ವಿಷಯಕ್ಕೆ ಹೋಗು

ಮಲೈ ಮಹದೇಶ್ವರ ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಲೈ ಮಹದೇಶ್ವರ ಬೆಟ್ಟ
ಮಲೈ ಮಹದೇಶ್ವರ ಬೆಟ್ಟ / ಮಲೆ ಮಹದೇಶ್ವರ ಬೆಟ್ಟ
ಶ್ರೀ ಮಲೆ ಮಹದೇಶ್ವರ ಸ್ವಾಮಿ ದಕ್ಷಿಣ ದ್ವಾರ ಹನೂರು ಕ್ಷೇತ್ರ
town
Websitewww.mmhills.com
ಮಹದೇಶ್ವರ ಸ್ವಾಮಿ ದೇವಾಲಯ
ಶ್ರೀ ಮಲೆ ಮಹದೇಶ್ವರ - ಮುಖ ಪಶ್ಚಿಮ ದ್ವಾರ
ಶ್ರೀ ಮಲೆ ಮಹದೇಶ್ವರ ಬೆಟ್ಟ - ತಾಳಬೆಟ್ಟ.
ಶ್ರೀ ಮಲೆ ಮಹದೇಶ್ವರ - ಗರ್ಭಗುಡಿ
ಶ್ರೀ ಮಲೆ ಮಹದೇಶ್ವರ - ದಕ್ಷಿಣ ದ್ವಾರ

ಮಹದೇಶ್ವರ ಬೆಟ್ಟ ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟ ಸಾಲುಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಹಬ್ಬಿರುವ ಮಹದೇಶ್ವರ ಬೆಟ್ಟ ದಖನ್ ಪ್ರಸ್ಥಭೂಮಿಯ ಬಹುಮುಖ್ಯ ಭಾಗವೂ ಕೂಡ.

ಹೋಗುವ ಮಾರ್ಗ

[ಬದಲಾಯಿಸಿ]

ಮೈಸೂರಿನಿಂದ ೧೫೦ ಕಿ ಮೀ ಹಾಗೂ ರಾಜಧಾನಿ ಬೆಂಗಳೂರಿನಿಂದ ೨೧೦ ಕಿ ಮೀ ದೂರವಿದೆ ಈ ಮಹದೇಶ್ವರ ಬೆಟ್ಟ. ಹಾಲುಮತ ಸಮುದಾಯಕ್ಕೆ ಮಹದೇಶ್ವರ ದೇವಸ್ಥಾನ ಮುಖ್ಯವಾದ ಭಕ್ತಿಕೇಂದ್ರವಾಗಿದೆ ಹಾಗೂ ಶಿವನ ಆರಾಧಾನಾ ಕೇಂದ್ರವೂ ಕೂಡ ಆಗಿದೆ. ಪ್ರತೀ ವರ್ಷ ಕರ್ನಾಟಕ ಹಾಗೂ ತಮಿಳುನಾಡಿನ ಲಕ್ಷಾಂತರ ಭಕ್ತರನ್ನು ಮಹದೇಶ್ವರ ಬೆಟ್ಟ ಸೆಳೆಯುತ್ತದೆ. ದೇವಸ್ಥಾನ ಪ್ರಾಂಗಣ ಹಾಗೂ ಸಮುಚ್ಚಯಗಳು ಸೇರಿ ಸುಮಾರು ೧೫೦ ಎಕರೆಗಳಷ್ಟು ಪ್ರದೇಶ ವ್ಯಾಪಿಸಿಕೊಂಡಿದೆ. ಅದರ ಜೊತೆಗೆ ತಾಳು ಬೆಟ್ಟ, ಹಳೆಯೂರು, ಇಂಡಿಗನಾಥ ಗ್ರಾಮಗಳಲ್ಲಿ ದೇವಸ್ಥಾನಕ್ಕೆ ಸೇರಿದ ಜಾಗಗಳಿವೆ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ ಎತ್ತರದಲ್ಲಿರುವ ಮಹದೇಶ್ವರ ಬೆಟ್ಟ ದಟ್ಟವಾದ ಕಾಡುಗಳಿಂದ ಸುತ್ತುವರಿದಿದೆ, ಹಾಗಿದ್ದಾಗ್ಯೂ ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತಿರುವುದು ವಿಶೇಷವಾಗಿದೆ.

