ವಿಷಯಕ್ಕೆ ಹೋಗು

ಮೀಲಿಯೇಸೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೆಲಿಯೇಸೀ ಇಂದ ಪುನರ್ನಿರ್ದೇಶಿತ)
ಮಹಾಗನಿ ಕುಟುಂಬ
Melia azedarach in flower
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಮೀಲಿಯೇಸಿ

Genera

See text.

ಮೀಲಿಯೇಸೀ, ಅಥವಾ ಮಹಾಗನಿ ಕುಟುಂಬವು, ಸ್ಯಾಪಿಂಡೇಲೀಸ್ ವರ್ಗದಲ್ಲಿನ ಹೆಚ್ಚಾಗಿ ಮರಗಳು ಮತ್ತು ಪೊದೆಗಳ (ಮತ್ತು ಕೆಲವು ಮೂಲಿಕೆ ಸಸ್ಯಗಳ) ಒಂದು ಹೂ ಬಿಡುವ ಸಸ್ಯ ಕುಟುಂಬ. ಇದು ಪಾಲಿಪೆಟಲೀ ಗುಂಪಿಗೆ ಸೇರಿದ ದ್ವಿದಳಸಸ್ಯಗಳ ಕುಟುಂಬ. ಇದರಲ್ಲಿ 53 ಜಾತಿಗಳೂ 600 ಪ್ರಭೇದಗಳೂ ಉಂಟು.[]

ಗುಣಲಕ್ಷಣಗಳು

[ಬದಲಾಯಿಸಿ]

ಇವು ಪರ್ಯಾಯವಾದ, ಸಾಮಾನ್ಯವಾಗಿ ಪರ್ಣಪುಚ್ಛಗಳಿಲ್ಲದ ಸಂಯುಕ್ತ ಪತ್ರಗಳು,[] ಮತ್ತು ಸಂಯುಕ್ತ ಗೊಂಚಲುಗಳು, ಅಂತ್ಯಾರಂಭಿ ಗೊಂಚಲುಗಳು, ತೆನೆಗಳು, ಅಥವಾ ಗೊಂಚಲುಗಳಲ್ಲಿ ಇರುವ ಸಂಯುಕ್ತ, ದ್ವಿಲಿಂಗವೆಂದು ತೋರುವ (ಆದರೆ ವಾಸ್ತವವಾಗಿ ಬಹುತೇಕ ಗೋಚರವಾಗದಂತೆ ಏಕಲಿಂಗ) ಹೂವುಗಳನ್ನು ವಿಶೇಷ ಲಕ್ಷಣಗಳಾಗಿ ಹೊಂದಿವೆ. ಬಹುತೇಕ ಜಾತಿಗಳು ನಿತ್ಯಹರಿದ್ವರ್ಣವಾಗಿವೆ, ಆದರೆ ಕೆಲವು, ಶುಷ್ಕ ಋತು ಅಥವಾ ಚಳಿಗಾಲದಲ್ಲಿ, ಪರ್ಣಪಾತಿಗಳಾಗಿವೆ.

