ವಿಷಯಕ್ಕೆ ಹೋಗು

ಮೊದಲ ಆಂಗ್ಲರು ಮತ್ತು ಬರ್ಮನ್ನರ ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
First Anglo-Burmese War
ပထမ အင်္ဂလိပ် မြန်မာ စစ်

The Storming of one of the principal stockades on its inside, near Rangoon, on the 8th of July 1824.
ದಿನಾಂಕ5 March 1824–24 February 1826
ಸ್ಥಳBurma, East Bengal, Assam, Manipur, Cachar and Jaintia
ಫಲಿತಾಂಶ British Victory, Treaty of Yandabo
Territorial
changes
Burma cedes Assam, Manipur, Arakan and Tenasserim; loses influence in Cachar and Jaintia; pays one million pounds sterling in indemnity
ಯುದ್ಧಾಕಾಂಕ್ಷಿಗಳು
British East India Company Kingdom of Burma
ದಂಡನಾಯಕರು ಮತ್ತು ನಾಯಕರು
Sir Archibald Campbell Maha Bandula 
Maha Ne Myo 
Minkyaw Zeya Thura
ಸಂಖ್ಯಾಬಲ
50,000 40,000
ಸಾವುನೋವುಗಳು ಮತ್ತು ನಷ್ಟಗಳು
15,000 +10,000

ಟೆಂಪ್ಲೇಟು:Contains Burmese text

ಬ್ರಿಟೀಷ್‌ ಮತ್ತು ಬರ್ಮನ್ನರ ಸಾಮ್ರಾಜ್ಯದ ನಡುವೆ ನಡೆದ ಮೂರು ಯುದ್ದಗಳಲ್ಲಿ ಮೊದಲ ಆಂಗ್ಲೊ-ಬರ್ಮನ್ನರ ಯುದ್ದವು Burmese: ပထမ အင်္ဂလိပ် မြန်မာ စစ်[pətʰəma̰ ɪ́ɴɡəleiʔ mjəmà sɪʔ] ಹತ್ತೊಂಬತ್ತನೇ ಶತಮಾನದಲ್ಲಿ (ಮಾರ್ಚ 5, 1824ರಿಂದ ಫೆಬ್ರುವರಿ 1826) ನಡೆಯಿತು. ಈ ಯುದ್ದವು ಪ್ರಮುಖವಾಗಿ ಭಾರತದ ಈಶಾನ್ಯ ಭಾಗದ ಮೇಲೆ ಪ್ರಭುತ್ವ ಸಾದಿಸುವ ಸಲುವಾಗಿ ನಡೆಯಿತು ಮತ್ತು ಆಂಗ್ಲರ ನಿರ್ಣಾಯಕ ವಿಜಯದೊಂದಿಗೆ ಅಂತ್ಯ ಕಂಡಿತು. ಇದರಿಂದ ಆಂಗ್ಲರು ಪುರ್ತಿ ಆಸ್ಸಾಂ, ಮಣಿಪುರ, ಕ್ಯಾಚಾರ್‍ ಮತ್ತು ಜೈಂಟಾ ಹಾಗೂ ಅರಾಕನ್, ತೇನಾಸ್ಸೆರಿಮ್ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದರು. ಈ ಯುದ್ದದ ಪರಿಣಾಮವಾಗಿ ಬರ್ಮನ್‌ನರು ಒಂದು ಮಿಲಿಯನ್ ಪೌಂಡ್ ಸ್ಟೆರ್ಲಿಂಗ್‌‍ಗಳನ್ನು ಕಪ್ಪ ಕಾಣಿಕೆಯಾಗಿ ಕೊಡಬೇಕಾಯಿತು. ಹಾಗೂ ವ್ಯಾಪಾರ ವಹಿವಾಟಿಗೆ ಸಹಕರಿಸಲು ಒಪ್ಪಬೇಕಾಯಿತು.[][]

ಬ್ರಿಟೀಷ್ ಕಾಲದ ಭಾರತದ ಇತಿಹಾಸದಲ್ಲಿ ಇದೊಂದು ದೀರ್ಘವಾದ ಮತ್ತು ವೆಚ್ಚದಾಯಕವಾದ ಯುದ್ದವಾಗಿದೆ. ಹದಿನೈದು ಸಾವಿರ ಯುರೋಪಿಯನ್ ಮತ್ತು ಭಾರತದ ಸೈನಿಕರು ಸಾವನ್ನಪ್ಪಿದರು ಇದರ ಜೊತೆಗೆ ಅಸಂಖ್ಯಾತ ಬರ್ಮನ್ ಸೈನಿಕರು ಮತ್ತು ನಾಗರಿಕರು ಸಾವನ್ನಪ್ಪಿದರು. ಅಂದಾಜು ವೆಚ್ಚ ಸುಮಾರು ಐದು ಮಿಲಿಯನ್ ಪೌಂಡ್ ಸ್ಟೆರ್ಲಿಂಗ್ ರಿಂದ 13 ಮಿಲಿಯನ್ ಪೌಂಡ್ ಸ್ಟೆರ್ಲಿಂಗ್ (18.5 ಬಿಲಿಯನ್‌ರಿಂದ 48 ಬಿಲಿಯನ್, 2006ರ ಅಮೆರಿಕನ್ ಡಾಲರ್‍ ಮೌಲ್ಯದಂತೆ)[] ವೆಚ್ಚ ಬಂದಿದ್ದರಿಂದ ಬ್ರಿಟೀಷ್‌ ಕಾಲದ ಭಾರತವು 1833ರ ಹೊತ್ತಿಗೆ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಒಳಗಾಯಿತು.[]

ಬರ್ಮನ್‌ನರಿಗೆ ಇದು ಅವರ ಸ್ವಾತಂತ್ರ್ಯದ ಅಂತ್ಯದ ಪ್ರಾರಂಭವಾಗಿತ್ತು. ಮೂರನೇ ಬರ್ಮನ್ ಸಾಮ್ರಾಜ್ಯವು ಕೆಲವೇ ದಿನಗಳವರೆಗೆ ಭಾರತದ ವೂರ್ವ ಭಾಗಗಳಲ್ಲಿ ಆಂಗ್ಲರನ್ನು ದುರ್ಬಲಗೊಳಿಸಿದರು ಆದರೆ ಹೆಚ್ಚು ದಿನಗಳವರೆಗೆ ಇದನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.[] ಆ ವೇಳೆಯಲ್ಲಿ ಯುರೋಪ್ ಜನರಿಗೇ ಭಾರವಾದ ಅಂದರೆ ಒಂದು ಮಿಲಿಯನ್ ಪೌಂಡ್(5 ಮಿಲಿಯನ್ ಅಮೆರಿಕನ್ ಡಾಲರ್‍‌‍ಗಿಂತ ಹೆಚ್ಚು)ರಷ್ಟು ದೊಡ್ಡಮೊತ್ತದ ಕಪ್ಪಕಾಣಿಕೆಯನ್ನು ಪಾವತಿಸಲು ಬರ್ಮನ್‌ನರು ಹೆಣಗಾಡಿದರು.[] ಹೀಗೆ ಮತ್ತೂ ದುರ್ಬಲಗೊಂಡ ಬರ್ಮಾ ದೇಶದ ಮೇಲೆ ಬ್ರಿಟಿಷರು ಮತ್ತೆರಡು ಭಾರಿ ಯುದ್ದ ಮಾಡಿ 1885ರಲ್ಲಿ ಪೂರ್ತಿ ದೇಶವನ್ನು ನುಂಗಿಹಾಕಿದರು.

