿದ ಮನೋರೋಗ ಚಿಕಿತ್ಸೆಯಲ್ಲಿ ನೈಪುಣ್ಯತೆ ಪಡೆದಿರುವ ಒಬ್ಬ ವೈದ್ಯ.[೧] ಎಲ್ಲಾ ಮನೋರೋಗ ಚಿಕಿತ್ಸಕರು ಮಾನಸಿಕ ಚಿಕಿತ್ಸೆಯಲ್ಲಿ ಮತ್ತು ರೋಗ ಪತ್ತೆ ಹಚ್ಚಿ ಪರಿಮಾಣ ನಿರ್ಧರಿಸುವಲ್ಲಿ ತರಬೇತಿ ಹೊಂದಿರುತ್ತಾರೆ. ರೋಗಿಯ ರೋಗದ ಪರಿಮಾಣ ನಿರ್ಧರಿಸುವ ಒಂದು ಭಾಗವಾಗಿ, ಕೆಲವೇ ಮಾನಸಿಕ ಆರೋಗ್ಯ ತಜ್ಞರು ಮಾನಸಿಕ ರೋಗಿಗಳ ಔಷಧೋಪಚಾರ ನೀಡಬಲ್ಲರು, ದೈಹಿಕ ಪರೀಕ್ಷೆಗಳನ್ನು ನಡೆಸುತ್ತಾರೆ, ಪ್ರಯೋಗಶಾಲೆ ಪರೀಕ್ಷೆಗಳನ್ನು ಹೇಳುತ್ತಾರೆ ಮತ್ತು ನಡೆಸುತ್ತಾರೆ ಹಾಗೂ ಎಲೆಕ್ಟ್ರೋಎನ್ಸೆಫಲೋಗ್ರಾಮ್‌ಗಳು, ಮತ್ತು ಮೆದುಳು ಚಿತ್ರಣದ ಅಧ್ಯಯನಗಳಾದ ಕಂಪ್ಯೂಟೆಡ್ ಟೊಮೊಗ್ರಫಿ ಅಥವಾ ಕಂಪ್ಯೂಟೆಡ್ ಆಕ್ಸಿಯಲ್ ಟೊಮೊಗ್ರಫಿ, ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್, ಮತ್ತು ಪೊಸಿಷನ್ ಎಮಿಶನ್ ಟೊಮೊಗ್ರಫಿಸ್ಕ್ಯಾನಿಂಗ್‌ಗಳನ್ನೂ ಸಹ ಮಾಡಿಸಿಕೊಳ್ಳಲು ಸಲಹೆ ನೀಡಬಹುದು.[೨][೩][೪][೫][೬][೭][೮]
ವೃತ್ತಿಪರ ವಿಶ್ವದಲ್ಲಿ ಮನೋರೋಗ ಚಿಕಿತ್ಸೆ
[ಬದಲಾಯಿಸಿ]ಮನೋರೋಗ ಚಿಕಿತ್ಸಕರು ಫಿಸಿಷಿಯನ್‌ಗಳು (MBBS, MD, DO, ಇತ್ಯಾದಿ) ಇವರು ಮಾನಸಿಕ ಕಾಯಿಲೆಗೆ ಚಿಕಿತ್ಸೆನೀಡುವುದರಲ್ಲಿ ಪರಿಣತಿಯನ್ನು ಪಡೆದಿರುತ್ತಾರೆ. ಮನೋರೋಗ ಚಿಕಿತ್ಸಕರು ವಾರ್ಷಿಕ $145,600 ಗಳಿಸುತ್ತಾರೆ.
ಉಪವಿಶೇಷತೆಗಳು
[ಬದಲಾಯಿಸಿ]ಮನೋರೋಗ ಚಿಕಿತ್ಸೆಯ ಕ್ಷೇತ್ರವನ್ನು ವಿವಿಧ ಉಪವಿಶೇಷತೆಗಳಿಗನುಸಾರವಾಗಿ ವಿಭಾಗಿಸಲಾಗಿದೆ.[೯] ಅವುಗಳಲ್ಲಿ:
- ಚಟದ ಮನೋರೋಗ ಚಿಕಿತ್ಸೆ
- ಪ್ರಾಯದವರ ಮನೋರೋಗ ಚಿಕಿತ್ಸೆ
- ಮಕ್ಕಳ ಮತ್ತು ಯೌವನದ ಮನೋರೋಗ ಚಿಕಿತ್ಸೆ
- ಸಮಾಲೋಚನೆ-ಸಂಬಂಧ ಮನೋರೋಗ ಚಿಕಿತ್ಸೆ
- ಅಡ್ಡ-ಸಂಸ್ಕೃತಿ ಮನೋರೋಗ ಚಿಕಿತ್ಸೆ
- ತುರ್ತು ಮನೋರೋಗ ಚಿಕಿತ್ಸೆ
- ನ್ಯಾಯಸ್ಥಾನಕ ಮನೋರೋಗ ಚಿಕಿತ್ಸೆ
- ಕಲಿಯುವ ಅಸಾಮರ್ಥ್ಯತೆ
- ನರ ಅಭಿವೃದ್ಧಿಯಲ್ಲಿ ಅಸಾಮರ್ಥ್ಯತೆಗಳು
