ವಿಷಯಕ್ಕೆ ಹೋಗು

ಮರ್ಯಮ್ ಮಿರ್ಜಾಖಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮರ್ಯಮ್ ಮಿರ್ಜಾಖಾನಿ
೨೦೧೪ ರಲ್ಲಿ ಮಿರ್ಜಾಖಾನಿ
ಜನನ(೧೯೭೭-೦೫-೧೨)೧೨ ಮೇ ೧೯೭೭[]
ತೆಹ್ರಾನ್, ಇರಾನ್
ಮರಣ14 July 2017(2017-07-14) (aged 40)
ಸ್ಟ್ಯಾನ್‌ಫೋರ್ಡ್, ಕ್ಯಾಲಿಫೋರ್ನಿಯಾ, ಯು.ಎಸ್.
ಕಾರ್ಯಕ್ಷೇತ್ರಗಣಿತಶಾಸ್ತ್ರ
ಸಂಸ್ಥೆಗಳು
  • ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ
  • ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ
ವಿದ್ಯಾಭ್ಯಾಸ
  • ಶರೀಫ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (BSc)
  • ಹಾರ್ವರ್ಡ್ ವಿಶ್ವವಿದ್ಯಾಲಯ (ಪಿಎಚ್‌ಡಿ)
ಮಹಾಪ್ರಬಂಧಹೈಪರ್ಬೋಲಿಕ್ ಮೇಲ್ಮೈಗಳಲ್ಲಿ ಸರಳ ಜಿಯೋಡೆಸಿಕ್ಸ್ ಮತ್ತು ವಕ್ರಾಕೃತಿಗಳ ಮಾಡ್ಯುಲಿ ಜಾಗದ ಪರಿಮಾಣ (2004)
ಡಾಕ್ಟರೇಟ್ ಸಲಹೆಗಾರರುಕರ್ಟಿಸ್ ಟಿ. ಮೆಕ್‌ಮುಲ್ಲೆನ್[]
ಗಮನಾರ್ಹ ಪ್ರಶಸ್ತಿಗಳು
  • ಬ್ಲೂಮೆಂಟಲ್ ಪ್ರಶಸ್ತಿ (೨೦೦೯)
  • ಸ್ಯಾಟರ್ ಪ್ರಶಸ್ತಿ (೨೦೧೩)
  • ಕ್ಲೇ ರಿಸರ್ಚ್ ಅವಾರ್ಡ್ (೨೦೧೪)
  • ಫೀಲ್ಡ್ಸ್ ಮೆಡಲ್ (೨೦೧೪)
ಸಂಗಾತಿ
ಜಾನ್ ವೊಂಡ್ರಾಕ್ ೨೦೦೮
(before Lua error in ಮಾಡ್ಯೂಲ್:Complex_date at line 203: assign to undeclared variable 'a'.)
ಮಕ್ಕಳು

ಮರ್ಯಮ್ ಮಿರ್ಜಾಖಾನಿ(ಪರ್ಷಿಯನ್: مریم میرزاخانی, ಉಚ್ಚಾರಣೆ: [mæɾˈjæm miːɾzɑːxɑːˈniː]; ೧೨ ಮೇ ೧೯೭೭ – ೧೪ ಜುಲೈ ೨೦೧೭) ಅವರು ಒಬ್ಬ ಇರಾನ್‌ನ ಗಣಿತಜ್ಞರು.[] ಇವರು ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ಗಣಿತ ಪ್ರಾಧ್ಯಾಪಕರಾಗಿದ್ದರು.[][] ಅವರ ಸಂಶೋಧನೆ ವಿಚಾರಗಳು ಟೀಕ್ಮುಲ್ಲರ್ ಥಿಯರಿ, ಹೈಪರ್ಬಾಲಿಕ್ ಜ್ಯಾಮಿತಿ, ಎರ್ಗೊಡಿಕ್ ಥಿಯರಿ ಮತ್ತು ಸಿಂಪ್ಲೆಕ್ಟಿಕ್ ಜ್ಯಾಮಿತಿ ಇವುಗಳು ಒಳಗೊಂಡಿದೆ.[] ೨೦೧೪ರ ಆಗಸ್ಟ್ ೧೩ ರಂದು, ಮಿರ್ಜಾಖಾನಿ ಅವರು ಫೀಲ್ಡ್ಸ್ ಪ್ರಶಸ್ತಿಯನ್ನು ಪಡೆದುಕೊಂಡರು.[][] ಅವರು ಫೀಲ್ಡ್ಸ್ ಪ್ರಶಸ್ತಿಯನ್ನು ಪಡೆದುಕೊಂಡ ಮೊದಲ ಮಹಿಳೆ ಮತ್ತು ಮೊದಲ ಇರಾನಿಯರಾದವರಾದರು.[]