ಕಾಲಾನುಕ್ರಮಣಿಕೆ

[ಬದಲಾಯಿಸಿ]

ಪ್ರತಿಕೂಲ ಹವಾಮಾನ, ಅದರಲ್ಲೂ ಮಳೆಗಾಲದಲ್ಲಿ ವರ್ಷದ ಮೊದಲ ಮತ್ತು ಕೊನೆಯ ತಿಂಗಳುಗಳಲ್ಲಿ ಸೈನ್ಯ ಕಾರ್ಯಾಚರಣೆಯನ್ನು ವಿಸ್ತರಿಸಲಾಗುತ್ತಿತ್ತು.

ಕಾರಣಗಳು

[ಬದಲಾಯಿಸಿ]

18 ನೇ ಶತಮಾನದ ಕೊನೆಯ ಭಾಗದಲ್ಲಿ ಮತ್ತು 19 ನೇ ಶತಮಾನದ ಮೊದಲ ಭಾಗದಲ್ಲಿ ಬರ್ಮನ್‌ನರು ನೆರೆಯ ಪ್ರದೇಶದ ಮೇಲೆ ದಾಳಿ ಮಾಡಿ ರಾಜ್ಯ ವಿಸ್ತರಣೆ ಕಾರ್ಯ ಮಾಡುತ್ತಿದ್ದರು ಆದರೆ ಅಂತಿಮವಾಗಿ ಭಾರತದಲ್ಲಿ ಬ್ರಿಟಿಷ್ ಆಡಳಿತವಿದ್ದುದರಿಂದ ಇದರಿಂದ ಹಿಂದೆ ಸರಿಸಲ್ಪಟ್ಟರು.

1784ರಲ್ಲಿ ಬರ್ಮಾ ಸಾಮ್ರಾಜ್ಯವು ಅರಾಕನ್ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಮಾಡಿತು.ಇದು ಬರ್ಮಾ ಸಾಮ್ರಾಜ್ಯದ ಗಡಿಯನ್ನು ಬ್ರಿಟೀಷ್‌ ಭಾರತದ ಅಂಚಿನವರೆಗೆ ವಿಸ್ತರಿಸಲು ಕಾರಣವಾಯಿತು. ಬರ್ಮಾದ ಆಂತರಿಕ ನಿರ್ಮಾಣ ಯೋಜನೆಗಳಿಗೆ ಗುಲಾಮರನ್ನು ಪೂರೈಸುವ ಸಲುವಾಗಿ ಅರಾಕನ್ ರಾಜ್ಯವನ್ನು ಮತ್ತು ಅದರ ಸಂವಿಧಾನವನ್ನು ನಾಶಪಡಿಸಿದ್ದರ ಫಲಶ್ರುತಿಯಾಗಿ ಸಮಾಜದಲ್ಲಿ ದಂಗೆಯುಂಟಾಯಿತು ಮತ್ತು ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರು ಭಾರತದ ಸಮೀಪದ ಗಡಿಯಲ್ಲಿ ಜಮಾಯಿಸಿದರು. ಉದಾಹರಣೆಗೆ 1798 ರಲ್ಲಿ ಸ್ಥಳೀಯ ನಾಯಕರಾದ’ಝಾ’ ನಂತರ ’ದೀ’ ಮತ್ತು 10000 ಅರಾಕನ್ನರು ಗುಂಪು ಗುಂಪಾಗಿ ಮನೆಗಳನ್ನು ತೊರೆದು ನಿಯಮಬಾಹಿರವಾಗಿ ಭಾರತದೊಳಕ್ಕೆ ಪಸರಿಸಿಕೊಂಡರು. ಯಾವ ಬರ್ಮಾ ದೇಶವು ಬರ್ಮನ್‌ನರ ಆಸ್ತಿಯೆಂದು ಕರೆಯಲ್ಪಡುತ್ತಿತ್ತೋ ಅದೆಲ್ಲವೂ ನಿರಾಶ್ರಿತರ ಕಾರಣದಿಂದ ಭಾರತದೊಂದಿಗೆ ಜೋಡಿಸಿಕೊಳ್ಳಲು ಪ್ರಾರಂಭವಾಯಿತು.

1817ರ ಪ್ರಾರಂಬದಲ್ಲಿ ಬರ್ಮನ್‌ನರು ಪೂರ್ವೋತ್ತರ ಭಾರತವಾದ ಆಸ್ಸಾಂ ಪ್ರದೇಶದಲ್ಲಿ ದೇಶ ಪ್ರವೇಶಿಸಿದರು. ಬರ್ಮನ್‌ ಸೈನ್ಯವು ಆಸ್ಸಾಂ ರಾಜ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದರು ಆದರೆ ಅದೇ ಸಮಯದಲ್ಲಿ ಅರಾಕನ್ ನಲ್ಲಿ ಆದಂತೆಯೇ ಗಡಿಪ್ರದೇಶದಲ್ಲಿ ದಂಗೆ ಮತ್ತು ನಿರಾಶ್ರಿತರ ಸಮಸ್ಯೆಯ ಪುನರಾವರ್ತನೆಯನ್ನು ಎದುರಿಸಬೇಕಾಯಿತು.

