ವಿಷಯಕ್ಕೆ ಹೋಗು

ಮಲಾಣಾ

ನಿರ್ದೇಶಾಂಕಗಳು: 32°03′45″N 77°15′37″E / 32.0626008°N 77.2603548°E / 32.0626008; 77.2603548
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಲಾಣಾ
ಹಳ್ಳಿ
ಮಲಾಣಾ is located in Himachal Pradesh
ಮಲಾಣಾ
ಮಲಾಣಾ
Location in Himachal Pradesh, India
ಮಲಾಣಾ is located in India
ಮಲಾಣಾ
ಮಲಾಣಾ
ಮಲಾಣಾ (India)
Coordinates: 32°03′45″N 77°15′37″E / 32.0626008°N 77.2603548°E / 32.0626008; 77.2603548
ದೇಶ ಭಾರತ
ರಾಜ್ಯಹಿಮಾಚಲ ಪ್ರದೇಶ
ಭಾಷೆಗಳು
 • ಅಧಿಕೃತಹಿಂದಿ
Time zoneUTC+5:30 (IST)


ಮಲಾಣಾ ಭಾರತ ದೇಶದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಾಚೀನ ಹಳ್ಳಿ. ಕುಲ್ಲು ಕಣಿವೆಯ ಈಶಾನ್ಯಕ್ಕಿರುವ ಪಾರ್ವತಿ ಕಣಿವೆಯ ಪಕ್ಕದಲ್ಲಿರುವ ಮಲಾಣಾ ನಾಲಾದಲ್ಲಿರುವ ಈ ಏಕಾಂಗಿ ಹಳ್ಳಿಯು, ಬಾಹ್ಯ ಜಗತ್ತಿನಿಂದ ಪ್ರತ್ಯೇಕಿಸಲ್ಪಟ್ಟಿದೆ. ಚಂದ್ರಕಣಿ ಮತ್ತು ಡಿಯೋಟಿಬ್ಬ ಶಿಖರಗಳ ನೆರಳು ಈ ಹಳ್ಳಿಯನ್ನು ಆವರಿಸಿಕೋಂಡಿದೆ. ಧಾರಾಕಾರವಾಗಿ ಹರಿಯುವ ಮಲಾಣಾ ನದಿಯ ದೂರಸ್ಥ ಪ್ರಸ್ಥಭೂಮಿಯಲ್ಲಿ ನೆಲೆಸಿರುವ ಈ ಹಳ್ಳಿಯು ಸಮುದ್ರ ಮಟ್ಟದಿಂದ 2,652 metres (8,701 ft) ಎತ್ತರದಲ್ಲಿದೆ. ತನ್ನದೆಯಾದ ಜೀವನಶೈಲಿ ಮತ್ತು ಸಾಮಾಜಿಕ ರಚನೆ ಹೊಂದಿರುವ ಮಲಾಣಾದ ಜನರು ತಮ್ಮ ಸಂಪ್ರಾದಾಯವನ್ನು ಕಠಿಣವಾಗಿ ಪಾಲಿಸುತ್ತಾರೆ. ಮಲಾಣಾ ಹಳ್ಳಿಯು Malana: Globalization of a Himalayan Village,[] ಮತ್ತು Malana, A Lost Identity.[] ಮುಂತಾದ ಹಲವಾರು ಸಾಕ್ಷ್ಯಚಿತ್ರಗಳ ಭಾಗವಾಗಿದೆ. ೧೯೬೧ರ ಜನಗಣತಿಯ ಪ್ರಕಾರ ಮಲಾಣಾ ಹಳ್ಳಿಯ ಸಂಪ್ರದಾಯಕ ಭಾಷೆ ಕನಶಿಯನ್ನು ಮಾತನಾಡುವವರ ಸಂಖ್ಯೆ ೫೬೩, ಆದರೆ ಇತ್ತಿಚಿನ ದಿನಗಳಲ್ಲಿ ಮಲಾಣಾದ ಒಟ್ಟು ಜನಸಂಖ್ಯೆ ೪೦ ವರ್ಷದಲ್ಲಿ ೩ ಪಟ್ಟು ಹೆಚ್ಚಿದೆ.

ದೇವಾಲಯಗಳು

[ಬದಲಾಯಿಸಿ]

ಈ ಹಳ್ಳಿಯಲ್ಲಿ ಹಲವಾರು ಪ್ರಾಚೀನ ದೇವಾಲಯಗಳು ಇವೆ. (೧) ಜಮ್ಲು ದೇವಾಲಯ,ಕಥ್ಕುನಿ ಶೈಲಿಯಲ್ಲಿ ನಿರ್ಮಾಣಾವಾಗಿದೆ (೨) ರುಕ್ಮಿನಿ ದೇವಾಲಯ.

ಮಲಾಣಾ ಕ್ರೀಮ್

[ಬದಲಾಯಿಸಿ]

ಇದು ಬಹುತೇಕ ತೆರೆದ ರಹಸ್ಯವಾಗಿದ್ದು ಮಲಾಣಾ ಹಳ್ಳಿಯು ಈ ರಹಸ್ಯಕ್ಕೆ ಪ್ರಸಿದ್ದಿಯಾಗಿದೆ. ಮಲಾಣಾ ಹಳ್ಳಿಯು ಮಲಾಣಾ ಕ್ರೀಮ್ಗೆ ಪ್ರಸಿದ್ದಿಯಾಗಿದೆ. ಜಗತ್ತಿನೆಲ್ಲೆಡಿ ದೊರಕುವ ಹ್ಯಾಶ್ ಗಳಲ್ಲಿ ಮಲಾಣಾ ಕ್ರೀಮ್ ಅತ್ಯುತ್ತಮವಾದದ್ದು.

ಉಲ್ಲೇಖನಗಳು

[ಬದಲಾಯಿಸಿ]
  1. "Malana: Globalization of a Himalayan Village, 2010". Archived from the original on 2010-06-28. Retrieved 2017-05-16.
  2. Malana, A Lost Identity


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಮಲಾಣಾ&oldid=1061619" ಇಂದ ಪಡೆಯಲ್ಪಟ್ಟಿದೆ