ಮಾವಿನ ಹಣ್ಣಿನ ಗೊಜ್ಜು
ಮಾವಿನ ಹಣ್ಣಿನ ಸಮಯದಲ್ಲಿ ಮಾವಿನ ಹಣ್ಣಿನಲ್ಲಿ ಹಲವು ರುಚಿಕರ ತಿನಿಸುಗಳನ್ನು ಮಾಡಬಹುದಾಗಿದ್ದು ಅವುಗಳಲ್ಲಿ ಒಂದು ಮಾವಿನ ಹಣ್ಣಿನ [೧] ಗೊಜ್ಜು. ಇದಕ್ಕೆ ಮಲೆನಾಡು, ಕರಾವಳಿಕರಾವಳಿ ಕನ್ನಡ ಭಾಗಗಳಲ್ಲಿ ಹೆಚ್ಚಾಗಿ ಜನರು ಮಾಡುವ ಖಾದ್ಯ ಇದಾಗಿದೆ. ಇದಕ್ಕೆ ಚಿಕ್ಕ ಕಾಟು ಮಾವಿನ ಹಣ್ಣು ಆದರೆ ಉತ್ತಮ. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಬೇರೆ ಜಾತಿಯ ಮಾವಿನ ಹಣ್ಣುಗಳಿಂದಲೂ ಮಾಡಬಹುದು.
ಬೇಕಾಗುವ ಪದಾರ್ಥಗಳು
[ಬದಲಾಯಿಸಿ]
ಒಗ್ಗರಣೆಗೆ
[ಬದಲಾಯಿಸಿ]- ಕಡಲೇ ಬೇಳೆ - 1 ಟೀ ಚಮಚ
- ಉದ್ದಿನ ಬೇಳೆ - 1 ಟೀ ಚಮಚ
- ಕೊತ್ತಂಬರಿ ಬೀಜ - 1 ಟೀ ಚಮಚ
- ಮೆಂತ್ಯ - 1/4 ಟೀ ಚಮಚ
- ಸಾಸಿವೆ - 1/4 ಟೀ ಚಮಚ
- ಜೀರಿಗೆ - 1/4 ಟೀ ಚಮಚ
- ಬ್ಯಾಡಗಿ ಮೆಣಸಿನಕಾಯಿ - 5ರಿಂದ 7
ಮಾಡುವ ವಿಧಾನ
[ಬದಲಾಯಿಸಿ]ಮಾವಿನ ಹಣ್ಣಿನ ಸಿಪ್ಪೆ ತೆಗೆದು ಹಣ್ಣು ವಾಟೆ ಸಮೇತ ಹಾಗೇ ಇಡಿ. ಸಿಪ್ಪೆಗೆ ಸ್ವಲ್ಪ ನೀರು ಹಾಕಿ ಕಿವುಚಿ ರಸ ತೆಗೆದು ಹಣ್ಣಿಗೆ ಹಾಕಿಡಿ. ಕಾಯಿ ತುರಿ ಬಿಟ್ಟು ಉಳಿದ ಸಾಮಗ್ರಿಗಳನ್ನು ಹುರಿದು ಕಾಯಿ ತುರಿ ಜೊತೆಗೆ ನುಣ್ಣಗೆ ರುಬ್ಬಿಡಿ. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿಬೇವು, ಸ್ವಲ್ಪ ಇಂಗು ಒಗ್ಗರಣೆ ಹಾಕಿ ರುಬ್ಬಿದ ಮಿಶ್ರಣ, ಮಾವಿನ ಹಣ್ಣಿನ ಮಿಶ್ರಣ, ಒಂದು ಚಮಚ ಹುಣಿಸೆ ಹಣ್ಣಿನ ರಸ, ಚೂರು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಕುದಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿನ ಗೊಜ್ಜು ಸಿದ್ಧ. ಇದನ್ನು ಚಪಾತಿ, ಪೂರಿ, ರೊಟ್ಟಿ ಜೊತೆ ಸೇರಿಸಿಕೊಳ್ಳಬಹುದು. ಬಿಸಿ ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪ ಸೇರಿಸಿ ತಿಂದರೆ ರುಚಿಯಾಗಿರುತ್ತದೆ.
ಉಲ್ಲೇಖ
[ಬದಲಾಯಿಸಿ]