1819ರಲ್ಲಿ ಬರ್ಮನ್‌ನರು ರಾಜಾ ’ಬಾಗ್ಯಿಡಾ’(1819-1837) ಎನ್ನುವವನ ಪಟ್ಟಾಭಿಷೇಕಕ್ಕೆ ಮಣಿಪುರ ರಾಜ್ಯದ ರಾಜನು ಬಾರದಿರುವುದರಿಂದ ಸಿಟ್ಟಿಗೆದ್ದು ಮಣಿಪುರವನ್ನು ಹಾಳುಗೆಡಗುವ ಉದ್ದೇಶದಿಂದ ದಾಳಿ ಮಾಡಿದರು. ಮಣಿಪುರವನ್ನು ಭಾರೀ ಪ್ರಮಾಣದಲ್ಲಿ ಲೂಟಿ ಮಾಡಿ ಅಲ್ಲಿನ ಜನರನ್ನು ಜೀತದಾಳುಗಳನ್ನಾಗಿ ಬರ್ಮಾಕ್ಕೆ ಕರೆತಂದರು. ಇಂತಹುದೇ ದಾಳಿ ಮತ್ತು ಲೂಟಿಮಾಡುವಿಕೆಯು ಪಕ್ಕದ ರಾಜ್ಯವಾದ ಕ್ಯಾಚರ್‍‌‌ನ ಮೇಲೂ ನಡೆಯಿತು. ಅಲ್ಲಿನ ರಾಜನು ಸಹಾಯಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯದ ಮೊರೆ ಹೋದನು. ಗಡಿಯಾಚೆಗಿರುವ ಇತರ ರಾಜ್ಯಗಲೂ 1823ರಲ್ಲಿ ಬರ್ಮನ್‌ನರ ಬೆದರಿಕೆಗೆ ಒಳಗಾಯಿತು.

1795ರಲ್ಲಿ ಅಮರಾಪುರದ ರಾಜ ಬೊಡೌಪಯನಿಗೆ ಮೈಕಲ್ ಸೈಮ್ಸ್‌ನ ರಾಯಭಾರ

ಬ್ರಿಟಿಷರು ಹಿಂದಿನ ಮೂವತ್ತು ವರ್ಷಗಳವರೆಗೆ ಪೂರ್ವ ಬರ್ಮಾ ಗಡಿಯಲ್ಲಿ ಶಾಂತಿ ಮತ್ತು ಸ್ಥಿರ ಆಡಳಿತ ನೀಡುವುದಕ್ಕಾಗಿ ಕೆಲವು ಶಾಂತಿ ಸೂತ್ರಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರಯತ್ನಿಸಿದರು. ಭಾರತದ ಗವರ್ನರ್ ಜನರಲ್, ಸರ್ ಜಾನ್ ಶೋರ್ ಇವರು ಕ್ಯಾಪ್ಟನ್ ಮೈಕಲ್ ಸೈಮ್ಸ್‌ನನ್ನು ಅಮರಾಪುರಕ್ಕೆ ಒಂದು ಕಾರ್ಯದ ಉದ್ದೇಶದಿಂದ 1795ರಲ್ಲಿ[] ಕಳುಹಿಸಿದನು. ಈ ಸಮಯದಲ್ಲಿ ಅಲೌಂಗ್‌‍ಪಾಯಾ (1752-1760) ರಾಜನ ಮಗ ಬೋಡಾಪಾಯ ರಾಜನು (1781-1819) ಕೊನ್‌ಬೌಂಗ್‌ ಸಾಮ್ರಾಜ್ಯವನ್ನು ಹುಟ್ಟುಹಾಕಿದನು ಮತ್ತು ಈ ಮೂಲಕ ಮೂರನೇ ಬರ್ಮಾ ಸಾಮ್ರಾಜ್ಯಕ್ಕೆ ನಾಂದಿಹಾಡಿದನು.

1823ರ ಶರತ್ಕಾಲದಿಂದ- 1824ರ ವಸಂತಕಾಲ

[ಬದಲಾಯಿಸಿ]

1823ರ ಚಳಿಗಾಲದಿಂದ ಬಂಗಾಲದ ಗೌರ್ನರ್‍ ಜನರಲ್ ಲಾರ್ಡ ’ಅಮ್ರೆಸ್ಟ್‌‍’ರವರು ಅರಾಕನ್ ಪಟ್ಟಿಯಲ್ಲಿ ಬರುವ ಶಾಪುರೀ ಎಂಬ ದ್ವೀಪವನ್ನು ಈಸ್ಟ್‌‍ ಇಂಡಿಯಾ ಕಂಪನಿಯ ಹಕ್ಕಾಗಿ ವಶಪಡಿಸಿಕೊಳ್ಳುವ ಪ್ರಸಂಗವನ್ನು ಎದುರಿಸಬೇಕಾಯಿತು. ರಾಜ ಆವಾನ ಸುಪರ್ಧಿಯಲ್ಲಿದ್ದ ಪ್ರದೇಶವನ್ನು ಬರ್ಮೀಯರ ಪ್ರದೇಶವೆಂದುಕೊಂಡು ಬರ್ಮಾದ ಮೇಲೆ ದಾಳಿ ಮಾಡಲಾಯಿತು ಮತ್ತು ಅದನ್ನು ಮರುವಶಪಡಿಸಿಕೊಳ್ಳಲಾಯಿತು.[]

23 ಸೆಪ್ಟೆಂಬರ್‍ 1823 ರಂದು ಬರ್ಮಾ ಸೈನಿಕರು ಶಾಪುರೀ ದ್ವೀಪದ (ಬರ್ಮಾದ ಭಾಷೆಯಲ್ಲಿ ಶಿನ್‌ಮಾಂಬ್ಯೂ ಕ್ಯೂಂ ) ಚಿತ್ತಗಾಂಗ್‌‌‌ನ ಸಮೀಪ ಬ್ರಿಟಿಷರ ಮೇಲೆ ಆಕ್ರಮಣ ಮಾಡಿ ಹಲವು ಸೈನಿಕರನ್ನು ಕೊಂದು ಆರು ರಕ್ಷಣಾ ಸಿಬ್ಬಂದಿಗಳನ್ನು ಗಾಯಗೊಳಿಸಿದರು. ಬ್ರಿಟಿಷರ ರಕ್ಷಣೆಯಲ್ಲಿದ್ದ ಆಸ್ಸಾಂ ಮತ್ತು ಕ್ಯಾಚರ್‍‌‍ಗಳ ಮೇಲೆ 1824 ರಲ್ಲಿ ಬರ್ಮಾ ಸೈನಿಕರು ಎರಡು ತಂಡಗಳಲ್ಲಿ ದಾಳಿ ಮಾಡಲು ಪ್ರವೇಶಿಸಿದರು. ಕ್ಯಾಚರ್‍ ರಾಜ್ಯವು ಬರ್ಮಾ ಸೈನ್ಯದ ಹಿಂಸೆ ಮತ್ತು ಬೆದರಿಕೆಗಳ ಪುನರಾವರ್ತನೆಯನ್ನು ಅನುಭವಿಸಿತು. ಈ ದಾಳಿಯ ಮುಖ್ಯ ಉದ್ದೇಶವೇನೆಂದರೆ, ಈ ಪ್ರದೇಶವು ಬಂಗಾಳ ಮತ್ತು ಇತರ ಪ್ರದೇಶಗಳ ಮೇಲೆ ಆಕ್ರಮಣ ಮಾಡಲು ಆಯಕಟ್ಟಿನ ಸ್ಥಳವಾಗಿತ್ತು. 1824 ಮಾರ್ಚ 5 ರಂದು ಬರ್ಮಾದೊಂದಿಗೆ ಯುದ್ದ ಘೋಷಣೆಯಾಯಿತು. ಮೇ 17 ರಂದು ಬರ್ಮಾ ಪಡೆಯು ಚಿತ್ತಗಾಂಗ್ ಪ್ರದೇಶವನ್ನು ಆಕ್ರಮಿಸಿತು ಮತ್ತು ಮುಂದೆ ’ರಮು’ ಪ್ರದೇಶದಲ್ಲಿ ಸಿಪಾಯಿಗಳ ಮತ್ತು ಪೋಲೀಸರ ಎರಡು ಪ್ರತ್ಯೇಕ ತಂಡಗಳನ್ನು ಮಾಡಿ ಕಾರ್ಯಾಚರಣೆಗಿಳಿಸಿತು. ಆದರೆ ಇದರ ಯಶಸ್ಸನ್ನು ವಿಶ್ಲೇಷಣೆ ಮಾಡಲಿಲ್ಲ.

10 ಜೂನ್ 1824ರಂದು ರಂಗೂನ್ ಬಳಿ ಕೆಮೆನ್‌ಡೈನ್‌ನ ಕಡಿಮೆ ಕಾಪುಗೋಡೆಗಳ ಮೇಲೆ ಲಗ್ಗೆಹಾಕುವಿಕೆ

ಆದಾಗಿಯೂ ಭಾರತದ ಬ್ರಿಟಿಷ್ ಆಡಳಿತವು ಶತ್ರು ದೇಶಗಳ ಮೇಲೆ ಯುದ್ದ ಮುಂದುವರೆಸುವ ನಿರ್ನಯವನ್ನು ಅಂಗೀಕರಿಸಿತು. ’ಕೊಮೋಡೋರ್‍ ಚಾರ್ಲ್ಸ್ ಗ್ರಾಂಟ್’ ಮತ್ತು ಮೇಜರ್‍ ಜನರಲ್ ’ಸರ್‍ ಆರ್ಕಿಬಾಲ್ಡ್ ಕ್ಯಾಂಪ್ಬೆಲ್ ’ ನೇತ್ರತ್ವದ ಸೈನ್ಯವು ರಂಗೂನ್ ನದಿಯನ್ನು ದಾಟಿ ಮೇ 10, 1824 ರಂದು ರಂಗೂನ್ ಪಟ್ಟಣವನ್ನು ತಮ್ಮ ಆಡಳಿತಕ್ಕೆ ತೆಗೆದುಕೊಂಡರು. ಪ್ರಾರಂಭದಲ್ಲಿ ಪ್ರತಿರೋಧ ಒಡ್ಡಿದರೂ ನಂತರ ರಂಗೂನ್ ರಾಜ್ಯ ತಮ್ಮ ಸೈನಿಕರ ಸಮೇತ ಶರಣಾಯಿತು. ಬರ್ಮನ್‌ನರು ರಕ್ಷಣಾ ಉದ್ದೇಶದಿಂದ ಪಟ್ಟಣದ ಹೊರಗೆ ನಿರ್ಮಿಸಿದ್ದ ಸೇನಾ ನೆಲೆಗಳನ್ನು ಪೂರ್ತಿಯಾಗಿ ನಾಶಪಡಿಸಿ ಅಲ್ಲಿನ ನಿವಾಸಿಗಳೆಲ್ಲರನ್ನೂ ಒಕ್ಕಲೆಬ್ಬಿಸಲಾಯಿತು. ಮೇ 28 ರಂದು’ಕ್ಯಾಂಪ್‌ಬೆಲ್‌’ನು ಶಕ್ತಿಯುತ ಬಂದೂಕುಗಳಿಂದ ಕಾರ್ಯಾಚರಿಸಬಹುದಾದ ಹತ್ತಿರದ ನೆಲೆಗಳ ಮೇಲೆಯೂ ದಾಳಿ ಮಾಡಲು ಆದೇಶಿಸಿದನು. ಜೂನ್ 10 ರಂದು ’ಕೆಮ್ಮೆಂಡಿನೆ’ ಎಂಬ ಗ್ರಾಮದ ಮೇಲೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ದಾಸ್ತಾನನ್ನು ಗುರಿಯಿರಿಸಿ ಮತ್ತೊಂದು ದಾಳಿ ಮಾಡಿದರು. ಇಲ್ಲಿನ ಕೆಲವು ಪ್ರದೇಶಗಳು ನದಿಯ ಮೂಲಕ ಯುದ್ದ ನೌಕೆಗಳ ಫಿರಂಗಿಗಳಿಂದ ದಾಳಿ ಮಾಡಲ್ಪಟ್ಟಿತು ಮತ್ತು ಈ ಘಟನೆಯು ಬರ್ಮನ್‌ನರನ್ನು ಹಿಮ್ಮೆಟ್ಟಿಸಲು ಕಾರಣವಾಯಿತು.

ಯುದ್ದವ್ಯೂಹವು ದೇಶದಲ್ಲಿ ಅಸಮರ್ಪಕ ರೀತಿಯಲ್ಲಿ ರಚನೆಯಾಗಿತ್ತು ಮತ್ತು ಇದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಡಿರಲಿಲ್ಲ ಎಂಬುದು ತದನಂತರ ಕೂಡಲೇ ಗೋಚರವಾಯಿತು. ಬರ್ಮನ್‌ನರ ಒಂದು ರಕ್ಷಣಾ ನೀತಿಯಾದ ಯುದ್ದವಿರಾಮ ಅಥವಾ ಶತ್ರುಗಳ ಜೊತೆಗೆ ಯುದ್ದ ನಿರಾಕರಣೆಯು ಅತಿಕ್ರಮಣದಾರರಿಂದುಂಟಾಗುವ ಬಹುದೊಡ್ಡ ಕಷ್ಟನಷ್ಟಗಳನ್ನು ಕಡಿಮೆಗೊಳಿಸಿತು. ಅಲ್ಲಿನ ಜನರ ಆರೋಗ್ಯ ಮತ್ತು ಬಲ ಕಡಿಯಾಯಿತು ಮತ್ತು ಬೆದರಿಕೆಯ ಮೂಲಕ ಆ ಸೈನಿಕರ ಸಾಲುಗಳನ್ನು ಚದುರಿಸಲಾಯಿತು. ರಾಜಾ ’ಅವಾ’ ಎಂಬುವವನು ಮುಂಚೂಣಿ ಸೈನ್ಯದ ಬಲವರ್ಧನೆ ಮಾಡಿದನು ಮತ್ತು ಜೂನ್ ಮೊದಲ ಭಾಗದಲ್ಲಿ ಬ್ರಿಟಿಷ್ ಪ್ರದೇಶದ ಮೇಲೆ ದಂಡೆತ್ತಿದನು. ಆದರೆ ಯಶಸ್ವಿಯಾಗಲಿಲ್ಲ. ಜೂನ್ 8ರಂದು ಬ್ರಿಟಿಷರು ಒಂದು ಹೊಸ ಯುದ್ದ ತಂತ್ರ ಹೂಡಿದರು. ಬರ್ಮನ್‌ನರು ಹಿಂದಕ್ಕೆ ಸರಿಯಲ್ಪಟ್ಟರು ಮತ್ತು ಗಟ್ಟುಮುಟ್ಟಾಗಿ ನಿರ್ಮಿಸಲ್ಪಟ್ಟ ಕೋಟೆ ಕೊತ್ತಲಗಳು, ಯುದ್ದ ಬಂಕರ್‍ ಗಳು ಹಾಗೂ ಫಿರಂಗಿಗಳನ್ನು ನಿದಾನವಾಗಿ ಬಿಟ್ಟು ಹೋದರು.

