ಮುಖಲಿಂಗಂ
ಮುಖಲಿಂಗಂ ಭಾರತದ ಆಂಧ್ರಪ್ರದೇಶ ರಾಜ್ಯದ ಶ್ರೀಕಾಕುಲಂ ಜಿಲ್ಲೆಯ ಜಲುಮುರು ಮಂಡಲದಲ್ಲಿರುವ ಒಂದು ಗ್ರಾಮ ಪಂಚಾಯಿತಿ. ಇದು ಪೂರ್ವ ಗಂಗ ರಾಜವಂಶದ ಹಿಂದಿನ ರಾಜಧಾನಿಯಾಗಿತ್ತು. ಇದು ಮೂರು ಶಿವ ದೇವಾಲಯಗಳ ಗುಂಪಿಗೆ ನೆಲೆಯಾಗಿದೆ - ಮಧುಕೇಶ್ವರ, ಸೋಮೇಶ್ವರ, ಭೀಮೇಶ್ವರ - ಇದು ಎಂಟನೇ ಶತಮಾನದ ಅಂತ್ಯದಿಂದ ಹನ್ನೊಂದನೇ ಶತಮಾನದ ಆರಂಭದವರೆಗಿನ ಕಾಲದ್ದೆಂದು ಇತಿಹಾಸಕಾರರು ವಿವಿಧ ರೀತಿಯಲ್ಲಿ ನಿರ್ಧಾರ ಮಾಡಿದ್ದಾರೆ.[೧][೨]
ಸಂಸ್ಕೃತಿ
[ಬದಲಾಯಿಸಿ]ದೇವಾಲಯಗಳ ಕಾಲನಿರ್ಧಾರದ ಬಗ್ಗೆ ಇತಿಹಾಸಕಾರರಲ್ಲಿ ವಿವಾದವಿದೆ. ದೇವಾಲಯಗಳು ಕ್ರಿ.ಶ. ಎಂಟನೇ ಶತಮಾನದ ಉತ್ತರಾರ್ಧದಿಂದ ಹನ್ನೊಂದನೇ ಶತಮಾನದವರೆಗಿನ ಕಾಲದ್ದೆಂದು ವಿವಿಧ ರೀತಿಯಲ್ಲಿ ನಿರ್ಧಾರ ಮಾಡಲಾಗಿದೆ.[೧][೨][೩] ಅವುಗಳಲ್ಲಿ ಅತ್ಯಂತ ಮೊದಲನೆಯದನ್ನು ಎಂಟನೇ ಶತಮಾನದ ಕೊನೆಯಲ್ಲಿ ಅಥವಾ ಒಂಬತ್ತನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾಯಿತು ಮತ್ತು ಇತ್ತೀಚಿನದು ಹನ್ನೊಂದನೇ ಶತಮಾನದ ಆರಂಭದ ಕಾಲದ್ದಾಗಿದೆ.[೪][೫] ಪ್ರತಿ ವರ್ಷ ಯಾತ್ರಿಕರು ಪ್ರಸಿದ್ಧ ಚಕ್ರತೀರ್ಥ ಸ್ನಾನವನ್ನು (ಪವಿತ್ರ ಸ್ನಾನ) ಮಾಡುತ್ತಾರೆ. ಪವಿತ್ರ ಸ್ನಾನವನ್ನು ಮಾಡಲು ಮತ್ತು ಶಿವನ ಆಶೀರ್ವಾದವನ್ನು ಪಡೆಯಲು ಮಂಗಳಕರ ದಿನದಂದು ಒಡಿಶಾ ಮತ್ತು ಆಂಧ್ರಪ್ರದೇಶದಿಂದ ಲಕ್ಷಾಂತರ ಯಾತ್ರಿಕರು ಭೇಟಿ ನೀಡುತ್ತಾರೆ.
ಛಾಯಾಂಕಣ
[ಬದಲಾಯಿಸಿ]-
ಶ್ರೀ ಮುಖಲಿಂಗಮ್ ದೇವಾಲಯದ ಸಂಕೀರ್ಣದಲ್ಲಿ ಗುಮ್ಮಟದ ಮೇಲೆ ತ್ರಿಮೂರ್ತಿಗಳ ಉಬ್ಬುಚಿತ್ರ
-
ಶ್ರೀ ಮುಖಲಿಂಗಂ ದೇವಾಲಯ ಸಂಕೀರ್ಣದಲ್ಲಿನ ಒಂದು ಗುಮ್ಮಟದ ನೋಟ
-
ಶ್ರೀ ಮುಖಲಿಂಗದಲ್ಲಿ ಚರಂಡಿಗಾಗಿ ಇರುವ ಗೋಡೆಗಳ ಮೇಲೆ ಕೆತ್ತಲಾದ ಉಬ್ಬುಚಿತ್ರ
-
ಶ್ರೀ ಮುಖಲಿಂಗಂ ದೇವಾಲಯ ಸಂಕೀರ್ಣದಲ್ಲಿರುವ ಒಂದು ದೇವಾಲಯ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Murthy, K. Krishna (1987). Glimpses of Art, Architecture, and Buddhist Literature in Ancient India (in ಇಂಗ್ಲಿಷ್). Abhinav Publications. p. 71. ISBN 978-81-7017-226-0. ಉಲ್ಲೇಖ ದೋಷ: Invalid
<ref>
tag; name ":0" defined multiple times with different content - ↑ ೨.೦ ೨.೧ Davidson, Ronald M. (2004). Indian Esoteric Buddhism: Social History of the Tantric Movement (in ಇಂಗ್ಲಿಷ್). Motilal Banarsidass Publ. p. 342. ISBN 978-81-208-1991-7. ಉಲ್ಲೇಖ ದೋಷ: Invalid
<ref>
tag; name ":1" defined multiple times with different content - ↑ Linda, Mary F. (1990-01-01). "Nārāyaṇapuram: A Tenth Century Site in Kaliṅga". Artibus Asiae. 50 (3/4): 232–262. doi:10.2307/3250071. JSTOR 3250071.
- ↑ Kapoor, Subodh (2002). The Indian Encyclopaedia: Meya-National Congress (in ಇಂಗ್ಲಿಷ್). Cosmo Publications. p. 4967. ISBN 978-81-7755-273-7.
- ↑ Kumari, M. Krishna (1990). Social and Cultural Life in Medieval Andhra (in ಇಂಗ್ಲಿಷ್). Discovery Publishing House. p. 151. ISBN 978-81-7141-102-3.