ಮಹಿಳಾ ಮೀಸಲಾತಿ ಮಸೂದೆ
ಮಹಿಳಾ ಮೀಸಲಾತಿ ಮಸೂದೆ | |
---|---|
![]() | |
ಮಂಡನೆ | Parliament of India |
Bill | ಮೂಲ |
ಭಾರತದ ಸಂವಿಧಾನ ಸರಣಿಯ ಭಾಗ |
---|
![]() |
ಪೀಠಿಕೆ |
ಮಹಿಳಾ ಮೀಸಲಾತಿ ಮಸೂದೆ ಅಥವಾ ಸಂವಿಧಾನನ108 ನೇ ತಿದ್ದುಪಡಿ ಮಸೂದೆ 9 ಮಾರ್ಚ್ 2010ರಲ್ಲಿ ಭಾರತದ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಮಸೂದೆ. ಇದು ಭಾರತದ ಸಂಸತ್ತಿನ ಕೆಳಮನೆಯಲ್ಲಿ, ಲೋಕಸಭೆಯಲ್ಲಿ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಕಾಯ್ದಿರಿಸಲು ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡುವಂತೆ ತಿಳಿಸುತ್ತದೆ.[೧]. ಈ ಸ್ಥಾನಗಳನ್ನು ಸರದಿ ಸಾಲಿನಲ್ಲಿ(ರೊಟೇಷನ್ ಬೇಸಿಸ್) ಕಾಯ್ದಿರಿಸಲು ಪ್ರಸ್ತಾಪಿಸಲಾಗಿತ್ತು ಮತ್ತು ಸತತ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಒಂದು ಬಾರಿ ಮಾತ್ರ ಸ್ಥಾನವನ್ನು ಕಾಯ್ದಿರಿಸುವ ರೀತಿಯಲ್ಲಿ ಡ್ರಾ ಮೂಲಕ ನಿರ್ಧರಿಸಲಾಗುತ್ತಿತ್ತು.[೨]
ರಾಜ್ಯಸಭೆಯು 2010ರ ಮಾರ್ಚ್ 9ರಂದು ಮಸೂದೆಯನ್ನು ಅಂಗೀಕರಿಸಿತು. ಲೋಕಸಭೆಯು ಈ ಮಸೂದೆಯ ಮೇಲೆ ಮತ ಚಲಾಯಿಸಲಿಲ್ಲ[೩][೪]. ಈ ಮಸೂದೆಯು ಲೋಕಸಭೆಯಲ್ಲಿ ಬಾಕಿ ಉಳಿದಿರುವ ಸ್ಥಾನಮಾನವನ್ನು ಹೊಂದಿದ್ದರಿಂದ ಅದು 2014 ಮತ್ತು 2019ರಲ್ಲಿ ಎರಡು ಬಾರಿ ಅವಧಿ ಮೀರಿತು.[೫][೬]
ಇದಕ್ಕೆ ಪರ್ಯಾಯವಾದ ಮತ್ತೊಂದು ಮಸೂದೆಯನ್ನು ಲೋಕಸಭೆಯು 20 ಸೆಪ್ಟೆಂಬರ್ 2023 ರಂದು 454 ಮತಗಳು ಪರವಾಗಿ ಮತ್ತು ಎರಡು ವಿರುದ್ಧವಾಗಿ ಅಂಗೀಕರಿಸಿತು. ನಂತರ ಅದನ್ನೇ ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. 21 ಸೆಪ್ಟೆಂಬರ್ ೨೦೨೩ ರ ಹೊತ್ತಿಗೆ ಈ ಮಸೂದೆಯು ಅಧ್ಯಕ್ಷೀಯ ಒಪ್ಪಿಗೆಗಾಗಿ ಬಾಕಿ ಇತ್ತು. ಅಧ್ಯಕ್ಷ ದ್ರೌಪದಿ ಮುರ್ಮು ಅವರು 28 ಸೆಪ್ಟೆಂಬರ್ 2023 ರಂದು ಮಸೂದೆಗೆ ಸಹಿ ಹಾಕಿದರು ಮತ್ತು ಅದೇ ದಿನ ಗೆಜೆಟ್ ಅಧಿಸೂಚನೆಯನ್ನು ಸಹ ಪ್ರಕಟಿಸಲಾಯಿತು. ಇದು ಮೊದಲ ಡಿಲಿಮಿಟೇಶನ್ (2026 ರವರೆಗೆ ಸ್ಥಗಿತಗೊಂಡಿದೆ) ನಂತರ ಶೀಘ್ರದಲ್ಲೇ ಮೀಸಲಾತಿ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿತು.