೧೪ ಜುಲೈ ೨೦೧೭ ರಂದು, ಮಿರ್ಜಾಖಾನಿ ಅವರು ತಮ್ಮ ೪೦ ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್‌ನಿಂದ ನಿಧನರಾದರು.[೧೦]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಮಿರ್ಜಾಖಾನಿ ಅವರು ೧೨ ಮೇ ೧೯೭೭[೧೧][] ರಂದು ಇರಾನ್‌ನ ತೆಹ್ರಾನ್‌ನಲ್ಲಿ ಜನಿಸಿದರು.[೧೨] ಬಾಲ್ಯದಲ್ಲಿ ಅವರು ಇರಾನಿನ ಅಸಾಧಾರಣ ಪ್ರತಿಭೆಯ ಅಭಿವೃದ್ಧಿ ಸಂಸ್ಥೆಯ (NODET) ಭಾಗವಾದ ತೆಹ್ರಾನ್ ಫರ್ಜಾನೆಗಾನ್ ಶಾಲೆಯಲ್ಲಿ ವ್ಯಾಸಂಗವನ್ನು ಮಾಡಿದರು. ಅವರ ಪ್ರೌಢ ಹಾಗೂ ಸಿನಿಯರ್ ವರ್ಷಗಳಲ್ಲಿ ಅವರು ಇರಾನಿನ ರಾಷ್ಟ್ರೀಯ ಗಣಿತ ಒಲಿಂಪಿಯಾಡಿನಲ್ಲಿ ಚಿನ್ನದ ಪದಕವನ್ನು ಪಡೆದರು. ಈ ಕಾರಣದಿಂದ ಅವರಿಗೆ ರಾಷ್ಟ್ರೀಯ ಕಾಲೇಜು ಪ್ರವೇಶ ಪರೀಕ್ಷೆಯನ್ನು ಬೈಪಾಸ್ ಮಾಡಲು ಅವಕಾಶ ಸಿಕ್ಕಿತು.[೧೩] ೧೯೯೪ ರಲ್ಲಿ, ಹಾಂಗ್ ಕಾಂಗ್‌‌ನಲ್ಲಿ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡಿನಲ್ಲಿ ಮಿರ್ಜಾಖಾನಿ ಅವರಿಗೆ ೪೨ ಅಂಕಗಳಲ್ಲಿ ೪೨ ಅಂಕ ಪಡೆದು ಚಿನ್ನದ ಪದಕ ಗೆದ್ದ ಮೊದಲ ಇರಾನಿ ಮಹಿಳೆ ಆದರು.[೧೪] ಮುಂದಿನ ವರ್ಷ ಟೊರಂಟೊದಲ್ಲಿ ಅವರು ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡಿನಲ್ಲಿ ಪೂರ್ಣ ಅಂಕಗಳನ್ನು ಪಡೆದು ಇರಾನಿಯ ಹಾಗೂ ಎರಡು ಗೋಲ್ಡ್ ಮೆಡಲ್‌ಗಳನ್ನು ಗೆದ್ದ ಮೊದಲ ವ್ಯಕ್ತಿಯಾದರು.[೧೫] ನಂತರ ಆಕೆಯ ಜೀವನದಲ್ಲಿ, ಅವರು ಸ್ನೇಹಿತ, ಸಹೋದ್ಯೋಗಿ ಮತ್ತು ಒಲಿಂಪಿಯಾಡ್ ಬೆಳ್ಳಿ ಪದಕ ವಿಜೇತ, ರೋಯಾ ಬೆಹೆಶ್ಟಿ ಜವಾರೆಹ್ (ಪರ್ಷಿಯನ್: رؤیا بهشتی زواره) ಅವರ ಜೊತೆಗೂಡಿ 'ಪ್ರಾಥಮಿಕ ಸಂಖ್ಯಾ ಸಿದ್ಧಾಂತ, ಸಮರ್ಥನ ಸಮಸ್ಯೆಗಳು' ಎಂಬ ಪುಸ್ತಕವನ್ನು(ಪರ್ಷಿಯನ್‌ನಲ್ಲಿ) ಬರೆದರು. ೧೯೯೯ ರಲ್ಲಿ ಈ ಪುಸ್ತಕವು ಪ್ರಕಟವಾಯಿತು.[೧೩] ಮಿರ್ಜಾಖಾನಿ ಮತ್ತು ಜವರೆಹ್ ಜೊತೆಗೂಡಿ, ೧೯೯೫ ರಲ್ಲಿ ಇರಾನಿನ ರಾಷ್ಟ್ರೀಯ ಗಣಿತ ಒಲಿಂಪಿಯಾಡಿನಲ್ಲಿ ಪ್ರಥಮ ಮಹಿಳೆಯರಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದರು.

೧೯೯೮ ಮಾರ್ಚ್ ೧೭ ರಂದು, ಪ್ರತಿಭಾವಂತ ವ್ಯಕ್ತಿಗಳು ಮತ್ತು ಹಿಂದಿನ ಒಲಿಂಪಿಯಾಡ್ ಸ್ಪರ್ಧಿಗಳೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸಿದ ಮಿರ್ಜಾಖಾನಿ ಮತ್ತು ಜಾವರೆಹ್, ಇತರ ಭಾಗಿಗಳೊಂದಿಗೆ ಅಹ್ವಾಜ್ ನಗರದಿಂದ ತೆಹ್ರಾನ್ ಹೋಗಲು ಬಸ್ ಹತ್ತಿದರು. ಅವರು ಪ್ರಯಾಣಿಸುತ್ತಿದ್ದ ಬಸ್‌ಗೆ ಅಪಘಾತವಾಯಿತು.ಇದರಿಂದ ಏಳು ಪ್ರಯಾಣಿಕರು ಮರಣ ಹೊಂದಿದರು. ಅವರಲ್ಲಿ ಶರೀಫ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು. ಮಿರ್ಜಾಖಾನಿ ಮತ್ತು ಜಾವರೆಹ್ ಅವರು ಸೇರಿ ಕೆಲವರು ಬದುಕುಳಿದರು.[೧೬]

೧೯೯೯ ರಲ್ಲಿ, ಶರೀಫ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಿಂದ ಗಣಿತಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಪಡೆದರು. ಅಲ್ಲಿ ಅವರು ಇದ್ದ ಸಮಯದಲ್ಲಿ, ಶುರ್ ಪ್ರಮೇಯದ ಸರಳ ಪುರಾವೆಯನ್ನು ಅಭಿವೃದ್ಧಿಪಡಿಸುವಲ್ಲಿ ಮಾಡಿದ ಕೆಲಸಕ್ಕಾಗಿ ಅವಳು ಅಮೇರಿಕನ್ ಮ್ಯಾಥಮೆಟಿಕಲ್ ಸೊಸೈಟಿಯಿಂದ ಮನ್ನಣೆಯನ್ನು ಪಡೆದರು.[೧೭] ನಂತರ ಅವರು ಪದವಿ ಕೆಲಸಕ್ಕಾಗಿ ಅಮೆರಿಕಾಕ್ಕೆ ಹೋದರು. ೨೦೦೪ ರಲ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಅನ್ನು ಪಡೆದರು. ಅಲ್ಲಿ ಅವರು ಫೀಲ್ಡ್ಸ್ ಮೆಡಲಿಸ್ಟ್ ಕರ್ಟಿಸ್ ಟಿ. ಮೆಕ್‌ಮುಲ್ಲೆನ್ ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಿದರು.[೧೮]

ವೃತ್ತಿ

[ಬದಲಾಯಿಸಿ]
ಮೇರಿಯಮ್ ಮಿರ್ಜಾಖಾನಿ ಅವರು ಫೀಲ್ಡ್ಸ್ ಮೆಡಲ್ ಅನ್ನು ಆಗಸ್ಟ್ ೨೦೧೪ ರಂದು ಪಡೆದುಕೊಂಡರು