ಪರಿಚಯ

[ಬದಲಾಯಿಸಿ]
  • ಶ್ರೀ ಮಲೈ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ತಮ್ಮಡಿಗಳು ಇಲ್ಲಿನ ಪೂಜಾರಿಗಳಾಗಿರುವರು ಹಾಗೂ ಇಲ್ಲಿನ ಎಣ್ಣೆಮಜ್ಜನ ಸೇವೆ ತುಂಬಾ ಪ್ರಮುಖವಾದದ್ದು. ಈ ಎಣ್ಣೆಮಜ್ಜನ ಸೇವೆಯನ್ನು ಹಿಂದೆ ಉಪ್ಪಾರ ಶೆಟ್ಟರಾದ ಶ್ರೀ ಸರಗೂರು ಮೂಗಪ್ಪನವರು ಮಾಡುತ್ತಿದ್ದರು. ಮಹದೇಶ್ವರ ಬೆಟ್ಟದ ಈಗಿನ ದೇವಸ್ಥಾನವನ್ನು ಹಾಲುಮತಸ್ಥ ಕುರುಬಗೌಡರಾದ ಆಲಾಂಬಾಡಿ ಪಾಳೇಗಾರರಾದಜುಂಜೇ ಗೌಡ ಶ್ರೀಮಂತ ಕುರುಬ ಗೌಡರು ಕಟ್ಟಿಸಿದ್ದಾರೆ, ಮಹದೇಶ್ವರರು ಸುಮಾರು ಹದಿನೈದನೇ ಶತಮಾನದಲ್ಲಿ (?) ಬಾಳಿದ್ದ ಸಂತ ಶರಣರಾಗಿದ್ದು ಅವರನ್ನು ಶಿವ ಸ್ವರೂಪಿ ಹಾಗೂ ಶಿವನ ಅವತಾರವೆಂದೇ ನಂಬಲಾಗಿದೆ.
  • ಸುಮಾರು ಆರುನೂರು ವರ್ಷಗಳ(?) ಹಿಂದೆ ಮಹದೇಶ್ವರರು ಈ ಸ್ಥಳಕ್ಕೆ ತಪಸ್ಸು ಮಾಡಲು ಬಂದರು ಹಾಗೂ ಈಗಲೂ ದೇವಸ್ಥಾನದ ಗರ್ಭಗುಡಿಯಲ್ಲಿ ಲಿಂಗರೂಪಿಯಾಗಿದ್ದುಕೊಂಡೇ ತಮ್ಮ ತಪಸ್ಸನ್ನು ಮುಂದುವರೆಸಿದ್ದಾರೆ ಎನ್ನುವುದು ಭಕ್ತರ ನಂಬಿಕೆ. ದೇವಸ್ಥಾನದ ಗರ್ಭಗುಡಿಯೊಳಗಿನ ಲಿಂಗ ಯಾರಿಂದಲೂ ರಚನೆಯಾಗಿದ್ದಲ್ಲ, ಬದಲಾಗಿ ಸ್ವಯಂಭು ಅಥವಾ ತಾನಾಗೇ ಉಧ್ಭವವಾಗಿರುವಂತಹುದು.
  • ಮಲೆ ಮಹದೇಶ್ವರರು ಹುಲಿಯನ್ನೇ ತಮ್ಮ ವಾಹನವನ್ನಾಗಿ ಮಾಡಿಕೊಂಡು ಅದರ ಮೇಲೆ ಕುಳಿತು ಬೆಟ್ಟಗಳನ್ನು ಸುತ್ತುತ್ತ ಆರ್ತ ಭಕ್ತರಿಗೆ ದಾರಿಯಾಗಿ ಸಂತರು ಶರಣರುಗಳನ್ನು ರಕ್ಷಿಸುತ್ತಿದ್ದ ವಿಚಾರಗಳು ಇತಿಹಾಸ ಹಾಗೂ ಜಾನಪದ ಗಾಯನಗಳಿಂದ ತಿಳಿದುಬರುತ್ತದೆ. ಆದರಿಂದ ಮಹದೇಶ್ವರರನ್ನು ಹುಲಿವಾಹನ ಮಹದೇಶ್ವರ ಎಂದೂ ಭಕ್ತವರ್ಗ ಸಂಭೋದಿಸುವುದುಂಟು. ಮಹದೇಶ್ವರ ಬೆಟ್ಟದಲ್ಲಿ ಈಗಲೂ ಹುಲಿವಾಹನ ಮಹದೇಶ್ವರ ಮೆರವಣಿಗೆ ಮೂರ್ತಿಯಿದೆ.
  • ವಿಶೇಷ ಸಂಧರ್ಭಗಳಲ್ಲಿ ಹುಲಿವಾಹನ ಅಲಂಕಾರವಿರುತ್ತದೆ. ಕನ್ನಡದ ಜಾನಪದ ಲೋಕದಲ್ಲಿ ಮಹದೇಶ್ವರ ಭಕ್ತಿಗೀತೆಗಳಿಗೆ ವಿಶಿಷ್ಟ ಸ್ಥಾನವಿದೆ, ಜಾನಪದ ಕಲಾವಿದರು ಅವುಗಳನ್ನು ಮಹದೇಶ್ವರ ಗೀತೆಗಳೆಂತಲೇ ಕರೆಯುತ್ತಾರೆ. ಹಾಗಾಗಿ ಮಹದೇಶ್ವರ ಭಕ್ತರಿಂದ ಕನ್ನಡ ಜಾನಪದ ಲೋಕಕ್ಕೆ ವಿಶಿಷ್ಟ ಕೊಡುಗೆಯೊಂದು ದೊರಕಿದಂತಾಗಿದೆ. ಎಲ್ಲ ಜಾನಪದ ಗೀತೆಯ ಪೈಕಿ "ಚೆಲ್ಲಿದರು ಮಲ್ಲಿಗೆಯಾ..." ಬಹಳ ಪ್ರಸಿದ್ಧಿ ಪಡೆದುಕೊಂಡಿದೆ.