ಸ್ಥಾಯಿ ಸಮಿತಿ ಶಿಫಾರಸು
[ಬದಲಾಯಿಸಿ]ಮೂಲತಃ ಮಸೂದೆಯು ಎಲ್ಲಾ ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಪ್ರಸ್ತಾಪಿಸಿತು.[೭] ಆದರೆ ಸ್ಥಾಯಿ ಸಮಿತಿಯು ಕೇಂದ್ರದಲ್ಲಿ 'ಹೌಸ್ ಆಫ್ ಪೀಪಲ್ಸ್' ಎಂದು ಪ್ರಖ್ಯಾತವಾಗಿರುವ ಲೋಕಸಭೆಯಲ್ಲಿ ಮತ್ತು ಶಾಸಕಾಂಗವನ್ನು ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೀಸಲಾತಿಯನ್ನು ಬಳಸಬೇಕು ಎಂಬ ಸಲಹೆ ನೀಡಿತು. ಈ ಶಿಫಾರಸನ್ನು ಸರ್ಕಾರವು ಅಂಗೀಕರಿಸಿ ಮಸೂದೆಯಲ್ಲಿ ಸೇರಿಸಿತು.
ಮಹಿಳಾ ಮೀಸಲಾತಿ ಮಸೂದೆಗಳ ಇತಿಹಾಸ
[ಬದಲಾಯಿಸಿ]1987ರಲ್ಲಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಸರ್ಕಾರವು ಮಹಿಳೆಯರ ಸ್ಥಾನಮಾನವನ್ನು ಸುಧಾರಿಸಲು ಶಿಫಾರಸುಗಳನ್ನು ನೀಡಲು ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ನೇತೃತ್ವದಲ್ಲಿ 14 ಸದಸ್ಯರ ಸಮಿತಿಯನ್ನು ರಚಿಸಿತು. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಲು ರಾಜೀವ್ ಗಾಂಧಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಈ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು ಆದರೆ 1989ರ ಸೆಪ್ಟೆಂಬರ್ನಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲು ವಿಫಲವಾಯಿತು. 1992 ರಲ್ಲಿ ಪ್ರಧಾನಿ ಪಿ. ವಿ. ನರಸಿಂಹ ರಾವ್ ಅವರ ಸರ್ಕಾರವು 73 ನೇ ಮತ್ತು 74 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸಿತು. ಇದು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 33,3% ಮೀಸಲಾತಿಯನ್ನು ಕಡ್ಡಾಯಗೊಳಿಸಿತು. ಮಹಿಳಾ ಮೀಸಲಾತಿ ಮಸೂದೆಯನ್ನು ಮೊದಲ ಬಾರಿಗೆ ಎಚ್. ಡಿ. ದೇವೇಗೌಡ್ರ ನೇತೃತ್ವದ ಸರ್ಕಾರವು ಸಂವಿಧಾನದ (81ನೇ ತಿದ್ದುಪಡಿ ಮಸೂದೆ, 1996) ರೂಪದಲ್ಲಿ 11ನೇ ಲೋಕಸಭೆಯಲ್ಲಿ 1996ರ ಸೆಪ್ಟೆಂಬರ್ 12ರಂದು ಮಂಡಿಸಿತು. ನಂತರ ಅದನ್ನು ಸಂಸತ್ತಿನ ಉಭಯ ಸದನಗಳ ಜಂಟಿ ಸಮಿತಿಗೆ ಕಳುಹಿಸಲಾಯಿತು. ಆದರೆ 11ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಮಸೂದೆಯು ರದ್ದಾಯಿತು. 1996ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಶೀಲಿಸಿದ ಜಂಟಿ ಸಂಸದೀಯ ಸಮಿತಿಯ ವರದಿಯು, ಒಬಿಸಿಗಳಿಗೆ ಮೀಸಲಾತಿಯನ್ನು ಅನುಮತಿಸಲು ಸಂವಿಧಾನವನ್ನು ತಿದ್ದುಪಡಿ ಮಾಡಿದ ನಂತರ ಇತರ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸಬೇಕೆಂದು ಶಿಫಾರಸು ಮಾಡಿತು.[೮]
1993ರಲ್ಲಿ ಭಾರತದಲ್ಲಿ ಒಂದು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸಲಾಯಿತು. ಅದು ಗ್ರಾಮ ಪಂಚಾಯಿತಿಯಲ್ಲಿ ಯಾದೃಚ್ಛಿಕವಾಗಿ(ರಾಂಡಮ್ ಆಗಿ) ಮೂರನೇ ಒಂದು ಭಾಗದ ಗ್ರಾಮ ಕೌನ್ಸಿಲ್ ನಾಯಕ ಅಥವಾ ಸರ್ಪಂಚ್ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ಕರೆ ನೀಡಿತು.[೯]
ಈ ಮೀಸಲಾತಿಯನ್ನು ಸಂಯುಕ್ತ ಸಂಸತ್ತಿಗೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಿಗೆ ವಿಸ್ತರಿಸಲು ದೀರ್ಘಾವಧಿಯ ಯೋಜನೆಯನ್ನು ರೂಪಿಸಲಾಯಿತು.