ಮಿರ್ಜಾಖಾನಿ ಅವರು ಕ್ಲೇ ಮ್ಯಾಥಮ್ಯಾಟಿಕ್ಸ್ ಇನ್‌ಸ್ಟಿಟ್ಯೂಟ್‌ನ ೨೦೦೪ ರ ಸಂಶೋಧನಾ ಸಹೋದ್ಯೋಗಿಯಾಗಿದ್ದರು. ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.[೧೯] ೨೦೦೯ ರಲ್ಲಿ, ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು.[೨೦][೨೧] ಮಿರ್ಜಾಖಾನಿ ರಿಯೆಮನ್ ದೃಶ್ಯಗಳ ಮೊಡ್ಯುಲೈ ಸ್ಪೇಸ್‌ಗಳ ಥಿಯರಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ೨೦೦೪ ರಲ್ಲಿ ಅವರಿಗೆ ಕ್ಲೇ ರಿಸರ್ಚ್ ಫೆಲೋಶಿಪ್ ನೀಡಲಾಯಿತು.

ಫೀಲ್ಡ್ಸ್ ಮೆಡಲ್ ಪ್ರದಾನ

[ಬದಲಾಯಿಸಿ]
೨೦೧೪ ನಲ್ಲಿ ಸಿಯೋಲ್‌ನಲ್ಲಿ ನಡೆದ ಐಸಿಎಮ್(ICM) ನಾಲ್ಕು ಕ್ಷೇತ್ರಗಳ ಪದಕ ವಿಜೇತರು ಎಡದಿಂದ ಬಲಕ್ಕೆ ಆರ್ತುರ್ ಅವಿಲಾ, ಮಾರ್ಟಿನ್ ಹೇರರ್ (ಹಿಂಭಾಗದಲ್ಲಿ), ಮರ್ಯಮ್ ಮಿರ್ಜಾಖಾನಿ (ಅವಳ ಮಗಳೊಂದಿಗೆ) ಮತ್ತು ಮಂಜುಲ್ ಭಾರ್ಗವ

ಡೈನಾಮಿಕ್ಸ್ ಮತ್ತು ರೀಮನ್ ಸರ್‌ಫೇಸ್‌‌ಗಳ ರೇಖಾಗಣಿತ ಹಾಗು ಮಾಡ್ಯೂಲೈ ಸ್ಪೇಸ್‍‌ಗಳಿಗೆ ತಮ್ಮ ಅತ್ಯುತ್ತಮ ಕೊಡುಗೆಗಳಿಗಾಗಿ ಅವರಿಗೆ ಅಂತರಾಷ್ಟ್ರೀಯ ಮ್ಯಾಥಮೆಟಿಕಲ್ ಯೂನಿಯನ್ ಗಣಿತದ ನೊಬೆಲ್ ಪ್ರಶಸ್ತಿ ಎಂದು ಹೇಳುವ 'ಫೀಲ್ಡ್ಸ್' ಪದಕವನ್ನು ೨೦೧೪ ರ ಆಗಸ್ಟ್ ೧೩ ರಂದು ದಕ್ಷಿಣ ಕೊರಿಯಾಸಿಯೋಲ್ ಅಲ್ಲಿ ನಡೆದ ಇಂಟರ್ನ್ಯಾಷನಲ್ ಕಾಂಗ್ರೆಸ್ ಆಫ್ ಮ್ಯಾಥಮೆಟಿಸಿಯನ್ಸ್ ನಲ್ಲಿ ನೀಡಲಾಯಿತು.[೨೨][೨೩]

೨೦೧೪ ರಲ್ಲಿ ಇರಾನ್‌ನ ಅಧ್ಯಕ್ಷ ಹಸನ್ ರೌಹಾನಿ ಅವರು ಮಿರ್ಜಾಖಾನಿ ಅವರು ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಅಭಿನಂದಿಸಿದರು.[೨೪]

ವೈಯಕ್ತಿಕ ಜೀವನ

[ಬದಲಾಯಿಸಿ]

೨೦೦೮ ರಲ್ಲಿ, ಮಿರ್ಜಾಖಾನಿ ಅವರು ಜೆಕ್ ಸೈದ್ಧಾಂತಿಕ ಕಂಪ್ಯೂಟರ್ ವಿಜ್ಞಾನಿ ಮತ್ತು ಪ್ರಸ್ತುತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಅನ್ವಯಿಕ ಗಣಿತಶಾಸ್ತ್ರಜ್ಞ ಜಾನ್ ವೊಂಡ್ರಾಕ್ ಅವರನ್ನು ವಿವಾಹವಾದರು.[೨೫][೨೬] ಮಿರ್ಜಾಖಾನಿ ಮತ್ತು ಜಾನ್ ವೊಂಡ್ರಾಕ್ ಅವರಿಗೆ ಒಬ್ಬ ಮಗಳಿದ್ದಳು.[೨೭] ಮಿರ್ಜಾಖಾನಿ ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೊದಲ್ಲಿ ವಾಸಿಸುತ್ತಿದ್ದರು.[೨೮]

ನಿಧನ ಮತ್ತು ಪರಂಪರೆ

[ಬದಲಾಯಿಸಿ]

೨೦೧೩ ರಲ್ಲಿ ಮಿರ್ಜಾಖಾನಿ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ೨೦೧೬ ರಲ್ಲಿ, ಕ್ಯಾನ್ಸರ್ ಆಕೆಯ ಮೂಳೆಗಳು ಮತ್ತು ಯಕೃತ್ತಿಗೆ ಹರಡಿತು.[೨೯] ಅವರು ೧೪ ಜುಲೈ ೨೦೧೭ ರಂದು ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್‌ನಲ್ಲಿರುವ ಸ್ಟ್ಯಾನ್‌ಫೋರ್ಡ್ ಆಸ್ಪತ್ರೆಯಲ್ಲಿ ತಮ್ಮ ೪೦ ನೇ ವಯಸ್ಸಿನಲ್ಲಿ ನಿಧನರಾದರು.[೩೦]

ಇರಾನ್ ಅಧ್ಯಕ್ಷ ಹಸನ್ ರೌಹಾನಿ ಮತ್ತು ಇತರ ಅಧಿಕಾರಿಗಳು ತಮ್ಮ ಸಂತಾಪ ಸೂಚಿಸಿದರು ಮತ್ತು ಮಿರ್ಜಾಖಾನಿಯ ವೈಜ್ಞಾನಿಕ ಸಾಧನೆಗಳನ್ನು ಶ್ಲಾಘಿಸಿದರು.