1824 ರ ಶರತ್ಕಾಲದಿಂದ 1825 ರ ವಸಂತಕಾಲ

[ಬದಲಾಯಿಸಿ]

ಅಗಷ್ಟ್ ಕೊನೆಯಲ್ಲಿ ’ಥರಾವಡಿ’ ರಾಜ್ಯದ ರಾಜನು ಮಾಡಿದ ದಾಳಿಯ ಹೊರತಾಗಿ ಬರ್ಮನ್‌ನರು ಬ್ರಿಟಿಷರಿಗೆ ಜುಲೈ ಮತ್ತು ಅಗಸ್ಟ್‌ ತಿಂಗಳಿನಲ್ಲಿ ಆಕ್ರಮಣ ಮಾಡದೇ ಇರಲು ಒಪ್ಪಿಗೆಕೊಟ್ಟರು. ಈ ವಿರಾಮವನ್ನು ’ಕ್ಯಾಂಪ್ಬೆಲ್’ನು ’ಟಾವೋಯ್’ ಮತ್ತು ’ಮೆರ್ಗ್ಯೂ’ ರಾಜರ ಆಡಳಿತ ಕಛೇರಿ ಹಾಗೂ ತೇನಾಸ್ಸೆರಿಮ್ ರಾಜ್ಯದ ಪೂರ್ತಿ ಕರಾವಳಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಉಪಯೋಗಿಸಿಕೊಂಡನು. ಇದೊಂದು ಪ್ರಮುಖ ಕಾರ್ಯಾಚರಣೆಯಾಗಿತ್ತು ಏಕೆಂದರೆ ಇಲ್ಲಿನ ಜನರು ಆರೋಗ್ಯವಂತರಾಗಿದ್ದು, ಬ್ರಿಟಿಷರಿಂದ ಗಾಯಗೊಂಡ ಸುಮಾರು ಮೂರು ಸಾವಿರ ಮಂದಿ ಸೈನಿಕರು ಮತ್ತು ಇತರ ನಾಗರಿಕರನ್ನು ಶುಶ್ರೂಷೆ ಮಾಡಿ ಗುಣಪಡಿಸಿ ಪುನಃ ಆರೋಗ್ಯವಂತರನ್ನಾಗಿ ಮಾಡಲು ಸಾಧ್ಯವಾಯಿತು. ಈ ಸಮಯದಲ್ಲಿ ಹಳೆಯ ಪೋರ್ಚುಗೀಸರ ಕೋಟೆಗೆ ಮತ್ತು ಪೆಗು ನದಿಯ ದಡದಲ್ಲಿದ್ದ ಸಿರಿಯಾಮ್‌ ಕಾರ್ಖಾನೆಯ ಮೇಲೆ ಸೈನ್ಯವನ್ನು ನುಗ್ಗಿಸಲಾಯಿತು. ಅಕ್ಟೋಬರ್‍ ತಿಂಗಳಿನಲ್ಲಿ ಮಾರ್ಟ್‌ಬಾನ್‌‍ನಲ್ಲಿಯ ಬ್ರಿಟೀಷ್ ಆಡಳಿತ ಕಛೇರಿಯನ್ನು ನಿರ್ಮಿಸಲಾಯಿತು.

ಅಕ್ಟೂಬರ್‍ ಅಂತ್ಯದಲ್ಲಿ ಮಳೆಗಾ ಮುಗಿಯುತ್ತಿದ್ದಂತೆ ಪರಾಭವ ಹೊಂದಿದ ’ಅವಾ’ ರಾಜ್ಯದಲ್ಲಿ ’ಅರಾಕನ್’ ರಾಜ್ಯದ ಅಪಾರ ಸಂಖ್ಯೆಯ ಅನುಭವಿ ಸೈನಿಕರನ್ನು ಅಲ್ಲಿನ ಪ್ರಸಿದ್ದ ದಂಡನಾಯಕನಾದ ಮಹಾಬಂಡುಲಾನ ನೇತ್ರತ್ವದಲ್ಲಿ ಕರೆತರಲಾಯಿತು. ನವೆಂಬರ್‍ ಅಂತ್ಯದಲ್ಲಿ’ಬಂಡುಲಾ’ ನು ತನ್ನ ದೇಶದ ರಕ್ಷಣೆಗೆ ಇದ್ದ 30000 ಸೈನಿಕರೊಂದಿಗೆ ಬಂದು, ಆಗ ತನ್ನ ದೇಶದಲ್ಲಿ ಕೇವಲ 5000 ದಕ್ಷ ಸೈನಿಕರನ್ನು ಮಾತ್ರ ಹೊಂದಿದ್ದ ಚಾಂಪೆಲ್ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ಹಿಡಿತದಲ್ಲಿದ್ದ ರಂಗೂನ್ ಮತ್ತು ಕೆಮ್ಮೆಂಡೈನ್ ಪ್ರದೇಶವನ್ನು ಸುತ್ತುವರೆದನು. ಬರ್ಮನ್‌ನರು ತಮ್ಮ ದೊಡ್ಡ ಸೈನ್ಯದೊಂದಿಗೆ ಪುನಃ ಕೆಮ್ಮೆಂಡೈನ್ ಮೇಲೆ ಆಕ್ರಮಣ ಮಾಡಿದರು ಆದರೆ ಸೋಲನುಭವಿಸಿದರು ಮತ್ತು ದಿಸೆಂಬರ್‍ 7, 1824ರಂದು ಬಂಡುಲಾನು ಚಾಂಪೆಲ್ ಸಾರಿದ ನ್ಯಾಯಬಾಹಿರವಾದ ಕುಯುಕ್ತಿಯ ಯುದ್ದದಿಂದ ಸೋತುಹೋದನು. ನದಿಯ ಮೇಲೆ ಇದ್ದ ಭದ್ರ ಹಿಡಿತವೂ ತಪ್ಪದ್ದರಿಂದ ಶತ್ರುಗಳು ರಾಜ್ಯದಲ್ಲಿ ಮತ್ತು ಕೋಟೆಗಳಲ್ಲಿ ಭದ್ರವಾಗಿ ಬೇರೂರಿದರು. ದಿಸೆಂಬರ್‍ 15ರ ವೇಳೆಗೆ ಇಲ್ಲಿಯೂ ಬ್ರಿಟಿಷರ ದಾಳಿಯಾಗಿ ಆಡಳಿತದ ಗೊಂದಲವುಂಟಾಗಿ ನಿರ್ಗಮಿಸಬೇಕಾಯಿತು.

