ಗಂಧಗರಿಗೆ
ಗಂಧಗರಿಗೆ | |
---|---|
ಗಂಧಗರಿಗೆಯ ಸಸಿ(T. ciliata) | |
Scientific classification | |
ಸಾಮ್ರಾಜ್ಯ: | |
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | T. ciliata
|
Binomial name | |
ಟೂನ ಸಿಲಿಯಾಟ M. Roem.
| |
Synonyms | |
T. australis |
ಗಂಧಗರಿಗೆ(Toon tree)ಆಸ್ಟ್ರೇಲಿಯಾ ಮೂಲದ ಕಾಡು ಮರ.ಇದು ದಕ್ಷಿಣ ಎಷಿಯಾದೆಲ್ಲೆಡೆ ಬೆಳೆಯುತ್ತದೆ. ಇದು ಕರ್ನಾಟಕದಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಮೆಲಿಯೇಸೀ ಕುಟುಂಬಕ್ಕೆ ಸೇರಿದ್ದು ಟೂನ ಸಿಲಿಯಾಟ (Toona ciliata)ಎಂದು ಸಸ್ಯಶಾಸ್ತ್ರೀಯ ಹೆಸರು.ಆಂಗ್ಲ ಭಾಷೆಯಲ್ಲಿ Red ceader,Indian mahogany ಎಂದೂ ಕರೆಯುತ್ತಾರೆ.ಕನ್ನಡದಲ್ಲಿ ನೊಗೆ,ಬೆಳಂದಿ ಮುಂತಾಗಿ ಹೆಸರುಗಳಿವೆ.
ಭಾರತೀಯ ಬೇರೆ ಭಾಷಾಗಳಲ್ಲಿ ಕರೆಯಲಾಗುವ ಹೆಸರು
[ಬದಲಾಯಿಸಿ]- ಹಿಂದೀ:ತುನ್(toon)
- ಮಣಿಪುರ:ತೈರೆಲ್(tairel)
- ಮಳಯಾಳಮ್:ವೆಂಪು (vempu)
- ಅಸ್ಸಾಂ:ಪೊಮಾ ಜತಿಪೊಮಾ(poma jatipoma)
- ತಮಿಳು:ತುನ್ ಮರಮ್(tun maram)
- ತೆಲುಗು:ನಂದಿ ವೃಕ್ಷಮು(namdi vrksham),ನಂದಿಚೆಟ್ಟು(namdi chettu)
- ಬೆಂಗಾಲಿ:ತುನ್(tun)
- ಮರಾಠಿ:ಕುನತ್(kunat)
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ದೊಡ್ಡ ಪ್ರಮಾಣದ ಮರ[೧].ಎಲೆಯುದುರಿಸುವ ಮರ ಇದು.ಮರ ೪೫ ಮೀಟರುಗಳ ಎತ್ತರ ಬೆಳಯುತ್ತದೆ.ಇದರ ಕಾಂಡ ವ್ಯಾಸ ೨.೦ಮೀಟರು ಗಳಸ್ಟು ಬೆಳಯುತ್ತದೆ.ಹೂವುಗಳು ಬೆಳ್ಳಗಿರುತ್ತವೆ.ಉದ್ದ ೫ಮಿ.ಮೀ ಇರುತ್ತವೆ. ಎಲೆಗಳು ದೊಡ್ಡಗಾತ್ರದ ಸಮಲತಾ ಸಂಯುಕ್ತ ಪರ್ಣಿಗಳಾಗಿದ್ದು(Paripinnate)೩೦ ರಿಂದ ೬೦ ಸೆ.ಮೀ.ವರೆಗೆ ಉದ್ದವಿರುತ್ತದೆ.(ಚಿತ್ರ ನೋಡಿ) ಜನವರಿ ತಿಂಗಳಲ್ಲಿ ಹೊಸತಳಿರು ಕಡುಕೆಂಪು ಬಣ್ಣದಲ್ಲಿ ಹೊರಟು ಸ್ವಲ್ಪ ಸಮಯದಲ್ಲೇ ಉಜ್ವಲ ಹಸಿರಿಗೆ ತಿರುಗುತ್ತದೆ.ಇದು ನೋಡಲು ಬಲು ಸುಂದರ.ದಾರುವು ನಸುಗೆಂಪು ಬಣ್ಣದಲ್ಲಿದ್ದು,ಹೊಳಪಿನಿಂದ ಕೂಡಿದೆ.ದಾರುವು ನಸು ಪರಿಮಳಯುಕ್ತವಾಗಿದೆ.
ಉಪಯೊಗಗಳು
[ಬದಲಾಯಿಸಿ]ದಾರುವು ಹಗುರವಾಗಿದ್ದು,ನಸುಗೆಂಪು ಬಣ್ಣ ಹೊಂದಿದೆ.ಚೆನ್ನಾಗಿ ಹೊಳಪು ಬರುವುದರಿಂದ ಹಲಗೆಗಳಾಗಿ ಬಹು ಉಪಯೋಗಿ ಮರವಾಗಿದೆ.ಉತ್ತಮ ದರ್ಜೆಯ ಪದರಹಲಗೆ(Plywood)ತಯಾರಿಕೆಯಲ್ಲಿ,ಟೀ ಪೆಟ್ಟಿಗೆಗಳ ತಯಾರಿಯಲ್ಲಿ,ಗಾಡಿಯ ನೊಗಗಳಿಗೆ ಉಪಯೋಗದಲ್ಲಿದೆ.
ಉಲ್ಲೇಖನಗಳು
[ಬದಲಾಯಿಸಿ]
ಆಧಾರ ಗ್ರಂಥಗಳು
[ಬದಲಾಯಿಸಿ]೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
ಚಿತ್ರಶಾಲೆ
[ಬದಲಾಯಿಸಿ]-
60 ವರ್ಷದ ಮರ, (ಚೈನದಲ್ಲಿರುವ ಹೂನಾನ್)
-
Toona ciliata -ಕೆಂಪು ಎಲೆಗಳು
-
Toona ciliata -ಕೆಂಪು ಎಲೆಗಳು-ಸೆಪ್ಟೆಂಬರು ತಿಂಗಳದಲಿ,(ಮೌಂಟ್ ಕೈರಾ)
-
Toona ciliata - ಕಾಯ ಮತ್ತು ಬೀಜ