ಮಿರ್ಜಾಖಾನಿಯ ಮರಣದ ನಂತರದ ದಿನಗಳಲ್ಲಿ ಹಲವಾರು ಸಂಸ್ಕಾರಗಳು ಮತ್ತು ಶ್ರದ್ಧಾಂಜಲಿಗಳನ್ನು ಪ್ರಕಟಿಸಲಾಯಿತು.[೩೧][೩೨] ಇರಾನಿನ ಗಣಿತಶಾಸ್ತ್ರ ಸೊಸೈಟಿಯೊಳಗೆ ಮಹಿಳಾ ಸಮಿತಿಯು ನಡೆಸಿದ ಸಮರ್ಥನೆಯ ಪರಿಣಾಮವಾಗಿ (ಪರ್ಷಿಯನ್: کمیته بانوان انجمن ریاضی ایران), ಇಂಟರ್ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಮಿರ್ಜಾಖಾನಿ ಅವರ ಜನ್ಮದಿನವನ್ನು ಮೇ ೧೨ ರಂದು ಅಂತಾರಾಷ್ಟ್ರೀಯ ಗಣಿತ ಮಹಿಳೆಯರ ದಿನವಾಗಿ ಘೋಷಿಸಲು ಒಪ್ಪಿಕೊಂಡಿತು.[೩೩][೩೪]

ಇಸ್ಫಹಾನ್ಸ್ ಹೌಸ್ ಆಫ್ ಮ್ಯಾಥಮ್ಯಾಟಿಕ್ಸ್ ಕಾನ್ಫರೆನ್ಸ್ ಹಾಲ್‌‌ಗೆ ಮಿರ್ಜಾಖಾನಿ ಅವರ ಹೆಸರನ್ನು ಇಡಲಾಯಿತು.

೨೦೧೭ ರಲ್ಲಿ, ಮಿರ್ಜಾಖಾನಿ ಈ ಹಿಂದೆ ವ್ಯಾಸಂಗ ಮಾಡುತ್ತಿದ್ದ ಹೈಸ್ಕೂಲ್ ಆದ ಫರ್ಜಾನೆಗನ್ ಹೈಸ್ಕೂಲ್‌ನ ಆಂಫಿಥಿಯೇಟರ್ ಮತ್ತು ಲೈಬ್ರರಿಗೆ ಮಿರ್ಜಾಖಾನಿ ಅವರ ಹೆಸರನ್ನು ಇಡಲಾಯಿತು. ಮಿರ್ಜಾಖಾನಿ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದ ಇನ್ಸ್ಟಿಟ್ಯೂಟ್ ಶರೀಫ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಗಣಿತ ಕಾಲೇಜಿನ ಮುಖ್ಯ ಗ್ರಂಥಾಲಯಕ್ಕೆ ಅವರ ಹೆಸರನ್ನು ಇಡಲಾಗಿದೆ. ಮೇಯರ್‌ನ ಸಹಯೋಗದೊಂದಿಗೆ, ಇಸ್ಫಹಾನ್‌ನಲ್ಲಿರುವ ಹೌಸ್ ಆಫ್ ಮ್ಯಾಥಮ್ಯಾಟಿಕ್ಸ್ ಕಾನ್ಫರೆನ್ಸ್ ಹಾಲ್‌ಗೆ ಅವರ ಹೆಸರನ್ನಿಟ್ಟಿತು.[೩೫]

೨೦೧೪ ರಲ್ಲಿ, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಿರ್ಜಾಖಾನಿ ಸೊಸೈಟಿಯನ್ನು ಸ್ಥಾಪಿಸಿದರು. ಇದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತವನ್ನು ಅಧ್ಯಯನ ಮಾಡುವ ಮಹಿಳೆಯರು ಮತ್ತು ಬೈನರಿ ಅಲ್ಲದ ವಿದ್ಯಾರ್ಥಿಗಳಿಗಾಗಿ ಸೊಸೈಟಿಯಾಗಿದೆ. ೨೦೧೫ ರಲ್ಲಿ ಮಿರ್ಜಾಖಾನಿ ಅವರು ಸೆಪ್ಟೆಂಬರ್ ಆಕ್ಸ್‌ಫರ್ಡ್‌ಗೆ ಭೇಟಿ ನೀಡಿದಾಗ ಈ ಸೊಸೈಟಿಗೆ ಭೇಟಿ ನೀಡಿದ್ದರು.[೩೬]

೨೦೨೨ ರಲ್ಲಿ, ಎಕ್ಸ್‌ಟಿ‌ಎಕ್ಸ್(XTX) ಮಾರುಕಟ್ಟೆಗಳಿಂದ £೨.೪೮m ದೇಣಿಗೆಯನ್ನು ಅನುಸರಿಸಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಮರಿಯಮ್ ಮಿರ್ಜಾಖಾನಿ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಿತು. ಇದು ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಅಧ್ಯಯನವನ್ನು ಮಾಡುತ್ತಿರುವ ಮಹಿಳಾ ಗಣಿತಜ್ಞರಿಗೆ ನೀಡುತ್ತದೆ.[೩೭]

೨೦೧೬ ರಲ್ಲಿ, ಮಿರ್ಜಾಖಾನಿ ಅವರನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (ಯುನೈಟೆಡ್ ಸ್ಟೇಟ್ಸ್) ಸದಸ್ಯರನ್ನಾಗಿ ಮಾಡಲಾಯಿತು. ಮಿರ್ಜಾಖಾನಿ ಅವರು ಅಕಾಡೆಮಿಯ ಸದಸ್ಯರಾಗಿ ಅಧಿಕೃತವಾಗಿ ಅಂಗೀಕರಿಸಲ್ಪಟ್ಟ ಮೊದಲ ಇರಾನಿನ ಮಹಿಳೆ..[೩೮]