- ನರಕ್ಕೆ ಸಂಬಂಧಿಸಿದ ಮನೋರೋಗ ಚಿಕಿತ್ಸೆ
- ಮಾನಸಿಕ ಒತ್ತಡದಿಂದ ಉಂಟಾಗುವ ದೈಹಿಕ ರೋಗ ಔಷಧ
ಕೆಲವು ಮನೋರೋಗದ ಚಿಕಿತ್ಸೆಯ ಅಭ್ಯಾಸಗಾರರು ನಿರ್ಧಿಷ್ಟ ವಯಸ್ಕ ಗುಂಪಿನವರಿಗೆ ಸಹಾಯಮಾಡುವಲ್ಲಿ ಪರಿಣಿತರಾಗುತ್ತಾರೆ. ಮಗು ಮತ್ತು ತರುಣರ ಮನೋರೋಗ ಚಿಕಿತ್ಸಕರು ಮಕ್ಕಳ ಮತ್ತು ಅಪ್ರಾಪ್ತವಯಸ್ಕರರೊಂದಿಗೆ ಅವರ ಮಾನಸಿಕ ತೊಂದರೆಗಳನ್ನು ನಿವಾರಿಸುವಲ್ಲಿ ಕೆಲಸಮಾಡುತ್ತಾರೆ.[೯] ವಯಸ್ಸಾದವರ ಮಾನಸಿಕ ತೊಂದರೆಗಳೊಂದಿಗೆ ಕೆಲಸಮಾಡುವವರನ್ನು ಜೆರಿಯಾಟ್ರಿಕ್ ಮನೋರೋಗ ಚಿಕಿತ್ಸಕರೆಂದು ಅಥವಾ ಜೆರಿಸೈಕಿಯಾಟ್ರಿಸ್ಟ್ಸ್‌ಯೆಂದು ಕರೆಯುತ್ತಾರೆ.[೯] USನಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಮನೋರೋಗ ಚಿಕಿತ್ಸೆಯನ್ನು ಅಭ್ಯಾಸಮಾಡುವವರನ್ನು ಸಂಸ್ಥೆಯ ಮತ್ತು ವೃತ್ತಿಪರ ಮನೋರೋಗ ಚಿಕಿತ್ಸಕರೆಂದು ಕರೆಯಲಾಗುವುದು (ವೃತ್ತಿಪರ ಮನಶ್ಯಾಸ್ತ್ರ ಅನ್ನುವುದು UKನಲ್ಲಿ ಬಹುತೇಕ ಇದೇರೀತಿಯ ಕಟ್ಟುಪಾಡಿಗೆ ಉಪಯೋಗಿಸುವ ಒಂದು ಹೆಸರು).[೯] ನ್ಯಾಯಸ್ಥಾನದ ಕೊಠಡಿಯಲ್ಲಿ ಕೆಲಮಾಡುತ್ತಾ ನ್ಯಾಯಾದೀಶರಿಗೆ ಮತ್ತು ಜೂರಿ ನ್ಯಾಯಾದರ್ಶಿಗಳಿಗೆ, ಕ್ರಿಮಿನಲ್ ಮತ್ತು ಸಾಮಾಜಿಕ ಕೇಸುಗಳೆರಡುರಲ್ಲು ವರದಿಸಲ್ಲಿಸುವ, ಮನೋರೋಗ ಚಿಕಿತ್ಸಕರನ್ನುನ್ಯಾಯಸ್ಥಾನದ ಮನೋರೋಗ ಚಿಕಿತ್ಸಕರೆಂದು ಕರೆಯಲಾಗುವುದು, ಅವರು ಮಾನಸಿಕವಾಗಿ ಅವ್ಯವಸ್ಥಗೊಂಡ ಅಪರಾಧಿಗಳಿಗೆ ಮತ್ತು ಇತರ ರೋಗಿಗಳಿಗೆ ಅಂದರೆ ಭದ್ರತೆಯ ಪರಿದಿಯಲ್ಲೆ ಚಿಕಿತ್ಸೆಪಡೆಯಬೇಕಾದಂತಹ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಾರೆ.[೯][೧೦]
ಮನೋರೋಗದ ಚಿಕಿತ್ಸೆಯ ಕ್ಷೇತ್ರದಲ್ಲಿನ ಇತರ ಮನೋರೋಗ ಚಿಕಿತ್ಸಕರು ಮತ್ತು ಮಾನಸಿಕ ಆರೋಗ್ಯ ವೃತ್ತಿಗಾರರು, ಸೈಕೊಫಾರ್ಮಕೊಲಜಿ, ಮನೋರೋಗದ ತಳಿಶಾಸ್ತ್ರ, ನ್ಯುರೊಇಮಾಜಿಂಗ್, ನಿದ್ರೆ ಔಷಧಿ, ನೋವಿನ ಔಷಧಿ, ಉಪಶಾಮಕ ಔಷಧಿ, ಆಹಾರ ಸೇವನೆಯ ರೋಗಸ್ಥೆಗಳು, ಲೈಂಗಿಕ ರೋಗಸ್ಥೆಗಳು, ಮಹಿಳೆಯರ ಆರೋಗ್ಯ, ಜಗದ್ವಾಪಿಯ ಮಾನಸಿಕ ಆರೋಗ್ಯ, ಶೀಘ್ರ ಮನೋವಿಕಾರದ , ಮನೋಭಾವದ ಅವ್ಯವಸ್ಥೆ ಮತ್ತು ಕಾತರತೆಯ ಅವ್ಯವಸ್ಥೆಗಳು (ನಿರ್ಬಂಧವಾಗಿ-ಪೀಡಿಸುವ ಅವ್ಯವಸ್ಥೆಗಳು ಮತ್ತು ಗಾಯಗೊಂಡ ನಂತರದ ಒತ್ತಡದಿಂದಾಗುವ ಅವ್ಯವಸ್ಥೆಗಳನ್ನೊಳಗೊಂಡು) ಈ ಎಲ್ಲವುಗಳಲ್ಲಿ ಸಹ ಪರಿಣಿತಿಯನ್ನು ಪಡೆಯಬಹುದು.[೯][೧೦]
ವೃತ್ತಿಪರ ಅವಶ್ಯಕತೆಗಳು
[ಬದಲಾಯಿಸಿ]ಸಾಂಕೇತಿಕವಾಗಿ ಮನೋರೋಗ ಚಿಕಿತ್ಸಕರಾಗಲು ಕೆಲವು ಅವಶ್ಯಕತೆಗಳು ಗಣನೀಯ ಆದರೆ ಇವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವ್ಯತ್ಯಾಸಹೊಂದುತ್ತವೆ.[೯][೧೧]
U.S. ಮತ್ತು ಕೆನಡದಲ್ಲಿ ಮೊದಲು ಅವರು ತಮ್ಮ ಬ್ಯಾಚುಲರ್ಸ್ ಡಿಗ್ರೀಯನ್ನು ಪೂರ್ಣಗೊಳಿಸಿರಬೇಕು, ಅಥವಾ ಕ್ಯುಬೆಕ್‌ನಲ್ಲಿ ಕೆಜೆಪ್‌ನಲ್ಲಿನ ವೈದ್ಯಕೀಯ ಪೂರ್ವದ ಕೋರ್ಸಿನ ಅಧ್ಯಯನವನ್ನಾದರು ಮುಗಿಸಿರಬೇಕು.[೧೧] ವಿದ್ಯಾರ್ಥಿಗಳು ಯಾವುದೇ ಪ್ರಮುಖವಾದುದನ್ನು ಆಯ್ಕೆಮಾಡಿಕೊಳ್ಳಬಹುದು, ಹೇಗಿದ್ದರು ಅವರು ಸ್ಪಸ್ಟ ಕೋರ್ಸ್‌ಗಳಲ್ಲಿ ನೊಂದಾಯಿಸಿಕೊಳ್ಳಬೇಕು, ಸಾಮಾನ್ಯವಾಗಿ ವೈದ್ಯಕೀಯ ಪೂರ್ವದ ಶಿಕ್ಷಣ.[೧೧] ಅವರು ತಮ್ಮ M.D. ಅಥವಾ D.O. ಪದವಿಯನ್ನು ಪಡೆದುಕೊಳ್ಳಲು ಮತ್ತು ಅವರ ವೈದ್ಯಕೀಯ ಶಿಕ್ಷಣವನ್ನು ಮುಗಿಸಲು ಅವರು ಕಡ್ಡಾಯವಾಗಿ ವೈದ್ಯಕೀಯ ಕಾಲೇಜಿನ ಮೂಲಕ ನಾಲ್ಕು ವರ್ಷದ ಅವದಿಯ ಕೊರ್ಸ್‌ಗೆ ನೊಂದಾಯಿಸಿಕೊಳ್ಳಬೇಕು.[೧೧] ಇದರ ನಂತರ, ಪ್ರತಿಯೊಬ್ಬರು ಆಸ್ಪತ್ರೆಗಳಲ್ಲಿ ನಾಲ್ಕು ವರ್ಷದ (ಕೆನಡದಲ್ಲಿ ಐದು ವರ್ಷದ) ಕಡ್ಡಾಯ ಮನೋರೋಗದ ಚಿಕಿತ್ಸಿಕರಾಗಿ ಅಭ್ಯಾಸನಡೆಸಬೇಕು. ಈ ಮುಂದುವರೆದ ವಿಸ್ತಾರವಾದ ಅಭ್ಯಾಸದ ಅವದಿಯಲ್ಲಿ, ರೋಗಪರೀಕ್ಷೆ, ಮಾದಕದ್ರವ್ಯ ಸೇವನೆಯಿಂದಾಗುವ ಮಾನಸಿಕ ಅಸ್ವಸ್ತತೆಯಕುರಿತಾಗಿ, ವೈದ್ಯಕೀಯ ಉಪಚಾರದ ಪರಿಣಾಮಗಳಬಗ್ಗೆ, ಮತ್ತು ಮಾನಸಿಕಚಿಕಿತ್ಸಾನೀತಿಗಳಬಗ್ಗೆ ತರಬೇತಿ ನೀಡಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಮಾನ್ಯತೆ ಪಡೆದ ಎಲ್ಲಾ ಮನೋಚಿಕಿತ್ಸಕರು cbt (ಕಾಗ್ನಿಟಿವ್-ಬಿಹೇವಿಯರಲ್)ನಲ್ಲಿ ನಿಪುಣತೆಯನ್ನು ಹೊಂದಿದ್ದು, ಮಾನಸಿಕ ಅಸಮತೋಲನದಬಗ್ಗೆ ಸಂಕ್ಷಿಪ್ತವಾಗಿ ತಿಳಿದಿದ್ದು, ಮತ್ತು ಸಂಬಂದಪಟ್ಟ ಚಿಕಿತ್ಸಾಪದ್ದತಿಯನ್ನರಿತಿರಬೇಕು. ಮನೋರೋಗದ ಚಿಕಿತ್ಸಕರಾಗಲು ಕಡಿಮೆಪಕ್ಷ ನಾಲ್ಕುತಿಂಗಳ ಪದವಿನಂತರದ ಅದ್ಯಯನಗಳಾದ ಔಷಧಿಶಾಸ್ತ್ರ ಅಥವಾ ಮಕ್ಕಳವೈದ್ಯಕೀಯ ಉಪಚಾರಶಾಸ್ತ್ರ ಮತ್ತು ಅವರ ಮೊದಲನೆಯ ವರ್ಷದ ಅವದಿಯಲ್ಲಿ ಎರಡು ತಿಂಗಳ ನರಶಾಸ್ತ್ರಗಳ ಅದ್ಯಯನವನ್ನು ಮುಗಿಸಬೇಕು.[೧೧] ಅವರ ತರಬೇತಿಯನಂತರ, ಮನೋರೋಗದ ಚಿಕಿತ್ಸಕರು ಪರೀಕ್ಷಾಮಂಡಳಿಯಿಂದ ನಡೆಸಲ್ಪಡುವ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.[೧೧] ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮನೋರೋಗದ ಚಿಕಿತ್ಸಕರಾಗಿ ಕೆಲಸ ಪ್ರಾರಂಬಿಸಲು ಸರಿಸುಮಾರು 8 ವರ್ಷಗಳ ತರಬೇತಿಯನ್ನು ಮುಗಿಸಬೇಕಾಗುತ್ತದೆ.
ಯುನೈಟೆಡ್ ಕಿಂಗ್‌ಡಮ್, ದಿ ರಿಪಬ್ಲಿಕ್ ಆಫ್ ಐರ್‌ಲ್ಯಾಂಡ್, ಮತ್ತು ಪ್ರಪಂಚದ ಇತರ ಬಾಗಗಳಲ್ಲಿ, ಮನೋರೋಗದ ಚಿಕಿತ್ಸಕರಾಗಲು ಕಡ್ಡಾಯವಾಗಿ ವೈದ್ಯಕೀಯ ಪದವಿಯನ್ನು ಮುಗಿಸಿರಬೇಕು.[೧೨] ಈ ಪದವಿಗಳನ್ನು ಸಂಕ್ಷಿಪ್ತವಾಗಿ MB BChir, MB BCh, MB ChB, BM BS, ಅಥವಾ MB BS ಎಂದು ಸೂಚಿಸುತ್ತಾರೆ. ಇದರ ನಂತರ ವೈದ್ಯಕೀಯ ಸೇವೆಗೆ ನೊಂದಾವಣೆಯನ್ನು ಪಡೆದುಕೊಳ್ಳಲು UKಯಲ್ಲಿ ಪ್ರತಿಯೊಬ್ಬರು ಇನ್ನೆರಡುವರ್ಷ ಪೌಂಡೇಷನ್ ಹೌಸ್ ಅಧಿಕಾರಿಯಾಗಿ, ಅಥವಾ ರಿಪಬ್ಲಿಕ್ ಆಫ್ ಐರ್‌ಲ್ಯಾಂಡ್‌ನಲ್ಲಿ ಒಂದು ವರ್ಷದ ಅವದಿಯವರೆಗೆ ಇಂಟೆರ್ನಾಗಿ ಕೆಲಸಮಾಡುತ್ತಾರೆ. ಇದರ ನಂತರ, ಮನೋರೋಗದ ಚಿಕಿತ್ಸೆಯಬಗ್ಗೆ ತರಬೇತಿಯನ್ನು ಆರಂಭಿಸಬಹುದು ಮತ್ತು ಇದನ್ನು ಎರಡು ಹಂತಗಳಾಗಿ ಪಡೆಯಲಾಗುತ್ತದೆ: ಮೂಲ ತಜ್ಞತೆಯ ತರಬೇತಿಯನ್ನು ಮೊದಲ ಮೂರುವರ್ಷಗಳಲ್ಲಿ ಕೊಡಲಾಗುವುದು ಮತ್ತು ತರಬೇತಿ ಪಡೆಯುವ ಶಿಷ್ಯರು MRCಸೈಕ್ ( ABPN ಪರೀಕ್ಷಾ ಮಂಡಳಿಗೆ ಸಮನಾದ) ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಎರಡನೆಯ ಹಂತದಲ್ಲಿ ಹೆಚ್ಚಿನ ತಜ್ಞತೆಯಬಗ್ಗೆ ತರಬೇತಿಯನ್ನು ನೀಡಲಾಗುವುದು, ಇದನ್ನು UK ಯಲ್ಲಿ "ST4-6" ಎಂದು ಮತ್ತು ರಿಪಬ್ಲಿಕ್ ಆಫ್ ಐರ್‌ಲ್ಯಾಂಡ್‌ನಲ್ಲಿ "ಸೀನಿಯರ್ ರೆಜಿಸ್ಟ್ರರ್ ಟ್ರೈನಿಂಗ್" ಎಂದು ಹೇಳಲಾಗುತ್ತದೆ. MRCಸೈಕ್ ಪದವಿ ಮತ್ತು ಮೂಲತರಬೇತಿ ವಿಷಯಗಳ ಕುರಿತಾಗಿ ಅಭ್ಯರ್ಥಿಗಳೊಂದಿಗೆ ಪುನರ್‌ಸಂದರ್ಶನವನ್ನು ಉನ್ನತ ತರಬೇತಿಹೊಂದುವ ಮೊದಲು ಕಡ್ಡಾಯವಾಗಿ ಮಾಡಲಾಗುತ್ತದೆ. ಈ ಹಂತದಲ್ಲಿ, ನ್ಯಾಯಸ್ಥಾನದ, ಮಗು/ಯೌವನಾವಸ್ಥೆಗಳನ್ನು ಕುರಿತಾದ ವಿಶೇಷ ಅಭಿರುಚಿಗಳು ಬೆಳವಣಿಗೆಯಾಗುತ್ತವೆ. 3 ವರ್ಷಗಳ ವಿಶೇಷ ಉನ್ನತ ತರಬೇತಿಯ ಕೊನೆಯಲ್ಲಿ, ಅಭ್ಯರ್ಥಿಗಳಿಗೆ CCT (UK) ಅಥವಾCCST (Ireland) ಎಂದು ಪದವಿಯನ್ನು ನೀಡಲಾಗುತ್ತದೆ, ಇವೆರಡರ ಅರ್ಥವು (ವಿಶೇಷ) ತರಬೇತಿಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಈ ಹಂತದಲ್ಲಿ, ಮನೋರೋಗದ ಚಿಕಿತ್ಸಕರು ವಿಶೇಷ ತಜ್ಞರೆಂದು ನೊಂದಾಯಿಸಿಕೊಳ್ಳಬಹುದು ಮತ್ತು CC(S)Tಯನ್ನು EU/EEA ಸ್ಟೇಟ್ಸ್‌ಗಳಲ್ಲಿ ಅರ್ಹತೆಯಾಗಿ ಮಾನ್ಯತೆಮಾಡಲಾಗಿದೆ. ಈ ರೀತಿಯಂತೆ, UK ಮತ್ತು ಐರ್‌ಲ್ಯಾಂಡ್‌ನಲ್ಲಿ ತರಬೇತಿಯು US ಅಥವಾ ಕೆನಡಕ್ಕಿಂತ ಗಣನೀಯವಾಗಿ ದೀರ್ಘಾವಧಿಯದಾಗಿದ್ದು, ವೈದ್ಯಕೀಯ ಪದವಿಯನ್ನು ಪಡೆದ ನಂತರ ಸರಿಸುಮಾರು 8–9 ವರ್ಷಗಳು ಬೇಕಾಗುತ್ತದೆ. CC(S)T ಪದವಿಯನ್ನು ಪಡೆದವರು ಸಲಹೆಗಾರರ ಉದ್ಯೋಗಕ್ಕೆ ಅರ್ಜಿಸಲ್ಲಿಸಬಹುದು. EU/EEAನ ಹೊರಗೆ ತರಬೇತಿ ಪಡೆದವರು ಸ್ಥಳಿಯ ವೈದ್ಯಕೀಯ ಮಂಡಳಿಯಿಂದ ತಮ್ಮ ಅರ್ಹತೆಯನ್ನು ಮಾನ್ಯತೆಪಡಿಸಿಕೊಳ್ಳಬೇಕಾಗುತ್ತದೆ (ಉದಾಹರಣೆಗೆ, USನ ನಿವಾಸಿಗರಾಗಿ ABPNನ ಅರ್ಹತೆಪಡೆದವರು).