2023ರ ಸೆಪ್ಟೆಂಬರ್ 19ರಂದು, ನರೇಂದ್ರ ಮೋದಿ ಸರ್ಕಾರವು ಹೊಸ ಸಂಸತ್ ಕಟ್ಟಡದಲ್ಲಿ ಲೋಕಸಭೆಯಲ್ಲಿ ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ 128ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ, 2023 ಎಂದು ಮಸೂದೆಯ ಒಂದು ರೂಪವನ್ನು ಪರಿಚಯಿಸಿತು. ಈ ಮಸೂದೆಯನ್ನು ಲೋಕಸಭೆಯು 20 ಸೆಪ್ಟೆಂಬರ್ 2023 ರಂದು 454 ಮತಗಳು ಪರವಾಗಿ ಮತ್ತು ಎರಡು ವಿರುದ್ಧವಾಗಿ ಅಂಗೀಕರಿಸಿತು. 20 ರ ಹೊತ್ತಿಗೆ, ಮಸೂದೆಯನ್ನು ರಾಜ್ಯಸಭೆ ಮತ ಚಲಾಯಿಸುವ ನಿರೀಕ್ಷೆಯಿತ್ತು ಫಲಿತಾಂಶವು ಸರ್ವಾನುಮತದ ಅನುಮೋದನೆಯಾಗಿತ್ತು. [ಸಾಕ್ಷ್ಯಾಧಾರ ಬೇಕಾಗಿದೆ][citation needed]
ಕೇವಲ ಇಬ್ಬರು ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರು, ಅವರಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಸಾದುದ್ದೀನ್ ಒವೈಸಿ ಮತ್ತು ಇಮ್ತಿಯಾಜ್ ಜಲೀಲ್ ಮಾತ್ರ ಇದ್ದರು.[೧೦]
ಇದನ್ನೂ ನೋಡಿ
[ಬದಲಾಯಿಸಿ]- ನಾರಿ ಶಕ್ತಿ ವಂದನ್ ಅಧಿನಿಯಂ
- ಭಾರತದ ಸಂವಿಧಾನದ ತಿದ್ದುಪಡಿಗಳ ಪಟ್ಟಿ
- ಭಾರತದಲ್ಲಿ ಕಾನೂನು
- ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013
- ಭಾರತದಲ್ಲಿ ಮಹಿಳೆಯರು
ಉಲ್ಲೇಖಗಳು
[ಬದಲಾಯಿಸಿ]- ↑ "Women's Reservation Bill, version 2010: Two proposed constitutional amendments mirrored SC-ST quota in Parliament, Assemblies". 19 September 2023.
- ↑ "Women's reservation Bill – imperfect but important". 21 September 2023.
- ↑ "Lok Sabha Speaker Meira Kumar calls for women's empowerment". The Times of India. 9 March 2013. Archived from the original on 5 May 2013. Retrieved 3 December 2013.
- ↑ "Uproar in India Over Female Lawmaker Quota". The New York Times. 9 March 2010.
- ↑ "What's the women's reservation bill, its history, and who brought it first". 19 September 2023.
- ↑ "What's the women's reservation bill, its history, and who brought it first". 19 September 2023.
- ↑ "Union Cabinet reportedly greenlights Women's Reservation Bill; official confirmation awaited". 18 September 2023.
- ↑ "Should there be sub-quota for OBC women? Debate rages". The Times of India. 20 September 2023.
- ↑ Chattopadhyay, Raghabendra, and Esther Duflo (2004). "Women as Policy Makers: Evidence from a Randomized Policy Experiment in India". Econometrica. 72 (5). The Abdul Latif Jameel Poverty Action Lab: 1409–43. doi:10.1111/j.1468-0262.2004.00539.x. Retrieved December 14, 2018.
{{cite journal}}
: CS1 maint: multiple names: authors list (link) - ↑ "Only those MPs voted against the bill". timesofindia.indiatimes.com/. 20 September 2023.