೨ ಫೆಬ್ರವರಿ ೨೦೧೮ ರಂದು, ಹೆಚ್ಚಿನ ರೆಸಲ್ಯೂಶನ್ ಭೂ ವೀಕ್ಷಣಾ ಚಿತ್ರಣ ಮತ್ತು ವಿಶ್ಲೇಷಣಾ ಕಂಪನಿಯಾದ ಸ್ಯಾಟೆಲೊಜಿಕ್, ಮಿರ್ಜಾಖಾನಿಯ ಗೌರವಾರ್ಥವಾಗಿ ಹೆಸರಿಸಲಾದ ÑuSat ಮಾದರಿಯ ಮೈಕ್ರೋ-ಉಪಗ್ರಹವನ್ನು ಬಿಡುಗಡೆ ಮಾಡಿತು.[೩೯]

೪ ನವೆಂಬರ್ ೨೦೧೯ ರಂದು, ದಿ ಬ್ರೇಕ್‌ಥ್ರೂ ಪ್ರೈಜ್ ಫೌಂಡೇಶನ್ ಪ್ರತಿ ವರ್ಷ ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಮಹಿಳೆಯರಿಗೆ ನೀಡುವುದಕ್ಕಾಗಿ ಮರ್ಯಮ್ ಮಿರ್ಜಾಖಾನಿ ನ್ಯೂ ಫ್ರಾಂಟಿಯರ್ಸ್ ಪ್ರಶಸ್ತಿಯನ್ನು ರಚಿಸಲಾಗಿದೆ ಎಂದು ಘೋಷಿಸಿತು.

ಫೆಬ್ರವರಿ ೨೦೨೦ ರಲ್ಲಿ, ಎಸ್‌ಟಿ‌ಇ‌ಎಮ್(STEM) ನಲ್ಲಿ ಅಂತರರಾಷ್ಟ್ರೀಯ ಮಹಿಳಾ ಮತ್ತು ಹುಡುಗಿಯರ ದಿನದಂದು ಮಿರ್ಜಾಖಾನಿ ಅವರು ವಿಶ್ವವನ್ನು ರೂಪಿಸಿದ ನಿಧನ ಹೊಂದಿದ ಅಥವಾ ಜೀವಂತವಾಗಿರುವ ಏಳು ಮಹಿಳಾ ವಿಜ್ಞಾನಿಗಳಲ್ಲಿ ಒಬ್ಬರಾಗಿ ಯುಎನ್(UN) ಮಹಿಳೆಯರಿಂದ ಗೌರವಿಸಲ್ಪಟ್ಟರು.[೪೦]