ನೆದೆರ್‌ಲ್ಯಾಂಡ್ಸ್‌ನಲ್ಲಿ ಚಿಕಿತ್ಸಕರಾಗಲು ಅವರು ಕಡ್ಡಾಯವಾಗಿ ವೈದ್ಯಕೀಯ ಶಾಲೆಯನ್ನು ಪೂರ್ಣಗೊಳಿಸಿರಬೇಕು: ಇದು 6 ವರ್ಷಗಳ ಅವದಿಯ ವಿಶ್ವವಿದ್ಯಾಲಯದ ಕೋರ್ಸ್‌ಆಗಿದ್ದು ಇದರ ನಂತರವಷ್ಟೆ ಅವರು "ಡಾಕ್ಟೊರಾಂಡಸ್ ಇನ್ ದಿ ಜೆನೀಸ್ಕುಂದೆ" ಅಥವಾ "ಮಾಸ್ಟೆರ್ ಆಫ್ ಮೆಡಿಸಿನ್" ಅನ್ನುವ ಹೆಸರನ್ನು ಗಳಿಸುತ್ತಾರೆ. ವೈದ್ಯಕೀಯ ಅಭ್ಯಾಸದ ನಂತರವಷ್ಟೆ ಅವರು ವೈದ್ಯಕೀಯ ಚಿಕಿತ್ಸಕರೆಂಬ ಅನುಮೋದಿಯನ್ನು ಪಡೆಯುತ್ತಾರೆ. ಕಠಿಣವಾದ ಆಯ್ಕೆಯ ಪ್ರೊಗ್ರಾಮ್‌ನ ನಂತರವಷ್ಟೆ ಅವರು ಮನೋರೋಗ ಚಿಕಿತ್ಸೆಯಲ್ಲಿ ಪ್ರವೀಣತೆಯನ್ನು ಪಡೆಯಬಹುದು: ಇದು 4,5 ವರ್ಷಗಳ ಅವದಿಯ ತಜ್ಞತೆಯಾಗಿರುತ್ತದೆ. ಈ ತಜ್ಞತೆಯ ಅವದಿಯ ಸಮಯದಲ್ಲಿ, ಅಭ್ಯಾಸಗಾರ ಸಮಾಜಿಕ ಮನೋರೋಗ ಚಿಕಿತ್ಸೆಯಲ್ಲಿ 6 ತಿಂಗಳ ಇನ್ಟ್ರೆನ್‌ಷಿಪ್‌ನ್ನು, ಅವರ ಸ್ವಂತ ಆಯ್ಕೆಯಲ್ಲಿ (ಇದು ಮಗು ಮನೋರೋಗ ಚಿಕಿತ್ಸೆ, ನ್ಯಾಯಸ್ಥಾನದ ಮನೋರೋಗ ಚಿಕಿತ್ಸೆ, ಸೊಮಾಟಿಕ್ ಮೆಡಿಸಿನ್ ಅಥವಾ ವೈದ್ಯಕೀಯ ಸಂಶೋದನೆಯಾದರು ಆಗಿರಬಹುದು) 12 ತಿಂಗಳ ಇನ್ಟ್ರೆನ್‌ಷಿಪ್‌ನ್ನು ಮತ್ತು ಪ್ರಾಪ್ತ ವಯಸ್ಕರ ಮನೋರೋಗ ಚಿಕಿತ್ಸೆಯ ವಿವಿಧ ಕ್ಷೇತ್ರಗಳಲ್ಲಿ ಕಡ್ಡಾಯವಾದ ಮೂರುವರ್ಷಗಳ ಇನ್ಟ್ರೆನ್‌ಷಿಪ್‌ನ್ನು (ಮುಚ್ಚಲಾದ ವಾರ್ಡಗಳಲ್ಲಿನ ತೀವ್ರವಾದ ಮನೋರೋಗ ಚಿಕಿತ್ಸೆ ಶ್ರೇಣಿಯಿಂದ ಹೊರರೋಗಿಗಳ ಮನೋರೋಗ ಚಿಕಿತ್ಸೆಯವರೆಗು) ಅಭ್ಯಾಸಮಾಡಬೇಕಾಗುತ್ತದೆ. ಅವರು ಮಕ್ಕಳ ಮತ್ತು ತರುಣರ ಮನೋರೋಗ ಚಿಕಿತ್ಸಕರಾಗಲು ಬಯಸಿದರೆ, ಅಂತವರು ಇನ್ನೂ 2 ವರ್ಷಗಳ ಅವದಿಯ ಹೆಚ್ಚಿನ ಪರಿಣಿತಿಯ ಕೋರ್ಸನ್ನು ಮಾಡಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಒಬ್ಬರು ಮನೋರೋಗ ಚಿಕಿತ್ಸಕರಾಗಲು 10,5 ವರ್ಷಗಳ ಅವದಿಯ ಅಭ್ಯಾಸದ ಅಗತ್ಯವಿದೆ ಮತ್ತು ಅವರು ಮಕ್ಕಳ ಮತ್ತು ತರುಣರ ಮನೋರೋಗ ಚಿಕಿತ್ಸಕರಾದರೆ ಈ ಅಭ್ಯಾಸದ ಅವದಿಯು 12,5 ವರ್ಷಗಳವರೆಗೆ ವಿಸ್ತಾರವಾಗುವುದು.
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]- ಜನಪ್ರಿಯ ಸಿಟ್ಕಾಮ್ಸ್ ಚೀರ್ಸ್ ಮತ್ತು ಫ್ರೇಸಿಯರ್ ಗಳಲ್ಲಿ, ಪ್ರಮುಖ ಪಾತ್ರಗಳಾದ ಫ್ರೇಸಿಯರ್ ಕ್ರೇನ್, ನೈಲ್ಸ್ ಕ್ರೇನ್ ಮತ್ತು ಲಿಲಿತ್ ಸ್ಟೆರ್ನಿನ್ರು ಎಲ್ಲಾ ಮಾನಸಿಕ ತಜ್ಞರು (ಕ್ರಮವಾಗಿ ಫ್ರೆಡಿಯನ್, ಜಂಗಿಯನ್ ಮತ್ತು ಬಿಹೇವಿಯರಲಿಸ್ಟ್). ಫ್ರೇಸಿಯರ್ ನ ಹೆಚ್ಚಿನ ಮನಸ್ಥಿತಿಯಲ್ಲಿ ಅವರ ಸ್ವತಃ ಜೀವನದ ಮತ್ತು ಒಬ್ಬರಿಗೊಬ್ಬರ ಮನಸ್ಸಿನ ವಿಶ್ಲೇಷಣೆ ಮಾಡಿಕೊಳ್ಳುವುದು ಕಡ್ಡಾಯ.