ಮಹದೇಶ್ವರ ಸ್ವಾಮಿಯ ಜನ್ಮ ವೃತ್ತಾಂತ

[ಬದಲಾಯಿಸಿ]
  • ಮಹದೇಶ್ವರ ಹುಟ್ಟಿ ಬೆಳೆದ ಸಾಲು ಜಾನಪದ ಕಥೆಯ ಅನುಸಾರ ಮಹದೇಶ್ವರರ ಪಾಲಕರು ಶ್ರೀ ಚಂದ್ರಶೇಖರ ಮೂರ್ತಿ ಹಾಗೂ ಉತ್ತರಾಜಮ್ಮ ಎಂಬ ದಂಪತಿಗಳು. ಅವರು ಮೂಲತಃ ಆದಿಜಾಂಬವ (ಮಾದಿಗ) ಕುಲದವರು .ಮಹದೇಶ್ವರರು ಮೊದಲ ಬಾರಿಗೆ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಯಲ್ಲಿ ಅದಾದ ನಂತರ ಸುತ್ತೂರು,ಕುಂತೂರು ಮಠಗಳ ಮಾರ್ಗವಾಗಿ ಈಗಿನ ಮಹದೇಶ್ವರ ದೇವಸ್ಥಾನದ ಪ್ರದೇಶಕ್ಕೆ ಬಂದು ತಮ್ಮ ವಾಸಯೋಗ್ಯ ಸ್ಥಳ ಅದೇ ಎಂದು ತೀರ್ಮಾನಿಸಿ ಅಲ್ಲಿ ಬೀಡು ಬಿಟ್ಟರಂತೆ. * ಬಾಲ ಯೋಗಿ ಮಹದೇಶ್ವರರು ಬೆಟ್ಟದಲ್ಲಿ ಸಿಕ್ಕ ಹುಲಿಯನ್ನೇ ವಾಹನವನ್ನಾಗಿ ಮಾಡಿಕೊಂಡು ಬೆಟ್ಟಗಳನ್ನು ಸುತ್ತುತ್ತಾ ಭಕ್ತರನ್ನು ಸಲಹುತ್ತಿದ್ದುದು ಜಾನಪದ ಕಾವ್ಯಗಳಿಂದ ವೇದ್ಯವಾಗಿದೆ. ಲೋಕಕಲ್ಯಾಣಾರ್ಥ ದೇಶ ಸಂಚಾರ ಮಾಡಿ, ಹಲವರ ಸಂಕಷ್ಟ ಪರಿಹರಿಸಿದ ಪವಾಡಪುರುಷ ಮಹದೇಶ್ವರರು ಹರದನಹಳ್ಳಿ ಮಠದ ಮೂರನೇ ಮಠಾಧೀಶರಾಗಿದ್ದರೆಂದೂ ತಿಳಿದುಬರುತ್ತದೆ.
  • ವೈಜ್ಞಾನಿಕವಾಗಿ ಹಾಗು ಭೂಗೋಳಿಕವಾಗಿ ಗಮನಿಸಿದಾಗ ಈ ಸ್ಥಳ ದಟ್ಟ ಕಾಡುಗಳಿಂದ ಆವೃತ್ತವಾಗಿದ್ದು ವಾಸಯೋಗ್ಯವಲ್ಲ. ವಿಪರೀತ ಕಾಡು ಪ್ರಾಣಿಗಳ ಹಾವಳಿಯಿರುವ ಈ ಪ್ರದೇಶದಲ್ಲಿ ಶತಮಾನದ ಹಿಂದೆ ಅನೇಕ ಸಂತರು, ಯೋಗಿಗಳು ತಪಸ್ಸು ಮಾಡಲು ಬೀಡು ಬಿಡುತ್ತಿದ್ದರೆನ್ನಲಾಗಿದೆ. ಮನುಷ್ಯರಿಲ್ಲದ ದಟ್ಟ ಕಾಡು ಅದಾಗಿದ್ದರಿಂದ ಅದು ತಪಸ್ಸಿಗೆ ಯೋಗ್ಯವಾದ ಸ್ಥಳವೆಂದು ದೇಶದ ಅನೇಕ ಯೋಗಿಗಳು ಅಲ್ಲಿ ತಪಸ್ಸಿಗೆಂದು ನೆಲೆಸಿರುತ್ತಾರೆ.