೨೦೨೦ ರಲ್ಲಿ, ಜಾರ್ಜ್ ಸಿಸಿಸೆರಿ ಅವರು ಸೀಕ್ರೆಟ್ಸ್ ಆಫ್ ದಿ ಸರ್ಫೇಸ್: ದಿ ಮ್ಯಾಥೆಮ್ಯಾಟಿಕಲ್ ವಿಷನ್ ಆಫ್ ಮೇರಿಯಮ್ ಮಿರ್ಜಾಖಾನಿ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡರು.[೪೧][೪೨]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
  • ಚಿನ್ನದ ಪದಕ. ಇಂಟರ್ನ್ಯಾಷನಲ್ ಮ್ಯಾಥಮೆಟಿಕಲ್ ಒಲಿಂಪಿಯಾಡ್ (ಹಾಂಗ್ ಕಾಂಗ್ ೧೯೯೪)
  • ಚಿನ್ನದ ಪದಕ. ಇಂಟರ್ನ್ಯಾಷನಲ್ ಮ್ಯಾಥಮೆಟಿಕಲ್ ಒಲಿಂಪಿಯಾಡ್ (ಕೆನಡಾ ೧೯೯೫)
  • ಐಪಿಎಮ್(IPM) ಫೆಲೋಶಿಪ್, ಟೆಹ್ರಾನ್, ಇರಾನ್, ೧೯೯೫–೧೯೯೯
  • ಮೆರಿಟ್ ಫೆಲೋಶಿಪ್ ಹಾರ್ವರ್ಡ್ ವಿಶ್ವವಿದ್ಯಾಲಯ, ೨೦೦೩
  • ಹಾರ್ವರ್ಡ್ ಜೂನಿಯರ್ ಫೆಲೋಶಿಪ್ ಹಾರ್ವರ್ಡ್ ವಿಶ್ವವಿದ್ಯಾಲಯ, ೨೦೦೩
  • ಕ್ಲೇ ಮ್ಯಾಥಮ್ಯಾಟಿಕ್ಸ್ ಇನ್ಸ್ಟಿಟ್ಯೂಟ್ ರಿಸರ್ಚ್ ಫೆಲೋ ೨೦೦೪[೪೩]
  • 'ಪಾಪ್ಯುಲರ್ ಸೈನ್ಸ್' ೨೦೦೫ "ಬ್ರಿಲಿಯಂಟ್ ೧೦",ತಮ್ಮ ಕ್ಷೇತ್ರಗಳನ್ನು ನವೀನ ದಿಕ್ಕುಗಳಲ್ಲಿ ತಳ್ಳಿದ ಟಾಪ್ 10 ಯುವ ಮನಸ್ಸುಗಳಲ್ಲಿ ಒಬ್ಬರು.[೪೪]
  • ಎ‌ಎಮ್‌ಎಸ್(AMS) ಬ್ಲುಮೆಂಟಲ್ ಪ್ರಶಸ್ತಿ ೨೦೦೯[೪೫]
  • ೨೦೧೦ ರಲ್ಲಿ ಇಂಟರ್ನ್ಯಾಷನಲ್ ಕಾಂಗ್ರೆಸ್ ಆಫ್ ಮ್ಯಾಥಮೆಟಿಶಿಯನ್ಸ್‌ನಲ್ಲಿ "ಟೋಪೋಲಜಿ ಮತ್ತು ಡೈನಾಮಿಕಲ್ ಸಿಸ್ಟಮ್ಸ್ & ಒಡಿ‌ಇ(ODE)" ವಿಷಯದ ಕುರಿತು ಮಾತನಾಡಲು ಆಹ್ವಾನಿಸಲಾಗಿದೆ[೪೬]
  • ೨೦೧೩ ಎ‌ಎಮ್‌ಎಸ್(AMS) ಗಣಿತದಲ್ಲಿ ರುತ್ ಲಿಟಲ್ ಸ್ಯಾಟರ್ ಪ್ರಶಸ್ತಿ. "ಅಮೇರಿಕನ್ ಮ್ಯಾಥಮೆಟಿಕಲ್ ಸೊಸೈಟಿಯಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ರಸ್ತುತಪಡಿಸಲಾಗುತ್ತದೆ. ಸ್ಯಾಟರ್ ಪ್ರಶಸ್ತಿಯು ಹಿಂದಿನ ಆರು ವರ್ಷಗಳಲ್ಲಿ ಮಹಿಳೆಯೊಬ್ಬರು ಗಣಿತಶಾಸ್ತ್ರದ ಸಂಶೋಧನೆಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸುತ್ತದೆ. ಬಹುಮಾನವನ್ನು ೧೦ ಜನವರಿ ೨೦೧೩ ರಂದು ಸ್ಯಾನ್ ಡಿಯಾಗೋದಲ್ಲಿ ಜಂಟಿ ಗಣಿತ ಸಭೆಗಳಲ್ಲಿ ನೀಡಲಾಯಿತು."
  • ಸೈಮನ್ಸ್ ಇನ್ವೆಸ್ಟಿಗೇಟರ್ ಅವಾರ್ಡ್ ೨೦೧೩[೪೭]
  • ೨೦೧೪ ರ ನೇಚರ್ ನಿಯತಕಾಲಿಕದ ಹತ್ತು "ಮುಖ್ಯ ವ್ಯಕ್ತಿಗಳಲ್ಲಿ" ಒಬ್ಬರು ಎಂದು ಹೆಸರಿಸಲಾಗಿದೆ[೪೮]
  • ಕ್ಲೇ ರಿಸರ್ಚ್ ಅವಾರ್ಡ್ ೨೦೧೪[೪೯]
  • ಫೀಲ್ಡ್ಸ್ ಮೆಡಲ್ ೨೦೧೪[೫೦]
  • ೨೦೧೪ ರಲ್ಲಿ ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್‌ಗೆ ವಿದೇಶಿ ಸಹವರ್ತಿಯಾಗಿ ಆಯ್ಕೆಯಾದರು[೫೧]
  • ೨೦೧೫ ರಲ್ಲಿ ಅಮೆರಿಕನ್ ಫಿಲಾಸಫಿಕಲ್ ಸೊಸೈಟಿಗೆ ಆಯ್ಕೆ ಮಾಡಲಾಗಿದೆ[೫೨]
  • ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ೨೦೧೬[೫೩]
  • ೨೦೧೭ ರಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್‌ಗೆ ಆಯ್ಕೆಯಾದರು[೫೪]
  • ಕ್ಷುದ್ರಗ್ರಹ ೩೨೧೩೫೭(321357) ಮಿರ್ಜಾಖಾನಿ ಅವರ ನೆನಪಿಗಾಗಿ ಹೆಸರಿಸಲಾಯಿತು. ಅಧಿಕೃತ ಹೆಸರಿಸುವ ಉಲ್ಲೇಖವನ್ನು ಮೈನರ್ ಪ್ಲಾನೆಟ್ ಸೆಂಟರ್ ಪ್ರಕಟಿಸಿದೆ(MPC 108698).
  • ೨೦೨೪ ರಲ್ಲಿ ಅಂತರರಾಷ್ಟ್ರೀಯ ಖಗೋಳ ಒಕ್ಕೂಟ ಅವಳ ಗೌರವಾರ್ಥವಾಗಿ ಚಂದ್ರನ ಕುಳಿಯನ್ನು ಮಿರ್ಜಾಖಾನಿ ಎಂದು ಹೆಸರಿಸಿತು.[೫೫]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ O'Connor, John; Robertson, Edmund (ಆಗಸ್ಟ್ 2017). "Maryam Mirzakhani". MacTutor History of Mathematics Archive (in ಇಂಗ್ಲಿಷ್). Retrieved 3 ಮೇ 2021.
  2. Jonathan, Webb (2014). "First female winner for Fields maths medal". BBC News. Archived from the original on 13 ಆಗಸ್ಟ್ 2014. Retrieved 13 ಆಗಸ್ಟ್ 2014.
  3. وبسایت رسمی مریم میرزاخانی. mmirzakhani.com (in ಪರ್ಶಿಯನ್). Archived from the original on 8 ಸೆಪ್ಟೆಂಬರ್ 2018. Retrieved 6 ಸೆಪ್ಟೆಂಬರ್ 2018.
  4. Mirzakhani, Maryam (2007). "Weil-Petersson volumes and intersection theory on the moduli space of curves" (PDF). Journal of the American Mathematical Society. 20 (1): 1–23. Bibcode:2007JAMS...20....1M. doi:10.1090/S0894-0347-06-00526-1. MR 2257394. Archived (PDF) from the original on 4 ಮಾರ್ಚ್ 2016. Retrieved 2 ಸೆಪ್ಟೆಂಬರ್ 2015.
  5. Mirzakhani, Maryam (ಜನವರಿ 2007). "Simple geodesics and Weil-Petersson volumes of moduli spaces of bordered Riemann surfaces". Inventiones Mathematicae. 167 (1): 179–222. Bibcode:2006InMat.167..179M. doi:10.1007/s00222-006-0013-2. ISSN 1432-1297. S2CID 44008647.
  6. Mirzakhani, Maryam. "Curriculum Vitae" (PDF). Archived from the original (PDF) on 24 ನವೆಂಬರ್ 2005. Retrieved 13 ಆಗಸ್ಟ್ 2014.
  7. "President Rouhani Congratulates Iranian Woman for Winning Math Nobel Prize". Fars News Agency. 14 ಆಗಸ್ಟ್ 2014. Archived from the original on 14 ಆಗಸ್ಟ್ 2014. Retrieved 14 ಆಗಸ್ಟ್ 2014.
  8. "IMU Prizes 2014". International Mathematical Union. Archived from the original on 12 ಆಗಸ್ಟ್ 2014. Retrieved 12 ಆಗಸ್ಟ್ 2014.
  9. Iran correspondent Saeed Kamali Dehghan (16 ಜುಲೈ 2017). "Maryam Mirzakhani: Iranian newspapers break hijab taboo in tributes". The Guardian (in ಬ್ರಿಟಿಷ್ ಇಂಗ್ಲಿಷ್). ISSN 0261-3077. Archived from the original on 18 ಜುಲೈ 2017. Retrieved 18 ಜುಲೈ 2017.
  10. "Maryam Mirzakhani's Pioneering Mathematical Legacy". The New Yorker. 17 ಜುಲೈ 2017. Archived from the original on 17 ಜುಲೈ 2017. Retrieved 18 ಜುಲೈ 2017.
  11. "Why May12?". Celebrating Women in Mathematics (in ಇಂಗ್ಲಿಷ್). Retrieved 3 ಮೇ 2021.
  12. Bridson, Martin (19 ಜುಲೈ 2017). "Maryam Mirzakhani obituary". The Guardian (in ಇಂಗ್ಲಿಷ್). Retrieved 3 ಮೇ 2021.
  13. ೧೩.೦ ೧೩.೧ "ریاضی به درست فکرکردن کمک می‌کند". Donya-e-Eghtesaad. 21 ಆಗಸ್ಟ್ 2014. Archived from the original on 2 ಏಪ್ರಿಲ್ 2019. Retrieved 2 ಡಿಸೆಂಬರ್ 2018.
  14. "The 57th International Mathematical Olympiad Successfully Completed in Hong Kong". PrNewsWire (in ಅಮೆರಿಕನ್ ಇಂಗ್ಲಿಷ್). 15 ಜುಲೈ 2016. Archived from the original on 24 ಜುಲೈ 2016. Retrieved 15 ಜುಲೈ 2016.
  15. "Iranian woman wins maths' top prize". New Scientist. 12 ಆಗಸ್ಟ್ 2014. Archived from the original on 13 ಆಗಸ್ಟ್ 2014. Retrieved 13 ಆಗಸ್ಟ್ 2014.
  16. "بازخوانی یک پرونده کهنه". Sharif University of Technology Newspaper. Archived from the original on 14 ಆಗಸ್ಟ್ 2014. Retrieved 3 ಡಿಸೆಂಬರ್ 2018.
  17. Karamzadeh, Omid Ali Shahni. "آهسته و پیوسته در راهی دشوار". Sharq News. Retrieved 2 ಡಿಸೆಂಬರ್ 2018.
  18. "Maryam Mirzakhani". The Mathematics Genealogy Project. Genealogy.math.ndsu.nodak.edu. Archived from the original on 9 ಮೇ 2016. Retrieved 21 ಅಕ್ಟೋಬರ್ 2017.
  19. ಮರ್ಯಮ್ ಮಿರ್ಜಾಖಾನಿ's publications indexed by the Scopus bibliographic database. (subscription required)
  20. team, I. B. R. (25 ಮೇ 2024). "The Legacy of Maryam Mirzakhani: A Mathematician's Journey". Iran Brands Review (in ಅಮೆರಿಕನ್ ಇಂಗ್ಲಿಷ್). Retrieved 27 ಮೇ 2024.
  21. Juris, Yvonne (16 ಜುಲೈ 2017). "Maryam Mirzakhani, first woman to receive the prestigious Fields Medal, dies at the age of 40 after breast cancer battle". People Magazine. Archived from the original on 16 ಜುಲೈ 2017. Retrieved 16 ಜುಲೈ 2017.
  22. "IMU Prizes 2014 citations". International Mathematical Union. Archived from the original on 12 ಆಗಸ್ಟ್ 2014. Retrieved 12 ಆಗಸ್ಟ್ 2014.
  23. Carey, Bjorn (12 ಆಗಸ್ಟ್ 2014). "Stanford's Maryam Mirzakhani wins Fields Medal". Stanford News. Archived from the original on 13 ಆಗಸ್ಟ್ 2014. Retrieved 13 ಆಗಸ್ಟ್ 2014.
  24. "President hails Prof Mirzakhani, winner of topmost world math prize". Official Site of the President of The Islamic Republic of Iran. 13 ಆಗಸ್ಟ್ 2014. Archived from the original on 19 ಆಗಸ್ಟ್ 2014. Retrieved 19 ಆಗಸ್ಟ್ 2014.
  25. "بیوگرافی مریم میرزاخانی؛ ستاره پرفروغ دنیای ریاضیات [Biography Maryam Mirzakhani; the best-selling star of the world of mathematics]" (in ಪರ್ಶಿಯನ್). Zoomit. 24 ಜುಲೈ 2011. Archived from the original on 20 ಜುಲೈ 2017. Retrieved 19 ಜುಲೈ 2017.
  26. "Jan Vondrák, CV" (PDF). Stanford University. Archived (PDF) from the original on 14 ಆಗಸ್ಟ್ 2014. Retrieved 14 ಜುಲೈ 2017.
  27. "A Tenacious Explorer of Abstract Surfaces" Archived 13 August 2014 ವೇಬ್ಯಾಕ್ ಮೆಷಿನ್ ನಲ್ಲಿ., simonsfoundation.org. Retrieved 13 April 2014.
  28. Putic, George (13 ಆಗಸ್ಟ್ 2014). "Iranian-American Woman Wins Top Mathematics Prize". Voice of America. Archived from the original on 29 ಜುಲೈ 2017. Retrieved 18 ಜುಲೈ 2017.
  29. "Sorrow as Maryam Mirzakhani, the first woman to win mathematics' Fields Medal, dies aged 40". The Telegraph. Agence France-Presse. 15 ಜುಲೈ 2017. Archived from the original on 15 ಜುಲೈ 2017. Retrieved 15 ಜುಲೈ 2017.
  30. "Maryam Mirzakhani died" (in ಪರ್ಶಿಯನ್). Mehr news Agency. 15 ಜುಲೈ 2017. Archived from the original on 17 ಜನವರಿ 2020. Retrieved 23 ಮಾರ್ಚ್ 2020.
  31. "انتخاب روز تولد مریم میرزاخانی بعنوان روز زنان در ریاضیات در جهان". Iranian Students' News Agency. 14 ಆಗಸ್ಟ್ 2018. Archived from the original on 24 ಸೆಪ್ಟೆಂಬರ್ 2018. Retrieved 2 ಡಿಸೆಂಬರ್ 2018.
  32. "22 اردیبهشت ، روز جهانی زنان در ریاضیات". Asemooni. 2018. Archived from the original on 16 ಡಿಸೆಂಬರ್ 2018. Retrieved 2 ಡಿಸೆಂಬರ್ 2018.
