ಮೆನ್ಹೇಡನ್
ಮೆನ್ಹೇಡನ್ |
---|
ಬ್ರಿವೂರ್ಷಿಯಾ ಪ್ಯಾಟ್ರನಸ್
|
Scientific classification |
|
Included groups |
|
Excluded groups |
ಕ್ಲೂಪೀಡೀ ಮತ್ತು ಅಲೋಸಿಡೀ ಕುಟುಂಬಗಳಲ್ಲಿನ ಎಲ್ಲ ಇತರ ಜಾತಿಗಳು |
ಮೆನ್‍ಹೇಡನ್ ಕ್ಲೂಪಿಯಿಡೀ ಗುಂಪಿಗೆ ಸೇರಿದ ಬ್ರಿವೂರ್ಷಿಯ ಜಾತಿಯ ಮೀನು. ಅಮೆರಿಕದ ಅಟ್ಲಾಂಟಿಕ್ ಕರಾವಳಿಯಲ್ಲಿ ಕಾಣಬರುತ್ತದೆ. ಇದನ್ನು ಪೊಗಿ, ಮೊಸ್‌ಬಂಕರ್, ಬಗ್‌ಹೆಡ್, ಫ್ಯಾಟ್‌ಬ್ಯಾಕ್, ಬೆಎಲ್‌ವೈಫ್ ಎಂದೂ ಕರೆಯುತ್ತಾರೆ.[೧] ಸಾರ್ಡಿನ್, ಎಲ್‌ವೈಫ್, ಹರ‍್ರಿಂಗ್, ಶಾಡ್‌ಗಳಿಗೆ ಬಹಳ ಸಮೀಪದ ಸಂಬಂಧಿ. ದೊಡ್ಡ ಗುಂಪುಗಳಲ್ಲಿ ಸಂಚರಿಸುತ್ತದೆ.
ದೇಹರಚನೆ
[ಬದಲಾಯಿಸಿ]ದೇಹದ ಉದ್ದ ಸುಮಾರು 30 - 40 ಸೆಂಮೀ, ತೂಕ 0.5 ಕೆ.ಜಿ. ದೇಹ ನೀಲಿ ಬಣ್ಣದ್ದು. ಇವು ವಲಸೆ ಹೋಗುವ ಪರಿಪಾಟ ತೋರುತ್ತವೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಅಧಿಕ ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಟ್ಟ 2 ದಿವಸಗಳ ತರುವಾಯ ಮರಿ ಹೊರಬರುವುವು. ಮರಿಗಳ ಬೆಳೆವಣಿಗೆ ಶೀಘ್ರಗತಿಯದು, 3 ವರ್ಷಗಳಲ್ಲಿ ಪ್ರೌಢಾವಸ್ಥೆಗೆ ಬರುವುವು.
ವೈರಿಗಳು
[ಬದಲಾಯಿಸಿ]ಕಾಡ್, ಶಾರ್ಕ್ ಮೀನುಗಳೂ, ಕಡಲಹಕ್ಕಿ ಮತ್ತು ತಿಮಿಂಗಿಲಗಳೂ ಇದರ ಸಹಜ ವೈರಿಗಳು.
ಉಪಯೋಗಗಳು
[ಬದಲಾಯಿಸಿ]ಮೆನ್‌ಹೇಡನ್ ಮೀನಿಗೆ ವಾಣಿಜ್ಯ ಪ್ರಾಮುಖ್ಯ ಉಂಟು. ಮೀನೆಣ್ಣೆ, ಗೊಬ್ಬರ, ಸಾಬೂನು ಮತ್ತು ಮೀನಿನ ಪುಡಿ ತಯಾರಿಕೆಗೆ ಇದು ಬಳಕೆಯಾಗುತ್ತದೆ.[೨][೩]
ಉಲ್ಲೇಖಗಳು
[ಬದಲಾಯಿಸಿ]- ↑ Franklin, H. (2007). The Most Important Fish in the Sea. Island Press. ISBN 978-1-59726-124-1.
- ↑ Tavee, Tom; Franklin, H. Bruce (1 September 2001). "The Most Important Fish in the Sea". Discover. Archived from the original on 8 August 2018.
- ↑ Conniff, Richard (7 December 2012). "The Oiliest Catch". Conservation Magazine. University of Washington. Archived from the original on 31 January 2016. Retrieved 18 January 2013.