ಚಾಂಪೆಲ್‌‍ನು ಈಗ ಇರವಡ್ಡಿ ನದಿಯ ಮೇಲು ಪ್ರದೇಶವಾದ ಪ್ರೋಮ್ ಕಡೆಗೆ ಮುಂದುವರೆಯಲು ತೀರ್ಮಾನಿಸಿದನು.100 miles (160 km) ಫೆಬ್ರುವರಿ 13 1825 ರಂದು ಜನರಲ್ ವ್ಹಿಲೌಗ್ಬಿ ಕೋಟನ್ ನೇತ್ರತ್ವದಲ್ಲಿ ಒಂದು ಕಡೆ ಭೂದಳ ಮತ್ತು ಇನ್ನೊಂದು ಕಡೆ ನೌಕಾಹಡಗುಗಳ ಮೂಲಕ ಗುಂಪುಗಳಾಗಿ ದಾನುಬ್ಯು ಪ್ರದೇಶದ ಮೇಲೆ ನಿಯಂತ್ರಣ ಪಡೆದುಕೊಳ್ಳಲು ಮುಂದುವರೆದರು. ಯಾವಾಗ ಮಾರ್ಚ 11 ರಂದು ದಾನುಬ್ಯು ದ ಮೇಲೆ ನಡೆದ ದಾಳಿ ವಿಫಲವಾಗಿದೆಯೆಂದು ಗುಪ್ತಚರ ವರದಿ ಬಂದಿತೋ ಅಲ್ಲಿಯವರೆಗೆ ಅವನು ಭೂಸೈನ್ಯದ ನೆರವಿನೊಂದಿಗೆ ಮುಂದುವರಿಯುತ್ತಲೇ ಇದ್ದನು. ನಂತರ ಹಿಮ್ಮಟ್ಟಿದನು ಹಾಗೂ ಮಾರ್ಚ 27 ರಂದು ’ಕಾಟನ್’ ನ ಸೈನಿಕ ಬಲದೊಂದಿಗೆ ಸಂಪರ್ಕ ಹೊಂದಿ ಎಪ್ರಿಲ್ 2 ರ ವರೆಗೆ ಯಾವುದೇ ಪ್ರತಿರೋಧವಿಲ್ಲದೇ ದಾನುಬ್ಯುದಲ್ಲೇ ಭದ್ರವಾಗಿ ಬೇರೂರಿದನು. ನಂತರ ಬಾಂಬ್‌‍ನಿಂದ ಬಂಡುಲಾ ಕೊಲ್ಲಲ್ಪಟ್ಟನು. ಕೊನೆಗೆ 25 ಎಪ್ರಿಲ್ 1825 ರಂದು ಬ್ರಿಟಿಷರು ಪ್ರವೇಶಿಸಿ ಮಳೆಗಾಲ ಪುರ್ತಿ ಅಲ್ಲೇ ಉಳಿದರು.

1825 ರ ಶರತ್ಕಾಲದಿಂದ 1826 ರ ವಸಂತಕಾಲ

[ಬದಲಾಯಿಸಿ]

17 ಸೆಪ್ಟೆಂಬರ್‍ 1825 ರಂದು ಕದನ ವಿರಾಮವು ಮುಕ್ತಯವಾಯಿತು. ಬೇಸಿಗೆಯ ಕಾಲದಲ್ಲಿ ಜನರಲ್ ಜೋಸೆಫ್ ವಾಂಟನ್ ಮೋರಿಸನ್‌‍ನು ಅರಾಕನ್ ನ ಆಡಳಿತವನ್ನು ವಶಪಡಿಸಿಕೊಂಡನು. ಉತ್ತರದಲ್ಲಿ ಬರ್ಮನ್ನರು ಆಸ್ಸಾಂ ನಿಂದ ಹೊರಹಾಕಲ್ಪಟ್ಟರು ಮತ್ತು ಬ್ರಿಟಿಷರು ಕ್ಯಾಚರ್‍ ನಲ್ಲಿ ಪ್ರಗತಿ ಸಾಧಿಸಿದರೂ ಕೂಡಾ ಕೊನೆಯಲ್ಲಿ ದುರ್ಗಮ ಪ್ರದೇಶ ಮತ್ತು ದಟ್ಟ ಅರಣ್ಯದ ಕಾರಣದಿಂದ ಅಡ್ಡಿಯುಂಟಾಯಿತು.

ಕದನವಿರಾಮವು 3 ನವೆಂಬರ್‍ 1825ರಂದು ಮುಕ್ತಾಯವಾಯಿತು. 9000 ಮಂದಿ ಅವಾ ಸೈನಿಕರು 3000 ಯುರೋಪಿಯನ್ನರು ಮತ್ತು 2000 ಸ್ಥಳೀಯ ಸೈನಿಕರ ಕಾವಲಿದ್ದ ಪ್ರೋಮ್ ಬ್ರಿಟಿಷ್ ವಸಾಹತುಗಳ ಮೇಲೆ ಮುಂದುವರೆದರು. ಆದಾಗಿಯೂ ಸಹ ಬ್ರಿಟಿಷರೇ ಜಯ ಸಾಧಿಸಿದರು. ಹಲವು ಕಾರ್ಯಗಳ ನಂತರ ಎಲ್ಲಿ ಬರ್ಮನ್‌ನರು ಆಕ್ರಮಣ ಮಾಡಿ ಭಾಗಶಃ ಗೆಲುವು ಸಾಧಿಸಿದರೋ, ಚಾಂಪೆಲ್ ನು ಸಹ ಡಿಸೆಂಬರ್‍1 ರಂದು ವಿವಿಧ ಸೇನಾ ವಿಭಾಗಗಳ ಮೇಲೆ ದಾಳಿ ಮಾಡಿದನು ಮತ್ತು ಅವರ ಹಿಡಿತದಿಂದ ಯಶಸ್ವಿಯಾಗಿ ಮುಕ್ತಗೊಳಿಸಿ ಬೇರೆ ಬೇರೆ ದಿಕ್ಕುಗಳಿಗೆ ಚೆಲ್ಲಾಪಿಲ್ಲಿ ಮಾಡಿದನು. 10000ರಿಂದ 12000 ಜನರ ಬಲಹೊಂದಿದ ಗಾಬರಿ ಹುಟ್ಟಿಸುವ ಪ್ರಮಾಣದ ಸೈನಿಕರಿಂದ ಅತಿಕ್ರಮಿಸಿಕೊಂಡಿದ್ದ ಬರ್ಮನ್‌ನರು ಇರವಡ್ಡಿ ಸಹಿತವಾಗಿ ಮಲುನ್‌‍ನಿಂದ ನಿರ್ಗಮಿಸಿದರು. ಡಿಸೆಂಬರ್‍ 26 ರಂದು ಬ್ರಿಟಿಷ್ ಕ್ಯಾಂಪ್‌‍ಗೆ ತಾತ್ಕಾಲಿಕ ಕದನ ವಿರಾಮದ ಪ್ರಸ್ತಾವನೆಯನ್ನು ಕಳುಹಿಸಿದರು. ನಂತರ ಮಾತುಕತೆ ನಡೆದು ಈ ಕೆಳಗಿನ ಷರತ್ತಿಗೊಳಪಟ್ಟು ಶಾಂತಿ ಕಾಪಾಡಲು ನಿರ್ಧರಿಸಲಾಯಿತು:

  1. ಬರ್ಮನ್‌ನರು ಯುದ್ದದ ಹಾನಿಯನ್ನು ಪೂತಿಯಾಗಿ ತುಂಬಿಕೊಡುವವರೆಗೆ ಅರಾಕನ್, ಮೆರ್‍ಗುಯ್, ಟಾವೋಯ್ ಮತ್ತು ಯೇ ಹಾಗೂ ತಾತ್ಕಾಲಿಕವಾಗಿ ಅತಿಕ್ರಮಿಸಿಕೊಂಡ ದಕ್ಷಿಣ ಬರ್ಮಾದ ದೊಡ್ಡ ಪ್ರದೇಶ ವನ್ನು ಬಿಟ್ಟುಕೊಡಬೇಕು.
  2. ಬರ್ಮಾದ ರಾಜನು ಬಿಟ್ಟುಕೊಟ್ಟ ಅಸ್ಸಾಂ, ಮಣಿಪುರ ಮತ್ತು ನೆರೆಯ ಸಣ್ಣ ಪುಟ್ಟ ರಾಜ್ಯಗಳ ಪ್ರದೇಶವನ್ನು ಮರಳಿಸಬೇಕು.
  3. ಬ್ರಿಟಿಷ್ ಈಸ್ಟ ಇಂಡಿಯಾ ಕಂಪನಿಯು ಯುದ್ದ ಪರಿಹಾರ ಮೊತ್ತವಾಗಿ ಒಂದು ಕೋಟಿ ರೂಪಾಯಿಗಳನ್ನು ನೀಡಬೇಕು.
  4. ಎರಡೂ ದೇಶಗಳ ಖಾಯಂ ನಿವಾಸಿಗಳ ವಾಸಕ್ಕೆ ಅನುವು ಮಾಡಿಕೊಡಬೆಕು ಆದರೆ ಬರ್ಮಾದ ರಾಜಧಾನಿಯಲ್ಲಿ 50 ಜನರ ಬೆಂಗಾವಲು ಪಡೆಯಿರಿಸಬೇಕು.
  5. ಬ್ರಿಟಿಷ್ ಹಡಗುಗಳು ಬರ್ಮಾ ಬಂದರುಗಳಲ್ಲಿ ಮೊದಲಿನಂತೆ ಚುಕ್ಕಾಣಿ ಫಲಕ ಮತ್ತು ಬಂದೂಕುಗಳನ್ನು ಇಳಿಸಿಕೊಳ್ಳಲು ವಿಸ್ತ್ರತ ನಿಬಂಧನೆಗಳನ್ನು ಹೇರಬಾರದು.

ಈ ಸೂತ್ರಗಳು ಬ್ರಿಟಿಷ್ ಅಧಿಕಾರಿಗಳಿಂದ ನೆಪಮಾತ್ರಕ್ಕೆ ಒಪ್ಪಲ್ಪಟ್ಟಿತು ಮತ್ತು ಸಹಿ ಮಾಡಲ್ಪಟ್ಟಿತು. ಆದಾಗಿಯೂ ಬರ್ಮನ್‌ನರಿಗೆ ಸಹಿ ಮಾಡಲು ಮನಸ್ಸಿಲ್ಲ ಮತ್ತು ಯುದ್ದಕ್ಕೆ ತಯಾರಿ ನಡೆಸಿದ್ದಾರೆ ಎಂಬ ಊಹೆಯ ಕಾರಣದಿಂದ ಈ ಒಪ್ಪಂದವು ರಾಜನಿಂದ ಖಾಯಂ ಗೊಳ್ಳಲಿಲ್ಲ. ಅದರಂತೆಯೇ ಕ್ಯಾಂಪ್ಬೆಲ್ ನು ಜನವರಿ 19 1826 ರಂದು ಮಲೂನನ ಬರ್ಮಾ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದನು. ಆಗ ಮತ್ತೊಂದು ಶಾಂತಿ ಸಂಧಾನ ಪ್ರಸ್ತಾವನೆಯಾಯಿತು. ಆದರೆ ಇದು ಪ್ರಾಮಾಣಿಕವಾಗಿರದೆಂದು ಪರಿಗಣಿಸಲ್ಪಟ್ಟಿತು ಮತ್ತು ಇರುವ ಬರ್ಮಾ ಸೈನಿಕರು ಪುರಾತನ ರಾಜಧಾನಿ ನಗರವಾದ ಬಗಾನ್‌‍ನ ರಕ್ಷಣೆಗೆ ನಿಯುಕ್ತಿಗೊಂಡರು. ಅವರೆಲ್ಲರೂ ದಾಳಿಗೊಳಗಾಗಿ ಫೆಬ್ರುವರಿ 9 ರಂದು ಪದಚ್ಯುತಿಗೊಂಡರು. ’ಅವಾ’ದಲ್ಲಿ ಮಾರ್ಚ ತಿಂಗಳ ಕೇವಲ ನಾಲ್ಕು ದಿನಗಳ ಆಕ್ರಮಣದ ನಂತರ ಬರ್ಮಾ ರಾಜನು ಶಾಂತಿ ಮಾತುಕತೆಗೆ ಒಪ್ಪಿಕೊಂಡನು.

ಮಾತುಕತೆಯ ಫಲಶ್ರುತಿಯಾಗಿ ಯುದ್ದದ ವೇಳೆಯಲ್ಲಿ ಕೈದಿಗಳಾಗಿದ್ದ ಅಮೆರಿಕನ್ ಮಿಶನರಿಯ ಡಾ.ಪ್ರೈಸ್ ಮತ್ತು ಅನೇಕ ಯುರೋಪಿಯನ್ನರನ್ನು ಬ್ರಿಟಿಷ್ ಕ್ಯಾಂಪಿಗೆ ಕಳಿಸಿಕೊಡಲು ಒಪ್ಪಲಾಯಿತು.(24 ಫೆಬ್ರುವರಿ 1826 ರ ಯಂದಾಬೋ ಸಹಿ ಮಾಡಿದ ಒಪ್ಪಂದವೆಂದು ಪ್ರಚಲಿತವಿದೆ) ಮತ್ತು 25 ಲಕ್ಷ ರೂಪಾಯಿಗಳ ಹಣದ ಕಂತಿಗೆ ಪ್ರತಿಯಾಗಿ ಮತ್ತಷ್ಟು ಯುದ್ದ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಇಲ್ಲಿಗೆ ಯುದ್ದಕ್ಕೆ ಅಂತ್ಯ ಹಾಡಲಾಯಿತು ಮತ್ತು ಬ್ರಿಟಿಷ್ ಸೈನ್ಯವು ದಕ್ಷಿಣದ ಕಡೆಗೆ ಸ್ಥಳಾಂತರವಾಯಿತು. ಒಪ್ಪಂದದ ಪ್ರಕಾರ ಕೊಡಮಾಡಿದ ಪ್ರದೇಶಗಳಲ್ಲಿ ಮತ್ತು ಆರ್ಥಿಕ ಖಾತರಿ ಒಪ್ಪಂದದನ್ವಯ ಹಲವು ವರ್ಷಗಳಿಂದ ಅತಿಕ್ರಮಿಸಿಕೊಂಡಿದ್ದ ರಂಗೂನ್ ಪ್ರದೇಶಗಳಲ್ಲಿ ಬ್ರಿಟಿಷ್ ಸೈನ್ಯವು ಉಳಿದುಕೊಂಡಿತು.

ಬರ್ಮಾ ಮತ್ತು ಸೈಮ್ ರಾಜ್ಯಗಳೊಂದಿಗೆ ಮುಂದಿನ ದಿನಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುವಾಗಲು ಬ್ರಿಟಿಷರು ಚೌಕಾಶಿ ಮುಖಾಂತರ ಯೇ ಮತ್ತು ತಾವೋಯ್ ಪ್ರದೇಶಗಳನ್ನು ಪಡೆದುಕೊಂಡರು. ಯುದ್ದದ ನಂತರ ಈಸ್ಟ ಇಂಡಿಯಾ ಕಂಪನಿಯು ನಷ್ಟದಲ್ಲೇ ಮುಂದುವರಿಯಿತು. ಹಾಗಾಗಿ 1830ರಲ್ಲಿ ಈ ಪ್ರದೇಶಗಳನ್ನು ಬಿಟ್ಟುಹೋಗಲು ಗಂಭೀರ ಪ್ರಮುಖ್ಯತೆ ನೀಡಲಾಯಿತು.

ಕಾಲ್ಪನಿಕ ಕಥೆಗಳಲ್ಲಿ

[ಬದಲಾಯಿಸಿ]
  • ಇರಾವಡಿ ರಿವರ್‌ ಎಂಬ ಕಾಲ್ಪನಿಕ ಕಥೆಯುಳ್ಳ ಪುಸ್ತಕ ವು ಮೊದಲ ಬರ್ಮಾ ಯುದ್ಧದ ಕುರಿತಾದ ವಿಷಯವುಳ್ಳ ಪುಸ್ತಕವಾಗಿದೆ. ಇದನ್ನು ಜಿ.ಎ.ಹೆಂಟಿ ಬರೆದಿದ್ದಾರೆ.
  • ಆಲನ್‌ ಮ್ಯಾಲಿನ್‌ಸನ್ ಬರೆದ ’ದಿ ಸ್ಯಾಬರ್ಸ್‌ ಎಡ್ಜ್‌’ ಕಾದಂಬರಿಯ ಮೊದಲ ಕೆಲವು ಅಧ್ಯಾಯಗಳು ಮೊದಲ ಬರ್ಮಾ ಯುದ್ಧದ ಕುರಿತಾದ ಅಂಶಗಳನ್ನು ಒಳಗೊಂಡಿದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಬರ್ಮದ ಇತಿಹಾಸ
  • ಕೊನ್‍ಬೌಗ್ ರಾಜವಂಶ
  • ಸೈನೊ-ಬರ್ಮೀಸ್ ಯುದ್ಧ (1765-1769)
  • ಎರಡನೇಯ ಆಂಗ್ಲೊ-ಬರ್ಮೀಸ್ ಯುದ್ಧ (1852)
  • ಮೂರನೇಯ ಆಂಗ್ಲೊ-ಬರ್ಮೀಸ್ (1885-1886)
  • ಬರ್ಮ-ಫ್ರಾಂನ್ಸ್ ಸಂಬಂಧಗಳು

ಉಲ್ಲೇಖಗಳು

[ಬದಲಾಯಿಸಿ]
  1. Lt. Gen. Sir Arthur P. Phayre (1967). History of Burma (2 ed.). London: Sunil Gupta. p. 237.
  2. ೨.೦ ೨.೧ Maung Htin Aung (1967). A History of Burma. New York and London: Cambridge University Press. pp. 214–215.
  3. Thant Myint-U (2006). The River of Lost Footsteps--Histories of Burma. Farrar, Straus and Giroux. p. 113. ISBN 978-0-374-16342-6, 0-374-16342-1. {{cite book}}: Check |isbn= value: invalid character (help)
  4. Anthony Webster (1998). Gentlemen Capitalists: British Imperialism in South East Asia, 1770-1890. I.B.Tauris. pp. 142–145. ISBN 1860641717, 9781860641718. {{cite book}}: Check |isbn= value: invalid character (help)
  5. Thant Myint-U (2006). The River of Lost Footsteps--Histories of Burma. Farrar, Straus and Giroux. pp. 125–127. ISBN 978-0-374-16342-6, 0-374-16342-1. {{cite book}}: Check |isbn= value: invalid character (help)
  6. Michael Symes (1795). An Account of an Embassy to the Kingdom of Ava (PDF). Archived from the original (PDF) on 2007-04-28. Retrieved 2011-02-22.
  7. Dorothy Woodman (1962). The Making of Burma (1 ed.). London: The Cresset Press. p. 60.


  • Hall (1945). Europe and Burma, 1824-26. Oxford University Press. {{cite book}}: Text "firstD.G.E." ignored (help)
  • Blackburn, Terence R. (2009). The Defeat of Ava: The First Anglo-Burmese War, 1824-26 (Hardcover ed.). A. P. H. Publishing. ISBN 8131305449.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

Public Domain This article incorporates text from a publication now in the public domainChisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help); Missing or empty |title= (help)