  33. "انتخاب روز تولد مریم میرزاخانی بعنوان روز زنان در ریاضیات در جهان". Iranian Students' News Agency. 14 ಆಗಸ್ಟ್ 2018. Archived from the original on 24 ಸೆಪ್ಟೆಂಬರ್ 2018. Retrieved 2 ಡಿಸೆಂಬರ್ 2018.
  34. "22 اردیبهشت ، روز جهانی زنان در ریاضیات". Asemooni. 2018. Archived from the original on 16 ಡಿಸೆಂಬರ್ 2018. Retrieved 2 ಡಿಸೆಂಬರ್ 2018.
  35. The House of Mathematics Committee in Isfahan. "Zجلسه هیئت امنا خانه ریاضیات اصفهان با حضور جناب آقای دکترمهدی جمالی‌نژاد شهردار محترم اصفهان". Math House Isfahan. Retrieved 3 ಡಿಸೆಂಬರ್ 2018.[ಶಾಶ್ವತವಾಗಿ ಮಡಿದ ಕೊಂಡಿ]
  36. "Mirzakhani Society | Oxford". Mirzakhani Society (in ಇಂಗ್ಲಿಷ್). Archived from the original on 3 ಆಗಸ್ಟ್ 2019. Retrieved 3 ಆಗಸ್ಟ್ 2019.
  37. "New Oxford mathematics scholarship enabled by founding and principal donor XTX Markets". University of Oxford. 5 ಡಿಸೆಂಬರ್ 2022.
  38. National Academy of Sciences. "Maryam Mirzakhani". National Academy of Sciences. Archived from the original on 26 ನವೆಂಬರ್ 2018. Retrieved 3 ಡಿಸೆಂಬರ್ 2018.
  39. "China lofts earthquake research craft with cluster of smaller satellites – Spaceflight Now". spaceflightnow.com (in ಅಮೆರಿಕನ್ ಇಂಗ್ಲಿಷ್). Archived from the original on 3 ಫೆಬ್ರವರಿ 2018. Retrieved 4 ಫೆಬ್ರವರಿ 2018.
  40. "Devoted to discovery: seven women scientists who have shaped our world". UN Women (in ಇಂಗ್ಲಿಷ್). 7 ಫೆಬ್ರವರಿ 2020. Retrieved 4 ಜೂನ್ 2020.
  41. Secrets of the Surface: The Mathematical Vision of Maryam Mirzakhani on IMdB
  42. "Secrets of the Surface The Mathematical Vision of Maryam Mirzakhani". YouTube. 24 ಮಾರ್ಚ್ 2022. Retrieved 11 ಸೆಪ್ಟೆಂಬರ್ 2022.
  43. "Interview with Research Fellow Maryam Mirzakhani" (PDF). Oxford University. 2008. Archived (PDF) from the original on 27 ಆಗಸ್ಟ್ 2014. Retrieved 14 ಆಗಸ್ಟ್ 2014.
  44. Newhall, Marissa (13 ಸೆಪ್ಟೆಂಬರ್ 2005). "'Brilliant' minds honored". USA Today. Archived from the original on 18 ಜುಲೈ 2016. Retrieved 2 ಡಿಸೆಂಬರ್ 2018.
  45. American Mathematical Society Archived 12 January 2013 at Archive.is. Retrieved 6 January 2009
  46. "ICM Plenary and Invited Speakers since 1897". International Congress of Mathematicians. Archived from the original on 8 ನವೆಂಬರ್ 2017. Retrieved 13 ಆಗಸ್ಟ್ 2014.
  47. "2013 Simons Investigators Awardees | Simons Foundation". Simonsfoundation.org (in ಅಮೆರಿಕನ್ ಇಂಗ್ಲಿಷ್). Archived from the original on 4 ಆಗಸ್ಟ್ 2017. Retrieved 3 ಆಗಸ್ಟ್ 2017.
  48. Gibney, E.; Leford, H.; Lok, C.; Hayden, E.C.; Cowen, R.; Klarreich, E.; Reardon, S.; Padma, T.V.; Cyranoski, D.; Callaway, E. (18 ಡಿಸೆಂಬರ್ 2014). "Nature's 10 Ten people who mattered this year". Nature. 516 (7531): 311–319. Bibcode:2014Natur.516..311.. doi:10.1038/516311a. PMID 25519114.
  49. "2014 Clay Research Awards – Clay Mathematics Institute". Claymath.org. Archived from the original on 25 ಜುಲೈ 2014. Retrieved 21 ಅಕ್ಟೋಬರ್ 2017.
  50. Larousserie, David (12 ಆಗಸ್ಟ್ 2014). "Médaille Fields de mathématiques : une femme promue pour la première fois". Le Monde (in ಫ್ರೆಂಚ್). Archived from the original on 12 ಆಗಸ್ಟ್ 2014. Retrieved 13 ಆಗಸ್ಟ್ 2014.
  51. "Quinze nouveaux associés étrangers à l'Académie des sciences" (PDF). Institute de France Académie des Sciences. Archived (PDF) from the original on 28 ಜುಲೈ 2017. Retrieved 16 ಜುಲೈ 2017.
  52. Newly Elected, American Philosophical Societ, ಏಪ್ರಿಲ್ 2015, archived from the original on 16 ಆಗಸ್ಟ್ 2015, retrieved 28 ಆಗಸ್ಟ್ 2015
  53. "National Academy of Sciences Members and Foreign Associates Elected". Archived from the original on 6 ಮೇ 2016. Retrieved 5 ಮೇ 2016.
  54. Maryam Mirzakhani elected to American Academy of Arts and Sciences, Department of Mathematics, Stanford University, ಮೇ 2017, archived from the original on 11 ಜೂನ್ 2017, retrieved 6 ಮೇ 2017
  55. "Planetary Names". planetarynames.wr.usgs.gov. Retrieved 5 ಮಾರ್ಚ್ 2024.