ವಿಷಯಕ್ಕೆ ಹೋಗು

ಮಾರವಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರವಾಡಿ ಜನರು ರಾಜಸ್ಥಾನ ಹಾಗೂ ಹರ್ಯಾಣಾದ ಮಾರ್ವಾರ್ ಶೇಖಾವತಿ ಜೈಪುರ್ ಪ್ರದೇಶದ ಮೂಲದ ದಕ್ಷಿಣ ಏಷ್ಯಾದ ಜನಾಂಗೀಯ ಭಾಷಾ ಗುಂಪು. ಇವರ ಭಾಷೆಗೂ ಮಾರವಾಡಿ ಎಂದೇ ಹೆಸರಿದೆ. ಇದು ಇಂಡೋ - ಆರ್ಯನ್ ಭಾಷೆಗಳ ಪಾಶ್ಚಾತ್ಯ ವಲಯದ ಭಾಗವಾದ ರಾಜಸ್ಥಾನಿ ಭಾಷೆಗಳ ಆಶ್ರಯದಡಿ ಬರುತ್ತದೆ.

ಇವರು ಬಹಳ ಯಶಸ್ವಿ ವ್ಯಾಪಾರ ಸಮುದಾಯವಾಗಿದ್ದಾರೆ, ಮೊದಲು ರಜಪೂತ ರಾಜ್ಯಗಳ ಯುಗದ ಅವಧಿಯಲ್ಲಿ ಒಳನಾಡು ವ್ಯಾಪಾರಿಗಳಾಗಿ, ಮತ್ತು ನಂತರ ಕೈಗಾರಿಕಾ ಉತ್ಪಾದನೆ ಹಾಗೂ ಇತರ ವಲಯಗಳಲ್ಲಿ ಹೂಡಿಕೆದಾರರಾಗಿ ಕೂಡ. ಇಂದು, ಇವರು ದೇಶದ ಅನೇಕ ಅತಿ ದೊಡ್ಡ ಮಾಧ್ಯಮ ಗುಂಪುಗಳನ್ನು ನಿಯಂತ್ರಿಸುತ್ತಾರೆ. ಭಾರತದಾದ್ಯಂತ ಹರಡಿದ್ದರೂ, ಐತಿಹಾಸಿಕವಾಗಿ ಇವರು ಕೊಲ್ಕತ್ತ, ನಾಗ್ಪುರ ಮತ್ತು ಮಧ್ಯ ಹಾಗೂ ಪೂರ್ವ ಭಾರತದ ಒಳನಾಡುಗಳಲ್ಲಿ ಅತ್ಯಂತ ಹೆಚ್ಚು ಕೇಂದ್ರೀಕೃತವಾಗಿದ್ದಾರೆ.

ಈ ಸಮುದಾಯಗಳಲ್ಲಿ ಅತ್ಯಂತ ಪ್ರಮುಖರಾಗಿರುವರೆಂದರೆ ವರ್ಮಾ, ಖಂಡೇಲ್‍ವಾಲ್, ಮಹೇಶ್ವರಿ, ಅಗ್ರವಾಲ್, ಸೋನಿ ಮತ್ತು ಓಸ್ವಾಲ್ ಅಡ್ಡಹೆಸರಿನವರು, ಮತ್ತು ವ್ಯಾಪಾರ ಇವರ ಸಾಂಪ್ರದಾಯಿಕ ವೃತ್ತಿಯಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Kudaisya, Medha M. (2009). "Marwari and Chettiar Merchants. 1850s-1950s: Comparative Trajectories". In Kudaisya, Medha M.; Ng, Chin-Keong (eds.). Chinese and Indian Business: Historical Antecedents. Leiden: BRILL. p. 87. ISBN 978-90-04-17279-1. Retrieved 2012-05-23.



"https://kn.wikipedia.org/w/index.php?title=ಮಾರವಾಡಿ&oldid=1251994" ಇಂದ ಪಡೆಯಲ್ಪಟ್ಟಿದೆ