- ಥಾಮಸ್ ಹ್ಯಾರ್ರಿಸ್ ಅವರ ಡಾ. ಹನ್ನಿಬಲ್ ಲೆಕ್ಟರ್ ಒಂದು ರೋಮಾಂಚಕಾರಿ ಕಾದಂಬರಿಗಳ ಶ್ರೇಣಿ (ಮತ್ತು ಚಲನಚಿತ್ರಗಳಿಗೂ ಅಳವಡಿಸಿಕೊಳ್ಳಲಾಗಿದೆ)ಯು ವಿಶ್ವದ-ಪರಿಚಿತವಾಗಿದ್ದು ಇದರಲ್ಲಿ ಒಬ್ಬ ವಿಕೃತ ಮನಸ್ಸಿನ ಸರಣಿ ಕೊಲೆಗಾರನಾಗಿದ್ದೂ ಆತ ಫೋರೆನ್ಸಿಕ್ ಸೈಕಿಯಾಟ್ರಿಸ್ಟ್ ಆಗಿರುತ್ತಾನೆ.
ಈ ಕೆಳಗಿನವುಗಳನ್ನೂ ನೋಡಬಹುದು
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್. (ಕೊನೆಯದಾಗಿ ನವೀಕರಿಸಿರುವುದು ತಿಳಿಯದು). ವ್ಹಾಟ್ ಈಸ್ ಎ ಸೈಕಿಯಾಟ್ರಿಸ್ಟ್ . ಮಾರ್ಚ್ 25, 2007ರಂದು, http://www.healthyminds.org/whatisapsychiatrist.cfmರಿಂದ[ಶಾಶ್ವತವಾಗಿ ಮಡಿದ ಕೊಂಡಿ] ಮರುಸಂಪಾದಿಸಲಾಗಿದೆ.
- ↑ ಮೆಯೆಂಡಾರ್ಫ್, ಆರ್. (1980). Diagnosis and differential diagnosis in psychiatry and the question of situation referred prognostic diagnosis. Schweizer Archiv Neurol Neurochir Psychiatry für Neurologie, Neurochirurgie et de psychiatrie, 126 , 121-134.
- ↑ ಲೀಹ್, ಎಚ್. (1983). ಸೈಕಿಯಾಟ್ರಿ ಇನ್ ದಿ ಪ್ರ್ಯಾಕ್ಟೀಸ್ ಆಫ್ ಮೆಡಿಸಿನ್ . ಮೆನ್ಲೋ ಪಾರ್ಕ್: ಅಡಿಸನ್-ವೆಸ್ಲೇ ಪಬ್ಲಿಶಿಂಗ್ ಕಂಪನಿ. ISBN 978-0-20-105456-9, p. 15
- ↑ ಲೀಹ್, ಎಚ್. (1983). ಸೈಕಿಯಾಟ್ರಿ ಇನ್ ದಿ ಪ್ರ್ಯಾಕ್ಟೀಸ್ ಆಫ್ ಮೆಡಿಸಿನ್ . ಮೆನ್ಲೋ ಪಾರ್ಕ್: ಅಡಿಸನ್-ವೆಸ್ಲೇ ಪಬ್ಲಿಶಿಂಗ್ ಕಂಪನಿ. ISBN 978-0-20-105456-9, p. 67
- ↑ ಲೀಹ್, ಎಚ್. (1983). ಸೈಕಿಯಾಟ್ರಿ ಇನ್ ದಿ ಪ್ರ್ಯಾಕ್ಟೀಸ್ ಆಫ್ ಮೆಡಿಸಿನ್ . ಮೆನ್ಲೋ ಪಾರ್ಕ್: ಅಡಿಸನ್-ವೆಸ್ಲೇ ಪಬ್ಲಿಶಿಂಗ್ ಕಂಪನಿ. ISBN 978-0-20-105456-9, p. 17
- ↑ ಲೈನೆಸ್, ಜೆ.ಎಂ. (1997), ಪು. ಆಫ್ಘಾನಿಸ್ತಾನ್' gtc:mediawiki-xid="10" gtc:suffix="">[10]
- ↑ ಹ್ಯಾಂಪೆಲ್, ಎಚ್.; ಟೇಪೆಲ್, ಎಸ್.ಜೆ.; ಕೊಟ್ಟರ್, ಎಚ್.ಯು.; ಎಟ್ ಅಲ್. (1997). ಅಲ್ಜಿಮೆರ್‌ನ ಕಾಯಿಲೆಯ ಪತ್ತೆಹಚ್ಚುವ ಮತ್ತು ಸಂಶೋಧನೆಯಲ್ಲಿ ಸ್ಟ್ರಕ್ಚರಲ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್. ನರ್ವೆನರ್ಜ್ಟ್Nervenarzt, 68 , 365-378.
- ↑ ಟೌನ್‌ಸೆಂಡ್, ಬಿ.ಎ.; ಪೆಟ್ರೆಲ್ಲಾ, ಜೆ.ಆರ್.; ದೊರೈಸ್ವಾಮಿ, ಪಿ.ಎಮ್. (2002). ಜೆರಿಯಾಟ್ರಿಕ್ ಮನೋರೋಗ ಚಿಕಿತ್ಸೆಯಲ್ಲಿ ನ್ಯೂರೋಇಮೇಜಿಂಗ್ ಪಾತ್ರ. ಮನೋರೋಗ ಚಿಕಿತ್ಸೆಯಲ್ಲಿ ಪ್ರಸ್ತುತ ಅಭಿಪ್ರಾಯ, 15 , 427-432.
- ↑ ೯.೦ ೯.೧ ೯.೨ ೯.೩ ೯.೪ ೯.೫ ೯.೬ ದಿ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ಸ್. (2005). ಶಾಲೆ ಬಿಟ್ಟವರಿಗೆ ಉದ್ಯೋಗ ಮಾಹಿತಿ . ಮಾರ್ಚ್ 25, 2007ರಂದು https://archive.is/20121223081434/www.rcpsych.ac.uk/training/careersinpsychiatry/careerbooklet.aspx%E0%B2%AF%E0%B2%BF%E0%B2%82%E0%B2%A6 ಮರುಸಂಪಾದಿಸಲಾಗಿದೆ
- ↑ ೧೦.೦ ೧೦.೧ ಅಮೆರಿಕನ್ ಬೋರ್ಡ್ ಆಫ್ ಸೈಕಿಯಾಟ್ರಿ ಅಂಡ್ ನ್ಯೂರಾಲಜಿ, ಇಂಕ್. (1 ಮಾರ್ಚ್ 2001 ABPN ಸರ್ಟಿಫಿಕೇಶನ್ - ಉಪವಿಶೇಷತೆಗಳು . ಮಾರ್ಚ್ 25, 2007ರಂದು, http://www.abpn.com/cert_subspecialties.htmನಿಂದ[ಶಾಶ್ವತವಾಗಿ ಮಡಿದ ಕೊಂಡಿ] ಮರುಸಂಪಾದಿಸಲಾಗಿದೆ
- ↑ ೧೧.೦ ೧೧.೧ ೧೧.೨ ೧೧.೩ ೧೧.೪ ೧೧.೫ Psychiatry.com (ಕೊನೆಯದಾಗಿ ನವೀಕರಿಸಿರುವುದು ತಿಳಿಯದು). ವಿದ್ಯಾರ್ಥಿ ಮಾಹಿತಿ . ಮಾರ್ಚ್ 25, 2007ರಲ್ಲಿ, http://www.psychiatry.com/student.phpಯಿಂದ[ಶಾಶ್ವತವಾಗಿ ಮಡಿದ ಕೊಂಡಿ] ಮರುಸಂಪಾದಿಸಲಾಗಿದೆ
- ↑ "ಶಾಲೆ ಬಿಟ್ಟವರಿಗೆ ಉದ್ಯೋಗ ಮಾಹಿತಿ". Archived from the original on 2008-02-07. Retrieved 2010-07-01.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್. (2000). ಡಯಾಗ್ನೋಸ್ಟಿಕ್ ಅಂಡ್ ಸ್ಟ್ಯಾಟಿಸ್ಟಿಕಲ್ ಮ್ಯಾನುಯಲ್ ಆಫ್ ಡಿಸಾರ್ಡರ್ಸ್ DSM-IV-TR ನಾಲ್ಕನೆಯ ಆವೃತ್ತಿ . ವಾಷಿಂಗ್ಟನ್, D.C.: ಅಮೆರಿಕನ್ ಸೈಕಿಯಾಟ್ರಿಕ್ ಪಬ್ಲಿಷಿಂಗ್.
- ಫ್ರಾನ್ಸಿಸ್, ಎ., & ಫರ್ಸ್ಟ್, ಎಮ್. (1999). ಯುವರ್ ಮೆಂಟಲ್ ಹೆಲ್ತ್: ಎ ಲೇಮನ್ಸ್ ಗೈಡ್ ಟು ದಿ ಸೈಕಿಯಾಟ್ರಿಸ್ಟ್ಸ್ ಬೈಬಲ್ . ನ್ಯೂಯಾರ್ಕ್: ಸ್ಕ್ರಿಬ್ನರ್.
- ಹಫ್ನರ್, ಎಚ್. (2002). ಸೈಕಿಯಾಟ್ರಿ ಅಸ್ ಎ ಪ್ರೊಫೆಶನ್. ನರ್ವೆನರ್ಜ್ಟ್ , 73, 33.
- ಸ್ಟೌಟ್, ಎ. (1993). ಫ್ರಮ್ ದಿ ಅದರ್ ಸೈಡ್ ಆಫ್ ದಿ ಕೋಚ್: ಕ್ಯಾಂಡಿಡ್ ಕನ್ವರ್ಸೇಷನ್ಸ್ ವಿತ್ ಸೈಕಿಯಾಟ್ರಿಸ್ಟ್ಸ್ ಅಂಡ್ ಸೈಕಾಲಜಿಸ್ಟ್ಸ್ . ವೆಸ್ಟ್‌ಪೋರ್ಟ್, Conn.: ಗ್ರೀನ್‌ವುಡ್ ಪ್ರೆಸ್.