ಕುಟುಂಬದ ಸದಸ್ಯಗಳ ಎಲೆಗಳು ಗರಿರೂಪದ ಸಂಯುಕ್ತಮಾದರಿಯವು; ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿರುವುವು. ಕಿರು ಎಲೆಗಳು ಪರ್ಯಾಯ ಅಥವಾ ಅಭಿಮುಖ ಜೋಡಣೆಯಲ್ಲಿ ಸ್ಥಿತವಾಗಿರುತ್ತವೆ. ಹೂಗೊಂಚಲು ಸೈಮ್ ಮಾದರಿಯದಾಗಿದ್ದು ಕೊಂಬೆಗಳ ತುದಿಯಲ್ಲಿ ಅಥವಾ ಎಲೆಯ ಕಕ್ಷದಲ್ಲಿ ಇರುತ್ತದೆ. ಹೂಗಳು ವೃಂತ ಪತ್ರಯುಕ್ತ. ದ್ವಿಲಿಂಗ ಅಥವಾ ಸಂಕೀರ್ಣಲಿಂಗ ಬಗೆಯವಾಗಿದ್ದು ಆರೀಯ ಸಮಮಿತಿಯನ್ನೂ ಉಚ್ಚಸ್ಥಾನದ ಅಂಡಾಶಯವನ್ನೂ ಪಡೆದಿರುವುವು. ನಿದಳ ಪುಂಜ ಚಿಕ್ಕಗಾತ್ರದ್ದು. ಇದರಲ್ಲಿ 3ರಿಂದ 6 ನಿದಳಗಳುಂಟು. ದಳಗಳು 3-6. ಬಿಡಿಬಿಡಿಯಾಗಿವೆ. ಕೆಲವು ಪ್ರಭೇದಗಳಲ್ಲಿ ಬುಡಭಾಗದಲ್ಲಿ ಸ್ವಲ್ಪ ಸೇರಿಕೊಂಡಿರಬಹುದು. ಪುಂಕೇಸರಗಳಿಗೂ ದಳಗಳಿಗೂ ಮಧ್ಯೆ ಉಂಗುರಾಕಾರದ ತಟ್ಟೆಯುಂಟು. ಪುಂಕೇಸರಗಳು 4ರಿಂದ 12. ಪುಂಕೇಸರದಂಡ ಬಿಡಿಬಿಡಿಯಾಗಿರಬಹುದು ಅಥವಾ ಬುಡದಲ್ಲಿ ಕೂಡಿಕೊಂಡಿರಬಹುದು. ಕೂಡಿದಾಗ ಒಂದು ಕೇಸರ ಕೊಳವೆ ರೂಪಿತವಾಗಿರುತ್ತದೆ. ಪರಾಗಕೋಶ ಉದ್ದವಾಗಿದ್ದು ಉದ್ದುದ್ದವಾಗಿ ಸೀಳುತ್ತದೆ. ಅಂಡಾಶಯ 2-5 ಕಾರ್ಪೆಲ್‌ಗಳಿಂದ ರಚಿತವಾಗಿದೆ. ಒಳಗೆ 1 ಅಥವಾ 3ರಿಂದ 5 ಕೋಣೆಗಳುಂಟು. ಫಲಸಂಪುಟ ರಸಭರಿತ ಚರ‍್ರಿ ಅಥವಾ ಅಷ್ಟಿಫಲ ಮಾದರಿಯದು. ಬೀಜಗಳು ಭ್ರೂಣಾಹಾರಯುಕ್ತ ಅಥವಾ ರಹಿತ, ಕೆಲವು ವೇಳೆ ಬೀಜದಲ್ಲಿ ರೆಕ್ಕೆಗಳಿರುತ್ತವೆ.

ಉಪಯುಕ್ತ ಸಸ್ಯಗಳು

[ಬದಲಾಯಿಸಿ]

ಈ ಕುಟುಂಬದ ಕೆಲವು ಉಪಯುಕ್ತ ಸಸ್ಯಗಳು ಇಂತಿವೆ: ಬೇವು, ಕರ‍್ರಿಡಿ, ಮುಳ್ಳು ಮುತ್ತುಗ, ಅಗಿಲು, ಮಹಾಗನಿ, ಸ್ವಾಮಿಮರ, ಗಂಧಗರಿಗೆ ಮತ್ತು ಅರಬೇವು.

ಉಲ್ಲೇಖಗಳು

[ಬದಲಾಯಿಸಿ]
  1. Angiosperm Phylogeny Group (2009). "An update of the Angiosperm Phylogeny Group classification for the orders and families of flowering plants: APG III" (PDF). Botanical Journal of the Linnean Society. 161 (2): 105–121. doi:10.1111/j.1095-8339.2009.00996.x. Retrieved 2013-07-06.
  2. Christenhusz, M. J. M.; Byng, J. W. (2016). "The number of known plants species in the world and its annual increase". Phytotaxa. 261 (3): 201–217. doi:10.11646/phytotaxa.261.3.1.
  3. Of a gynoecium, made up of united carpels


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: