ವಿಷಯಕ್ಕೆ ಹೋಗು

ಮೂಗುತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಗುತಿಯು ಮೂಗಿನ ಮೇಲೆ ಧರಿಸಲಾದ ಒಂದು ಆಭರಣ.

Nose piercing gold stud

ಪ್ರಾಚೀನ ಕಾಲದಿಂದ ಹೆಚ್ಚು ಸಾಮಾನ್ಯವಾಗಿ ಭಾರತೀಯ ಉಪಖಂಡದ ಮಹಿಳೆಯರೊಂದಿಗೆ ಸಂಬಂಧಿಸಲಾದ ಈ ಆಭರಣಗಳನ್ನು ಮೂಗಿನ ಹೊಳ್ಳೆಯ ಪಾರ್ಶ್ವದಲ್ಲಿನ ಒಂದು ಚುಚ್ಚುರಂಧ್ರದ ಮೂಲಕ ಲಗತ್ತಿಸಲಾಗುತ್ತದೆ. ಜಾಗತೀಕರಣ ಮತ್ತು ಭಾರತೀಯ ಫ಼್ಯಾಶನ್ ಹಾಗೂ ಸಂಸ್ಕೃತಿಯ ಹರಡುವಿಕೆಯ ಕಾರಣ, ಇತ್ತೀಚಿನ ದಶಕಗಳಲ್ಲಿ ಮೂಗಿನ ಹೊಳ್ಳೆಯನ್ನು ಚುಚ್ಚಿಸಿಕೊಳ್ಳುವುದು ವಿಶ್ವದಲ್ಲಿ ಜನಪ್ರಿಯವಾಗಿದೆ. ಮೂಗುತಿಯ ಮೇಲೆ ಸಣ್ಣ ರತ್ನಗಳು ಅಥವಾ ಗುಬುಟುಗಳು, ಅಥವಾ ಸರಳ ಉಂಗುರಗಳನ್ನು ಇಟ್ಟುಕೊಳ್ಳುವುದು ಸಹ ಫ಼್ಯಾಷನ್‍ಗಾರಿಕೆಯಾಗಿದೆ, ಬಹುತೇಕವಾಗಿ ವಿಶ್ವದ ಇತರ ಭಾಗಗಳಲ್ಲಿನ ಭಾರತೀಯರಲ್ಲದ ಯುವ ಮಹಿಳೆಯರಿಗಾಗಿ, ಅಮೇರಿಕಾ, ಜಪಾನ್ ,ಯೂರೋಪ್ ಸೇರಿದಂತೆ.

Nose piercing

ಭಾರತದಲ್ಲಿ

[ಬದಲಾಯಿಸಿ]

ಮೂಗಿನ ಎರಡು ಚುಚ್ಚುರಂಧ್ರಗಳ ಮೇಲೆ ರತ್ನಗಳನ್ನು ಇಟ್ಟುಕೊಳ್ಳುವುದು ದಕ್ಷಿಣ ಭಾರತೀಯ, ಪಶ್ತುನ್, ಪಂಜಾಬಿ, ರಾಜಸ್ಥಾನಿ ಮತ್ತು ನೇಪಾಳಿ ಜನಾಂಗೀಯ ಗುಂಪುಗಳಲ್ಲಿ ಸಾಮಾನ್ಯವಾಗಿದೆ. ಇವನ್ನು ನಥೋರಿ ಎಂದು ಕರೆಯಲಾಗುತ್ತದೆ ಮತ್ತು ೫೦೦೦ ವರ್ಷಗಳಷ್ಟುಹಿಂದೆ ಪಾರ್ವತಿ ಮತ್ತು ಕೃಷ್ಣನ ಮೂಲಕ ಚಿತ್ರಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಮಹಿಳೆಯರು ಮುಖದ ಪಾರ್ಶವನ್ನು ಮುಚ್ಚುವ ಒಂದು ದೊಡ್ಡ ನಥೋರಿಯನ್ನು ಧರಿಸುತ್ತಾರೆ. ಬಂಗಾಳಿ ಮಹಿಳೆಯರು ವಿವಾಹದ ಗುರುತನ್ನು ತೋರಿಸುವ ಮೂಗಿನ ವಿಭಾಜಕ ಭಿತ್ತಿಯನ್ನು ಚುಚ್ಚಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.

ಹಿಂದಿಯಲ್ಲಿ ನಥ್ ಎಂದು ಕರೆಯಲ್ಪಡುವ ಮೂಗಿನ ಆಭರಣಗಳು ೯ ಮತ್ತು ೧೦ನೇ ಶತಮಾನದಲ್ಲಿ ಜನಪ್ರಿಯವಾದವು ಮತ್ತು ಮಹಿಳೆಯರ ವೈವಾಹಿಕ ಸ್ಥಿತಿಯ ವಿವಿಧ ಸಂಕೇತಗಳ ಭಾಗವಾದವು. ಇದು ಆರ್ಥಿಕ ಸ್ಥಾನಮಾನವನ್ನೂ ಪ್ರದರ್ಶಿಸುತ್ತಿತ್ತು; ರಾಣಿಯರು, ಮಂತ್ರಿಗಳ ಹೆಂಡತಿಯರು, ಮತ್ತು ಶ್ರೀಮಂತ ಕುಟುಂಬದ ಮಹಿಳೆಯರು ಮುತ್ತುಗಳು, ನೀಲಮಣಿ ಮತ್ತು ಕುಂದನ್‍ನ ನಥ್ ಧರಿಸುತ್ತಿದ್ದರು. ಇತರರು ಬೆಳ್ಳಿಯ ಮೂಗುತಿಗಳನ್ನು ಧರಿಸುತ್ತಿದ್ದರು. ೧೫ನೇ ಶತಮಾನದ ಕಡೆಗೆ, ಈ ಆಭರಣವು ಸಾಕಷ್ಟು ಜನಪ್ರಿಯವಾಯಿತು ಮತ್ತು ೧೭ನೇ-೧೮ನೇ ಶತಮಾನದ ಅವಧಿಯಲ್ಲಿ ಲವಂಗ, ಮುಳ್ಳುಗಳು, ಮೊಳೆಗಳನ್ನು ಬಳಸುವ ವ್ಯತ್ಯಯನಗಳನ್ನು ಕಂಡಿತು. ಸಮಕಾಲೀನ ಸಾಮಗ್ರಿಗಳು ಮತ್ತು ವಿನ್ಯಾಸಗಳಿರುವ ಆಧುನಿಕ ಮೂಗುತಿಗಳು ೨೦ನೇ ಶತಮಾನದಲ್ಲಿ ಬಂದವು.[]

ಉಲ್ಲೇಖಗಳು

[ಬದಲಾಯಿಸಿ]
  1. Shanti Kumar Syal (2005). Pragatiśīla nārī (in Hindi). Delhi, India: Atmaram & Sons. p. 171. ISBN 9788170436478.{{cite book}}: CS1 maint: unrecognized language (link)


"https://kn.wikipedia.org/w/index.php?title=ಮೂಗುತಿ&oldid=1223922" ಇಂದ ಪಡೆಯಲ್ಪಟ್ಟಿದೆ