  • ಆದರೆ ಅದೇ ಸ್ಥಳದಲ್ಲಿ ವಾಸವಾಗಿದ್ದ ಮಾಯಾ ವಿದ್ಯೆಗಳನ್ನು ತಂತ್ರವಿದ್ಯೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ 'ಶ್ರವಣ' ಎಂಬ ರಾಕ್ಷಸ. ತಪಸ್ಸಿನಲ್ಲಿ ತೊಡಗಿಕೊಂಡಿದ್ದ ಸಾಧು ಸಂತರಿಗೆ ತನ್ನ ಮಾಯಾ ಶಕ್ತಿಗಳನ್ನು ಉಪಯೋಗಿಸಿ ತೊಂದರೆ ಮಾಡಿ ಅವರ ತಪಸ್ಸಿಗೆ ಭಂಗವುಂಟು ಮಾಡುತ್ತಿದ್ದುದೇ ಅವನ ಕಾಯಕ.
  • ಮಹದೇಶ್ವರರು ಶ್ರವಣನಿಗೆ ಎದುರಾಗಿ ಆತನ ಮಾಯಾ ತಂತ್ರವಿದ್ಯೆಗಳನ್ನೆಲ್ಲ ನಾಶ ಮಾಡಿ, ಆತನ ವಶದಲ್ಲಿದ್ದ ಸಾಧು ಸನ್ಯಾಸಿಗಳನ್ನು ಸ್ವತಂತ್ರ್ಯಗೊಳಿಸಿದರು ಎನ್ನುವುದು ಜಾನಪದ ಕಾವ್ಯಗಳಿಂದ ತಿಳಿದುಬರುವ ವಿಷಯವಾಗಿದೆ. ಶ್ರವಣನ ಕಪಿಮುಷ್ಠಿಯಲ್ಲಿ ಬಂಧಿಯಾಗಿ ದಿನ ಕಳೆದಿದ್ದ ಅಸಂಖ್ಯಾತ ಮುನಿಗಳಿದ್ದ ಸ್ಥಳವೇ ಇಂದು 'ತಾವಸೆರೆ'ಯಾಗಿದೆ. ರಾಕ್ಷಸ ಶ್ರವಣ ಬದುಕಿದ್ದ ಜಾಗವನ್ನು 'ಶ್ರವಣ ಬೋಲಿ' ಎಂದು ಕರೆಯಲಾಗುತ್ತಿದೆ.
  • ಮಹದೇಶ್ವರರು ಈಗಿನ ಮಹದೇಶ್ವರ ದೇವಸ್ಥಾನವನ್ನು ಹಾಲುಮತದ ಕುರುಬಗೌಡ ಜನಾಂಗದ ಸಾವುಕಾರ ಶ್ರೀ ಜುಂಜೇಗೌಡರು ಕಟ್ಟಿಸಿದ್ದಾರೆ.ಮತ್ತು ಇದೆ ಪ್ರದೇಶದಲ್ಲೂ ಮಠವೊಂದನ್ನು ಸ್ಥಾಪಿಸಿದ್ದುದಾಗಿ ಇತಿಹಾಸದಿಂದ ತಿಳಿದುಬರುತ್ತದೆ. ಅಲ್ಲಿನ ಜನರನ್ನು, ಪ್ರಮುಖವಾಗಿ ಆದಿವಾಸಿ, ಗಿರಿಜನಗಳನ್ನು ಸುಶಿಕ್ಷಿತ, ಸಭ್ಯ ಜನಗಳನ್ನಾಗಿ ಪರಿವರ್ತಿಸುವಂತಹ ಕಾರ್ಯಗಳಿಗಾಗಿ ಮಠ ಸ್ಥಾಪಿಸಿದ್ದರು ಎನ್ನುವುದು ಮಹದೇಶ್ವರರ ಲೋಕ ಕಲ್ಯಾಣಾರ್ಥ ಸೇವೆಯಲ್ಲಿ ಬಹುಮುಖ್ಯವಾದದ್ದು.
  • ಮಹದೇಶ್ವರರ ಕಥಾನಕದಂತೆ ಅಲ್ಲಿನ ಏಳು ಮಲೆ(ಬೆಟ್ಟ)ಗಳನ್ನು ವಿವಿಧ ಜಾನಪದ ಹೆಸರುಗಳಿಂದ ಕರೆಯಲಾಗುತ್ತದೆ. ೭೭ ಬೆಟ್ಟಗಳಲ್ಲಿ- ಆನೆಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಪವಳಮಲೆ, ಪೊನ್ನಾಚಿಮಲೆ,ರುದ್ರಾಕ್ಷಿ ಮಲೆ,ವಿಭೂತಿಮಲೆ, ಕೊಂಗುಮಲೆ ಬೆಟ್ಟಗಳಿಂದ ಸುತ್ತುವರೆದ ಸಂಪೂರ್ಣ ಪ್ರದೇಶವನ್ನು ಮಹದೇಶ್ವರ ಬೆಟ್ಟ ಎಂದು ಕರೆಯಲಾಗುತ್ತದೆ.

ಮಹದೇಶ್ವರರ ಭಕ್ತ ಸಂಕುಲ

[ಬದಲಾಯಿಸಿ]
  • ಶ್ರೀ ಮಹದೇಶ್ವರ ಸ್ವಾಮಿಯ ಭಕ್ತಾದಿಗಳು ಹಳೆ ಮೈಸೂರು ಪ್ರಾಂತ್ಯದಲ್ಲಿ ಹೇರಳವಾಗಿದ್ದಾರೆ. ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರಬೆಂಗಳೂರು ತುಮಕೂರು ಪ್ರದೇಶಗಳ ಹಲವಾರು ದಲಿತರು, ಹಾಲುಮತ,ಉಪ್ಪಾರ ,ಕುರುಬಗೌಡರು,ಲಿಂಗಾಯಿತ,ಗಾಣಿಗ ಕುಲದವರು,ನಾಯಕ,ಒಕ್ಕಲಿಗ/ವಕ್ಕಲಿಗ,ವನ್ನಿಯಾರ್ ಕುಲ, ಕ್ಷತ್ರಿಯ ಗೌಂಡರ್, ಶೆಟ್ಟರ, ಕುರುಬ ಗೌಡರ (ಹಾಲಮತ ಗೌಡರು ), ಭೋವಿಜನಾಂಗ, ಮಹದೇಶ್ವರ ಬೆಟ್ಟ ಸುತ್ತಮುತ್ತಲ ಗಿರಿಜನರ, ಸೋಲಿಗರ, ಹಾಗೂ ಇತರ ಹಲವು ವಂಶಗಳ ಮನೆತನಗಳ ಕುಲದೈವ/ಮನೆದೇವರು ಮಹದೇಶ್ವರಸ್ವಾಮಿ.
  • ೧೯೫೩ರ ವರೆವಿಗೂ ಮಹದೇಶ್ವರ ದೇವಸ್ಥಾನದ ಆಡಳಿತ ಅವರೇ ಸ್ಥಾಪಿಸಿದ್ದ ಸಾಲೂರು ಮಠದ ಅಧೀನದಲ್ಲಿತ್ತು. ಆದರೆ ೧೯೫೩ರಲ್ಲಿ ಮದ್ರಾಸ್ ಸರ್ಕಾರಕ್ಕೆ ದೇವಸ್ಥಾನದ ಆಡಳಿತ ಹಸ್ತಾಂತರವಾಗಿತ್ತು. ಮುಂದೆ ೧೯೫೬ರಲ್ಲಿ ಭಾಷಾವಾರು ಪ್ರಾಂತ ವಿಂಗಡಣೆಯಾಗಿ ಚಾಮರಾಜನಗರ ಜಿಲ್ಲೆ ಪೂರ್ತಿ ಕರ್ನಾಟಕಕ್ಕೆ ಸೇರಿದ ಪರಿಣಾಮ ಮದ್ರಾಸ್ ಸರ್ಕಾರದ ಸಂಪರ್ಕ ಕಡಿತಗೊಂಡಿತು ಹಾಗು ಆಡಳಿತ ಕರ್ನಾಟಕ ಸರ್ಕಾರದ ಸುಪರ್ದಿಯ ಮುಜರಾಯಿ ಇಲಾಖೆಗೆ ಹಸ್ತಾಂತರವಾಯಿತು.